Kolar Murder: ಮಾತಾಡೋ ಸೋಗಿನಲ್ಲಿ ಮಹಿಳೆಯರ ಗಲಾಟೆ! ಕೊಲೆನಲ್ಲಿ ಕೊನೆಯಾಯ್ತು ವರ್ಷಗಳ ದ್ವೇಷ

ಕುಟುಂಬಗಳ ನಡುವಿನ ಗಲಾಟೆ ಪೊಲೀಸ್ ಠಾಣೆ (Police Station) ಮತ್ತು ಜೈಲು (Prison) ಮೆಟ್ಟಿಲೇರಿದ್ದರು, ತಣ್ಣಗಾಗದ ಗಲಾಟೆ ಮತ್ತೆ ಆರಂಭವಾಗಿ,  ಮಾತುಕತೆಯ ನೆಪದಲ್ಲಿ ಒಬ್ಬರು ಬರ್ಬರವಾಗಿ ಕೊಲೆಯಾದರೆ, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಎರಡು ಕುಟುಂಬಗಳ (Family) ಮಧ್ಯೆ ಹಲವು ವರ್ಷಗಳಿಂದ ಇದ್ದ ಹಳೆಯ ದ್ವೇಷದಿಂದ, ಓರ್ವ ವ್ಯಕ್ತಿ ಭೀಕರವಾಗಿ ಕೊಲೆಯಾಗಿದ್ದಾರೆ (Murder). ಕುಟುಂಬಗಳ ನಡುವಿನ ಗಲಾಟೆ ಪೊಲೀಸ್ ಠಾಣೆ (Police Station) ಮತ್ತು ಜೈಲು (Prison) ಮೆಟ್ಟಿಲೇರಿದ್ದರು, ತಣ್ಣಗಾಗದ ಗಲಾಟೆ ಮತ್ತೆ ಆರಂಭವಾಗಿ,  ಮಾತುಕತೆಯ ನೆಪದಲ್ಲಿ ಒಬ್ಬರು ಬರ್ಬರವಾಗಿ ಕೊಲೆಯಾದರೆ, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕಿನ ಬೀರನಕುಪ್ಪ ಗ್ರಾಮದಲ್ಲಿ ಸೋಮವಾರ ರಾತ್ರಿ ಗ್ರಾಮದ ನಾರಾಯಣಪ್ಪ (48) ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೊಲೆಗೆ ಕಾರಣ ಹುಡುಕುತ್ತಾ ಹೋದರೆ. ಕೃಷ್ಣಾರೆಡ್ಡಿ ಮತ್ತು ನಾರಾಯಣಪ್ಪ ಇಬ್ಬರ ಕುಟುಂಬದ ನಡುವೆ ಹಲವು ವರ್ಷಗಳಿಂದ ಹಳೇ ದ್ವೇಷ ಆಗಾಗ ನಡೆಯುತ್ತಾ ಬಂದಿದೆ. ಒಂದಲ್ಲ ಒಂದು ವಿಷಯಕ್ಕೆ ತಗಾದೆ ತೆಗೆದು ಗಲಾಟೆ ಮಾಡಿಕೊಳ್ಳುತ್ತಾ ಪೊಲೀಸ್ ಠಾಣೆ, ಕೋರ್ಟ್ ಅಂತ ಎರಡೂ ಕಡೆಯವರು ಪರಸ್ಪರ ತಿರುಗಾಡಿದ್ದಾರೆ.

ಕಳೆದ ಏಪ್ರಿಲ್  5 ರಂದು ಎರಡು ಕುಟುಂಬಗಳ ನಡುವೆ ಗಲಾಟೆಯಾಗಿ, ನಾರಾಯಣಪ್ಪ ಕುಟುಂಬಸ್ತರು ಕೊಲೆ ಯತ್ನ ನಡೆಸಿದ್ದಾರೆಂದು ಆರೋಪಿಸಿ,  ಕೃಷ್ಣಾರೆಡ್ಡಿ ಅವರು ನಾರಾಯಣಪ್ಪ ಕುಟುಂಬದ ಮೇಲೆ ಕೊಲೆ ಯತ್ನ ದೂರನ್ನ ಕ್ಯಾಸಂಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾರಾಯಣಪ್ಪ ಅವರ ಕುಟುಂಬದ,  11 ಜನರನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು.

ತಲ್ವಾರ್ ನಿಂದ ಭೀಕರಾಗಿ ಕೊಚ್ಚಿ ಕೊಲೆ

ಇತ್ತೀಚಿಗೆ ಜೈಲಿನಿಂದ ನಾರಾಯಣಪ್ಪ ಕುಟುಂಬದವರು ಜಾಮೀನು ಮೇಲೆ ಬಿಡುಗಡೆಯಾಗಿ ಬಂದಿದ್ದಾರೆ. ಅದೇ ವಿಚಾರವಾಗಿ ಕೃಷ್ಣಾರೆಡ್ಡಿ ಕುಟುಂಬ ಮಾತುಕತೆಗೆ ನಾರಾಯಣಪ್ಪ ಮತ್ತು ಅವರ ಕುಟುಂಬದವರನ್ನು ಕರೆದಿದ್ದಾರೆ, ಆದರೆ  ನಾರಾಯಣಪ್ಪ ನಮ್ಮ ಮನೆ ಬಳಿಗೆ ಬಂದು ಮಾತುಕತೆ ನಡೆಸುವಂತೆ ತಿಳಿಸಿದ್ದಾರೆ, ಆದರೆ ಮನೆ ಬಳಿಗೆ ಮಾತನಾಡಲು ಬಂದವರು, ನಾರಾಯಣಪ್ಪ ರನ್ನ ತಲ್ವಾರ್ ನಿಂದ ಭೀಕರಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ, ಇದಕ್ಕೆ ಅಡ್ಡ ಬಂದ ಪತ್ನಿ ಲಕ್ಷ್ಮಮ್ಮ ಅವರ ಮೇಲೂ ಹಲ್ಲೆ ನಡೆದು ಕೆಜಿಎಪ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದನ್ನೂ ಓದಿ: Mud House In Bengaluru: ಮಣ್ಣಿನಿಂದ ಮನೆ ಕಟ್ಟಿಕೊಂಡ ದಂಪತಿ; ಪರಿಸರ ಸ್ನೇಹಿ ಮನೆ ಹೇಗಿದೆ ನೀವೇ ನೋಡಿ

ಇನ್ನು ನಿನ್ನೆ ರಾತ್ರಿ ಕೃಷ್ಣಾರೆಡ್ಡಿ ಕುಟುಂಬದವರು ನಾರಾಯಣಪ್ಪ ಕುಟುಂಬಕ್ಕೆ ದೂರವಾಣಿ ಮಾಡಿ ಮಾತುಕತೆ ಮಾಡಬೇಕು ನಮ್ಮ ಮನೆ ಬಳಿ ಬರುವಂತೆ ಕರೆದಿದ್ದರು. ಆದರೆ ಇದಕ್ಕೆ ನಾರಾಯಣಪ್ಪ ಕುಟುಂಬ ನಿರಾಕರಿಸಿದ್ದಾರೆ, ಅದಕ್ಕೆ ಸುಮ್ಮನಾಗದ ಕೃಷ್ಣಾರೆಡ್ಡಿ ಕುಟುಂಬಸ್ಥರು,  ಮೊದಲೇ ಫ್ರೀ ಪ್ಲಾನ್ ಮಾಡಿಕೊಂಡು ಮಾರಕಾಸ್ತ್ರಗಳೊಂದಿಗೆ ದಾಳಿ ಇಟ್ಟಿದ್ದಾರೆ.  ನಾರಾಯಣಪ್ಪನನ್ನು ಹೇಗಾದರೂ ಮಾಡಿ ಮುಗಿಸಬೇಕು ಎಂದು ನಿರ್ಧಾರ ಮಾಡಿಕೊಂಡು ಬಂದು, ತಲ್ವಾರ್ ಸಮೇತ ನಾರಾಯಣಪ್ಪನ ಕೈಗಳನ್ನ ಕತ್ತರಿಸಿದ್ದಾರೆ.

ಬರ್ಬರವಾಗಿ ಕೊಲೆ

ಬಳಿಕ ತಲೆ ಹಾಗೂ ಹೊಟ್ಟೆಗೆ ಹೊಡೆದಿದ್ದಾರೆ, ತೀವ್ರ ರಕ್ತಸ್ರಾವದಿಂದ ನಾರಾಯಣಪ್ಪ, ಅವರ ನಿವಾಸದಲ್ಲೆ ಪ್ರಾಣ ಬಿಟ್ಟಿದ್ದಾರೆ,  ಕೃಷ್ಣಾರೆಡ್ಡಿ ಮತ್ತು ಪತ್ನಿ ಭಾರತಮ್ಮ, ಸಂಬಂಧಿಕರಾದ ಲಕ್ಷ್ಮೀ ಶೋಭಾ, ಗಂಗೋಜಿ, ಮಂಜುಳ ಮತ್ತು ಅಳಿಯ ಭಾಸ್ಕರ್ ದಾಳಿ ನಡೆಸಿ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ಮೃತ ನಾರಾಯಣಪ್ಪ ಪತ್ನಿ ಹಾಗು ಸಹೋದರ ಆರೋಪಿಸಿದ್ದಾರೆ.  ಸ್ತಳಕ್ಕೆ ಕ್ಯಾಸಂಬಳ್ಳಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಾದ ಕೃಷ್ಣಾರೆಡ್ಡಿ ಹಾಗೂ ಕುಟುಂಬದ ಏಳು  ಜನರನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

ಇದನ್ನು ಓದಿ: Decibel fixed: ರಾಜ್ಯ ಸರ್ಕಾರದಿಂದ ಲೌಡ್​ ಸ್ಪೀಕರ್​ಗೆ ಮಾರ್ಗಸೂಚಿ ಪ್ರಕಟ; ರಾತ್ರಿ 10 ರಿಂದ ತಮಟೆ, ಡಿಜೆಗಳಿಗೂ ಬ್ರೇಕ್

ಒಟ್ಟಿನಲ್ಲಿ ಹಳೇ ದ್ವೇಷದ ಹಿನ್ನಲೆಯಲ್ಲಿ ಒಂದು ಕುಟುಂಬ ಮನೆಯ ಯಜಮಾನನ್ನ ಕಳೆದುಕೊಂಡು ಅನಾಥರಾದರೆ, ಮತ್ತೊಂದು ಕುಟುಂಬಕ್ಕೆ ಕುಟುಂಬವೇ ಜೈಲು ಪಾಲಾಗಿದೆ,  ದ್ವೇಷಕ್ಕೆ ಎರಡು ಕುಟುಂಬಗಳು ಹಾಳಾಗಿದ್ದು ಬಿಟ್ಟರೆ ದ್ವೇಷ ಸಾಧಿಸಿ ಬೇರೇನು ಸಂಪಾದಿಸಿಲ್ಲ ಅನ್ನೋದು ಜಿದ್ದಿನ ಕೊಲೆಯ ಸಾರಾಂಶವಾಗಿದೆ.
Published by:Divya D
First published: