ರಾಜ್ಯದಲ್ಲಿ ಮತ್ತೊಮ್ಮೆ ಮೊಳಗಲಿದೆ‌ ರೈತ ಕಹಳೆ: ರಾಷ್ಟ್ರೀಯ ರೈತಮುಖಂಡರಿಂದ ಮಾ.26ರಂದು ಭಾರತ್ ಬಂದ್ ಗೆ ಕರೆ

ನಾಳೆ ರೈತ ಮುಖಂಡರ ನೇತೃತ್ವದಲ್ಲಿ ಬೆಂಗಳೂರಿನಿಂದ ಶಿವಮೊಗ್ಗ ಕ್ಕೆ ಸಮಾವೇಶ ಹೋಗುತ್ತಿದ್ದೇವೆ. ಮೌರ್ಯ ಸರ್ಕಲ್‌ ನಲ್ಲಿ ಗಾಂಧಿ ಪ್ರತಿಮೆ ಮಾಲಾರ್ಪಣೆ ಮಾಡಿ ಮೆರವಣಿಗೆ ಆರಂಭಿಸುತ್ತೇವೆ

ರೈತ ಮುಖಂಡರು

ರೈತ ಮುಖಂಡರು

  • Share this:
ಬೆಂಗಳೂರು (ಮಾ. 19): ದೇಶದಲ್ಲಿ ಮತ್ತೆ ರೈತರ ಕಿಚ್ಚು ಮೊಳಗಲಿದೆ. ರಾಜ್ಯಾದ್ಯಂತ ರೈತ ಮುಖಂಡರ  ಕಿಸಾನ್ ಪಂಚಾಯತ್ ಆಂದೋಲನ ಶುರುವಾಗಿದೆ. ಸರ್ಕಾರದ ವಿರುದ್ಧ ಸಮರ ಸಾರೋಕೆ ರೈತರು ಸಜ್ಜಾಗಿದ್ದು, ಭಾರತ್ ಬಂದ್​ಗೆ ಕರೆ ಕೊಟ್ಟಿದ್ದಾರೆ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ಸುಧಾರಣೆಗಾಗಿ ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ಮ ರದ್ದುಪಡಿಸಬೇಕು ಅಂತ ರೈತರು ಹೋರಾಟ ಮಾಡ್ತಿದ್ದಾರೆ. ಬೀದಿಗಿಳಿದು ಪ್ರತಿಭಟನೆ ಮಾಡ್ತಿದ್ರು ಸರ್ಕಾರ ಕ್ಯಾರೆ ಅಂತಿಲ್ಲ. ದೆಹಲಿ ಗಡಿಯಲ್ಲಿ ನೂರಾರು ಜನ ರೈತರು ಮರಣ ಹೊಂದಿದ್ದಾರೆ. ದೇಶವ್ಯಾಪಿ ಹೋರಾಟ ನಡೀತಿದೆ. ಇಷ್ಟಾದ್ರೂ ಸರ್ಕಾರ ಈ ಬಗ್ಗೆ ಮೌನವಹಿಸಿದೆ . ಹೀಗಾಗಿ ಸರ್ಕಾರಕ್ಕೆ ಮತ್ತೊಮ್ಮೆ ಎಚ್ಚರಿಸಲು ಇದೇ ತಿಂಗಳು 26ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ಭಾರತೀಯ ಕಿಸಾನ್ ಯೂನಿಯನ್ ವತಿಯಿಂದ ಭಾರತ್ ಬಂದ್ ಗೆ ಕರೆ ನೀಡಿದ್ದು, ಈಗಾಗಲೇ ಬೇರೆ ಬೇರೆ ರಾಜ್ಯದವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಮಹಾಪಂಚಾಯತ್ ಅಂದೋಲನದ ಮೂಲಕ ಎಲ್ಲಾ ರಾಜ್ಯಗಳಿಗೂ ರೈತ ಮುಖಂಡರು ಭೇಟಿ ನೀಡ್ತಿದ್ದಾರೆ. ಗಾಂಧಿಮಾರ್ಗದ ಮೂಲಕ ಹೋರಾಟಕ್ಕೆ ಯೋಜನೆ ರೂಪಿಸಲಾಗಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಸರ್ಕಾರ ನಮ್ಮನ್ನ ದೇಹದ್ರೋಹಿ ಎಂದಿದೆ. ಆದರೆ, ನಾವೆಲ್ಲಾ ಶಾಂತಿಯುತವಾಗಿ ಹೋರಾಟ ಮಾಡ್ತಿದ್ದೀವಿ, ಅಂದರಂತೆ ಭಾರತ್ ಬಂದ್ ಗೆ ಎಲ್ಲರ ಬೆಂಬಲ ಕೇಳುತ್ತಿದ್ದೇವೆ ಎಂದರು.

ಇನ್ನು ಈ ವೇಳೆ ಮಾತನಾಡಿದ ರೈತ ಮುಖಂಡ ಕುರುಬೂರು ಶಾಂತ್ ಕುಮಾರ್, ರಾಜ್ಯದಲ್ಲಿ ಕಿಸಾನ್ ಮಹಾಮಂಚ್ ಅನ್ನು ಆರಂಭಿಸುತ್ತೆವೆ. ನಾಳೆ ರೈತ ಮುಖಂಡರ ನೇತೃತ್ವದಲ್ಲಿ ಬೆಂಗಳೂರಿನಿಂದ ಶಿವಮೊಗ್ಗ ಕ್ಕೆ ಸಮಾವೇಶ ಹೋಗುತ್ತಿದ್ದೇವೆ. ಮೌರ್ಯ ಸರ್ಕಲ್‌ ನಲ್ಲಿ ಗಾಂಧಿ ಪ್ರತಿಮೆ ಮಾಲಾರ್ಪಣೆ ಮಾಡಿ ಮೆರವಣಿಗೆ ಆರಂಭಿಸುತ್ತೇವೆ. . ಶಿವಮೊಗ್ಗದಲ್ಲಿ ಸಮಾವೇಶ ಮಾಡಿ ರೈತರನ್ನ ಸಂಘಟಿಸುತ್ತೇವೆ. ರೈತರಿಂದ 10 ರೂ ಸಂಗ್ರಹಿಸಿ ಮೃತಪಟ್ಟ ರೈತರಿಗೆ ತಲಾ 3 ಕೋಟಿ ರೂ ನೀಡುತ್ತೇವೆ. ಅದೇ ರೀತಿ ಸಂಯುಕ್ತ ಕಿಸಾನ್ ಮೋರ್ಚಾನ್ ಇದೇ 26 ರಂದು ಭಾರತ್ ಬಂದ್ ಗೆ ಕರೆ ಕೊಟ್ಟಿದೆ. ಈ ಬಗ್ಗೆಯೂ ನಾಳೆ ರೈತ ಮುಖಂಡರೊಂದಿಗೆ ಚರ್ಚೆ ಮಾಡುತ್ತೇವೆ. ಕರ್ನಾಟಕದಲ್ಲಿ ಏನು ಕ್ರಮ‌ ಕೈಗೊಳ್ಳುತ್ತೇವೆ ಎನ್ನುವ ಬಗ್ಗೆ ನಾಳೆ ಮಾಹಿತಿ ನೀಡ್ತೀವಿ ಎಂದರು

ಇತ್ತೀಚೆಗಷ್ಟೇ ಬೃಹತ್ ಹೋರಾಟ ಮಾಡಿರುವ ರೈತ ಸಮುದಾಯ ಈಗ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ತಿರುಗಿ ಬೀಳಲು ಸಜ್ಜಾಗಿದೆ. ದೆಹಲಿಯಲ್ಲಿ ರೈತರ ಹೋರಾಟ ಅಜರಾಮರವಾಗಿ ನಡೀತಿದೆ. ರೈತರು ಆಕ್ರೋಶ ಮುಗಿಲುಮುಟ್ಟಲಿದೆ. ದೇಶವ್ಯಾಪಿ ಯಶಸ್ವಿಯುತ ಬಂದ್ ಮಾಡಿ ಸರ್ಕಾರಕ್ಕೆ ಎಚ್ಚರಿಸಲು ರೈತ ಮುಖಂಡರು ಜಿಲ್ಲಾದ್ಯಂತ ಆಂದೋಲನ‌ ಶುರು ಮಾಡಿದ್ದಾರೆ. ಮುಂದೆ ರೈತರ ನಿಲುವು ಹೇಗಿರುತ್ತೆ ಕಾದುನೋಡಬೇಕಿದೆ.

(ವರದಿ-ಆಶಿಕ್ ಮುಲ್ಕಿ)
Published by:Seema R
First published: