• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Drugs Case ಅನುಶ್ರೀಗೆ ಬಿಗ್ ರಿಲೀಫ್: ಆರೋಪಿಗಳ ಪಟ್ಟಿಯಿಂದ ಹೆಸರು ಕೈ ಬಿಟ್ಟ ಸಿಸಿಬಿ ಪೊಲೀಸರು..?

Drugs Case ಅನುಶ್ರೀಗೆ ಬಿಗ್ ರಿಲೀಫ್: ಆರೋಪಿಗಳ ಪಟ್ಟಿಯಿಂದ ಹೆಸರು ಕೈ ಬಿಟ್ಟ ಸಿಸಿಬಿ ಪೊಲೀಸರು..?

ನಿರೂಪಕಿ ಅನುಶ್ರೀ

ನಿರೂಪಕಿ ಅನುಶ್ರೀ

ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ವಿಚಾರಣೆ ಎದುರಿಸಿದ್ದ ಅನುಶ್ರೀ ಅವರಿಗೆ ಕೊಂಚ ನಿರಾಳವಾಗಿದೆ. ಈ ಹಿಂದೆ ಅನುಶ್ರೀ ಅವರು ಈ ಪ್ರಕರಣ ಕುರಿತಂತೆ ವಿಡಿಯೋ ಒಂದನ್ನು ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

  • Share this:

    ಮಾದಕ ವಸ್ತು ಪ್ರಕರಣದಲ್ಲಿ (Drugs Case) ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ (Anchor Anushree) ಅವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಆರೋಪಿಗಳ ಪಟ್ಟಿಯಿಂದ ಅನುಶ್ರೀ ಹೆಸರನ್ನು ಸಿ.ಸಿ.ಬಿ ಪೊಲೀಸರು  (CCB Police)ಕೈ ಬಿಟ್ಟಿದ್ದಾರಂತೆ. ಚಾರ್ಜ್​ಶೀಟ್​ನಲ್ಲಿ ಆರೋಪಿಗಳ ಪಟ್ಟಿಯಲ್ಲಿ ಅನುಶ್ರೀ ಹೆಸರಿಲ್ಲ ಎಂದು ನ್ಯೂಸ್ 18 ಗೆ ಸಿ.ಸಿ.ಬಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಕಿಶೋರ್ ಅಮನ್ ಶೆಟ್ಟಿ, ತರುಣ್ ಸೇರಿದಂತೆ ನಾಲ್ವರ ಹೆಸರನ್ನು ಆರೋಪಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಅನುಶ್ರೀ ಮಾದಕ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದರು ಎಂಬುದಕ್ಕೆ‌ ಯಾವುದೇ ಪುರಾವೆ ಸಿಕ್ಕಿಲ್ಲ.  2007ರಲ್ಲಿ ಡ್ರಗ್ಸ್ ಪಾರ್ಟಿ (Drugs Party) ಮಾಡಿದ್ದೆವು ಎಂಬ ಕಿಶೋರ್ ಹೇಳಿಕೆಗೆ ಯಾವುದೇ ಪೂರಕ ಸಾಕ್ಷಿ ಸಿಕ್ಕಿಲ್ಲ. ಆರೋಪಿಗಳ ಹಾಗೂ ಅನುಶ್ರೀ ಅವರ ನಡುವೆ ಯಾವುದೇ ಫೋನ್‌ ಕರೆ ಸಂಭಾಷಣೆ ನಡೆದಿಲ್ಲ. ಚಾರ್ಜ್​ಶೀಟ್​ನಲ್ಲಿ ಆರೋಪಿ ಕಿಶೋರ್ ಹೇಳಿಕೆ ಮಾತ್ರ ಉಲ್ಲೇಖಿಸಲಾಗಿದ್ದು, ಇದಕ್ಕೂ ಯಾವುದೇ ಪುರಾವೆ ಸಿಕ್ಕಿಲ್ಲವಂತೆ. ಒಟ್ಟಾರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷಿ ಸಿಗದೆ ಇರುದರಿಂದ ಅನುಶ್ರೀ ಅವರ ಹೆಸರನ್ನು ಪೊಲೀಸರು ಕೈ ಬಿಟ್ಟಿದ್ದಾರೆ  ಕೈ ಬಿಟ್ಟ ಪೊಲೀಸರು


    ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ವಿಚಾರಣೆ ಎದುರಿಸಿದ್ದ ಅನುಶ್ರೀ ಅವರಿಗೆ ಕೊಂಚ ನಿರಾಳವಾಗಿದೆ. ಈ ಹಿಂದೆ ಅನುಶ್ರೀ ಅವರು ಈ ಪ್ರಕರಣ ಕುರಿತಂತೆ ವಿಡಿಯೋ ಒಂದನ್ನು ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಜೊತೆಗೆ ನೋಟೀಸ್​ ತನಗೆ ಸಿಕ್ಕಿದ್ದು, ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿ ನಂತರ ವಿಚಾರಣೆಗೆ ಗೈರಾಗಿದ್ದು ಸುದ್ದಿಯಾಗಿತ್ತು.




    ಪ್ರಕರಣದ ವಿವರ: 


    ಬೆಂಗಳೂರು ಸಿಸಿಬಿ ಪೊಲೀಸರು ದಾಖಲಿಸಿದ್ದ ಡ್ರಗ್ ಕೇಸ್​ನಿಂದ ಮಂಗಳೂರು ಡ್ರಗ್ ಜಾಲ ಬೆಳಕಿಗೆ ಬಂದಿತ್ತು. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣದಲ್ಲಿ ಸುಮಾರು 20ಕ್ಕೂ ಹೆಚ್ಚು ಜನರನ್ನ ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಓರ್ವ ಆರೋಪಿ ಕೊಟ್ಟ ಸುಳಿವಿನಿಂದ ಮಂಗಳೂರು ಡ್ರಗ್ಸ್ ಜಾಲ ಬೆಳಕಿಗೆ ಬಂದಿತ್ತು. ಎ 15 ಪ್ರತೀಕ್ ಶೆಟ್ಟಿ ವಿಚಾರಣೆ ವೇಳೆ ಸಿಕ್ಕಿದ್ದ ಮಹತ್ವದ ಸುಳಿವಿನಿಂದಾಗಿ ಈ ಪ್ರಕರಣಕ್ಕೆ ತಿರುವು ಸಿಕ್ಕಿತ್ತು.


    ಇದನ್ನೂ ಓದಿ: RIP Aruna Bhatia: ಅಕ್ಷಯ್​ ಕುಮಾರ್​ ತಾಯಿ ಅರುಣಾ ಭಾಟಿಯಾ ಇನ್ನಿಲ್ಲ


    ಪ್ರತೀಕ್ ಶೆಟ್ಟಿ ಮಂಗಳೂರಿನ ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ತರುಣ್ ಬಗ್ಗೆ ಮಾಹಿತಿ ನೀಡಿದ್ದರು. ಕೂಡಲೇ ಬೆಂಗಳೂರು ಸಿಸಿಬಿ ಇನ್ಸ್‌ಪೆಕ್ಟರ್ ರಿಂದ ಮಂಗಳೂರು ಸಿಸಿಬಿಗೆ ಮಾಹಿತಿ ರವಾನೆ ಮಾಡಿಸಿದ್ದರು. ಕಡಲನಗರಿಯ ಡ್ರಗ್ಸ್ ಜಾಲದ ಬಗ್ಗೆ ಕಣ್ಣಿಡುವಂತೆ ಮನವಿ ಮಾಡಿದ್ದರು. ಬೆಂಗಳೂರು ಸಿಸಿಬಿ ಪೊಲೀಸರ ಮಾಹಿತಿ ಮೇರೆಗೆ ಅಲರ್ಟ್ ಆದ ಮಂಗಳೂರು ಸಿಸಿಬಿ ಪೊಲೀಸರು ತನಿಖೆ ನಡೆಸಿ ಡ್ಯಾನ್ಸರ್ ಕಿಶೋರ್ ಶೆಟ್ಟಿ ಮತ್ತು ತರುಣ್ ಬಂಧಿಸಿದ್ದರು.


    ಇದನ್ನೂ ಓದಿ: ಪಾಪರಾಜಿಗಳ ಕಣ್ಣು ತಪ್ಪಿಸಲು ಕಾರಿನ ಬೂಟ್​ ಸ್ವೇಸ್​ನಲ್ಲಿ ಬಚ್ಚಿಟ್ಟುಕೊಳ್ಳುವ Janhvi Kapoor


    ಡ್ಯಾನ್ಸರ್ ಕಿಶೋರ್ ಶೆಟ್ಟಿ ಜೊತೆಗಿನ ಸಂಪರ್ಕದಿಂದಾಗಿ ಅನುಶ್ರೀ ಅವರಿಗೆ ಮಂಗಳೂರು ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು.ಕಿಶೋರ್ ಶೆಟ್ಟಿ ಹೇಳಿಕೆ ಮತ್ತು ಪೋನ್ ಸಿಡಿಆರ್ ಆಧರಿಸಿ ನಿರೂಪಕಿ ಅನುಶ್ರೀ ಅವರನ್ನು ವಿಚಾರಣೆ ಕರೆಸಲಾಗಿತ್ತು. ಅಲ್ಲದೆ ಬೆಂಗಳೂರಿನಲ್ಲಿ ಬಂಧಿತರಾಗಿದ್ದ ಪ್ರತೀಕ್ ಶೆಟ್ಟಿ, ಡ್ಯಾನ್ಸರ್ ಕಿಶೋರ್ ಶೆಟ್ಟಿ ಮತ್ತು ತರುಣ್ ಮೂವರು ಗೆಳೆಯರಾಗಿದ್ದರು. ಡ್ರಗ್ಸ್ ಪ್ರಕರಣದ ಚಾರ್ಜ್​ಶೀಟ್​​ನಲ್ಲಿ ಅನುಶ್ರೀ ಹೆಸರು ಬಹಿರಂಗ ಆಗುತ್ತಿದ್ದಂತೆ ಅವರು ಪ್ರತಿಕ್ರಿಯೆಗೆ ಸಿಕ್ಕಿರಲಿಲ್ಲ. ನಂತರ ಅನುಶ್ರೀ ವಿಚಾರಣೆಗೆ ಹಾಜರಾಗಿದ್ದರು. ಆರೋಪಿಗಳ ಜತೆ ನನಗೆ ಪರಿಚಯವಿತ್ತು, ಆದರೆ ಈ ಪ್ರಕರಣದ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದರು ನಿರೂಪಕಿ.


    ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ


    ಡ್ರಗ್ಸ್ ಕೇಸ್ ಚಾರ್ಜಶೀಟ್​ನಲ್ಲಿ ಆಂಕರ್ ಅನುಶ್ರೀ ಹೆಸರು ಕೈ ಬಿಟ್ಟ ವಿಚಾರದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಪ್ರಶ್ನಿಸಿದರೆ, ಕೇಳಿ ಹೇಳ್ತಿನಿ ಎಂದು ಜಾರಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿರುವ ಅವರು, ಡ್ರಗ್ಸ್ ಕೇನ್​ನಲ್ಲಿ ಯಾವ ರಾಜಕೀಯ ಒತ್ತಡಗಳು ಇರೋದಿಲ್ಲ. ಡ್ರಗ್ಸ್ ವಿರುದ್ದ ನಮ್ಮ ಸರಕಾರ ಕಠಿಣ ಕ್ರಮ ಕೈಗೊಂಡಿದೆ. ಯಾರನ್ನು ಬಿಡುವ ಪ್ರಶ್ನೆ ಇಲ್ಲ, ನಿಜವಾದ ಅಪರಾಧಿಗಳಾದರೆ ಖಂಡಿತ ಶಿಕ್ಷೆಯಾಗುತ್ತೆ. ಪೋಲಿಸರ ಮೇಲೆ ಒತ್ತಡ ಎಂಬುದೆಲ್ಲ ಊಹಾಪೋಹಗಳು. ನಮ್ಮ ಪೋಲಿಸರು ಯಾವ ಒತ್ತಡಗಳಿಗೂ ಮಣಿಯೋದಿಲ್ಲ. ಆರೋಪಿ ಅನುಶ್ರೀ ಹೆಸರು ಹೇಳಿದ ಮೇಲೂ ಅನುಶ್ರೀ ಹೆಸರು ಕೈ ಬಿಡಲಾಗಿದೆ ಎಂಬ ಪ್ರಶ್ನೆಗೆ ಯಾರನ್ನೂ ಬಿಡೋ ಪ್ರಶ್ನೆಯಿಲ್ಲ. ಆ ಬಗ್ಗೆ ಮಾಹಿತಿ ತಗೋತಿನಿ ಎಂದಿದ್ದಾರೆ.

    First published: