Puneeth Rajkumar: ಕಣಿವೆ ಮಾರಮ್ಮನ ಜಾತ್ರೆಯಲ್ಲಿ 'ಅಪ್ಪು' ಫೋಟೋ! ದೇವಿ ದರ್ಶನ ಪಡೆದು 'ಪುನೀತ'ರಾದ ಭಕ್ತರು

ಕಣಿವೆ ಮಾರಮ್ಮನ ರಥ ಮುಂದೆ ಸಾಗುತ್ತಿದ್ದಂತೆ  ಡಾ. ಪುನೀತ್ ರಾಜ್ ಕುಮಾರ್ ಅವರ ಫೋಟೋ ಕೂಡ ಮೆರವಣಿಗೆಯಲ್ಲಿ ಸಾಗಿತು. ನೆಚ್ಚಿನ ನಟ ಫೋಟೋ ಜೊತೆ ಅಭಿಮಾನಿಗಳು ಸೆಲ್ಫಿ ತೆಗೆಸಿಕೊಂಡು, ಅಪ್ಪು ಪರ ಘೋಷಣೆ ಮೊಳಗಿಸಿದರು.

ಪುನೀತ್ ಫೋಟೋ ಹಿಡಿದ ಅಭಿಮಾನಿಗಳು (ಸಂಗ್ರಹ ಚಿತ್ರ)

ಪುನೀತ್ ಫೋಟೋ ಹಿಡಿದ ಅಭಿಮಾನಿಗಳು (ಸಂಗ್ರಹ ಚಿತ್ರ)

  • Share this:
ಚಿತ್ರದುರ್ಗ: ಕೊರೋನಾ (Corona) ಹರಡುವ ಬೀತಿಯಿಂದ ಕಳೆದ ಎರಡು ವರ್ಷಗಳಿಂದ ನಿಂತು ಹೋಗಿದ್ದ ಜಾತ್ರೆ (Jatre) ಇದೀಗ ಸಂಭ್ರಮದಿಂದ ನಡೆದಿದೆ. ಚಿತ್ರದುರ್ಗ (Chitradurga) ಜಿಲ್ಲೆಯ  ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ (Vani Vilasa Sagara) ಜೀವ ಜಲಕ್ಕೆ ಬೆನ್ನೊಡ್ಡಿದ ತಾಯಿ (Mother) ಅಂತ ಕರೆಸಿಕೊಳ್ಳೋ ಕಣಿವೆ ಮಾರಮ್ಮ (Kanive Maramma) ಜಾತ್ರೆ ಈ ಭಾರಿ ಯಾವ ಅಡ್ಡಿ ಆತಂಕಗಳಿಲ್ಲದೆ ನಡೆಯಿತು. ಜಾತ್ರೆಯಲ್ಲಿ ರಥವನ್ನ ಎಳೆಯುವ ಸಮಯಕ್ಕೆ ಸರಿಯಾಗಿ ಅಭಿಮಾನಿಗಳ ಆರಾಧ್ಯ ದೈವ ಅಂತಲೇ ಹೆಗ್ಗಳಿಕೆಗೆ ಪಡೆದಿರುವ, ನಟ (Hero), ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Power Star Puneeth Rajkumar) ಅವರ ಭಾವ ಚಿತ್ರವನ್ನ (Photo) ಅಭಿಮಾನಿಗಳು (Fans) ಮೆರವಣಿಗೆ ಮಾಡಿದ್ದು, ಅಪ್ಪು (Appu) ನೆನಪು ನಿರಂತರ ಅನ್ನೋದನ್ನ ತೋರಿಸಿ ಕೊಟ್ಟಿತು.

ಅದ್ಧೂರಿಯಾಗಿ ನಡೆದ ಕಣಿವೆ ಮಾರಮ್ಮನ ಜಾತ್ರೆ

ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರಸ ರಕ್ಷಕಿ ಅದಿ ದೇವತೆ ಕಣಿವೆ ಮಾರಮ್ಮ ರಥೋತ್ಸವ ಈ ವರ್ಷ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ  ವೈಭವ ಪೂರಕವಾಗಿ ನೆರವೇರಿತು.

ಜಲಾಶಯಕ್ಕೆ ಬೆನ್ನೊಡ್ಡಿ ಕುಳಿತ ದೇವಿ

ಚಿತ್ರದುರ್ಗ ಜಿಲ್ಲೆಗೆ ಜೀವ ಜಲ, ಕುಡಿಯುವ ನೀರನ್ನ ಒದಗಿಸೋ ವಿವಿ ಸಾಗರ ಕಟ್ಟುವಾಗ ಅದ್ಯಾಕೋ ಕಟ್ಟಡ ಭದ್ರವಾಗಿ ನಿಲ್ಲುತ್ತಿರಲಿಲ್ಲವಂತೆ, ಆಗ ಈ ದೇವತೆ ಬೆನ್ನೊಡ್ಡಿ ಕುಳಿತಾಗ ಕಟ್ಟಡ ಭದ್ರವಾಯ್ತು ಅನ್ನೋ ಇತಿಹಾಸವನ್ನ ಭಕ್ತರು, ಈ ಭಾಗದ ಜನರು ಮಾತನಾಡುತ್ತಾರೆ.

ಇದನ್ನೂ ಓದಿ: Puneeth Rajkumarಗೆ ಇದೆಂಥಾ ಅಪಮಾನ! ಇಲ್ಲಿ ಅಪ್ಪು ಫೋಟೋ, ಕನ್ನಡ ಧ್ವಜಕ್ಕೆ ನೋ ಎಂಟ್ರಿ!

ಕೊರೋನಾದಿಂದ ಕಳಾಹೀನವಾಗಿದ್ದ ಜಾತ್ರಾ ಸಂಭ್ರಮ

ಈ ತಾಯಿಯ ಜಾತ್ರೆ, ಉತ್ಸವ, ರಥೋತ್ಸವ ಅಂದ್ರೆ ಎಲ್ಲರಿಗೂ ಭಕ್ತಿ ಭಾವ ತಂಬಿರುತ್ತದೆ. ಕಳೆದ ಆದ್ರೆ ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಇಡೀ ಜನರ ಜೀವಕ್ಕೆ ಕಂಟಕ ಪ್ರಾಯವಾಗಿದ್ದ ಕೊರೋನಾ ಅನ್ನೋ ಮಹಾಮಾರಿ ಕಾಯಿಲೆ ಎಲ್ಲರನ್ನ ತಲ್ಲಣವಾಗುವಂತೆ ಮಾಡಿತ್ತು. ಅದು ಕೇವಲ ಮಾನವರಿಗಲ್ಲದೆ, ಅನೇಕ ಜಾತ್ರೆ, ರಥೋತ್ಸವ, ಹಬ್ಬಗಳಿಗೂ ಬ್ರೇಕ್ ಹಾಕಿ ನಿಲ್ಲುವಂತೆ ಮಾಡಿತ್ತು. ಅದ್ದರಿಂದ ಭಕ್ತರ ಆಚಾರಗಳಿಗೆ ಕೊಂಚ ನೆಮ್ಮದಿ ಇಲ್ಲದಂತೆ ಮಾಡಿತ್ತು. ಇಂಥಹ ಸಂದರ್ಭದಲ್ಲಿ ಕಣಿವೆ ಮಾರಮ್ಮ ರಥೋತ್ಸವವೂ ಎರಡು ವರ್ಷ ಸ್ಥಗಿತವಾಗಿತ್ತು.

ದೇವಿದ ದರ್ಶನ ಪಡೆದು ಪುನೀತರಾದ ಭಕ್ತರು

ಈ ಬಾರಿ ಜಾತ್ರೆಗೆ ಕವಿದಿದ್ದ ಕರಿ ನೆರಳು ಸರಿದು ರಥೋತ್ಸವ ಮಾಡಲಾಯಿತು. ಈ ವೇಳೆ ತೇರಿನಲ್ಲಿ ಅಮ್ಮನವರ  ಉತ್ಸವ ಮೂರ್ತಿಯನ್ನ ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪಿಸುತ್ತಿದ್ದಂತೆ ಭಕ್ತರ ಹರ್ಷ ಮುಗಿಲು ಮುಟ್ಟಿತ್ತು. ಅಲ್ಲದೇ ಹೂವುಗಳ ಸರಮಾಲೆಯಿಂದ ಅಲಂಕಾರ ಮಾಡಿದ್ದ ತೇರನ್ನ ಭಕ್ತಿ ಭಾವದಿಂದ ಎಳೆದ‌ಭಕ್ತರು, ಬಾಳೆಹಣ್ಣು ಎಸೆಯುವ ಮೂಲಕ ತನ್ನ ಇಷ್ಟಾರ್ಥಗಳ ಸಿದ್ದಿಗೆ ಪ್ರಾರ್ಥನೆ ಮಾಡಿದ್ರು.

ಪುನೀತ್ ಫೋಟೋ ಹಿಡಿದು ಪ್ರಾರ್ಥಿಸಿದ ಅಭಿಮಾನಿಗಳು

ವಿಶೇಷ ಅಂದ್ರೆ ಕಣಿವೆ ಮಾರಮ್ಮ ರಥ ಮುಂದೆ ಸಾಗುತ್ತಿದ್ದಂತೆ  ಡಾ. ಪುನೀತ್ ರಾಜ್ ಕುಮಾರ್ ಅವರ ಪೋಟೋ ಕೂಡ ಮೆರವಣಿಗೆಯಲ್ಲಿ ಸಾಗಿತು. ನೆಚ್ಚಿನ ನಟನನ್ನ ಕಳೆದುಕೊಂಡ ಅಭಿಮಾನಿಗಳು  ಅವರ ದೈಹಿಕ ಇರುವಿಕೆಯನ್ನ ಮರೆತರು, ಮಾನಸಿಕವಾಗಿ ಅವರನ್ನ ಅಪ್ಪಿ ಆರಾಧಿಸುತ್ತಿದ್ದಾರೆ. ಹಾಗಾಗಿ ಡಾ.ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಪವರ್ ಸ್ಟಾರ್  ಪೋಟೋ ಹಿಡಿದು ರಥೋತ್ಸವ ಜೊತೆಗೆ ಸಾಗಿದ್ದು ವಿಶೇಷವಾಗಿತ್ತು.

ಮಾರಿ ಜಾತ್ರೆಯಲ್ಲಿ ಪುನೀತ್ ಫೋಟೋ ಮೆರವಣಿಗೆ


ಇದನ್ನೂ ಓದಿ: James: ಅಪ್ಪು ವಾಯ್ಸ್​ನಲ್ಲೇ ರೀ ರಿಲೀಸ್ ಆಯ್ತು ಜೇಮ್ಸ್​! 'ರಾಜರತ್ನ'ನ ಧ್ವನಿ ಕೇಳಿ ಫ್ಯಾನ್ಸ್​ ಭಾವುಕ

ಅಪ್ಪು ಫೋಟೋ ಜೊತೆ ಅಭಿಮಾನಿಗಳ ಸೆಲ್ಫಿ

ರಥೋತ್ಸವದ ಸಮಯದಲ್ಲಿ ಅಪ್ಪು ಪೋಟೋ ಕಾಣುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿ ಫೋಟೋ ತೆಗೆಸಿಕೊಂಡ್ರು. ರಥೋತ್ಸವದಲ್ಲಿ ರಾಜ್ಯದ ಹಲವು ಜಿಲ್ಲೆ ಭಕ್ತರು ಸೇರಿದಂತೆ ನೆರೆಯ ಆಂಧ್ರ ತಮಿಳುನಾಡು ಸೇರಿದಂತೆ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಪುನೀತರಾದರು.
Published by:Annappa Achari
First published: