ಎರಡು ಬಾರಿ ಕಾಂಗ್ರೆಸ್​ ಸೇರ್ಪಡೆಯಾಗಲು ಯತ್ನಿಸಿದ್ದ ಮಾಜಿ ಪ್ರಧಾನಿ ದೇವೇಗೌಡರು: ಯಾಕೆ ಗೊತ್ತೆ? ಇಲ್ಲಿದೆ ನ್ಯೂಸ್​​-18 ಕನ್ನಡಕ್ಕೆ ಸಿಕ್ಕ ಎಕ್ಸ್​ಕ್ಲೂಸಿವ್ ಮಾಹಿತಿ

ನಿಮ್ಮ ರಾಜಕೀಯ ಭವಿಷ್ಯದ ಬಗ್ಗೆ ಚಿಂತಿಸಿ ಎಂದು ದೇವೇಗೌಡರಿಗೆ ಎಸ್​.ಎಂ ಕೃಷ್ಣಾ ಸಲಹೆ ನೀಡಿದ್ದರು. ಗೌಡರ ಜೊತೆ ಬೊಮ್ಮಾಯಿ ಕೂಡ ಕಾಂಗ್ರೆಸ್​ನತ್ತ ಬರಲು ಒಲವು ತೋರಿದ್ದರು. ಪ್ರಣಬ್​​​ ಮುಖರ್ಜಿ ವಿಶ್ವಾಸಕ್ಕೆ ತೆಗೆದುಕೊಂಡರೆ ಕಾಂಗ್ರೆಸ್​ಗೆ ಬರುತ್ತೇವೆ ಎಂದು ಹೇಳಿದ್ದರು.

news18-kannada
Updated:December 25, 2019, 10:27 AM IST
ಎರಡು ಬಾರಿ ಕಾಂಗ್ರೆಸ್​ ಸೇರ್ಪಡೆಯಾಗಲು ಯತ್ನಿಸಿದ್ದ ಮಾಜಿ ಪ್ರಧಾನಿ ದೇವೇಗೌಡರು: ಯಾಕೆ ಗೊತ್ತೆ? ಇಲ್ಲಿದೆ ನ್ಯೂಸ್​​-18 ಕನ್ನಡಕ್ಕೆ ಸಿಕ್ಕ ಎಕ್ಸ್​ಕ್ಲೂಸಿವ್ ಮಾಹಿತಿ
ಎಚ್​.ಡಿ ದೇವೇಗೌಡ, ಎಸ್​​ಎಂ ಕೃಷ್ಣಾ
  • Share this:
ಬೆಂಗಳೂರು(ಡಿ.25): ಕರ್ನಾಟಕದ ರಾಜಕೀಯ ಇತಿಹಾಸಲ್ಲೇ ಇಂದೊಂದು ಅಚ್ಚರಿ ಸುದ್ದಿ. ಹೌದು, ಮಾಜಿ ಪ್ರಧಾನಿ ದೇವೇಗೌಡರು ಕಾಂಗ್ರೆಸ್​ ಸೇರ್ಪಡೆಗೆ ಮುಂದಾಗಿದ್ದಾರಂತೆ. ಒಂದಲ್ಲ ಎರಡು ಬಾರಿ ಕಾಂಗ್ರೆಸ್​ಗೆ ಸೇರ್ಪಡೆಯಾಗಲು ಚಿಂತಿಸಿದ್ದ ದೊಡ್ಡಗೌಡರ ಕನಸು ಯಾಕೇ ನನಸಾಗಲಿಲ್ಲ. ಗೌಡರ ಪಕ್ಷಾಂತರ ನಿರ್ಧಾರಕ್ಕೆ ಏನು ಕಾರಣ? ಮುಂದೇನಾಯ್ತು? ಎಂಬುದರ ಬಗ್ಗೆ ಎಕ್ಸ್​ಕ್ಲೂಸಿವ್​​​ ಮಾಹಿತಿ ನ್ಯೂಸ್​​-18 ಕನ್ನಡಕ್ಕೆ ಸಿಕ್ಕಿದೆ. ಗೌಡರ ಸಮಕಾಲೀನ ಮುತ್ಸದ್ದಿ ರಾಜಕಾರಣಿಯೇ ಈ ಮಾಹಿತಿ ಬಿಚ್ಚಿಟಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಕಾಂಗ್ರೆಸ್​ ಸೇರಲು ಮುಂದಾಗಿದ್ದ ಮಾಹಿತಿ ಮಾಜಿ ವಿದೇಶಾಂಗ ಸಚಿವ ಎಸ್.ಎಂ ಕೃಷ್ಣರಿಂದಲೇ ಬಹಿರಂಗವಾಗಿದೆ. ದೇವೇಗೌಡರು ಕೈಪಾಳಯ ಸೇರಲು ಹೊರಟಿದ್ದು ಯಾಕೆ? ಎನ್ನುವರ ಕುರಿತು ಎಸ್​​.ಎಂ ಕೃಷ್ಣರ ಜೀವನ ಚರಿತ್ರೆಯಲ್ಲೇ ಅಡಗಿದೆ.

ಹೌದು, ಎಸ್​​​.ಎಂ.ಕೃಷ್ಣ ಜೀವನ ಚರಿತ್ರೆಯಲ್ಲಿ ಗೌಡರ ರಾಜಕೀಯ ರಹಸ್ಯ ಬಯಲಾಗಿದೆ. ಸುಮಾರು ಎರಡು ಬಾರಿ ಕಾಂಗ್ರೆಸ್ ಸೇರಲು ದೇವೇಗೌಡರ ಪ್ರಯತ್ನ ಮಾಡಿದ್ದರಂತೆ. ಈ ಪುಸ್ತಕವೂ ಇದೇ ಜನವರಿ 4ಕ್ಕೆ ಬಿಡುಗಡೆಯಾಗಲಿದೆ. ಇದು ಎಸ್.​ಎಂ ಕೃಷ್ಣಾರ ಜೀವನ ಚರಿತ್ರೆಯ ಪುಸ್ತಕವಾಗಿದೆ. ಎರಡು ಸಂದರ್ಭಗಳಲ್ಲಿ ದೇವೇಗೌಡರು ಕಾಂಗ್ರೆಸ್​​ ಸೇರಲು ಪ್ರಯತ್ನಿಸಿದರ ಬಗ್ಗೆಯೂ ಈ ಪುಸ್ತಕದಲ್ಲಿ ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ.

ಮೊದಲ ಸಲ ದೇವೇಗೌಡರಿಂದಲೇ ಕಾಂಗ್ರೆಸ್​ಗೆ ಸೇರಲು ಯತ್ನ: ಮೊದಲಿಗೆ ತರ್ತು ಪರಿಸ್ಥಿತಿ ವೇಳೆ ಕಾಂಗ್ರೆಸ್​ನತ್ತ ದೇವೇಗೌಡರು ಒಲವು ತೋರಿದ್ದರು ಎನ್ನಲಾಗಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೇವೇಗೌಡರು ಜೈಲು ಸೇರಿದ್ದರು. ಅಂದಿನ ಕೈಗಾರಿಕಾ ಸಚಿವರಾಗಿದ್ದರು ಎಸ್​ಎಂ ಕೃಷ್ಣ. ಎಸ್​​. ಎಂ ಕೃಷ್ಣಾ ಆಪ್ತ ಕಾರ್ಯದರ್ಶಿಯಾಗಿ ಶಿವರಾಂ ಕೆಲಸ ಮಾಡುತ್ತಿದ್ದರು. ಪೇರೋಲ್ ಮೇಲೆ ಹೊರಗಡೆ ಬಂದಿದ್ದ ಗೌಡರು ಎಸ್.ಎಂ ಕೃಷ್ಣಾ ಭೇಟಿಗೆ ಪ್ಲಾನ್ ಮಾಡಿದ್ದರಂತೆ. ಈ ಬಗ್ಗೆ ಖುದ್ದು ಗೌಡರೇ ಎಸ್​.ಎಂ ಕೃಷ್ಣಾರ ಆಪ್ತ ಕಾರ್ಯದರ್ಶಿ ಜೊತೆ ಹೇಳಿಕೊಂಡಿದ್ದರು ಎಂದೇಳಲಾಗುತ್ತಿದೆ.

ಇನ್ನು ನೀವು ಯಾವಾಗ ಬೇಕಾದರೂ ಬನ್ನಿ ಎಂದು ದೇವೇಗೌಡರಿಗೆ ಶಿವರಾಂ ಹೇಳಿದ್ದರಂತೆ. ಖಾಸಗಿಯಾಗಿ ಮಾತನಾಡಬೇಕು ಕಾರಲ್ಲಿ ಬರಲ್ಲ ಎಂದಿದ್ದ ದೇವೇಗೌಡರು, ಆಟೋ ರಿಕ್ಷಾದಲ್ಲಿ ಎಸ್​ಎಂ ಕೃಷ್ಣ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ "ವಿರೋಧಿ ಪಕ್ಷದಲ್ಲಿ ಒಗ್ಗಟ್ಟಿಲ್ಲ, ಒಂದು ನೀತಿ ಇಲ್ಲ. ನಾನು ಕಾಂಗ್ರೆಸ್​ ಸೇರಬೇಕೆಂದಿದ್ದೇನೆ" ಎಂದು ದೇವೇಗೌಡರು ಎಸ್​​.ಎಂ ಕೃಷ್ಣಾರಿಗೆ ಹೇಳಿದ್ದರಂತೆ. ಇದಕ್ಕೆ ಸಿಎಂ ದೇವರಾಜು ಅರಸು ಬಗ್ಗೆ 18 ಗುರುತರ ಆಪಾದನೆ ಮಾಡಿದ್ದೀರಿ. ಅವುಗಳನ್ನು ರುಜುವಾತು ಮಾಡದಿದ್ದರೆ ರಾಜಕೀಯ ಸನ್ಯಾಸ ಎಂದಿದ್ದೀರಿ. ಈ ಹೊತ್ತಲ್ಲಿ ನೀವು ಕಾಂಗ್ರೆಸ್​ಗೆ ಬಂದರೆ ನಿಮ್ಮ ಘನತೆ ಏನಾಗುತ್ತೆ? ಎಂದು ಎಸ್​.​ಎಂ ಕೃಷ್ಣ ಪ್ರಶ್ನಿಸಿದ್ಧಾರೆ. ಇವರ ಪ್ರಶ್ನೆಗೆ ಕೆಲ ಕಾಲ ಮೌನವಾಗಿದ್ದ ಗೌಡರು, ಕೃಷ್ಣ ನೀನು ಹೇಳುವುರಲ್ಲಿ ಸತ್ಯವಿದೆ ದುಡುಕಲ್ಲ ಎಂದು ವಾಪಸ್ಸಾಗಿದ್ದರಂತೆ.

ಇದನ್ನೂ ಓದಿ: ಮಾಜಿ ಪ್ರಧಾನಿ ವಾಜಪೇಯಿ 95ನೇ ಹುಟ್ಟುಹಬ್ಬ: ಅದ್ಭುತ ವಾಗ್ಮಿ ಅಟಲ್​ ಬಿಹಾರಿ ನೆನೆದ ಗಣ್ಯರು

ಎರಡನೇ ಸಲ ಎಸ್​.ಎಂ ಕೃಷ್ಣಾರಿಂದ ಗೌಡರ ಕರೆತರುವ ಯತ್ನ: ಎರಡನೇ ಬಾರಿಗೆ ದೇವೇಗೌಡರು ಚರಣ್ ಸಿಂಗ್ ರಾಜೀನಾಮೆ ಬಳಿಕ ಕಾಂಗ್ರೆಸ್​ನತ್ತ ಒಲವು ತೋರಿದ್ದರು ಎಂದೇಳಲಾಗುತ್ತಿದೆ. ರಾಷ್ಟ್ರಪತಿಯಾಗಿದ್ದ ಸಂಜೀವ್​​​ ನೀಲಂ ರೆಡ್ಡಿ ಅಂದಿನ ಪ್ರಧಾನಿ ಚರಣ್ ಸಿಂಗ್​ಗೆ ಷರತ್ತು ವಿಧಿಸಿ ಪ್ರಧಾನಿ ಪಟ್ಟ ನೀಡಿದ್ದರು. ಲೋಕಸಭೆಯಲ್ಲಿ ವಿಶ್ವಾಸಮತ ಪಡೆದರೆ ಮಾತ್ರ ಅಧಿಕಾರ ಎಂದು ಷರತ್ತು ವಿಧಿಸಿದ್ದರು. ಕೊನೆಗೂ ರಾಷ್ಟ್ರಪತಿ ನೀಲಂ ಸಂಜೀವ್​​​ ರೆಡ್ಡಿ ಷರತ್ತು ಎದುರಿಸದೆ ಪ್ರಧಾನಿ ಹುದ್ದೆಗೆ ಚರಣ್​​ ಸಿಂಗ್ ರಾಜೀನಾಮೆ ನೀಡಿದ್ದರು. ಈ ವೇಳೆ ಕರ್ನಾಟಕದ ಜನತಾ ಪಕ್ಷದ ನಾಯಕರಿಗೆ ದಿಗ್ಭ್ರಮೆಯಾಗಿತ್ತು. ಆಗ ಸೆಂಟ್ರಲ್ ಹಾಲ್​ನಲ್ಲಿ ಗೌಡರಿಗೆ ಕಾಂಗ್ರೆಸ್​​ಗೆ ಬರುವಂತೆ ಎಸ್. ಎಂ ಕೃಷ್ಣ ಸಲಹೆ ನೀಡಿದ್ದರಂತೆ.

ನಿಮ್ಮ ರಾಜಕೀಯ ಭವಿಷ್ಯದ ಬಗ್ಗೆ ಚಿಂತಿಸಿ ಎಂದು ದೇವೇಗೌಡರಿಗೆ ಎಸ್​.ಎಂ ಕೃಷ್ಣಾ ಸಲಹೆ ನೀಡಿದ್ದರು. ಗೌಡರ ಜೊತೆ ಬೊಮ್ಮಾಯಿ ಕೂಡ ಕಾಂಗ್ರೆಸ್​ನತ್ತ ಬರಲು ಒಲವು ತೋರಿದ್ದರು. ಪ್ರಣಬ್​​​ ಮುಖರ್ಜಿ ವಿಶ್ವಾಸಕ್ಕೆ ತೆಗೆದುಕೊಂಡರೆ ಕಾಂಗ್ರೆಸ್​ಗೆ ಬರುತ್ತೇವೆ ಎಂದು ಹೇಳಿದ್ದರು. ಎಸ್.​ಎಂ ಕೃಷ್ಣಾರಿಗೆ ಎಚ್.​​ಡಿ ದೇವೇಗೌಡ ಹಾಗೂ ಬೊಮ್ಮಾಯಿ ಭರವಸೆ ನೀಡಿದ್ದರು. ಅಂದು ಸಂಜೆಯೇ ಪ್ರಣಬ್​ ಮುಖರ್ಜಿ ಎದುರು ಎಸ್​​.ಎಂ ಕೃಷ್ಣಾ ಗೌಡರ ವಿಷಯ ಪ್ರಸ್ತಾಪ ಮಾಡಿದ್ದರು. ಗೌಡರ ಸೇರ್ಪಡೆಗೆ ಪ್ರಣಬ್ ಮುಖರ್ಜಿ ಸಕಾರಾತ್ಮಕ ಸ್ಪಂದಿಸಿದ್ದರು. ಮಾರನೆ ದಿನವೇ ಹೋಟೆಲ್​ನಲ್ಲಿ ಪ್ರಣಬ್​-ಗೌಡರ ಭೇಟಿ ಮಾತುಕತೆ ನಡೆದಿತ್ತು. ಆಪ್ತರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತಿಳಿಸುವುದಾಗಿ ಗೌಡರು ಭರವಸೆ ನೀಡಿದ್ದರು. ಕೊನೆಗೂ ಏನಾಯಿತೋ ಗೌಡರು ಮಾತ್ರ ಅಂತಿಮ ನಿರ್ಧಾರ ತಿಳಿಸಲ್ಲೇ ಇಲ್ಲವಂತೆ ಎಂದು ತಿಳಿದು ಬಂದಿದೆ.
Published by: Ganesh Nachikethu
First published: December 25, 2019, 10:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading