Sunny Leone: "ಬಾರಮ್ಮ ಬಾರಮ್ಮ ಬಾರೇ" ಅಂತ ಕಾಯ್ತಿದ್ದಾರೆ ಸನ್ನಿ ಫ್ಯಾನ್ಸ್! ಸಕ್ಕರೆನಾಡಿಗೆ ಬರ್ತಾರಾ 'ಸೇಸಮ್ಮ'?

ನಮ್ಮ ಮಂಡ್ಯದ ಹೈಕ್ಳು ಶ್ಯಾನೆ ಖುಷಿಯಾಗವ್ರೆ. ಯಾಕೆಂದ್ರೆ 'ಶೃಂಗಾರ ದೇವತೆ', ಬಾಲಿವುಡ್ ನಟಿ ಸನ್ನಿ ಲಿಯೋನ್ ಮಂಡ್ಯದ ತಮ್ಮ ಅಭಿಮಾನಿಗಳ ಬಗ್ಗೆ ಸಿಕ್ಕಾಪಟ್ಟೆ ಹೊಗಳಿದ್ದಾರೆ. ರಕ್ತದಾನ ಮಾಡಿ ಬರ್ತ್ ಡೇ ಸೆಲಬ್ರೇಟ್ ಮಾಡಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಇತ್ತ ಸನ್ನಿ ಹೊಗಳಿಕೆಗೆ ಉಬ್ಬಿರುವ ಮಂಡ್ಯ ಬಾಯ್ಸ್ “ಬಾರಮ್ಮ ಬಾರಮ್ಮ ಬಾರೇ" ಅಂತ ಸಕ್ಕರೆ ನಾಡಿಗೆ ಸನ್ನಿಯನ್ನು ಸ್ವಾಗತಿಸಿದ್ದಾರೆ.

ಅದ್ಧೂರಿಯಾಗಿ ಸನ್ನಿ ಲಿಯೋನ್ ಹುಟ್ಟುಹಬ್ಬ ಆಚರಿಸಿದ್ದ ಫ್ಯಾನ್ಸ್

ಅದ್ಧೂರಿಯಾಗಿ ಸನ್ನಿ ಲಿಯೋನ್ ಹುಟ್ಟುಹಬ್ಬ ಆಚರಿಸಿದ್ದ ಫ್ಯಾನ್ಸ್

  • Share this:
ಮಂಡ್ಯ: ಮಾಜಿ ನೀಲಿ ಚಿತ್ರ ತಾರೆ, ಹಾಲಿ ಬಾಲಿವುಡ್ ನಟಿ (Bollywood Actress) ಸನ್ನಿ ಲಿಯೋನ್ (Sunny Leone) ಸದ್ಯ ಅಭಿಮಾನಿಗಳ (Fans) ಹಾಟ್ ಫೇವರೆಟ್ (Favorite). ಒಂದು ಕಾಲದಲ್ಲಿ ನೀಲಿ ಚಿತ್ರದಲ್ಲಿ ನಟಿಸುತ್ತಿದ್ದ ಸನ್ನಿ ಲಿಯೋನ್ ಬಾಲಿವುಡ್ ಎಂಟ್ರಿ ಬಳಿಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾದರು.  ಪ್ರಬುದ್ಧ ಪಾತ್ರಗಳಲ್ಲಿ ನಟಿಸುವ ಮೂಲಕ ಜನರ ಮನ ಗೆದ್ದರು. ನಟನೆ ಜೊತೆಗೆ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಸನ್ನಿ, ದೊಡ್ಡ ಅಭಿಮಾನಿ ಬಳಗವನ್ನೇ ಪಡೆದರು. ಅದರಲ್ಲೂ ಮಂಡ್ಯದ (Mandya) ಅಭಿಮಾನಿಗಳಂತು ಸನ್ನಿ ಮೇಲೆ ವಿಶೇಷ ಪ್ರೀತಿ, ಅಭಿಮಾನ ಹೊಂದಿದ್ದಾರೆ. ಕಳೆದ ಮೇ.13ರಂದು ಸನ್ನಿ ಲಿಯೋನ್ ಹುಟ್ಟುಹಬ್ಬ (Birthday) ಅಂಗವಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಸ್ವತಃ ಸನ್ನಿ ಲಿಯೋನ್ ಅವರನ್ನೇ ಮೂಕವಿಸ್ಮಿತಗೊಳಿಸಿದ್ದಾರೆ. ಇದೀಗ ಮಂಡ್ಯ ಹುಡುಗ್ರ ಅಭಿಮಾನವನ್ನು ಮೆಚ್ಚಿಕೊಂಡ ಸನ್ನಿ, ಟ್ವಿಟರ್‌ನಲ್ಲಿ (Twitter) ಥ್ಯಾಂಕ್ಸ್ (Thanks) ಹೇಳಿದ್ದರು. ಇದ್ರಿಂದ ಮತ್ತಷ್ಟು ಖುಷಿಯಾಗಿರುವ ಮಂಡ್ಯ ಬಾಯ್ಸ್ (Mandya Boys), ತಮ್ಮೂರಿಗೆ ಬರುವಂತೆ ಸನ್ನಿ ಲಿಯೋನ್‌ಗೆ ಆಹ್ವಾನ ನೀಡಿದ್ದಾರೆ.

ಸನ್ನಿ ಲಿಯೋನ್ ಬರ್ತ್‌ ಡೇ ದಿನ 40 ಯೂನಿಟ್ ರಕ್ತ ಸಂಗ್ರಹ

ಮೇ 13ರಂದು ನಟಿ ಸನ್ನಿ ಲಿಯೋನ್ ಹುಟ್ಟುಹಬ್ಬದ ಅಂಗವಾಗಿ ಮಂಡ್ಯದ ಕೊಮ್ಮೇರಹಳ್ಳಿಯ ಅಭಿಮಾನಿಗಳು ರಕ್ತದಾನ ಶಿಬಿರ ಆಯೋಜಿಸಿದ್ದರು. ಜೀವಧಾರೆ ಟ್ರಸ್ಟ್ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ 40 ಯುವಕರು ರಕ್ತದಾನ ಮಾಡುವ ಮೂಲಕ ನೆಚ್ಚಿನ ನಟಿಗೆ ಶುಭಾಶಯ ಹೇಳಿದರು.

ಸೇಸಮ್ಮನ ಫ್ಲೆಕ್ಸ್ ಹಾಕಿ ಸಂಭ್ರಮ

ಇದಲ್ಲದೇ ಗ್ರಾಮದ ಮುಖ್ಯ ರಸ್ತೆಯಲ್ಲಿ ಸನ್ನಿ ಲಿಯೋನರ ಬೃಹತ್ ಫ್ಲೆಕ್ಸ್ ಅಳವಡಿಸಿದ್ದ ಯುವಕರು, 'ಅನಾಥ ಮಕ್ಕಳ ತಾಯಿ. ಅಭಿಮಾನಿಗಳ ದೇವತೆ' ಎಂದು ಬರೆದು ಪ್ರೀತಿ ವ್ಯಕ್ತಪಡಿಸಿದ್ದರು. ಬರ್ತಡೇ ಹಿನ್ನೆಲೆ ಕೇಕ್ ಕತ್ತರಿಸಿದ ಅಭಿಮಾನಿಗಳು ಸಾರ್ವಜನಿಕರಿಗೆ ಬಿರಿಯಾನಿ ಹಾಗೂ ಸಿಹಿ ವಿತರಿಸಿ ಸಂಭ್ರಮಿಸಿದರು.

ಇದನ್ನೂ ಓದಿ: Sunny Leone: ಮಂಡ್ಯ ಹೈಕ್ಳಿಗೆ "ಶಾನೆ ಥ್ಯಾಂಕ್ಸ್" ಎಂದ 'ಸೇಸಮ್ಮ'! ಅಷ್ಟಕ್ಕೂ ಸನ್ನಿ ಲಿಯೋನ್ ಹಾಗೆಂದಿದ್ದೇಕೆ?

ಮಂಡ್ಯದ ಹಲವೆಡೆ ಸನ್ನಿ ಹುಟ್ಟುಹಬ್ಬ ಆಚರಣೆ

ಬರಿ ಕೊಮ್ಮೇರಹಳ್ಳಿ ಅಷ್ಟೇ ಅಲ್ಲದೆ ಜಿಲ್ಲೆಯ ಅನೇಕ ಕಡೆ ಕೂಡ ಸನ್ನಿಲಿಯೋನ್ ಬರ್ತಡೆ ಆಚರಿಸಲಾಗಿತ್ತು. ಮಂಡ್ಯ ನಗರದ 100 ಅಡಿ ರಸ್ತೆಯಲ್ಲಿ ಸನ್ನಿ ಅಭಿಮಾನಿಗಳಿಗೆ ಚಿಕನ್ ಖರೀದಿಸಿದರೆ 10% ಡಿಸ್ಕೌಂಟ್ ಕೂಡ ನೀಡಲಾಗಿತ್ತು. ಅಲ್ಲದೆ ಬರ್ತಡೆ ಆಚರಣೆ ವೇಳೆ ಸಾರ್ವಜನಿಕರಿಗೆ ಚಿಕನ್ ಬಿರಿಯಾನಿ ವಿತರಿಸಲಾಗಿತ್ತು.

ಮಂಡ್ಯ ಜನರ ಪ್ರೀತಿಗೆ ಮನಸೋತ ಸನ್ನಿಲಿಯೋನ್

ಇನ್ನು ಈ ವಿಚಾರ ಮಾಧ್ಯಮಗಳಲ್ಲಿ ಸುದ್ದಿಯಾದ ಬಳಿಕ ಸನ್ನಿಲಿಯೋನ್ ಗೆ ವಿಚಾರ ತಿಳಿದಿದೆ. ಹೀಗಾಗಿ ತಮ್ಮ ಹುಟ್ಟುಹಬ್ಬಕ್ಕೆ ರಕ್ತದಾನ, ಅನ್ನದಾನದಂತಹ ಕಾರ್ಯಕ್ರಮಗಳನ್ನ ಆಯೋಜಿಸಿದ್ದ ಮಂಡ್ಯ ಅಭಿಮಾನಿಗಳ ಕಾರ್ಯವನ್ನು ನಟಿ ಸನ್ನಿಲಿಯೋನ್ ಗಮನಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಧನ್ಯವಾದ ಅರ್ಪಿಸಿದ್ದರು.

“ನಾನೂ ರಕ್ತದಾನ ಮಾಡುತ್ತೇನೆ” ಎಂದ ಸನ್ನಿ

ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ, ಸನ್ನಿ ಇದು ನಂಬಲು ಅಸಾಧ್ಯ. ನಿಮಗೆ ಗೌರವ ಸೂಚಿಸಲು ನಾನೂ ಹೋಗಿ ರಕ್ತದಾನ ಮಾಡುತ್ತೇನೆ. ತುಂಬಾ ಧನ್ಯವಾದಗಳು. ನಿಜವಾಗಿಯೂ ನೀವೆಲ್ಲರೂ ನನಗೆ ತುಂಬಾ ವಿಶೇಷವಾದ ಭಾವನೆ ಮೂಡಿಸುತ್ತೀರಿ. ಲವ್​ ಯೂ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Sunny Leone: 'ಆ ವಿಡಿಯೋ' ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟ ಸನ್ನಿ! ಅಷ್ಟಕ್ಕೂ 'ಸೇಸಮ್ಮ' ಹೇಳಿದ್ದೇನು?

ಸನ್ನಿ ಆಗಮನಕ್ಕೆ ಕಾಯುತ್ತಿರುವ ಫ್ಯಾನ್ಸ್

ಸನ್ನಿ ಪ್ರತಿಕ್ರಿಯೆಗೆ ಅಭಿಮಾನಿಗಳು ಕೂಡ ಖುಷ್ ಆಗಿದ್ದಾರೆ. ಸನ್ನಿಲಿಯೋನ್‌ರ ಸಾಮಾಜಿಕ ಕೆಲಸಗಳನ್ನು ಮೆಚ್ಚಿ ಮಂಡ್ಯದಲ್ಲಿ ದೊಡ್ಡ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ. ಇದೀಗ ಸನ್ನಿ ತಮ್ಮೂರಿಗೆ ಬರಬೇಕು ಅಂತ ಅಭಿಮಾನಿಗಳು ಆಶಿಸುತ್ತಿದ್ದಾರೆ. ಸೇಸಮ್ಮ ಸಕ್ಕರೆ ನಾಡಿಗೆ ಬರ್ತಾಳಾ ಅಂತ ಕಾದು ನೋಡಬೇಕು.
Published by:Annappa Achari
First published: