SL Bhyrappa: ಸತ್ಯ ಹೇಳಿ ಎಂದಿದ್ದಕ್ಕೆ ನನ್ನನ್ನು ಹೊರಗಿಟ್ಟಿದ್ದರು! ಪಠ್ಯಪುಸ್ತಕ ವಿವಾದಕ್ಕೆ ಭೈರಪ್ಪ ಪ್ರತಿಕ್ರಿಯೆ

ದೀಗ ಖ್ಯಾತ ಸಾಹಿತಿ, ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್ಎಲ್ ಭೈರಪ್ಪ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇಂದಿರಾಗಾಂಧಿ ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆ ಆಗಿತ್ತು. ಆಗ ನನ್ನನ್ನ ಪರಿಷ್ಕರಣೆ ಸಮಿತಿಯಿಂದ ಹೊರಗಿಟ್ಟಿದ್ದರು. ಸತ್ಯವನ್ನ ಹೇಳಬೇಕು ಎಂದಿದ್ದಕ್ಕೆ ನನ್ನ ಹೊರಗಿಟ್ಟರು ಅಂತ ಭೈರಪ್ಪ ಆರೋಪಿಸಿದ್ದಾರೆ.

ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ

ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ

  • Share this:
ಮೈಸೂರು: ಕರ್ನಾಟಕದಲ್ಲಿ (Karnataka) ಭುಗಿಲೆದ್ದಿರುವ ಪಠ್ಯ ಪುಸ್ತಕ ಪರಿಷ್ಕರಣೆ (Text book revision controversy) ವಿವಾದ ವಿವಿಧ ಮಜಲುಗಳನ್ನು ಪಡೆದುಕೊಳ್ಳುತ್ತಿದೆ. ರೋಹಿತ್ ಚಕ್ರತೀರ್ಥ (Rohit Chakratirtha) ಅವರನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಿಂದ ವಜಾ ಮಾಡಬೇಕು ಅಂತ ವಿವಿಧ ಸಾಹಿತಿಗಳು, ಪ್ರಗತಿಪರರು ಆಗ್ರಹಿಸಿದ್ದಾರೆ. ಕೆಲವೆಡೆ ರೋಹಿತ್ ಚಕ್ರತೀರ್ಥ ಅವರ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಇದೀಗ ಖ್ಯಾತ ಸಾಹಿತಿ, ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್ಎಲ್ ಭೈರಪ್ಪ (SL Bhyarappa) ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇಂದಿರಾಗಾಂಧಿ (Indira Gandhi) ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆ ಆಗಿತ್ತು. ಆಗ ನನ್ನನ್ನ ಪರಿಷ್ಕರಣೆ ಸಮಿತಿಯಿಂದ ಹೊರಗಿಟ್ಟಿದ್ದರು. ಸತ್ಯವನ್ನ ಹೇಳಬೇಕು ಎಂದಿದ್ದಕ್ಕೆ ನನ್ನ ಹೊರಗಿಟ್ಟರು ಅಂತ ಭೈರಪ್ಪ ಆರೋಪಿಸಿದ್ದಾರೆ.

ಪಠ್ಯ ಪುಸ್ತಕದಲ್ಲಿ ಸತ್ಯ, ಪ್ರಾಮಾಣಿಕತೆ ಇರಬೇಕು

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯ ಪುಸ್ತಕದಲ್ಲಿ ಪ್ರಾಮಾಣಿಕವಾದದ್ದು ಯಾವುದು ?  ಅಂತ ಪ್ರಶ್ನಿಸಿದ್ದಾರೆ. ಪಠ್ಯದಲ್ಲಿ ಸತ್ಯ ಇರಬೇಕು, ಆದರೆ ನಮ್ಮ ನಿಮ್ಮ ಐಡಿಯಾಲಜಿಗಳು ಇರಬಾರದು ಎಂದಿದ್ದಾರೆ. ಇನ್ನು ನಾನು ನಾನು ಲೇಖಕನೇ ಹೊರತು, ಕಾರ್ಯಕರ್ತ ಅಲ್ಲ ಅಂತ ಹೇಳಿದ್ದಾರೆ.

ವಾಜಪೇಯಿ ಆಡಳಿತವಿದ್ದಾಗ ವಿರೋಧವಿತ್ತು

ವಾಜಪೇಯಿ ಅಧಿಕಾರದಲ್ಲಿದ್ದ ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿದ್ದರು. ಆಗ ಸಾಹಿತಿಗಳು ದೇಶದ ತುಂಬೆಲ್ಲ "ಪ್ರಶಸ್ತಿ ವಾಪ್ಸಿ" ಚಳವಳಿ ಶುರು ಮಾಡಿದರು. ಆಗ ನಾನು ಪ್ರಶಸ್ತಿ ಜತೆಗೆ ಹಣವನ್ನೂ ವಾಪಸ್ ಕೊಡಿ ಅಂತ ಸಲಹೆ ಕೊಟ್ಟಿದ್ದೆ. ಅಷ್ಟಕ್ಕೆ 15 ದಿನಗಳಲ್ಲಿ ಎಲ್ಲರೂ ಸುಮ್ಮನಾಗಿದ್ದರು ಅಂತ ವ್ಯಂಗ್ಯವಾಡಿದ್ರು.

ಇದನ್ನೂ ಓದಿ: Exclusive: ಸಿದ್ದುಗೆ ಟಕ್ಕರ್, ಕುಪೇಂದ್ರ ರೆಡ್ಡಿಗೆ ಬಂಪರ್! ಮಲ್ಲಿಕಾರ್ಜುನ್ ಖರ್ಗೆ, ದೇವೇಗೌಡರಿಂದ ಹೊಸ ದಾಳ

ಸತ್ಯ ಹೇಳಿದ್ದಕ್ಕೆ ನನ್ನನ್ನು ಹೊರಗಿಟ್ಟಿದ್ದರು

ಇಂದಿರಾಗಾಂಧಿ ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆ ಆಗಿತ್ತು. ಆಗ ನನ್ನನ್ನ ಪರಿಷ್ಕರಣೆ ಸಮಿತಿಯಿಂದ ಹೊರಗಿಟ್ಟಿದ್ದರು. ಸತ್ಯವನ್ನ ಹೇಳಬೇಕು ಎಂದಿದ್ದಕ್ಕೆ ನನ್ನ ಹೊರಗಿಟ್ಟರು. ಆಗಲೂ ಅವರಿಗೆ ಬೇಕಾದವರನ್ನ ಸೇರಿಸಿಕೊಂಡು ಪಠ್ಯ ರಚನೆ ಮಾಡಿದ್ದರು. ಅವತ್ತಿನ ಬಹುತೇಕ ಕಾಂಗ್ರೆಸ್ ಸರ್ಕಾರದ ರಾಜ್ಯಗಳು ಪಠ್ಯವನ್ನ ಒಪ್ಪಿಕೊಂಡು ಅಳವಡಿಸಿಕೊಂಡರು ಅಂತ ಭೈರಪ್ಪ ಹೇಳಿದರು.

ಎಲೆಕ್ಷನ್ ಬಂತು ಅಂದರೆ ಏನು ಬೇಕಾದ್ರೂ ಮಾಡ್ತೇವೆ

ಇನ್ನು ಪ್ರಜಾಪ್ರಭುತ್ವಕ್ಕಾಗಿ ಎಲೆಕ್ಷನ್ ನಡೆಯಬೇಕು. ಆದರೆ ಎಲೆಕ್ಷನ್ ಬಂತು ಅಂದ್ರೆ ನಾವು ಏನು ಬೇಕಾದರೂ ಮಾಡುತ್ತೇವೆ. ಹೆತ್ತ ತಾಯಿಯ ಜುಟ್ಟು ಹಿಡಿದು ಕೊಟ್ಟು ಬಿಡುತ್ತೇವೆ ಅಂತ ಬೇಸರ ವ್ಯಕ್ತಪಡಿಸಿದ್ರು.

ರಂಗಾಯಣ ನಿರ್ದೇಶಕರ ಪರ ಬ್ಯಾಟಿಂಗ್

ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಕೊಡಗಿನವರು. ಟಿಪ್ಪು ಕೊಡಗು ಜಿಲ್ಲೆಯಲ್ಲಿ ಏನೆಲ್ಲ ಮಾಡಿದ ಅನ್ನೋದು ಕಾರ್ಯಪ್ಪಗೆ ಗೊತ್ತು. ಅದನ್ನು ಭಾಷಣದಲ್ಲಿ ಪ್ರಸ್ತಾಪ ಮಾಡಿದರು. ಇದರಿಂದ ಸಿಟ್ಟಾದ ಮಾಜಿ ನಿರ್ದೇಶಕರು ಸಿಎಂಗೆ ಪತ್ರ ಬರೆದರು, ಚಳವಳಿ ಶುರು ಮಾಡಿದರು. ಸ್ವಲ್ಪದಿನಗಳ ನಂತರ ಎಲ್ಲರೂ ಸುಮ್ಮನಾದರು. ನಾಟಕ ಇರೋದು ಚಳವಳಿ ಮಾಡೋಕೆ. ಕಾವ್ಯ, ಕಾದಂಬರಿ ಹೇಗೆ ರಸಾನುಭವವೋ ಹಾಗೆಯೇ ನಾಟಕ ಕೂಡ ರಸಾನುಭವ. ಅಡ್ಡಂಡ ಕಾರ್ಯಪ್ಪ ತೆಗೆದು ಹಾಕಲು ಚಳವಳಿ ಮಾಡಿದವರಿಗೆ ಸಾಧ್ಯ ಆಗಲಿಲ್ಲ ಅಂತ ಹೇಳಿದ್ರು.

ಇದನ್ನೂ ಓದಿ: Hijab Controversy: ಹಿಜಾಬ್ ಧರಿಸಿ ಕಾಲೇಜ್‌ಗೆ ಬಂದ ವಿದ್ಯಾರ್ಥಿನಿಯರು! ಉಪ್ಪಿನಂಗಡಿಯಲ್ಲಿ 6 ಮಂದಿ ಅಮಾನತು

ಟಿಪ್ಪು ಬಗ್ಗೆ ಭೈರಪ್ಪ ಹೇಳಿದ್ದೇನು?

ಟಿಪ್ಪು ವಿಚಾರದಲ್ಲಿ ಲೆಫ್ಟಿಸ್ಟು, ಮುಸ್ಲಿಂಗಳು ಅವರದ್ದೇ ಐಡಿಯಾಲಜಿ ಮಾಡುತ್ತಾರೆ. ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರು ಬದಲಿಸಬೇಕು ಅಂತ ಪ್ರತಾಪ್ ಸಿಂಹ ಹೇಳಿದರು. "ಟಿಪ್ಪುವಿನ ನಿಜ ಸ್ವರೂಪ" ಪುಸ್ತಕವನ್ನು ಯಾರೂ ಓದುವುದಿಲ್ಲ ಅಂತ ಹೇಳಿದ್ರು.
Published by:Annappa Achari
First published: