ಕಲಬುರ್ಗಿಯಲ್ಲಿ ಸಿಡಿಲಿಗೆ ಓರ್ವ ರೈತ ಸಾವು - 50 ಕುರಿಗಳು ಬಲಿ

ಸಿಡಿಲಿನ ಆಬ್ಬರಕ್ಕೆ ಪೀರ್ ಪಾಶಾನ ಮೈಮೇಲಿದ್ದ ಬಟ್ಟೆಗಳೂ ಸುಟ್ಟು ಹೋಗಿವೆ. ಬಿದ್ದಲ್ಲಿಯೇ ರೈತ ಒದ್ದಾಡಿ ಸಾವನ್ನಪ್ಪಿದ್ದಾನೆ. ಈ ಕುರಿತು ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

news18-kannada
Updated:September 30, 2020, 10:26 PM IST
ಕಲಬುರ್ಗಿಯಲ್ಲಿ ಸಿಡಿಲಿಗೆ ಓರ್ವ ರೈತ ಸಾವು - 50 ಕುರಿಗಳು ಬಲಿ
ಪ್ರಾತಿನಿಧಿಕ ಚಿತ್ರ
  • Share this:
ಕಲಬುರ್ಗಿ(ಸೆ.30): ಕಲಬುರ್ಗಿ ಜಿಲ್ಲೆಯಲ್ಲಿ ವರುಣನ ಅಬ್ಬರ ಒಂದಿಷ್ಟು ಕಡಿಮೆಯಾಗಿದೆ. ಆದರೆ ಜಿಲ್ಲೆಯ ಅಲ್ಲಲ್ಲಿ ಮಳೆಯಾಗುತ್ತಿದೆ. ಚಿಂಚೋಳಿ ತಾಲೂಕಿನಲ್ಲಿ ಸುರಿದ ಸಿಡಿಲಬ್ಬರದ ಮಳೆಗೆ ಓರ್ವ ರೈತ ಮತ್ತು 50 ಕುರಿಗಳು ಸಾವನ್ನಪ್ಪಿವೆ. ತಾಲೂಕಿನ ಚಂದನಕೇರಾ ಗ್ರಾಮದಲ್ಲಿ ರೈತ ಸಾವನ್ನಪ್ಪಿದ್ದರೆ, ಕೊಲ್ಲೂರು ಗ್ರಾಮದ ಬಳಿ 50 ಕುರಿಗಳು ಬಲಿಯಾಗಿವೆ. ಸಿಡಿಲು ಬಡಿದು ರೈತನೋರ್ವ ಸಾವನ್ನಪ್ಪಿದ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದನಕೇರ ಗ್ರಾಮದ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಸಿಡಿಲಿಗೆ ಬಲಿಯಾದ ರೈತನನ್ನು ಮಹಮ್ಮದ್ ‌ಪೀರ್ ಪಾಷಾ(28) ಎಂದು ಗುರುತಿಸಲಾಗಿದೆ. ಈ ವೇಳೆ ಸಿಡಿಲಿನ ಸಮೇತ ಮಳೆ ಬಂದಿದೆ. ಸಿಡಿಲಿನ ಆಘಾತಕ್ಕೆ ರೈತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಸಿಡಿಲಿನ ಆಬ್ಬರಕ್ಕೆ ಪೀರ್ ಪಾಶಾನ ಮೈಮೇಲಿದ್ದ ಬಟ್ಟೆಗಳೂ ಸುಟ್ಟು ಹೋಗಿವೆ. ಬಿದ್ದಲ್ಲಿಯೇ ರೈತ ಒದ್ದಾಡಿ ಸಾವನ್ನಪ್ಪಿದ್ದಾನೆ. ಈ ಕುರಿತು ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಿಡಿಲು ಬಡಿದು 50 ಕುರಿಗಳು ಸಾವನ್ನಪ್ಪಿರೋ ಘಟನೆ ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕೊಲ್ಲೂರು ಗ್ರಾಮದ ಬಳಿ ನಡೆದಿದೆ.

ಪ್ರಭು ಹೊಗ್ಗೆಳ್ಳಿ ಎಂಬುವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ಚಂದ್ರಂಪಳ್ಳಿ ಜಲಾಶಯದ ಗುಡ್ಡದ ಪಕ್ಕದ ಪ್ರದೇಶದಲ್ಲಿ ಮೇಯಿಸಲು ಹೋದ ಸಂದರ್ಭದಲ್ಲಿ ಏಕಾಏಕಿ ಸಿಡಿಲು ಬಡಿದಿದೆ. ಒಂದೇ ಸ್ಥಳದಲ್ಲಿ 50 ಕುರಿಗಳು ಸಾವನ್ನಪ್ಪಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಕುರಿಗಳು ಸಿಡಿಲಿಗೆ ಬಲಿಯಾಗಿರೋದರಿಂದ ಕುರಿಗಾಹಿ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

ಇದನ್ನೂ ಓದಿ: Cinema hall reopening: ಕೊನೆಗೂ ಸಿನಿಮಾ ಮಂದಿರ ತೆರೆಯಲು ಅನುಮತಿ ನೀಡಿದ ಕೇಂದ್ರ

ಇನ್ನು, ವಿಷಯ ತಿಳಿದು ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ.ಧನರಾಜ್ ಬೊಮ್ಮಾ ಮತ್ತು ಗ್ರಾಮದ ಮುಖಂಡರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Published by: Ganesh Nachikethu
First published: September 30, 2020, 10:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading