Hubballi: ಲವ್ ಜಿಹಾದ್ ಗೆ ಗುರಿಯಾದ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ..!

ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಿಂದಲೇ ಸಾಮಾಜಿಕ ಬಹಿಷ್ಕಾರಕ್ಕೆ ಕುಮ್ಮಕ್ಕು ಸಿಕ್ಕಿದೆ ಎನ್ನೋದು ಪತ್ರದಿಂದ ಖಾತ್ರಿಯಾಗುತ್ತದೆ. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನ ಪತ್ರ ಅಚ್ಚರಿಗೆ ಕಾರಣವಾಗಿದೆ. ಸರ್ಕಾರದ ಪ್ರತಿನಿಧಿಯಾದ ವ್ಯಕ್ತಿಯೊಬ್ಬರಿಂದಲೇ ಸಾಮಾಜಿಕ ಬಹಿಷ್ಕಾರಕ್ಕೆ ಕುಮ್ಮಕ್ಕು ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.

ಸಾಮಾಜಿಕ ಬಹಿಷ್ಕಾರದ ಪತ್ರ

ಸಾಮಾಜಿಕ ಬಹಿಷ್ಕಾರದ ಪತ್ರ

  • Share this:
ಹುಬ್ಬಳ್ಳಿ(ಏ.10): ಹಿಜಾಬ್ ಆಯ್ತು, ಹಲಾಲ್ (Halal), ಜಟ್ಕಾ ಕಟ್ ಆಯ್ತು. ಮಾವಿನ ಹಣ್ಣಿನ ಮಾರಾಟದ ವಿವಾದವೂ ಆಯ್ತು. ಇದೀಗ ಲವ್ ಜಿಹಾದ್ (Love Jihad) ಗುರಿಯಾದವರನ್ನು ಸಾಮಾಜಿಕ ಬಹಿಷ್ಕಾರಕ್ಕೆ (Social Exclusion) ಗುರಿಪಡಿಸಬೇಕೆಂಬ ಬೇಡಿಕೆಯೂ ವ್ಯಕ್ತವಾಗಿದೆ. ಸರ್ಕಾರದ ಅಂಗವಾಗಿರೋ ಪ್ರಾಧಿಕಾರದ ಅಧ್ಯಕ್ಷರೇ ಬಹಿರಂಗವಾಗಿ ಪತ್ರ ಬರೆದಿದ್ದು, ಸಮಾಜ ಉಳಿಯಬೇಕೆಂದ್ರೆ ಇಂಥಹ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಅಂತ ಸಮರ್ಥಿಸಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ಗೆ ಗುರಿಯಾದ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರದ ಗುಮ್ಮ ಎದುರಾಗಿದೆ. ಲವ್ ಜಿಹಾದಗೆ ಗುರಿಯಾದ ಕುಟುಂಬಗಳನ್ನೇ ಟಾರ್ಗೆಟ್ ಮಾಡ್ತಿದೆಯಾ ಸರ್ಕಾರ..? ಅನ್ನೋ ಪ್ರಶ್ನೆ ಕಾಡಲಾರಂಭಿಸಿದೆ.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನ ಪತ್ರ ತೀರ್ವ ಚರ್ಚೆಗೆ ಗ್ರಾಸ ಮಾಡಿದೆ. ಅನ್ಯ ಧರ್ಮಿಯನೊಂದಿಗೆ ಹಿಂದು ಯುವತಿ ಮದುವೆಯಾದ ಪ್ರಕರಣದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರಗಿ ಪತ್ರ ಬರೆದಿದ್ದಾರೆ.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಿಂದಲೇ ಸಾಮಾಜಿಕ ಬಹಿಷ್ಕಾರಕ್ಕೆ ಕುಮ್ಮಕ್ಕು

ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಿಂದಲೇ ಸಾಮಾಜಿಕ ಬಹಿಷ್ಕಾರಕ್ಕೆ ಕುಮ್ಮಕ್ಕು ಸಿಕ್ಕಿದೆ ಎನ್ನೋದು ಪತ್ರದಿಂದ ಖಾತ್ರಿಯಾಗುತ್ತದೆ. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನ ಪತ್ರ ಅಚ್ಚರಿಗೆ ಕಾರಣವಾಗಿದೆ. ಸರ್ಕಾರದ ಪ್ರತಿನಿಧಿಯಾದ ವ್ಯಕ್ತಿಯೊಬ್ಬರಿಂದಲೇ ಸಾಮಾಜಿಕ ಬಹಿಷ್ಕಾರಕ್ಕೆ ಕುಮ್ಮಕ್ಕು ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.

ಲವ್ ಜಿಹಾದ್​ಗೆ ಒಳಗಾದ್ರೆ ಕುಟುಂಬ ಬಹಿಷ್ಕಾರ ಒತ್ತಡ

ಲವ್ ಜಿಹಾದ್ ಗೆ ಗುರಿಯಾದ ಕುಟುಂಬಗಳನ್ನ ಬಹಿಷ್ಕಾರಿಸುವಂತೆ ಒತ್ತಡ ಹಾಕಲಾಗುತ್ತಿದೆ. ಸಾಮಾಜಿಕ ಬಹಿಷ್ಕಾರ ಸೇರಿದಂತೆ, ಹಲವು ಕಠಿಣ ಕ್ರಮಕೈಗೊಳ್ಳುವಂತೆ ಎಸ್.ಎಸ್.ಕೆ ಸಮಾಜದ ಧರ್ಮದರ್ಶೀ ನೀಲಕಂಠ ಜಡಿ ಅವರಿಗೆ ನಾಗೇಶ ಕಲಬುರಗಿ ಪತ್ರ ಬರೆದಿದ್ದಾರೆ.

ಸಾಮಾಜಿಕ ಬಹಿಷ್ಕಾರಕ್ಕೆ ಒತ್ತಾಯಿಸಿ ಪತ್ರ

ನಗರಾಭಿವೃದ್ಧಿ ಲೆಟರ್ ಹೆಡ್ನಲ್ಲಿ ಸಾಮಾಜಿಕ ಬಹಿಷ್ಕಾರಕ್ಕೆ ಒತ್ತಾಯಿಸಿ ಪತ್ರ ಬರೆಯಲಾಗಿದೆ. ಎಸ್.ಎಸ್.ಕೆ. ಸಮಾಜದಲ್ಲಿ ಹಲವು ಜಿಹಾದ್ ಪ್ರಕರಣಗಳು ನಡೆದಿವೆ. ಈಗ ಸಮಾಜ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಯಾರಾದ್ರೂ ಮುಸ್ಲಿಂ ಸಮಾಜದ ಯುವಕನನ್ನ ಮದುವೆಯಾದ್ರೆ, ಇಲ್ಲವೇ ಮುಸ್ಲಿಂ ಸಮಾಜದ ಹೆಣ್ಣು ಮಕ್ಕಳನ್ನ ಮದುವೆ ಮಾಡಿಕೊಂಡು ಬಂದರೆ ಅಂತವರ ಮೇಲೆ ಕಠಿಣ ಕ್ರಮ ಅನಿವಾರ್ಯವಾಗಿದೆ. ಆ ಕುಟುಂಬವನ್ನ ಸಮಾಜದಿಂದ ಹೊರಗಿಡಬೇಕು. ಸಮಾಜದ ಎಲ್ಲಾ ದೇವಸ್ಥಾನಗಳ ಪ್ರವೇಶಕ್ಕೆ ನಿರ್ಬಂಧಿಸಬೇಕು.

ಸ್ನೇಹಾಳ ಪೋಷಕರ ಮೇಲೆ ಸಾಮಾಜಿಕ ಬಹಿಷ್ಕಾರದ ತೂಗುಗತ್ತಿ

ಅಂತಹ ಕುಟುಂಬಗಳಿಗೆ ಯಾರು ಹೆಣ್ಣು ಕೊಡುವಂತಿಲ್ಲ. ಆ ಕುಟುಂಬದ ಯಾವುದೇ ಕಾರ್ಯಕ್ರಮದಲ್ಲಿ ಸಮಾಜದವರು ಯಾರು ಭಾಗಿಯಾಗುವಂತಿಲ್ಲ. ಇಂತಹ ಕಠಿಣ ಕ್ರಮ ಕೈಗೊಳ್ಳುವುದರ ಮೂಲಕ ಎಚ್ಚರಿಕೆ ಗಂಟೆ ಬಾರಿಸಬೇಕು. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಎಸ್.ಎಸ್.ಕೆ ಸಮಾಜದ ಕೇಂದ್ರ ಪಂಚ ಟ್ರಸ್ಟ್ಗೆ ನಾಗೇಶ ಕಲಬುರಗಿ ಆಗ್ರಹಿಸಿದ್ದಾರೆ. ಇದರಿಂದಾಗಿ ಸ್ನೇಹಾಳ ಪೋಷಕರ ಮೇಲೆ ಸಾಮಾಜಿಕ ಬಹಿಷ್ಕಾರದ ತೂಗುಗತ್ತಿ ಬೀಸಲಾರಂಭಿಸಿದೆ.

ಇಬ್ರಾಹಿಂನನ್ನು ಮದುವೆಯಾದ ಸ್ನೇಹಾ

ಕಳೆದ ಎರಡೂ ತಿಂಗಳ ಹಿಂದೆ ಇಬ್ರಾಹಿಂ ಎನ್ನುವ ಯುವಕನೊಂದಿಗೆ ಸ್ನೇಹ ಮದುವೆಯಾಗಿದ್ದಳು. ಎರಡು ದಿನಗಳ ಹಿಂದೆ ಈ ಪ್ರಕರಣ ಬೆಳಕಿಗೆ ಬಂದ ನಂತರ ಹಿಂದೂ ಪರ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿತ್ತು. ಇದೆಲ್ಲದರ ನಡುವೆ ಗಂಡನ ಜೊತೆಗೆ ಇರುವುದಾಗಿ ಹೇಳಿ ಸ್ನೇಹ ಹೊರಟು ಹೋಗಿದ್ದಾಳೆ. ಇದರ ಬೆನ್ನಹಿಂದೆಯೇ ಸಾಮಾಜಿಕ ಬಹಿಷ್ಕಾರದ ಮಾತು ಕೇಳಿ ಬಂದಿದ್ದು, ಅದನ್ನು ನಾಗೇಶ ಕಲಬುರ್ಗಿ ಪತ್ರ ಖಾತ್ರಿಪಡಿಸಿದೆ.‘

ಇದನ್ನೂ ಓದಿ: Love Jihad: ಹಿಂದೂ ಯುವಕನಂತೆ ಸೋಗು - ಯುವತಿ ಲವ್ ಜಿಹಾದ್ ಖೆಡ್ಡಾಕ್ಕೆ? ಇಬ್ರಾಹಿಂ-ಸ್ನೇಹಾ ಲವ್​ಸ್ಟೋರಿ

ಪತ್ರಕ್ಕೆ ನಾಗೇಶ ಕಲಬುರಗಿ ಸಮರ್ಥನೆ

ತಮ್ಮ ಪತ್ರಕ್ಕೆ ನಾಗೇಶ ಕಲಬುರಗಿ ಸಮರ್ಥಿಸಿಕೊಂಡಿದ್ದಾರೆ. ನಾನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದೇನೆ. ಅದೇ ಕಾರಣಕ್ಕೆ ನನ್ನ ಲೆಟರ್ ಹೆಡ್ ಮೇಲೆಯೇ ಎಸ್.ಎಸ್.ಕೆ. ಸಮಾಜದ ಧರ್ಮದರ್ಶಿಗೆ ಪತ್ರ ಬರೆದಿದ್ದೇನೆ. ನಮ್ಮ ಸಮಾಜದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಲಾರಂಭಿಸಿವೆ. ಸಾಮಾಜಿಕ ಬಹಿಷ್ಕಾರದಂತಹ ಕ್ರಮಗಳನ್ನು ಕೈಗೊಂಡಲ್ಲಿ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬಹುದು.

ಇದನ್ನೂ ಓದಿ: Operation Elephant: ಪುಂಡಾನೆಗಳನ್ನು ಖೆಡ್ಡಕ್ಕೆ ಕೆಡವಿದ ಸಕ್ರೆಬೈಲು ಆನೆಗಳು! ಭೀಮಾರ್ಜುನ ನೇತೃತ್ವದಲ್ಲಿ ‘ಆಪರೇಷನ್‘ ಸಕ್ಸಸ್

ಹೀಗಾಗಿಯೇ ಎಚ್ಚರಿಕೆಯ ಗಂಟೆ ರವಾನಿಸೋ ನಿಟ್ಟಿನಲ್ಲಿ ಪತ್ರ ಬರೆದಿದ್ದೇನೆ. ನನ್ನ ಸಲಹೆಗಳನ್ನು ಪತ್ರದ ಮೂಲಕ ತಿಳಿಸಿದ್ದೇನೆ. ಅದನ್ನು ಅನುಷ್ಠಾನಗೊಳಿಸೋದು, ಬಿಡೋದು ಎಸ್.ಎಸ್.ಕೆ. ಸಮಾಜದ ಧರ್ಮದರ್ಶಿಗಳಿಗೆ ಬಿಟ್ಟ ವಿಚಾರ ಎಂದು ನಾಗೇಶ ಕಲಬುರಗಿ ತಿಳಿಸಿದ್ದಾರೆ.

ಒಟ್ಟಾರೆ ನಾಗೇಶ ಕಲಬುರಗಿ ಪತ್ರ ತೀವ್ರ ಚರ್ಚೆಗೆ ಗ್ರಾಸ ಮಾಡಿದೆ. ಸರ್ಕಾರದ ಪ್ರತಿನಿಧಿಯಾಗಿರೋ ವ್ಯಕ್ತಿಯೋ ಈ ರೀತಿ ಸಾಮಾಜಿಕ ಬಹಿಷ್ಕಾರದಂತಹ ಕಾನೂನು ಬಾಹಿರ ಕ್ರಮ ಕೈಗೊಳ್ಳುವಂತೆ ಸಲಹೆ ನೀಡೋದು ಸರಿಯೇ ಎಂಬ ಚರ್ಚೆ ನಡೆದಿದೆ.
Published by:Divya D
First published: