ಸಾಮಾನ್ಯವಾಗಿ ಲಕ್ಷ ಲಕ್ಷ (Lakhs) ಕೊಟ್ಟು ಮನೆ (House) ತೆಗೆದುಕೊಳ್ಳುವುದು ನೋಡಿದ್ದೇವೆ. ಇನ್ನೂ ಕೆಲವರು ತಮ್ಮ ಶೋಕಿಗಾಗಿ ಏನೇನು ಮಾಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 8 ಲಕ್ಷ ಹಣ ನೀಡಿ ಗಗನ್ (Gagan)
ಎಂಬ ಒಂಟಿ ಎತ್ತನ್ನ (Ox) ಖರೀದಿ ಮಾಡಿದ್ದಾನೆ. ಅಲ್ಲದೇ ಇನ್ನೊಬ್ಬ ರೈತ 10 ಲಕ್ಷ ಆಫರ್ ಬಂದರೂ ಸಹ ತನ್ನ ಸೂರ್ಯನನ್ನ ಕೊಡುವುದಿಲ್ಲ ಎಂದು ಹಠ ಹಿಡಿದಿದ್ದಾನೆ. ಏನಿದು ಎತ್ತುಗಳ ಸ್ಟೋರಿ ಅಂತೀರಾ. ಈ ಸ್ಟೋರಿ ಓದಿ.
ನಾವು ಎತ್ತುಗಳನ್ನು ರೈತನ ಮಿತ್ರ ಎನ್ನುವುದು ಅಕ್ಷರಶಃ ಸತ್ಯ. ರೈತರು ತಮ್ಮ ಮನೆಯಲ್ಲಿ ಸಾಕುವ ಪ್ರಾಣಿಗಳನ್ನು ಹೆಚ್ಚು ಪ್ರೀತಿಸುತ್ತಾರೆ. ದನ, ನಾಯಿ, ಕೋಳಿ, ಕುರಿ , ಬೆಕ್ಕು , ಎತ್ತು ಯಾವುದೇ ಆಗಲಿ ಅವರ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಅವುಗಳಿಗಾಗಿ ಖರ್ಚು ಮಾಡಲು ಹಿಂದೆ ಮುಂದೆ ಯೋಚಿಸುವುದಿಲ್ಲ. ಹಾಗೆಯೇ ಚಿಕ್ಕಮಗಳೂರಿನ ಈ ಜೋಡಿ ಎತ್ತಿನ ಸ್ಟೋರಿ ಕೇಳಿದ್ರೆ ರೈತರಿಗೆ ತಮ್ಮ ಮನೆಯ ಪ್ರಾಣಿಗಳ ಮೇಲಿನ ಪ್ರೀತಿ ಏನು ಎಂಬುದು ಅರಿವಾಗುತ್ತದೆ.
ಇದನ್ನೂ ಓದಿ: ಚುನಾವಣೆ ಹೊತ್ತಿನಲ್ಲಿ M.B Patilಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ!
ಬರೋಬ್ಬರಿ 8 ಲಕ್ಷಕ್ಕೆ ಒಂಟಿ ಎತ್ತು ಖರೀದಿ
ಚಿಕ್ಕಮಗಳೂರು ತಾಲೂಕಿನ ತೇಗೂರಿನ ರೈತ ಮಂಜು ಎಂಬುವವರು ಬರೋಬ್ಬರಿ 8 ಲಕ್ಷ ಹಣ ನೀಡಿ ಮೈಸೂರಿನಿಂದ ಗಗನ್ ಎಂಬ ಎತ್ತನ್ನು ಖರೀದಿ ಮಾಡಿಕೊಂಡು ಬಂದಿದ್ಧಾರೆ, ಮಂಜು ಅವರಿಗೆ ಎತ್ತುಗಳು ಎಂದರೆ ಹೆಚ್ಚು ಪ್ರೀತಿಯಂತೆ ಹಾಗಾಗಿ ಕಳೆದ ವರ್ಷವೇ ಈ ಎತ್ತನ್ನು ಖರೀದಿಸಲು ಪ್ರಯತ್ನಿಸಿದ್ದರು, ಆದರೆ ಯಾವುದೂ ಒಂದು ಸಣ್ಣ ಕಾರಣದಿಂದ ಗಗನ್ ಎತ್ತನ್ನು ಖರೀದಿ ಮಾಡಲು ಸಾಧ್ಯವಾಗಿಲ್ಲ, ಆದರೆ ಈ ಬಾರಿ ಯಾವುದೇ ಕಾರಣಕ್ಕೂ ಆ ಎತ್ತು ಮಿಸ್ ಆಗಬಾರದು ಎಂದು ದಾಖಲೆಯ ಬರೋಬ್ಬರಿ 8 ಲಕ್ಷ ಹಣ ನೀಡಿ ಗಗನ್ ಎಂಬ ಎತ್ತನ್ನು ಖರೀದಿ ಮಾಡಿದ್ದಾರೆ.
ಇನ್ನು ಮಂಜು ಅವರು ಗಗನ್ ಅನ್ನು ಊರಿಗೆ ಕರೆದುಕೊಂಡು ಬರುತ್ತಿದ್ದಂತೆ ಮಹಿಳೆಯರು ಸಂಭ್ರಮ, ಸಡಗರದಿಂದ ಎತ್ತಿಗೆ ಪೂಜೆ ಮಾಡುವ ಮೂಲಕ ಸ್ವಾಗತ ಮಾಡಿದ್ದಾರೆ.
ಇದು 8 ಲಕ್ಷ ನೀಡಿ ಎತ್ತು ಖರೀದಿಸಿದ ರೈತ ಕಥೆಯಾದರೆ 10 ಲಕ್ಷದ ಆಫರ್ ಬಂದರೂ ಸಹ ಎತ್ತನ್ನು ನೀಡಲು ನಿರಾಕರಿಸುತ್ತಿರುವ ಇನ್ನೊಂದು ರೈತ ಸ್ಟೋರಿ ಕೇಳಿ. ಅದೇ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಚನ್ನಾಪುರ ಗ್ರಾಮದ ನಾಗಭೂಷಣ್ ಎಂಬುವವರು ಸೂರ್ಯ ಎಂಬ ಎತ್ತು ಸಾಕಿದ್ದಾರೆ.
4 ವರ್ಷ ಎತ್ತಿಗೆ 10 ಲಕ್ಷ ಡಿಮ್ಯಾಂಡ್
ಈ ಎತ್ತಿಗೆ ಈಗ ಕೇವಲ ನಾಲ್ಕು ವರ್ಷ . ಈ ಸೂರ್ಯನಿಗೆ ಎತ್ತಿನ ಗಾಡಿ ಸ್ಪರ್ಧೆಯಲ್ಲಿ ಭಾಗವಹಿಸುವುದು ಬಹಳ ಇಷ್ಟವಂತೆ. ಹಾಗಾಗಿ ಜಿಲ್ಲೆಯಲ್ಲಿ ಎಲ್ಲೇ ಸ್ಪರ್ಧೆ ನಡೆಯುತ್ತಿದ್ದರು ಹಾಜರಿ ಹಾಕುತ್ತಿದ್ದ, ಅಷ್ಟೇ ಅಲ್ಲದೇ, ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಯುವ ಸ್ಫರ್ಧೆಯಲ್ಲಿ ಭಾಗವಹಿಸುತ್ತಿದ್ದ.
ಇದನ್ನೂ ಓದಿ: ಗಣರಾಜ್ಯೋತ್ಸವ ಪರೇಡ್ ಪೂರ್ವಾಭ್ಯಾಸದಲ್ಲಿ Asha Bhosle ಹಾಡಿಗೆ ನೌಕಾಪಡೆ ಹೆಜ್ಜೆ!
ಈ ಎತ್ತಿಗೆ ಅಭಿಮಾನಿ ಬಳಗವೇ ಇದೆಯಂತೆ. ಏಕೆಂದರೆ ಭಾಗವಹಿಸಿದ ಸ್ಪರ್ಧೆಯಲ್ಲಿ ಗೆಲುವು ಸಾಧಿಸದೇ ಇರುತ್ತಿರಲಿಲ್ಲವಂತೆ. ಹಾಗಾಗಿ ಈ ಎತ್ತಿನ ಹೆಚ್ಚಿನ ಡಿಮ್ಯಾಂಡ್ ಬಂದಿದ್ದು, 10 ಲಕ್ಷ ಕೊಡ್ತೀವಿ, 12 ಲಕ್ಷ ಕೊಡ್ತೀವಿ ಕೊಡಿ ಅಂತ ಖರೀದಿಸಲು ಹಲವಾರು ಜನರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ರೈತ ಮಾತ್ರ ಬಿಲ್ಕುಲ್ ಕೊಡಲು ಒಪ್ಪುತ್ತಿಲ್ಲ. ಏನೇ ಆದರೂ ಸೂರ್ಯನನ್ನ ಮಾರುವುದಿಲ್ಲ ಎಂದು ಹಠ ಹಿಡಿದು ಕುಳಿತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ