ಓಲಾ, ಊಬರ್ ಮಾದರಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ವ್ಯವಸ್ಥೆಗೆ ಸರಕಾರ ಚಿಂತನೆ

ರೈತರು ಎಪಿಎಂಸಿ ಮಾರುಕಟ್ಟೆ ಮೇಲೆ ಅವಲಂಬಿತವಾಗುವ ಬದಲು ಕೃಷಿ ಗೋದಾಮುಗಳಲ್ಲೇ ತಮ್ಮ ಉತ್ಪನ್ನಗಳನ್ನ ಮಾರಾಟ ಮಾಡುವಂತಹ ವ್ಯವಸ್ಥೆಯನ್ನು ಸರಕಾರ ಮಾಡುತ್ತಿದೆ.

Vijayasarthy SN | news18
Updated:February 25, 2019, 1:07 PM IST
ಓಲಾ, ಊಬರ್ ಮಾದರಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ವ್ಯವಸ್ಥೆಗೆ ಸರಕಾರ ಚಿಂತನೆ
ಕಟವಾಗಿರುವ ಕಬ್ಬು ಬೆಳೆ
Vijayasarthy SN | news18
Updated: February 25, 2019, 1:07 PM IST
- ಜನಾರ್ದನ ಹೆಬ್ಬಾರ್,

ಬೆಂಗಳೂರು(ಫೆ. 25): ರೈತರು ತಮ್ಮ ಹೊಲದಲ್ಲಿ ಬೆಳೆದ ಉತ್ಪನ್ನಗಳನ್ನು ಸಾಗಿಸಲು ಹಲವು ಬಾರಿ ಕಷ್ಟಪಡುವ ಸ್ಥಿತಿ ಇದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ರಾಜ್ಯ ಸರಕಾರ ಹೊಸ ಚಿಂತನೆ ನಡೆಸಿದೆ. ಓಲಾ, ಊಬರ್ ಕ್ಯಾಬ್ ಮಾದರಿಯಲ್ಲಿ ಆ್ಯಪ್ ಮೂಲಕ ರೈತರು ಟ್ರ್ಯಾಕ್ಟರ್ ಬುಕ್ ಮಾಡುವ ಯೋಜನೆ ಇದಾಗಿದೆ. ಇಂಥದ್ದೊಂದು ಆ್ಯಪ್ ಈಗ ಸಿದ್ಧಗೊಳ್ಳುತ್ತಿದ್ದು, ಶೀಘ್ರದಲ್ಲೇ ಪ್ಲೇಸ್ಟೋರ್​ನಲ್ಲಿ ಲಭ್ಯವಿರುವ ಸಾಧ್ಯತೆ ಇದೆ. ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಈ ವಿಚಾರವನ್ನು ಇವತ್ತು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ದೇಶದಲ್ಲೇ ಮೊದಲು; ಶಿರಸಿಯಲ್ಲಿ ಟೆಂಪಲ್ ಮ್ಯಾನೇಜ್ಮೆಂಟ್ ಕೋರ್ಸ್

ಕೃಷಿ ಉತ್ಪನ್ನಗಳ ಖರೀದಿ ಮತ್ತು ಮಾರಾಟದಲ್ಲೂ ರೈತರಿಗೆ ಅನುಕೂಲವಾಗುವ ಕೆಲ ವ್ಯವಸ್ಥೆ ಮಾಡಲಾಗಿದೆ. ಕೃಷಿ ಶಿಥಿಲ ಕೇಂದ್ರ ಮತ್ತು ಗೋಡೌನ್​ಗಳಲ್ಲಿ ಇನ್ಮುಂದೆ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟಬಹುದಾಗಿದೆ. ಈ ಮುಂಚೆ ಎಪಿಎಂಸಿಗಳಲ್ಲಿ ಮಾತ್ರ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿಗೆ ಅವಕಾಶ ಇತ್ತು.

ಇದನ್ನೂ ಓದಿ: ಸಂಸದ ಕೆ.ಎಚ್​​​ ಮುನಿಯಪ್ಪ ಬಿಜೆಪಿ ಸೇರ್ಪಡೆ ಎಂಬ ವದಂತಿ; ಕಿಡಿಗೇಡಿಗಳ ಕೃತ್ಯಕ್ಕೆ ಕಾಂಗ್ರೆಸ್​​​ ನಾಯಕ ಗರಂ!

ಹಾಗೆಯೇ, ಕೃಷಿ ಗೋದಾಮುಗಳಲ್ಲೇ ಟ್ರ್ಯಾಕ್ಟರ್ ವ್ಯವಸ್ಥೆಯನ್ನೂ ಮಾಡಲಾಗಿರುತ್ತದೆ. ರೈತರು ಯಾವಾಗ ಬೇಕಾದರೂ ಈ ಟ್ರ್ಯಾಕ್ಟರ್​ಗಳನ್ನು ಬುಕ್ ಮಾಡಿ ತಮ್ಮ ಕೃಷಿ ಉತ್ಪನ್ನಗಳನ್ನು ಸಾಗಿಸಲು ಸಾಧ್ಯವಿದೆ ಎಂದು ಸಚಿವ ಬಂಡೆಪ್ಪ ಕಾಶೆಂಪೂರ್ ಮಾಹಿತಿ ನೀಡಿದ್ದಾರೆ.
First published:February 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ