ಬೆಳಗಾವಿ: ಜಿಲ್ಲೆಯಲ್ಲಿ ಕಬ್ಬಿನ (Sugarcane) ಜೊತೆಗೆ ತರಕಾರಿ (Vegetables) ಬೆಳೆಯನ್ನು ಸಹ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಇಲ್ಲಿನ ತರಕಾರಿಗೆ ಮಹಾರಾಷ್ಟ್ರ ಹಾಗೂ ಗೋವಾದಲ್ಲಿ (Maharashtra And Goa) ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಇದೆ. ಆದರೆ ಈಗ ಒಂದು ತರಕಾರಿಯನ್ನು ಮಾರಕುಟ್ಟೆಯಲ್ಲಿ (Market) ಕೇಳುವವರೇ ಇಲ್ಲದಂತಾಗಿದೆ. ಹೀಗಾಗಿ ರೈತರಿಗೆ(Farmers) ಸಂಕಷ್ಟ ಎದುರಾಗಿದ್ದು, ತಾವು ಕಷ್ಟಪಟ್ಟು ಬೆಳೆದ ಬೆಳೆಯನ್ನೇ ನಾಶ ಮಾಡಲು ಮುಂದಾಗಿದ್ದಾರೆ. ತರಕಾರಿ ಕಟಾವ್ ಮಾಡಿ ಮಾರುಕಟ್ಟೆ ಸಾಗಾಟ ಮಾಡಿದರೂ ಅದರ ವೆಚ್ಚದಷ್ಟು ಹಣ ಬರುತ್ತಿಲ್ಲ. ಹೀಗಾಗಿ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದಾರೆ.
ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದ ನಾಮದೇವ ದುಡುಂ ಎಂಬವರು ಒಂದು ಏಕರೆ ಜಮೀನಿನಲ್ಲಿ ಕ್ಯಾಬೇಜ್ ಬೆಳೆದಿದ್ದರು. ಬೆಳೆ ಇರೋವಾಗ ಯಾವುದಾದ್ರು ಪ್ರಾಣಿಗಳು ಜಮೀನಿಗೆ ಬಂದ್ರೆ ರೈತರು ಅದನ್ನು ಓಡಿಸುವುದು ಸಹಜ. ಆದರೆ ಇಲ್ಲಿ ಬೆಳೆಯನ್ನು ತಿನ್ನಲ್ಲು ರೈತರಿಗೆ ಕುರಿಯನ್ನು ಜಮೀನಿನಲ್ಲಿ ತಂದು ಬಿಟ್ಟಿದ್ದಾರೆ.
40ರಿಂದ 45 ಸಾವಿರ ರೂಪಾಯಿ ಖರ್ಚು
ಕಳೆದ ಮೂರು ತಿಂಗಳ ಹಿಂದೆ ಜಮೀನಿನಲ್ಲಿ ಎಲೆಕೋಸು ಬೆಳೆಯನ್ನು ನಾಟಿ ಮಾಡಿದ್ರು. ಬಿತ್ತನೆ, ಟ್ರ್ಯಾಕ್ಟರ್ ಬಾಡಿಗೆ, ಗೊಬ್ಬರ, ಕಸ, ಔಷಧಿ ಹೀಗೆ ಎಲ್ಲಾ ಸೇರಿ 40ರಿಂದ 45 ಸಾವಿರ ರೂಪಾಯಿ ಹಣ ಬೆಳೆ ಬೆಳೆಯಲು ಖರ್ಚು ಮಾಡಿದ್ದಾರೆ.
ಪ್ರತಿ ಕೆಜಿಗೆ 80 ಪೈಸೆ
ಬೆಳೆಯು ಸಹ ಉತ್ತಮ ರೀತಿಯಲ್ಲಿ ಬಂದಿದ್ದು, ಆದರೆ ಮಾರುಕಟ್ಟೆಯಲ್ಲಿ ಎಲೆಕೋಸಿಗೆ ಬೆಲೆ ಕುಸಿತದ ಎಫೆಕ್ಟ್ ಬಿದ್ದಿದೆ. ಪರಿಣಾಮ ಮಾರುಕಟ್ಟೆಯಲ್ಲಿ ಎಲೆಕೋಸು ಕೇಳುವವರು ಇಲ್ಲದಂತಾಗಿದೆ. ಪ್ರತಿ ಕೆಜಿಗೆ ಮಾರುಕಟ್ಟೆಯಲ್ಲಿ ಕ್ಯಾಬೇಜ್ 80 ಪೈಸೆ ಬೆಲೆ ಇದೆ.
ಕೋಸು ಕಟಾವ್ ಮಾಡಿ, ಚೀಲ ತುಂಬಿ ಸಾಗಾಟದ ವೆಚ್ಚವು ಇದರಿಂದ ಸಾಕಾಗಲ್ಲ. ಹೀಗಾಗಿ ರೈತ ತಮ್ಮ ಜಮೀನಿನಲ್ಲಿ ಕುರಿ ಮೇಯಿಸಲು ನಿರ್ಧರಿಸಿದ್ದಾರೆ. ಇದರಿಂದ ವರ್ಷದ ದುಡಿಮೆಯ ಜೊತೆಗೆ ಬಂಡಾಳವು ನಷ್ಟವಾಗುತ್ತಿದೆ. ಅನೇಕ ರೈತರು ಇದೇ ನಿರ್ಧಾರಕ್ಕೆ ಬಂದಿದ್ದಾರೆ, ನೆರವಿಗೆ ಬರದ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಬೆಳಗಾವಿ ತಾಲೂಕಿನಲ್ಲಿ ಅತಿ ಹೆಚ್ಚು ತರಕಾರಿ ಬೆಳೆಯನ್ನು ಬೆಳೆಯಲಾಗುತ್ತದೆ. ಕಳೆದ 2 ತಿಂಗಳಿಂದ ಎಲೆಕೋಸು ಹಾಗೂ ಟೊಮೆಟೊ ಬೆಳೆಯ ಬೆಲೆ ಕುಸಿತ ಕಂಡಿದೆ. ಕಡೋಲಿ, ಹೊನಗಾ, ಕಾಕತಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ 4 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕ್ಯಾಬೇಜ್ ಬೆಳೆ ಈಗ ರೈತರ ದೊಡ್ಡ ಪ್ರಮಾಣದಲ್ಲಿ ನಷ್ಟ ತಂದಿದೆ.
ಜಿಲ್ಲಾಧಿಕಾರಿ ಕಚೇರಿ ಬಳಿಯೂ ಪ್ರತಿಭಟನೆ
ಅನೇಕ ರೈತರು ಇದೇ ರೀತಿಯಲ್ಲಿ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯನ್ನು ನಾಶಪಡಿಸುತ್ತಿದ್ದಾರೆ. ರೈತ ಮುಖಂಡ ಅಪ್ಪಾಸಾಬ್ ದೇಸಾಯಿ ನೇತೃತ್ವದಲ್ಲಿ ತಾಲೂಕಿನ ರೈತರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಅಲ್ಲಿಯೂ ಎಲೆಕೋಸು ಚೆಲ್ಲಿ ತಮ್ಮ ಆಕ್ರೋಶ ಹೊರ ಹಾಕಿದ್ರು.
ಕಳೆದ 30 ವರ್ಷಗಳಿಂದ ತರಕಾರಿ ಬೆಲೆ ಕುಸಿತಕ್ಕೆ ಯೋಜನೆ ರೂಪಿಸಿ ಎಂದು ಜಿಲ್ಲಾಧಿಕಾರಿ ಕಚೇರಿ ಬಳಿ ಬಂದು ಧರಣಿ ಮಾಡುತ್ತಲೇ ಇದ್ದೇವೆ. ಆದರೆ ಈವರೆಗೆ ಯಾವುದೇ ಸರ್ಕಾರ ಈ ಬಗ್ಗೆ ಯೋಜನೆ ರೂಪಿಸಿಲ್ಲ. ಮಾರುಕಟ್ಟೆಯಲ್ಲಿ ಕ್ಯಾಬೇಜ್ ತರಲೇಡಿ ಎನ್ನುತ್ತಿದ್ದಾರೆ.
ಇದನ್ನೂ ಓದಿ: Acid Attack: ಅಪ್ರಾಪ್ತೆ ಮೇಲೆ ಆ್ಯಸಿಡ್ ಎರಚಿದ ಪಾಗಲ್ ಪ್ರೇಮಿ, ಪ್ರೀತ್ಸೇ ಅಂತ ಪ್ರಾಣ ತಿನ್ನುತ್ತಿದ್ದವನಿಂದ ಪಾಪದ ಕೃತ್ಯ!
ಹೊಲಗಳಲ್ಲಿ ಕುರಿಗಳು
ರೈತರು ಜಮೀನಿನಿಂದ ಮಾರುಕಟ್ಟೆಗೆ ತಂದ್ರೆ ಅದರ ವೆಚ್ಚ ಸಾಗಾಣಿಕೆಗೆ ಸಾಕಾಗುತ್ತಿಲ್ಲ. ಹೀಗಾಗಿ ರೈತರು ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದಾರೆ. ಸರ್ಕಾರ ಯೋಗ್ಯ ದರದಲ್ಲಿ ಎಪಿಎಂಸಿ ಮೂಲಕ ಬೆಳೆ ಖರೀದಿ ಮಾಡಬೇಕು. ಕೆರಳದಲ್ಲಿ ಮಾದರಿಯಲ್ಲಿ ತರಕಾರಿ ಬೆಳೆಯನ್ನು ಖರೀದಿ ಮಾಡಬೇಕು ಎನ್ನುವುದು ನಮ್ಮ ಆಗ್ರಹ ಎಂದು ರೈತ ಹೋರಾಟಗಾರ ಅಪ್ಪಾಸಾಬ ದೇಸಾಯಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ