ದಸರಾ ಗಜಪಡೆಗೆ ಅಂತಿಮ ಬೀಳ್ಕೊಡುಗೆ; ಕಾಡಿನತ್ತ ಪಯಣ ಬೆಳೆಸಿದ ಅಭಿಮನ್ಯು ತಂಡ

ಕಾಡಿನತ್ತ ಹೊರಟ ಗಜಪಡೆಯೊಂದಿಗೆ ಅಂತಿಮವಾಗಿ ಫೋಟೋಗೆ ಫೋಸ್​ ನೀಡಿದವರು.  ಬಳಿಕ ಲಾರಿ ಮೂಲಕ ಕಾಡು ಸೇರಿದವು.

ಕಾಡಿನತ್ತ ಹೊರಟ ಗಜಪಡೆ

ಕಾಡಿನತ್ತ ಹೊರಟ ಗಜಪಡೆ

  • Share this:
ಮೈಸೂರು (ಅ.28): ಕೊರೋನಾ ಹಿನ್ನಲೆಯಲ್ಲಿ ನಡೆದ ಸರಳಾ ದಸರಾದಲ್ಲಿ ಅಂಬಾರಿ ಹೊತ್ತು ಸಾಗಿದ ಗಜಪಡೆ ಇಂದು ಕಾಡಿನತ್ತ ಪಯಣ ಬೆಳೆಸಿದವು. ಈ ವೇಳೆ ಗಜಪಡೆಗೆ  ಅರಮನೆ ಆವರಣದಲ್ಲಿಂದು ಆತ್ಮೀಯವಾದ ಬೀಳ್ಕೊಡುಗೆ ನೀಡಲಾಯಿತು. ಒಂದು ತಿಂಗಳಿಂದ ಅರಮನೆ ಅಂಗಳದಲ್ಲಿ ಬೀಡು ಬಿಟ್ಟಿದ್ದ ಗಜಪಡೆ ಯಶಸ್ವಿಯಾಗಿ ಜಂಬೂ ಸವಾರಿ ಪೂರ್ಣಗೊಳಿಸಿದ್ದವು. ನಿನ್ನೆ‌ ಇಡೀ ದಿನ ವಿಶ್ರಾಂತಿ ಪಡೆದಿದ್ದವು. ಇಂದು ಅರಣ್ಯ ಇಲಾಖೆ ಪೂಜೆ ಸಲ್ಲಿಸಿ ಆನೆಗಳಿಗೆ ಬೀಳ್ಕೊಡುಗೆ ನೀಡಿತು. ಪುರೋಹಿತ ಪ್ರಹ್ಲಾದ್ ನೇತೃತ್ವದಲ್ಲಿ ಗಜಪಡೆಗೆ ಗಜಪೂಜೆ ನೆರವೇರಿಸಿದ ಬಳಿಕ ಡಿಸಿಎಫ್ ಅಲೆಕ್ಸ್ಯಾಂಡರ್, ಪಶು ವೈದ್ಯ ಡಾ.ನಾಗರಾಜ್ ನೇತೃತ್ವದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಿದ್ದರು. ಕೋವಿಡ್ ಸಂದರ್ಭದಲ್ಲಿ ಆನೆಗಳನ್ನು ಜೋಪಾನವಾಗಿ ಕರೆತಂದು ವಾಪಸ್ ಕಳುಹಿಸುತ್ತಿರುವುದು ಸಮಾಧಾನಕರ ಸಂಗತಿ ಅಂತ ಡಿಸಿಎಫ್ ಹರ್ಷ ವ್ಯಕ್ತಪಡಿಸಿದ್ದರು.

ಇನ್ನು ಗಜಪೂಜೆ ಬಳಿಕ ವಾಪಾಸ್ಸಾಗುತ್ತಿದ್ದ ಗಜಪಡೆ ಕಾಣಲು ಬಂದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಗಮಿಸಿದರು. ಕೋಡಿ ಸೋಮೇಶ್ವರ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ಅವರು, ಮಗ ಆದ್ಯವೀರ ಒಡೆಯರ್ ಅವರನ್ನು ಆನೆಗಳ ಬಳಿ ಕರೆತಂದರು. ಆನೆಗಳನ್ನು ತೋರಿಸಿ, ಅವುಗಳನ್ನು ಮುಟ್ಟಿಸಿ ಸಂತಸ ಪಟ್ಟರು

 farewell to the Dasara elephant in mysore palace after vijayadashami
ದಸರಾ ಆನೆಗಳ ಜೊತೆ ಯದುವೀರ್​


ಕೋವಿಡ್ ಸೋಂಕು ಹರಡುವ ವನ್ಯಜೀವಿಗಳ ಪೈಕಿ ಆನೆಗಳು ಕಡಿಮೆ ಅಪಾಯಹೊಂದಿದೆ.  ಆದಾಗ್ಯೂ ಮೈಸೂರಿಗೆ ಕರೆತಂದ ಮೊದಲ ದಿನದಿಂದಲೇ ಆರೋಗ್ಯದ ಮೇಲೆ ನಿಗಾ ಇಡಲಾಗಿತ್ತು. ಮೈಸೂರಿನಲ್ಲಿದ್ದಾಗ ಆನೆಗಳಿಗೆ ಬೇಯಿಸಿದ ಕಾಳು, ತರಕಾರಿ, ಹಸಿ ಸೊಪ್ಪು ಮತ್ತು ಬೆಲ್ಲ- ಭತ್ತದಿಂದ ಮಾಡಿದ ಕುಸುರೆಗಳನ್ನು ನೀಡಲಾಗುತ್ತಿತ್ತು. ನಾಳೆಯಿಂದ ಎಂದಿನಂತೆ ನೈಸರ್ಗಿಕವಾಗಿ ಕಾಡಿನ ಮೇವು ಸವಿಯಲಿವೆ ಎಂದು ಪಶು ವೈದ್ಯ ಡಾ.ನಾಗರಾಜ್ ತಿಳಿಸಿದರು.

ಕಾಡಿನತ್ತ ಹೊರಟ ಗಜಪಡೆಯೊಂದಿಗೆ ಅಂತಿಮವಾಗಿ ಫೋಟೋಗೆ ಫೋಸ್​ ನೀಡಿದವರು.  ಬಳಿಕ ಲಾರಿ ಮೂಲಕ ಕಾಡು ಸೇರಿದವು. ಕ್ಯಾಪ್ಟನ್ ಅಭಿಮನ್ಯು ಮತ್ತಿಗೋಡು ಆನೆ ಶಿಬಿರಕ್ಕೆ ಹೊರಟರೆ, ವಿಕ್ರಮ, ಗೋಪಿ, ಕಾವೇರಿ ಮತ್ತು ವಿಜಯಾ ಆನೆಗಳು ದುಬಾರಿ  ಕ್ಯಾಂಪ್​ನತ್ತ ಹೊರಟವು. ಇದರೊಂದಿಗೆ ದಸರಾ ಚಟುವಟಿಕೆಗಳು ಬಹುತೇಕ ಮುಕ್ತಾಯವಾಯಿತು.
Published by:Seema R
First published: