• Home
  • »
  • News
  • »
  • state
  • »
  • Tumakuru: ಹಸುಗೂಸಿನ ಮೃತದೇಹ ರವಾನೆಗೆ ಕೊಡಲಿಲ್ಲ ಆ್ಯಂಬುಲೆನ್ಸ್​; ಶವ ಕೈಯಲ್ಲಿ ಹಿಡಿದು ಬಸ್​ ನಿಲ್ದಾಣದಲ್ಲಿ ತಾಯಿ ಕಣ್ಣೀರು!

Tumakuru: ಹಸುಗೂಸಿನ ಮೃತದೇಹ ರವಾನೆಗೆ ಕೊಡಲಿಲ್ಲ ಆ್ಯಂಬುಲೆನ್ಸ್​; ಶವ ಕೈಯಲ್ಲಿ ಹಿಡಿದು ಬಸ್​ ನಿಲ್ದಾಣದಲ್ಲಿ ತಾಯಿ ಕಣ್ಣೀರು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತುಮಕೂರಿನಲ್ಲಿ ಮಗುವಿನ ಮೃತ ದೇಹ ಸಾಗಿಸಲು ಕುಟುಂಬಸ್ಥರು ಪರದಾಡಿದ್ದಾರೆ. ಹಸುಗೂಸಿನ ಶವ ಸಾಗಿಸಲು ಹಣವಿಲ್ಲದೇ ಬಾಣಂತಿಯೊಂದಿಗೆ ಕುಟುಂಬವೇ ಬಸ್​ ನಿಲ್ದಾಣದಲ್ಲಿ ಕಣ್ಣೀರು ಹಾಕಿದೆ.

  • Share this:

ಈ ಬಡ ಕುಟುಂಬಸ್ಥರಿಗೆ (Poor Family) ಇದೆಂಥಾ ಸ್ಥಿತಿ ಬಂದಿದೆ. ಹಸುಗೂಸನ್ನು ಕಳೆದುಕೊಂಡ ದಂಪತಿ ಮಗುವಿನ ಮೃತದೇಹ (Dead Body) ಸಾಗಿಸಲು ಹಣವಿಲ್ಲದೆ ಬಸ್​ ನಿಲ್ದಾಣದಲ್ಲಿ (Bus Stop) ಕಣ್ಣೀರಿಟ್ಟಿದ್ದಾರೆ. ಇಂತಹ ಮನಕಲಕುವ ಘಟನೆ ನಡೆದಿರೋದು ತುಮಕೂರಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ. ಹುಟ್ಟಿದ ನಾಲ್ಕು ದಿನದಲ್ಲೇ ಮಗು ಕಳೆದುಕೊಂಡ ನೋವಿನಲ್ಲಿರೋ ಕುಟುಂಬಕ್ಕೆ ಆಸ್ಪತ್ರೆಯವರು ಆಡಿದ ಮಾತು ಕೇಳಿ ಬರಸಿಡಿಲು ಬಡಿದಂತಾಗಿದೆ. ಮಗುವೂ ಇಲ್ಲ ಇತ್ತ ಕೂಸಿನ ಮೃತದೇಹ ಕೊಂಡೊಯ್ಯಲು ಅ್ಯಂಬುಲೆನ್ಸ್​ (Ambulance) ಮಾಡಿಕೊಂಡು ಹೋಗುವಷ್ಟು ಹಣ ಇಲ್ಲ. ಹೀಗಾಗಿ ದಿಕ್ಕು ದೋಚದೆ ಕುಟುಂಬಸ್ಥರು ಕಣ್ಣೀರು ಹಾಕಿರೋ ಘಟನೆ ಎಂಥಾ ಕಲ್ಲು ಮನಸ್ಸನ್ನು ಸಹ ಕರಗಿಸುತ್ತದೆ. ಇಂತಹ ಸ್ಥಿತಿ ಯಾರಿಗೂ ಬರಬಾರದು ಎನ್ನುವಂತಿದೆ.


ಮೃತದೇಹ ಸಾಗಿಸಲು ಕುಟುಂಬಸ್ಥರ ಕಣ್ಣೀರು


ತುಮಕೂರಿನಲ್ಲಿ ಮಗುವಿನ ಮೃತ ದೇಹ ಸಾಗಿಸಲು ಕುಟುಂಬಸ್ಥರು ಪರದಾಡಿದ್ದಾರೆ. ಹಸುಗೂಸಿನ ಶವ ಸಾಗಿಸಲು ಹಣವಿಲ್ಲದೇ ಬಾಣಂತಿಯೊಂದಿಗೆ ಕುಟುಂಬವೇ ಬಸ್​ ನಿಲ್ದಾಣದಲ್ಲಿ ಕಣ್ಣೀರು ಹಾಕಿದೆ. ದಾವಣಗೆರೆ ಮೂಲದ ಗೋಪನಾಳ್ ಗ್ರಾಮದ ನಿವಾಸಿ ಮಂಜುನಾಥ್ ದಂಪತಿ ತುಮಕೂರು ನಗರದಲ್ಲಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.


Family members are scrambling to take the dead body of the child back to their hometown pvn
ಬಸ್​ ನಿಲ್ದಾಣದಲ್ಲಿ ಕುಟುಂಬ


ಹುಟ್ಟಿದ 4 ದಿನದ ಬಳಿಕ ಕಣ್ಣು ಮುಚ್ಚಿದ ಕಂದ


ಮಂಜುನಾಥ್​ ಪತ್ನಿಗೆ ಕಳೆದ ನಾಲ್ಕು ದಿನದ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಮಹಿಳೆ ಗೌರಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದ್ರೆ ಹಸುಗೂಸು ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಅಸುನೀಗಿದೆ. ಮಗುವಿನ ಮೃತ ದೇಹವನ್ನ ತೆಗೆದುಕೊಂಡು ಹೋಗಲು ವೈದ್ಯರು ಹೇಳಿದ್ದಾರೆ.


ಇದನ್ನೂ ಓದಿ:Missing Dog: ಕಳೆದು ಹೋದ ನಾಯಿಗಾಗಿ ಮಹಿಳೆ ಕಣ್ಣೀರು; 3 ತಿಂಗಳಿಂದ ಗುಂಡನಿಗಾಗಿ ಹುಡುಕಾಟ!


ಮೃತದೇಹ ರವಾನೆಗೆ ಕೊಡಲಿಲ್ಲ ಆ್ಯಂಬುಲೆನ್ಸ್​


ಮೃತದೇಹ ಕೊಂಡೊಯ್ಯಲು ವಾಹನ ಕೇಳಿದ್ರೆ. ಸರ್ಕಾರಿ ಆ್ಯಂಬುಲೆನ್ಸ್​ ನಲ್ಲಿ ಕೇವಲ 40 ಕಿ.ಮೀ. ಮಾತ್ರ ಸಾಗಿಸುತ್ತೇವೆ ಎಂದು ಸಿಬ್ಬಂದಿ ಹೇಳಿದ್ದಾರೆ. ಬೇರೆ ಖಾಸಗಿ ವಾಹನ ಮಾಡಲು ದಂಪತಿ ಬಳಿ ಹಣವಿರಲಿಲ್ಲ. ಬಳಿಕ ದಂಪತಿ ದಾವಣಗೆರೆಗೆ ಹೋಗಲು ಮೃತ ದೇಹದೊಂದಿಗೆ ಬಸ್ ನಿಲ್ದಾಣಕ್ಕೆ ಹೋಗಿದ್ದಾರೆ.




ಇದನ್ನೂ ಓದಿ: PFI ಭಾಗ್ಯ ಕೂಡ ಸಿದ್ದರಾಮಯ್ಯ ಅವರದ್ದೇ; ಪೋಸ್ಟರ್ ಮೂಲಕ ಟಾಂಗ್ ಕೊಟ್ರು R ಅಶೋಕ್​


ವಿಷಯ ತಿಳಿದ ತಕ್ಷಣ ಕ್ರಮಕೈಗೊಂಡ ಜಿಲ್ಲಾ ಆಸ್ಪತ್ರೆ ಡಿ.ಎಸ್​


ಮೃತದೇಹ ಕೈಯಲ್ಲಿ ಹಿಡಿದು ಬಸ್​ ನಿಲ್ದಾಣದಲ್ಲಿ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಅತ್ತ ಬಸ್ಸಿನಲ್ಲೂ ಮೃತ ದೇಹವನ್ನು ದಂಪತಿ ಜೊತೆಯುಲ್ಲಿ ತೆಗೆದುಕೊಂಡು ಒಪ್ಪಲಿಲ್ಲ. ಶವದೊಂದಿಗೆ ಬಸ್ ನಿಲ್ದಾಣದಲ್ಲಿ ಕುಳಿತ ವಿಚಾರವನ್ನು ಸ್ಥಳೀಯರು ಜಿಲ್ಲಾ ಆಸ್ಪತ್ರೆ ಡಿ.ಎಸ್.ಗೆ ತಿಳಿಸಿದ್ದಾರೆ.  ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ವೀಣಾ ಅವರು ತಕ್ಷಣ ವಾಹನ ವ್ಯವಸ್ಥೆ ಮಾಡಿ ದಾವಣಗೆರೆ ಮೃತದೇಹವನ್ನು ರವಾನಿಸಿದ್ದಾರೆ.


ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಹೈಡ್ರಾಮಾ


ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಮಗು ಕಳ್ಳತನವಾಗಿದೆ ಅಂತ ತಾಯಿ ಆರೋಪ ಮಾಡಿದ್ದಾರೆ. ತಾಯಿ ಜೊತೆ ಬಂದಿದ್ದ ಮೂರು ವರ್ಷದ ಬಾಲಕಿ ನಾಪತ್ತೆಯಾಗಿದೆ. ತಾಯಿಯೊಂದಿಗೆ ಆಗಮಿಸಿದ್ದ ಫಲಕ್ , ಜಿಲ್ಲಾ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ. ತಂಗಿಗೆ ಹೆರಿಗೆ ಆಗಿರೋ ಹಿನ್ನೆಲೆ ತಂಗಿಯನ್ನು ನೋಡಲು ಮುಸ್ಕಾನ್​ ಬಂದಿದ್ದರು. ಮಗು ಏಕಾಏಕಿ ನಾಪತ್ತೆಯಾದ ಹಿನ್ನೆಲೆ ಮಗು ಕಳ್ಳತನವಾಗಿದೆ ಎಂದು ಕಣ್ಣೀರು ಹಾಕಿದ್ದಾರೆ. ಬಾಲಕಿ ಆಸ್ಪತ್ರೆಯಿಂದ ಹೊರಗೆ ಹೋಗಿದ್ದನ್ನು ನೋಡಿದ್ದ ಸ್ಥಳೀಯ ವ್ಯಾಪಾರಿ ಗಮನಿಸಿ ತಿಳಿಸಿದ್ದಾರೆ. ಪೊಲೀಸ್ ಹುಡುಕಾಟದ ಬಳಿಕ ಮಗು ಪತ್ತೆಯಾಗಿದೆ.

Published by:ಪಾವನ ಎಚ್ ಎಸ್
First published: