Chitradurga: ಹತ್ತಿ ಬಿತ್ತನೆ ಬೀಜಕ್ಕೆ ಕೋಟೆನಾಡಿನಲ್ಲಿ ಹೆಚ್ಚಿದ ಬೇಡಿಕೆ: ಕೃತಕ ಅಭಾವ ಸೃಷ್ಟಿ

ಚಿತ್ರದುರ್ಗ ಜಿಲ್ಲೆಯಲ್ಲಿ ಮುಂಗಾರು ಚೆನ್ನಾಗಿ ಆದ್ದರಿಂದ ಕಳೆದ ವರ್ಷಕ್ಕಿಂತಲೂ ಈ ವರ್ಷ ಹತ್ತಿ ಬಿತ್ತನೆಗೆ ರೈತರು ಭೂಮಿ ಹದ ಮಾಡಿದ್ದಾರೆ. ಕಳೆದ ಸಾರಿ ಹತ್ತಿಗೆ ಉತ್ತಮ ಬೆಲೆ ದೊರೆತ ಹಿನ್ನಲೆ ಹೆಚ್ಚಿನ ವ್ಯಾಪ್ತಿಯಲ್ಲಿ ಬಿತ್ತನೆಗೆ ಮುಂದಾಗಿದ್ದಾರೆ

ಬಿತ್ತನೆ ಬೀಜಕ್ಕೆ ಹೆಚ್ಚಿದ ಬೇಡಿಕೆ

ಬಿತ್ತನೆ ಬೀಜಕ್ಕೆ ಹೆಚ್ಚಿದ ಬೇಡಿಕೆ

  • Share this:
ಚಿತ್ರದುರ್ಗ (ಮೇ. 14) : ರಾಜ್ಯದಲ್ಲಿ ಈಗಾಗಲೇ ಹಲವು ಭಾಗಗಳಲ್ಲಿ ಮುಂಗಾರು ಮಳೆ (Monsoon) ಬಿದ್ದಿದೆ.  ಭೂಮಿ (Land) ಹಸನಾಗಿದೆ ಅಂತ ಅತ್ತಿ ಬಿತ್ತನೆ ಮಾಡೋಕೆ ರೈತರು ಮುಂದಾಗಿದ್ದಾರೆ, ಅದರಲ್ಲಿ ಇಂಥದ್ದೇ ತಳಿಯ ಹತ್ತಿ ಬೀಜ ಬಿತ್ತಿದ್ದರೆ ಫಸಲು ಇಳುವರಿ ಹೆಚ್ಚಾಗಿ ಲಾಭ ಗಳಿಸಬಹುದು ಅಂತ ತೀರ್ಮಾನಿಸಿದ್ದಾರೆ. ಆದರೆ ಆ  ಬಿತ್ತನೆ ಬೀಜಕ್ಕೆ ಚಿತ್ರದುರ್ಗದಲ್ಲಿ ಕೃತಕ ಅಭಾವ ಸೃಷ್ಟಿಯಾಗಿದೆ. ಆಗ್ರೋ, ಏಜನ್ಸಿಗಳು ಸ್ಟಾಕ್ ಇಲ್ಲ ಅಂತ ಹೇಳಿದ್ರೆ ಮಧ್ಯವರ್ತಿಗಳು 500-600 ಹೆಚ್ಚು ಬೆಲೆಗೆ ಅದೇ ತಳಿಯ ಅತ್ತಿ ಬೀಜ ತರಿಸಿ ಕೊಡುತ್ತಿದ್ದಾರೆ. ಇಷ್ಟೆಲ್ಲಾ ಅಕ್ರಮ ಮಾರಾಟ ಕೃಷಿ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ನಡೆಯುತ್ತಿದ್ದರು ಅಧಿಕಾರಿಗಳು ಮಾತ್ರ ಕಂಡೂ ಕಾಣದಂತೆ ಕಣ್ಮುಚ್ಚಿ ಕುಳಿತಿದ್ದಾರೆ.

ಬಿತ್ತನೆ ಬೀಜಕ್ಕೆ ಹೆಚ್ಚಿದ ಬೇಡಿಕೆ

ಭೂಮಿಗೆ ಮುಂಗಾರು ಮಳೆ ಬಿತ್ತು ಎಂದರೆ ಅನ್ನದಾತ ಒಕ್ಕಲುತನಕ್ಕೆ ಹಣಿಯಾದ ಅಂತಲೇ ಲೆಕ್ಕ. ಇಡೀ ವರ್ಷದಲ್ಲಿ ಕೇವಲ ಎರಡು ಮೂರು ತಿಂಗಳು ಬೇಸಿಗೆಯಲ್ಲಿ ವಿಶ್ರಾಂತಿಯಲ್ಲಿ ಇರುವ ರೈತರು ಮತ್ತೆ ಜಮೀನು ಹಸನು ಮಾಡಿ ಬಿತ್ತಿ ಬೆಳೆಯೊ ಕಾರ್ಯಕ್ಕೆ ಚಾಲನೆಗೆ ಮುಂದಾಗಿದ್ದಾರೆ. ಆದರೇ ಪ್ರತೀ ಸಾರಿ ರೈತರು ಬಿತ್ತನೆಗೆ ಮುಂದಾಗುವ ಪ್ರಾರಂಭದಲ್ಲಿ ಒಂದಲ್ಲ ಒಂದು ರೀತಿಯ ಇಕ್ಕಟ್ಟಿಗೆ ಸಿಲುಕಿ ದುಬಾರಿ ಬೆಲೆಯ‌ ನಷ್ಟವನ್ನ ಅನುಭವಿಸುತ್ತಾರೆ. ಅದು ಗೊಬ್ಬರ, ಬೀಜ ಖರೀದಿಯಿಂದಲೇ ಬೆಲೆ ಏರಿಕೆ ಬಿಸಿ ತಟ್ಟುತ್ತಲಿರುತ್ತದೆ. ಅದು ರೈತರು ತಾವು ಬಯಸುವ ಬಿತ್ತನೆ ಬೀಜದ ಬೇಡಿಕೆ ಮದ್ಯವರ್ತಿಗಳಿಗೆ ಲಾಭ ನೀಡಿ ರೈತರ ಜೇಬಿಗೆ ಕತ್ತರಿ ಬೀಳುತ್ತದೆ.

ಪುಲಿ ತಳಿಗೆ ರೈತರ ಆಗ್ರಹ

ಚಿತ್ರದುರ್ಗ ಜಿಲ್ಲೆಯಲ್ಲಿ ಮುಂಗಾರು ಚೆನ್ನಾಗಿ ಆದ್ದರಿಂದ ಕಳೆದ ವರ್ಷಕ್ಕಿಂತಲೂ ಈ ವರ್ಷ ಹತ್ತಿ ಬಿತ್ತನೆಗೆ ರೈತರು ಭೂಮಿ ಹದ ಮಾಡಿದ್ದಾರೆ. ಕಳೆದ ಸಾರಿ ಹತ್ತಿಗೆ ಉತ್ತಮ ಬೆಲೆ ದೊರೆತ ಹಿನ್ನಲೆ ಹೆಚ್ಚಿನ ವ್ಯಾಪ್ತಿಯಲ್ಲಿ ಬಿತ್ತನೆಗೆ ಮುಂದಾಗಿದ್ದಾರೆ. ಹೀಗಿರುವಾಗ ಇಲ್ಲಿನ ರೈತರ ಅಭಿಪ್ರಾಯದಂತೆ PULI ಅನ್ನೋ ಬಿತ್ತನೆ ಹತ್ತಿ ಬೀಜ ಹಾಕಿದರೆ ಉತ್ತಮ ಇಳುವರಿ ಬರುತ್ತದೆ ಅನ್ನೋ ಮಾತು ಕೇಳಿ ಬಂದಿವೆ, ಅಲ್ಲದೇ ಅದೇ ತಳಿಯ ಬೀಜ ಬಿತ್ತನೆಗೆ ರೈತರು ಮುಂದಾಗಿದ್ದಾರೆ. ಆದರೇ ಇದು ರೈತರ ಜೇಬಿಗೆ ಕತ್ತರಿ ಹಾಕುವ ಕೆಲಸಕ್ಕೆ ಸಾಕ್ಷಿಯಾಗಿದೆ.

ಇದನ್ನು ಓದಿ: ಆಕಾಶದಿಂದ ಬಿದ್ದಿವೆಯಂತೆ ಈ ವಿಚಿತ್ರ ಲೋಹದ ಚೆಂಡುಗಳು! ದಿಗ್ಭ್ರಮೆಗೊಂಡ ಗುಜರಾತ್ ನಿವಾಸಿಗಳು

ಕೃತಕ ಅಭಾವ ಸೃಷ್ಟಿ

ಪುಲಿ ತಳಿಯ ಹತ್ತಿ ಬೀಜ ಮಾರುಕಟ್ಟೆಯಲ್ಲಿ ಕೇವಲ 810 ರೂ ಇದೆ ಅಂತ ಎಲ್ಲರಿಗೂ ಗೊತ್ತು, ಆದರೇ ಇವತ್ತಿಗೆ ಅದರ ಬೇಡಿಕೆ ಹೆಚ್ಚಿದ್ದು ಬರೋಬ್ಬರಿಬ1200 ರಿಂದ 1300 ರೂಪಾಯಿ ವರೆಗೆ ಬ್ಲಾಕಲ್ಲಿ ಮಾರಾಟ ಮಾಡುತ್ತಿದ್ದಾರೆ. ಬೇಡಿಕೆ ಹೆಚ್ಚುತ್ತಿದ್ದಂತೆ ಅತ್ತಿ ಬೀಜ ಸ್ಟಾಕ್ ಇಲ್ಲ ಅಂತ ಕೃತಕ ಅಭಾವ ಸೃಷ್ಟಿ ಮಾಡಿರೋ ಮದ್ಯವರ್ತಿಗಳು ರೈತರ ಬೇಡಿಕೆಯ ಅನುಸಾರ ಹೆಚ್ಚು ಬೆಲೆಗೆ ಬೀಜ ತರಿಸಿ ಕೊಡುತ್ತಿದ್ದಾರೆ. ಸ್ವಾಭಾವಿಕವಾಗಿ ಯಾವುದೇ ಅಂಗಡಿಗಳಲ್ಲು ಪುಲಿ ತಳಿಯ ಹತ್ತಿ ಬೀಜ ಸಿಗುತ್ತಿಲ್ಲವಾದ್ರು ಇವರು ಎಲ್ಲಿಂದ ತರಿಸಿ ಕೊಡುತ್ತಿದ್ದಾರೆ ಅನ್ನೋ ಪ್ರಶ್ನೆ ರೈತರಲ್ಲಿ ಮೂಡಿದೆ. ಇದರಿಂದ ನಷ್ಟ ಅನುಭವಿಸುತ್ತಿರುವ ರೈತರು ಖಾಳಸಂತೆಗೆ ಬ್ರೇಕ್ ಹಾಕದ ಕೃಷಿ ಇಲಾಖೆ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಅಂತ ಆರೋಪ ಮಾಡಿದ್ದಾರೆ.

ಇದನ್ನು ಓದಿ: Tips to Waitress: 4,000ದ ಆಹಾರ ತಿಂದು 62 ಸಾವಿರ ಟಿಪ್ಸ್ ಕೊಟ್ಟ! ಕಾರಣ ಇಂಟ್ರೆಸ್ಟಿಂಗ್

ಅಲ್ಲದೇ ಕೃಷಿ ಸಚಿವರ ಉಸ್ತುವಾರಿ ಜಿಲ್ಲೆಯ ಪರಿಸ್ಥಿತಿಯೇ ಹೀಗಾದ್ರೆ ರಾಜ್ಯದ ರೈತರ ರಕ್ಷಣೆ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳನ್ನ ಕೇಳಿದ್ರೆ ಅಂತ ಪ್ರಕರಣಗಳು ಕಂಡು ಬಂದ್ರೆ, ಹೆಚ್ಚು ಬೆಲೆ ಬಿಲ್ ನೀಡಿದ್ದು ಕಂಡು ಬಂದ್ರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ‌. ಇನ್ನದಾರೂ ಕೃಷಿ ಸಚಿವರು, ಸರ್ಕಾರ ಈ ಬಗ್ಗೆ ಕ್ರಮ ವಹಿಸಬೇಕು ಅನ್ನೋದು ರೈತರ ಆಗ್ರಹ.
Published by:Seema R
First published: