• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಡಿಜೆ ಹಳ್ಳಿ ಗಲಭೆ: ‘ಮಾಜಿ ಮೇಯರ್​​ ಸಂಪತ್​ ರಾಜ್​ ಕೈವಾಡ ಇಲ್ಲ‘ - ಜಮೀರ್​​ ಅಹಮದ್​ ಸ್ಪಷ್ಟನೆ

ಡಿಜೆ ಹಳ್ಳಿ ಗಲಭೆ: ‘ಮಾಜಿ ಮೇಯರ್​​ ಸಂಪತ್​ ರಾಜ್​ ಕೈವಾಡ ಇಲ್ಲ‘ - ಜಮೀರ್​​ ಅಹಮದ್​ ಸ್ಪಷ್ಟನೆ

ಕಾಂಗ್ರೆಸ್​ ಶಾಸಕ ಜಮೀರ್​ ಅಹಮದ್

ಕಾಂಗ್ರೆಸ್​ ಶಾಸಕ ಜಮೀರ್​ ಅಹಮದ್

ಡಿಜೆ ಹಳ್ಳಿ ಗಲಭೆಯಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಕೈವಾಡ ಇದೆ ಎಂಬ ಆರೋಪವನ್ನು ಶಾಸಕ ಜಮೀರ್ ಅಹಮದ್ ಅಲ್ಲಗಳೆದಿದ್ದಾರೆ.

  • Share this:

ಬೆಂಗಳೂರು(ಆ.14): ಡಿ.ಜೆ ಹಳ್ಳಿ ಗಲಭೆ ಹಿಂದೆ ಕಾಂಗ್ರೆಸ್​ ನಾಯಕ ಮತ್ತು ಮಾಜಿ ಮೇಯರ್ ಸಂಪತ್ ರಾಜ್ ಕೈವಾಡ ಇದೆ ಎಂದು ಮಾಜಿ ಸಚಿವ ಜಮೀರ್ ಅಹಮದ್​​ ಗಂಭೀರ ಆರೋಪ ಎಸಗಿದ್ದಾರೆ ಎಂಬ ಚರ್ಚೆ ನಡೆಯುತ್ತಿತ್ತು. ಆದರೀಗ, ಈ ಆರೋಪವನ್ನು ಸ್ವತಃ ಜಮೀರ್ ಅಹಮದ್ ಅಲ್ಲಗಳೆದಿದ್ದಾರೆ. ಮಾಧ್ಯಮದಲ್ಲಿ ಹೀಗೆ ವರದಿ ಮಾಡಿದ ಸುದ್ದಿ ಸತ್ಯಕ್ಕೆ ದೂರ ಎಂದು ಟ್ವೀಟ್​​ ಮಾಡಿದ್ದಾರೆ.


ಈ ಸಂಬಂಧ ಟ್ವೀಟ್​ ಮಾಡಿರುವ ಮಾಜಿ ಸಚಿವ ಜಮೀರ್​ ಅಹಮದ್​, ಹಲವು ವರ್ಷಗಳಿಂದ ಸಂಪತ್ ಅವರು ನನಗೆ ಪರಿಚಿತರು. ಅವರು ನಮ್ಮ ಪಕ್ಷದ ಕಾರ್ಪೊರೇಟರ್ ಕೂಡ ಹೌದು. ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭವೆಂದೇ ಕರೆಯಲ್ಪಡುವ ಮಾಧ್ಯಮಗಳ ವರದಿಗಳು ವಸ್ತುನಿಷ್ಠ ಮತ್ತು ನ್ಯಾಯಯುತವಾಗಿರಬೇಕು. ಸುಳ್ಳು ಸುದ್ದಿಗಳಿಂದ ಆ ಘನತೆಗೆ ಧಕ್ಕೆಯಾಗುತ್ತದೆ ಎಂದು ಬರೆದುಕೊಂಡಿದ್ಧಾರೆ.ನಿನ್ನೆಯ ಕೆ.ಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ನಮ್ಮ‌ ಪಕ್ಷದ ಮುಖಂಡರಾದ ಸಂಪತ್ ಅವರ ಕೈವಾಡವಿದೆ ಎಂದು ನಾನು ಕೆಲವರ ಬಳಿ ಹೇಳಿದ್ದೇನೆ ಎಂಬ ಸುಳ್ಳು ಸುದ್ದಿ ಮಾಧ್ಯಮವೊಂದರಲ್ಲಿ ಪ್ರಸಾರವಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ.
ಮಾಧ್ಯಮಗಳಿಗೆ ನನ್ನದೊಂದು ಮನವಿ, ದಯವಿಟ್ಟು ಕಲ್ಪಿತ ವರದಿಗಳನ್ನು ಪ್ರಸಾರ ಮಾಡಿ ಜನರಿಗೆ ತಪ್ಪು ಸಂದೇಶ ನೀಡಬೇಡಿ ಎಂದು ಮತ್ತೊಂದು ಟ್ವೀಟ್​ ಮಾಡಿದ್ದಾರೆ.
ಪುಲಿಕೇಶಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕನ ಮಗ ನವೀನ್ ಎಂಬುವರ ಫೇಸ್​ಬುಕ್ ಖಾತೆಯಲ್ಲಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಲಾಗಿತ್ತು. ಇದರಿಂದ ಒಂದು ಕೋಮಿನ ಜನರು ರೊಚ್ಚಿಗೆದ್ದು ಮಂಗಳವಾರ ರಾತ್ರಿ ಡಿಜೆ ಹಳ್ಳಿ, ಕೆಜಿ ಹಳ್ಳಿ ಹಾಗೂ ಕಾವಲ್ ಬೈರಸಂದ್ರ ಪ್ರದೇಶಗಳಲ್ಲಿ ಗಲಭೆಗಳಾಗಿವೆ. ಅಂಖಡರ ಮನೆಯನ್ನ ಸುಟ್ಟುಹಾಕಿದ್ದಾರೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯನ್ನು ಧ್ವಂಸ ಮಾಡಲಾಗಿದೆ. 2-3 ಸಾವಿರದಷ್ಟಿದ್ದ ಗಲಭೆಕೋರರು ಪೊಲೀಸ್ ವಾಹನ ಸೇರಿದಂತೆ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ. ಪೊಲೀಸರ ಫೈರಿಂಗ್​ನಲ್ಲಿ ಮೂವರು ಸಾವನ್ನಪ್ಪಿದ್ದಾರೆ.


ಇದನ್ನೂ ಓದಿ: ಡಿ.ಜೆ ಹಳ್ಳಿ ಗಲಭೆ ಪ್ರಕರಣ: ಬಿಬಿಎಂಪಿ ಪಾಲಿಕೆ ಸದಸ್ಯೆ ಇರ್ಷಾದ್ ಬೇಗಂ ಪತಿ ಖಲೀಂ ಪಾಷಾ ಬಂಧನ

top videos
    First published: