Govind Karjol: ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ವ್ಯಾಪಕ ಮಳೆ; ಘಟಪ್ರಭಾ, ಮಲಪ್ರಭಾ ಜಲಾಶಯ ಭರ್ತಿ; ಬಾಗಿನ ಸಂಪ್ರದಾಯವೇ ಮಾಯ!

ಸಚಿವ ಗೋವಿಂದ ಕಾರಜೋಳ (Minister Govind Karjol) ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದು ಜತೆಗೆ ಜಲಸಂಪನ್ಮೂಲ ಇಖಾಲೆಯ ನಿರ್ವಹಣೆ ಮಾಡುತ್ತಾರೆ. ಇನ್ನೂ ಮುಧೋಳ ಕ್ಷೇತ್ರ ಘಟಪ್ರಭಾ ನದಿಯ ಅಚ್ಚಕಟ್ಟು ಪ್ರದೇಶದ ವ್ಯಾಪ್ತಿಯನ್ನು ಹೊಂದಿದೆ. ಇಷ್ಟಾದ್ರು ಕನಿಷ್ಠ ಗೌರವ ಸಲ್ಲಿಸಲು ಯಾಕೆ ಹಿಂದೇಟು ಎನ್ನುವುದು ಜನರ ಪ್ರಶ್ನೆಯಾಗಿದೆ.

ಫೈಲ್ ಫೋಟೋ

ಫೈಲ್ ಫೋಟೋ

  • Share this:
ಬೆಳಗಾವಿ: ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ (Western Hills Rains) ವ್ಯಾಪಕವಾಗಿ ಮಳೆಯಾಗುತ್ತಿದ್ದು, ನದಿಗಳು (Rivers) ಉಕ್ಕಿ ಹರಿಯುತ್ತಿವೆ. ಬೆಳಗಾವಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಮಳೆ, ಪ್ರವಾಹದಿಂದ (Flood) ನಷ್ಟ ಸಂಭವಿಸಿದೆ. ಜಿಲ್ಲೆಯ ಮಲಪ್ರಭಾ (Malaprabha), ಘಟಪ್ರಭಾ (Ghataprabha) ಜಯಲಾಶಯಗಳು ಭರ್ತಿಯಾಗಿದ್ದು, ಉತ್ತರ ಕರ್ನಾಟಕ (North Karnataka) ಜನರಿಗೆ ವರ್ಷ ಪೂರ್ತಿ ಬೆಳೆ, ಕುಡಿಯುವ ನೀರು ಸಿಗಲಿದೆ. ರಾಜ್ಯದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ (Minister, Major and Medium Irrigation Department) ಬೆಳಗಾವಿ ಉಸ್ತುವಾರಿ ಸಚಿವರೇ ಆಗಿದ್ದಾರೆ. ಆದರೇ ಜಿಲ್ಲೆ ಜಲಾಶಯಗಳು ಭರ್ತಿಯಾಗಿದ್ದು, ಬಾಗಿನ ಅರ್ಪಿಸುವ ಸಂಪ್ರದಾಯ ಕಣ್ಮರೆಯಾಗಿದೆ. ಜೀವನಾಡಿಗಳಿಗೆ ಗೌರವ ಸಲ್ಲಿಸಬೇಕು ಎನ್ನುವುದು ರೈತರ ಆಗ್ರಹವಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗಿದ್ದು, ಜಿಲ್ಲೆಯ ಸಪ್ತ ನದಿಗಳು ಉಕ್ಕಿ ಹರಿಯುತ್ತಿವೆ.  ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗಳು ನೀರಿನಲ್ಲಿ ಮುಳುಗಿವೆ. ಇನ್ನೂ ಅನೇಕ ಮನೆಗಳಿಗೆ ಹಾನಿ ಸಂಭವಿಸಿದ್ದು, ಪ್ರವಾಹ ಸ್ಥಿತಿಯಿಂದ ಅನೇಕ ಕಡೆಗಳಲ್ಲಿ ನಷ್ಟ ಸಂಭವಿಸಿದೆ.

ಗೋಕಾಕ್ ನಗರದ ದಾಳಿಂಬೆ ತೋಟ, ಮಟನ್ ಮಾರ್ಕೆಟ್ ಮುಳುಗಡೆಗೊಂಡು ಆತಂಕ ಸೃಷ್ಠಿಯಾಗಿತ್ತು. ಖಾನಾಪುರ ತಾಲೂಕಿನ  ಅನೇಕ ಕಡೆಗಳಲ್ಲಿ ಮಳೆಯಿಂದ ಹಾನಿಯಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.

Farmers demands offer bagina to rivers csb mrq
ಜಲಾಶಯ


ರಾಜಾಲಕಮಗೌಡ ಜಲಾಶಯ ಭರ್ತಿ

ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಮಳೆ ಹಿನನೆಲೆಯಲ್ಲಿ ಜಿಲ್ಲೆಯ ನದಿಗಳ ಒಳಹರಿವು ವ್ಯಾಪಕವಾಗಿ ಹೆಚ್ಚಳವಾಗಿದೆ. ಹುಕ್ಕೇರಿ ತಾಲೂಕಿನ ಹಿಡಕಲ್ ಬಳಿ ಇರೋ ರಾಜಾಲಕಮಗೌಡ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ.

51 ಟಿಎಂಸಿ ಸಾಮರ್ಥ್ಯ ಜಲಾಶಯ ಭರ್ತಿಯಾಗಿದ್ದು, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಜೀವನಾಡಿಯಾಗಿದೆ. ಅಂದಾಜು 8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಸಿಗಲಿದೆ. ಇನ್ನೂ 10 ಕ್ರಸ್ಟ್ ಗೇಟ್​​ಗಳ ಮೂಲಕ ಈಗಾಗಲೇ ನೀರು ಬಿಡಲಾಗುತ್ತಿದ್ದು, ಗೋಕಾಕ್, ಮೂಡಲಗಿ ಹಾಗೂ ಬಾಗಲಕೋಟೆ ಜಿಲ್ಲೆಯ ಹಲವು ಕಡೆಗಳಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ:  Love Jihad Case: ನಮ್ದು ಲವ್ ಜಿಹಾದ್ ಅಲ್ಲ; ನಾನೇ ಮೆಚ್ಚಿ ಮದುವೆಯಾಗಿದ್ದು ಎಂದ ಚೈತ್ರಾ!

ಬಾಗಿನ ಅರ್ಪಣೆ

ಘಟಪ್ರಭಾ ನದಿಗೆ ಬ್ರಿಟಿಷರ್ ಕಾಲದಲ್ಲಿ ತಡೆಗೋಡೆಯನ್ನು ನಿರ್ಮಾಣ ಮಾಡಲಾಗಿತ್ತು, ಸ್ವಾತಂತ್ರ್ಯದ ಬಳಿಕ 1977ರಲ್ಲಿ ಜಲಾಶಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಜಲಾಶಯ ಭರ್ತಿ ಆಗಿದ್ದರೂ ಬಾಗಿನ ಅರ್ಪಣೆಯ ಸಂಪ್ರಾಯದ ಮಾತ್ರ ಕಣ್ಮರೆಯಾಗಿದೆ.

ಸಚಿವ ಗೋವಿಂದ ಕಾರಜೋಳ (Minister Govind Karjol) ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದು ಜತೆಗೆ ಜಲಸಂಪನ್ಮೂಲ ಇಖಾಲೆಯ ನಿರ್ವಹಣೆ ಮಾಡುತ್ತಾರೆ. ಇನ್ನೂ ಮುಧೋಳ ಕ್ಷೇತ್ರ ಘಟಪ್ರಭಾ ನದಿಯ ಅಚ್ಚಕಟ್ಟು ಪ್ರದೇಶದ ವ್ಯಾಪ್ತಿಯನ್ನು ಹೊಂದಿದೆ. ಇಷ್ಟಾದ್ರು ಕನಿಷ್ಠ ಗೌರವ ಸಲ್ಲಿಸಲು ಯಾಕೆ ಹಿಂದೇಟು ಎನ್ನುವುದು ಜನರ ಪ್ರಶ್ನೆಯಾಗಿದೆ.

ನದಿಗಳಿಗೆ ಗೌರವ ಸಲ್ಲಿಕೆ ಆಗಬೇಕು; ರೈತರ ಒತ್ತಾಯ

ಇನ್ನೂ ಹುಬ್ಬಳ್ಳಿ, ಧಾರವಾಡ ಹಾಗೂ ಬಾಗಲಕೋಟೆ, ಗದಗ ಜಿಲ್ಲೆಯ ಜೀವಾನಾಡಿ ಆಗಿರೋ ಮಲಪ್ರಭಾ ಜಲಾಶಯ ಸಹ ಭರ್ತಿಯಾಗಿದೆ. 37 ಟಿಎಂಸಿ ಸಾಮರ್ಥ್ಯದ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ಅಲ್ಲಿಯೂ ಇದೇ ನಿರ್ಲಕ್ಷ್ಯ ಮುಂದುವರಿದಿದೆ.

Farmers demands offer bagina to rivers csb mrq
ಗೋವಿಂದ ಕಾರಜೋಳ


ವರ್ಷವೀಡಿ ಬೆಳೆ, ಕುಡಿಯುವ ನೀರು ಪೂರೈಕೆ ಮಾಡಲು ಆಧಾರವಾಗಿರೋ ಜಲಾಶಯಕ್ಕೆ ಕನಿಷ್ಠ ಗೌರವ ಸಲ್ಲಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಇದನ್ನೂ ಓದಿ: Midday Meals: ಮಂಡ್ಯದಲ್ಲಿ ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಒಂದೇ ವಾರದಲ್ಲಿ ‌ಮೂವರು ಬಲಿ!

ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬೆಳಗಾವಿಯ ಸಪ್ತನದಿಗಳು ಮೈದುಂಬಿ ಹರಿಯುತ್ತಿವೆ. ಹೀಗಾಗಿ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಇತ್ತ ಬೆಳಗಾವಿ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ ಒಂದೇ ವಾರದ ಅಂತರದಲ್ಲಿ ಮೂವರು ಮೃತಪಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಬೆಳಗಾವಿಯಲ್ಲಿ ಬಿಟ್ಟೂಬಿಡದೇ ಮಳೆ ಸುರಿಯುತ್ತಿದೆ. ಮಳೆಗೆ ಜನಜೀವನವೇ ಅಸ್ತವ್ಯಸ್ತಗೊಂಡಿದೆ.
Published by:Mahmadrafik K
First published: