ರಾಮನಗರ: ರೈತರು (Farmers) ಈಗ ಎಷ್ಟು ಬೇಕೆ ಅಷ್ಟು ಸಾಲ (loan) ಮಾಡಿಕೊಳ್ಳಿ ಅಂತ ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕಿ (Ramanagar MLA) ಅನಿತಾ ಕುಮಾರಸ್ವಾಮಿ (Anitha Kumaraswamy) ಹೇಳಿದ್ದಾರೆ. ರಾಮನಗರದಲ್ಲಿ ನಡೆದ ಜೆಡಿಎಸ್ (JDS) ಸಮಾರಂಭದಲ್ಲಿ ಕಳೆದ 20ನೇ ತಾರೀಖಿನಂದು ಅನಿತಾ ಕುಮಾರಸ್ವಾಮಿ ಈ ರೀತಿಯ ಹೇಳಿಕೆ ನೀಡಿದ್ದಾರೆ. “ರೈತರು ಈಗ ಎಷ್ಟು ಬೇಕೋ ಅಷ್ಟು ಸಾಲ ಮಾಡಿಕೊಳ್ಳಿ, ನಿಮ್ಮ ಕುಮಾರಣ್ಣ (HD Kumaraswamy) ಆ ಸಾಲವನ್ನು ಮನ್ನಾ ಮಾಡುತ್ತಾರೆ. ಕುಮಾರಣ್ಣನ ಸರ್ಕಾರ (Government) ಬಂದಾಗ ರೈತರ ಸಾಲ ಮನ್ನಾ (waived) ಆಗಲಿದೆ” ಎಂಬ ಅರ್ಥದ ಹೇಳಿಕೆ ನೀಡಿದ್ದಾರೆ. ಶಾಸಕಿ ಅನಿತಾ ಕುಮಾರಸ್ವಾಮಿ ನೀಡಿರುವ ಹೇಳಿಕೆ ವಿಡಿಯೋ (Video) ಸಾಮಾಜಿಕ ಜಾಲತಾಣಗಳಲ್ಲಿ (Social Media) ಈಗ ವೈರಲ್ (Viral) ಆಗಿದೆ. ಮಾಜಿ ಸಚಿವ ಸಿಪಿ ಯೋಗೇಶ್ವರ್ (CP Yogeshwar) ಸೇರಿದಂತೆ ಹಲವು ಬಿಜೆಪಿ ನಾಯಕರು (BJP leaders) ಅನಿತಾ ಕುಮಾರಸ್ವಾಮಿ ಹೇಳಿಕೆಯನ್ನು ಟೀಕಿಸಿದ್ದಾರೆ.
ಅನಿತಾ ಕುಮಾರಸ್ವಾಮಿ ಹೇಳಿದ್ದೇನು?
ಸ್ತ್ರೀ ಶಕ್ತಿ ಸಂಘಗಳು, ರೈತರು ಈಗ ನಿಮಗೆ ಎಷ್ಟು ಬೇಕೋ ಅಷ್ಟು ಸಾಲ ಮಾಡಿಕೊಳ್ಳಿ ಅಂತ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಪತ್ನಿ, ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಿಮಗೆ ಎಷ್ಟು ಬೇಕೋ ಅಷ್ಟು ಸಾಲ ತಗೊಂಡು ಬಿಡಿ ಅಂತ ಹೇಳಿದ್ದಾರೆ.
MLA of Ramanagara #AnithaKumaraswamy wife of #JDS head #HDKumaraswamy tells voters to take loans under #StreeShakti scheme and to not to repay the loans. After Kumaraswamy comes to power, he will write off the loans in 24 hours. No problem.#Karnataka #Ramanagara pic.twitter.com/FurLNJVbaY
— Hate Detector 🔍 (@HateDetectors) December 23, 2022
ಮುಂದುವರೆದು ಮಾತನಾಡಿದ ಅನಿತಾ ಕುಮಾರಸ್ವಾಮಿ, ನೀವು ಈಗ ಸಾಲ ತೆಗೆದುಕೊಳ್ಳಿ, ಮುಂದೆ ಜೆಡಿಎಸ್ ಅಧಿಕಾರಕ್ಕೆ ಬಂದಾಗ, ಕುಮಾರಸ್ವಾಮಿ ಸರ್ಕಾರ ಬಂದಾಗ ನಿಮ್ಮ ಸಾಲ ಮನ್ನಾ ಮಾಡಲಿದೆ ಅಂತ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಶಾಸಕಿ ಅನಿತಾ ಕುಮಾರಸ್ವಾಮಿ ನೀಡಿರುವ ಈ ಹೇಳಿಕೆಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಅನಿತಾ ಕುಮಾರಸ್ವಾಮಿ ಹೇಳಿಕೆಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.
ಅನಿತಾ ಕುಮಾರಸ್ವಾಮಿ ಹೇಳಿಕೆಗೆ ಸಿಪಿ ಯೋಗೇಶ್ವರ್ ಟೀಕೆ
ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿಕೆಗೆ ಮಾಜಿ ಸಚಿವ ಸಿಪಿ ಯೋಗೇಶ್ವರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಸಾಲ ಎಷ್ಟು ಬೇಕಾದ್ರೂ ತಗೊಳಿ ಕುಮಾರಸ್ವಾಮಿ ಸಾಲಮನ್ನಾ ಮಾಡ್ತಾರೆ ಎನ್ನುವ ಎಚ್ಡಿಕೆ ಅವರ ಶ್ರೀಮತಿ ಹೇಳಿಕೆ ನೀಡಿರುವುದೇ ಹಾಸ್ಯಾಸ್ಪದ ಎಂದಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಹೀಗೆ ಮಾತನಾಡ್ತಾರಾ? ಇದನ್ನ ಜನರು ನಂಬಬೇಡಿ, ಇವರು ಕೇವಲ ವೋಟ್ ಹಾಕಿಸಿಕೊಳ್ಳಲು ಸುಳ್ಳು ಹೇಳ್ತಾರೆ ಅಂತ ಶಾಸಕಿ ಅನಿತಾ ಕುಮಾರಸ್ವಾಮಿ ವಿರುದ್ಧ ಸಿಪಿವೈ ಕಿಡಿ ಕಾರಿದ್ದಾರೆ.
“ಕುಮಾರಸ್ವಾಮಿ ಸುಳ್ಳು ಹೇಳಿದ್ದಾರೆ”
ಇನ್ನು ಮಾಡಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರ ವಿರುದ್ಧ ಗುಡುಗಿದ ಸಿಪಿ ಯೋಗೇಶ್ವರ್, ಚನ್ನಪಟ್ಟಣದ ಕೂಡ್ಲೂರಿನಲ್ಲಿ ಮನೆ ಹಂಚಿದ್ದೇನೆ ಅಂತ ಎಚ್ಡಿ ಕುಮಾರಸ್ವಾಮಿ ಸುಳ್ಳು ಹೇಳಿದ್ದಾರೆ. ಅವರು ಶಾಸಕರಾಗಿ ಕ್ಷೇತ್ರಕ್ಕೆ ಒಂದೂ ಮನೆ ಕೊಟ್ಟಿಲ್ಲ. ಕೆಲವರಿಗೆ ಹಕ್ಕುಪತ್ರ ಕೊಟ್ಟಿದ್ದಾರೆ ಅಷ್ಟೇ. ಆದರೆ ನಾನು ಕ್ಷೇತ್ರಕ್ಕೆ 3 ಸಾವಿರ ಮನೆ ತಂದಿದ್ದೇನೆ. ಇದಕ್ಕೆ ಕುಮಾರಸ್ವಾಮಿ ಉಡಾಫೆ ಮಾತನಾಡ್ತಾರೆ. ಆದರೆ ಮನೆ ಮಂಜೂರಾಗಿರುವ ಬಗ್ಗೆ ದಾಖಲಾತಿ ಇದೆ. ಈಗಾಗಲೇ ಫಲಾನಿಭವಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಅಂತ ಸುದ್ದಿಗೋಷ್ಠಿಯಲ್ಲಿ ಸಿಪಿ ಯೋಗೇಶ್ವರ್ ಹೇಳಿದ್ದಾರೆ.
ಇದನ್ನೂ ಓದಿ: JDS Pancharatna Yatra: 'ಎಲ್ಲಾ ವಿರೋಧಿಗಳ ಷಡ್ಯಂತ್ರಕ್ಕೆ ನಾನು ಬಲಿಯಾದೆ'-ಲೋಕ ಸೋಲು ಸ್ಮರಿಸಿದ ನಿಖಿಲ್ ಕುಮಾರಸ್ವಾಮಿ
“ಟೋಪಿ ಹಾಕೊಂಡು ಮಸೀದಿಗೆ ಹೋದ್ರೆ ಸಾಲೋದಿಲ್ಲ”
ಇನ್ನು ಮುಸ್ಲಿಂ ಸಮುದಾಯದಕ್ಕೆ ಅನುಕೂಲ ಆಗಿರೋದೆ ಬಿಜೆಪಿ ಸರ್ಕಾರದಲ್ಲಿ ಅಂತ ಸಿಪಿವೈ ಹೇಳಿದ್ದಾರೆ. ಚನ್ನಪಟ್ಟಣದ ಬಿಡಿ ಕಾಲೂನಿಗೆ 600 ಜನರಿಗೆ ಮನೆ ಮಂಜೂರಾಗಿದೆ, ಆದರೆ ಕುಮಾರಸ್ವಾಮಿ ಒಂದು ದಿನ ಅವರ ಕಷ್ಟ ಕೇಳಿಲ್ಲ. ಕೇವಲ ಟೋಪಿ ಹಾಕೊಂಡು, ಮಸೀದಿಗೆ ಹೋದ್ರೆ ಸಾಲದು ಅಂತ ವ್ಯಂಗ್ಯವಾಡಿದ್ದಾರೆ. ಬೀಡಿ ಕಾಲೂನಿಯ ಮುಸ್ಲಿಂ ಸಮುದಾಯಕ್ಕೆ ಅನುಕೂಲ ಮಾಡಿದ್ದು ಬಿಜೆಪಿ ಅಂತ ಯೋಗೇಶ್ವರ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ