Kolar: ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ; ಪಾದ್ರಿ ಸೇರಿದಂತೆ ನಾಲ್ವರ ಅರೆಸ್ಟ್, ಠಾಣೆಯಲ್ಲಿಯೇ ಎಣ್ಣೆ ಪಾರ್ಟಿ

ಸುಳ್ಳು ದೂರು ನೀಡಿರುವುದು ಸಾಬೀತಾದ ಹಿನ್ನೆಲೆ ಇಬ್ಬರು ವಿದ್ಯಾರ್ಥಿನಿಯರಾದ ಜನಿಫರ್ ಹಾಗೂ ಮಂಜು, ಹಾಸ್ಟೆಲ್ ವಾರ್ಡನ್ ಶೀಲಾ ಮತ್ತು ಪ್ರಕರಣ ದಾಖಲಿಸಲು ಪ್ರಚೋದನೆ ನೀಡಿದ್ದ ಮೆಥೋಡಿಸ್ಟ್ ಚರ್ಚ್ ಪಾದ್ರಿ ರೆವರೆಂಟ್ ಶಾಂತಕುಮಾರ್ ಬಂಧನವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೋಲಾರದ (Kolar) ಇ‌ಟಿಸಿಎಂ ಆಸ್ಪತ್ರೆ ಲೆಕ್ಕಾಧಿಕಾರಿ (ETCM Hospital Account Officer) ವಿರುದ್ಧ ಸುಳ್ಳು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ ಆರೋಪದಡಿ ಪಾದ್ರಿ ಸೇರಿದಂತೆ ನಾಲ್ವರನ್ನು ಪೊಲೀಸರು (Police) ಬಂಧಿಸಿದ್ದಾರೆ. ವಿದ್ಯಾರ್ಥಿನಿಯರಂದು ಹೇಳಿಕೊಂಡ ಇಬ್ಬರು ಲೆಕ್ಕಾಧಿಕಾರಿ ಜಾನ್ಸನ್ ಕುಂದರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು. ಇದೀಗ ಮೆಥೋಡಿಸ್ಟ್ ಚರ್ಚ್ ಪಾದ್ರಿ ರೆವರಂಟ್ ಶಾಂತಕುಮಾರ್ ಸೇರಿ ನಾಲ್ವರ ಬಂಧನವಾಗಿದೆ. ಆಗಸ್ಟ್ 30ರಂದು ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ (Kolar Woman Police Station) ಈ ಸಂಬಂಧ ಪ್ರಕರಣ ದಾಖಲಾಗಿತ್ತು. ನ್ಯಾಯಾಧೀಶರ (Judge) ಮುಂದೆ ನಕಲಿ ವಿದ್ಯಾರ್ಥಿನಿಯರು ತಮ್ಮ ಹೇಳಿಕೆ ಸಹ ದಾಖಲಿಸಿದ್ದರು. ಈ ಸಂಬಂಧ ಲೆಕ್ಕಾಧಿಕಾರಿ ಜಾನ್ಸನ್ ಕುಂದರ್ ಪತ್ನಿ ಸವಿತಾ ಜಾನ್ ಅವರು ಎಸ್​​ಪಿ ದೇವರಾಜ್ ಅವರಿಗೆ ದೂರು ನೀಡಿ ಪತಿಯ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಆರೋಪಿಸಿದ್ರು.

    ದೂರು ಪ್ರತಿ ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಸೂಕ್ಷ್ಮವಾಗಿ ತನಿಖೆ ನಡೆಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯರು ಎಂದು ಹೇಳಿಕೊಂಡು ಬಂದವರು ಸುಳ್ಳು ಹೇಳುತ್ತಿದ್ದಾರೆ  ಎಂದು ತಿಳಿದು ಬಂದಿದೆ.

    ತನಿಖೆಯಲ್ಲಿ ಸುಳ್ಳು ದೂರು ನೀಡಿರೋದು ಸಾಬೀತು

    ಸುಳ್ಳು ದೂರು ನೀಡಿರುವುದು ಸಾಬೀತಾದ ಹಿನ್ನೆಲೆ ಇಬ್ಬರು ವಿದ್ಯಾರ್ಥಿನಿಯರಾದ ಜನಿಫರ್ ಹಾಗೂ ಮಂಜು, ಹಾಸ್ಟೆಲ್ ವಾರ್ಡನ್ ಶೀಲಾ ಮತ್ತು ಪ್ರಕರಣ ದಾಖಲಿಸಲು ಪ್ರಚೋದನೆ ನೀಡಿದ್ದ ಮೆಥೋಡಿಸ್ಟ್ ಚರ್ಚ್ ಪಾದ್ರಿ ರೆವರೆಂಟ್ ಶಾಂತಕುಮಾರ್ ಬಂಧನವಾಗಿದೆ.

    ಮಾರಕಾಸ್ತ್ರ ಹಿಡಿದಿದ್ದ 6 ಜನರ ಸೆರೆ

    ಬೆಂಗಳೂರಿನಲ್ಲಿ ಗಣಪತಿ ವಿಸರ್ಜನೆ (Ganesha Visarajana) ವೇಳೆ ಮಾರಕಾಸ್ತ್ರ ಹಿಡಿದು ಯುವಕರ ಪುಂಡಾಟ ಮೆರೆದಿದ್ದ 6 ಜನರನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪುಟ್ಟೇನಹಳ್ಳಿಯ (Puttenahalli) ಸಾರಕ್ಕಿ ಲೇಕ್ ಬಳಿ ಸೆಪ್ಟೆಂಬರ್ 14ರಂದು ಗಣೇಶ ವಿಸರ್ಜನೆ ವೇಳೆ ಯುವಕರು  ಮಾರಕಾಸ್ತ್ರ, ಮದ್ಯ ಬಾಟಲ್ ಹಿಡಿದು ಪುಂಡಾಟ ಮಾಡಿದ್ರು.

    ಸಾಂದರ್ಭಿಕ ಚಿತ್ರ


    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಘಟನೆ ಸಂಬಂಧ ಪುಟ್ಟೇನಹಳ್ಳಿ ಪೊಲೀಸರು ಸುಮೋಟೊ ಕೇಸ್ ದಾಖಲಿಸಿ, ಆರೋಪಿಗಳನ್ನ ಬಂಧಿಸಿದ್ದಾರೆ.

    ಇದನ್ನೂ ಓದಿ:  B S Yediyurappa: ಏಕಾಂಗಿಯಾದ್ರಾ ಯಡಿಯೂರಪ್ಪ? BSY ಸ್ವಾಗತಕ್ಕೆ ಬರಲಿಲ್ಲ ಹುಬ್ಬಳ್ಳಿ ಬಿಜೆಪಿ ನಾಯಕರು!

    ಠಾಣೆಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ, ವಿಡಿಯೋ ವೈರಲ್ 

    ಪೊಲೀಸ್ ಠಾಣೆಯಲ್ಲೇ ಪೇದೆಗಳು ಭರ್ಜರಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ (Srinivasapura, Kolar) ತಾಲೂಕಿನ ಗೌನಿಪಲ್ಲಿ ಠಾಣೆಯಲ್ಲಿ ಪೊಲೀಸ್  (Gaunipalli Police Station) ಸಿಬ್ಬಂದಿ ಗುಂಡು ತುಂಡು ಪಾರ್ಟಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಠಾಣೆ ಸಿಬ್ಬಂದಿಗಳಾದ ಆಂಜಿ, ಚಲಪತಿ, ಮಂಜು ಅವರು ಎಣ್ಣೆ ಪಾರ್ಟಿ ಮಾಡಿದ್ದಾರಂತೆ. ಈ ಬಗ್ಗೆ ಮಾತನಾಡಿರೋ ಕೋಲಾರ ಎಸ್‌ಪಿ ದೇವರಾಜ್, ಒಂದು ವರ್ಷದ ಹಳೆಯ ವಿಡಿಯೋ ಇದೀಗ ವೈರಲ್ ಆಗಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ತೀವಿ ಅಂತ ಹೇಳಿದ್ರು.

    ಇದನ್ನೂ ಓದಿ:  Belagavi Politics: ಬೆಳಗಾವಿ ವಿಭಜನೆ ಕಗ್ಗಂಟು; ರಾಜಕಾರಣಿಗಳಿಗೆ ಪ್ರತಿಷ್ಠೆ, ಜನರಿಗೆ ಪ್ರಾಣ ಸಂಕಟ!

    ಹಾವು ಕಚ್ಚಿ ಯುವಕ ಸಾವು

    ಬೆಂಗಳೂರು ಉತ್ತರ ತಾಲೂಕಿನ ಪಿಳ್ಳಹಳ್ಳಿ ಗ್ರಾಮದಲ್ಲಿ ಹಾವು (Snake) ಕಚ್ಚಿ ಯುವಕ (Youth Died) ಸಾವನ್ನಪ್ಪಿದ್ದಾನೆ. 18 ವರ್ಷದ ತೇಜಸ್‌ ಮೃತ ದುರ್ದೈವಿ. ಮೇಕೆಗೆ ಮೇವು ತರಲು ಹೋಗಿದ್ದಾಗ ತೇಜಸ್‌ಗೆ ಹಾವು ಕಚ್ಚಿದೆ. ತಕ್ಷಣವೇ ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿ ಚಿಕಿತ್ಸೆ ಕೊಡಿಸಲಾಯ್ತು. ಆದ್ರೆ ಚಿಕಿತ್ಸೆ ಫಲಿಸದೇ ಯುವಕ ಮೃತಪಟ್ಟಿದ್ದಾನೆ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
    Published by:Mahmadrafik K
    First published: