ಯಾವ ಜನ್ಮಕ್ಕೂ ಇಂತಹ ಹೆಂಡತಿ ಬೇಡವೆಂದು ವಟ ಸಾವಿತ್ರಿ ವ್ರತ ಮಾಡಿದ ಪತಿರಾಯ

news18
Updated:June 27, 2018, 4:56 PM IST
ಯಾವ ಜನ್ಮಕ್ಕೂ ಇಂತಹ ಹೆಂಡತಿ ಬೇಡವೆಂದು ವಟ ಸಾವಿತ್ರಿ ವ್ರತ ಮಾಡಿದ ಪತಿರಾಯ
news18
Updated: June 27, 2018, 4:56 PM IST
- ಲೋಹಿತ್ ಶಿರೋಳ, ನ್ಯೂಸ್ 18 ಕನ್ನಡ

ಚಿಕ್ಕೋಡಿ ( ಜೂನ್ 27) :  ಇಂದು ವಟ ಸಾವಿತ್ರಿ ವೃತ ಏಳೇಳೂ ಜನ್ಮಕ್ಕೂ ನನ್ನ ಪತಿಯೇ ಸಿಗಬೇಕೆಂದು ಮಹಿಳೆಯರು ದಿನವಿಡಿ ಉಪವಾಸ ಮಾಡಿ ವಟ ಸಾವಿತ್ರಿ ವೃತ ಆಚರಣೆ ಮಾಡೊದನ್ನ ಕೇಳಿದ್ದಿರಿ ಆದ್ರೆ ಇಲ್ಲೊಬ್ಬ ವ್ಯಕ್ತಿ ನನಗೆ ಈಗಿರುವ ಹೆಂಡತಿ ನನಗೆ ಎಂದೂ ಸಿಗೋದು ಬೇಡ ಎಂದು ವಟ ಸಾವಿತ್ರಿ ವೃತ ಆಚರಣೆ ಮಾಡಿದ್ದಾನೆ.

ಇವರ ಹೆಸರು ಶಶಿಧರ ಕೋಪಾರ್ಡೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ನಿವಾಸಿಯಾಗಿರುವ ಇವರು ಕಳೆದ 10 ವರ್ಷಗಳಿಂದ ತನ್ನ ಪತ್ನಿ ಸುಳ್ಳು ವರದಕ್ಷಿಣೆ ಪ್ರಕರಣ ದಾಖಲಿಸಿ ಈತ ಹಾಗೂ ಈತನ ಕುಟುಂಬದವರಿಗೆ ಕಿರುಕುಳ ನೀಡುತ್ತಿದ್ದಾಳೆ. ಆಕೆಯ ಕಿರುಕುಳಕ್ಕೆ ಅನುಭವಿಸುತ್ತಿರುವ ಕಷ್ಟಕ್ಕೆ ಬೇಸತ್ತು ಈತ ನನಗೆ ಇಂಥ ಪತ್ನಿ ಸಿಗುವದು ಬೇಡ ಎಂದು ವಟ ಸಾವಿತ್ರಿ ವೃತ ಆಚರಿಸಿ ತನಗೆ ಆಗುತ್ತಿರು ಹಿಂಸೆಯನ್ನ ಹೇಗಾದ್ರು ಮಾಡಿ ಆ ಭಗವಂತ ಪರಿಹರಿಸಲಿ ಎಂದು ಪ್ರಾರ್ಥನೆ ಮಾಡಿದ್ದಾನೆ.

ಇನ್ನೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಈತನ ಪತ್ನಿ ಶಾಂತಾ ಬೊಂಗಾಳೆ ಎಂಬ ಮಹಿಳೆಯನ್ನ ಮದುವೆಯಾಗಿ ವರದಕ್ಷಣಿ ಪ್ರಕರಣ ದಾಖಲಿಸಿ ಈತನಿಗೆ ಮಾನಸಿಕ ಹಿಂಸೆ ನೀಡಿ ಇದ್ದ ಆಸ್ತಿಯನ್ನ ಕಬಳಿಸಿಕೊಂಡಿದ್ದು ಇಂಥ ಹೆಂಡತಿ ನನಗೆ ಅಷ್ಟೇ ಅಲ್ಲ ಬೇರೆ ಯಾರಿಗೂ ಸಿಗಬಾರದು. ಮುಂದಿನ ಜನ್ಮದಲ್ಲಿ ನನಗೆ ಮದುವೆ ಆಗುವದು ಬೇಡ ಆದ್ರೆ ಪುರುಷರಿಗೆ ಆಗುತ್ತಿರುವ ಇಂಥ ಸಮಸ್ಯೆಗಳ ಬಗ್ಗೆ ಸರಕಾರಗಳು ಗಮನ ವಹಿಸಬೇಕು ಎಂದು ಶಶಿಧರ ಕೋಪಾರ್ದೆ ಆಗ್ರಹಿಸಿದ್ದಾರೆ.

ಇನ್ನೂ ತನಗೆ ಆದ ಅನ್ಯಾಯ ಬೇರೆ ಯಾರಿಗೂ ಆಗುವದು ಬೇಡ ಎಂದು ಶಶಿಧರ ರಾಜ್ಯದ ಏಕೈಕ ಪುರುಷ ಸಾಂತ್ವಾನ ಕೇಂದ್ರ ಸ್ಥಾಪಿಸಿ ಪುರುಷರಿಗೆ ಅನ್ಯಾಯ ಆಗದಂತೆ ಕಾನೂನು ಸಲಹೆಗಳನ್ನ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಪುರುಷ ಕುಲಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ನಡೆಸುತ್ತಿರುವ ಇವರ ಹೋರಾಟಕ್ಕೆ ಜಯವಾಗಲಿ ಎಂಬುವದೆ ನಮ್ಮ ಆಶಯ.

 
First published:June 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...