• Home
  • »
  • News
  • »
  • state
  • »
  • Hubballi: ಖೋಟಾ ನೋಟು ಚಲಾವಣೆ; ಮೂವರು ಆರೋಪಿಗಳ ಬಂಧನ

Hubballi: ಖೋಟಾ ನೋಟು ಚಲಾವಣೆ; ಮೂವರು ಆರೋಪಿಗಳ ಬಂಧನ

ಹುಬ್ಬಳ್ಳಿ ಪೊಲೀಸ್​ ಠಾಣೆ

ಹುಬ್ಬಳ್ಳಿ ಪೊಲೀಸ್​ ಠಾಣೆ

ಖೋಟಾ ನೋಟು ಜಾಲಕ್ಕೆ ಸಂಬಂಧಿಸಿ ಹುಬ್ಬಳ್ಳಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ 73 ಖೋಟಾ ನೋಟು, ಕಾರು ಇತ್ಯಾದಿ ವಶಪಡಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • Share this:

ಹುಬ್ಬಳ್ಳಿ  (ಅ. 21): ವಾಣಿಜ್ಯ ನಗರಿಯಲ್ಲಿ (Commercial City) ಒಂದಲ್ಲ ಒಂದು ಅಪರಾಧ ಕೃತ್ಯಗಳು (Criminal Case) ನಡೆಯುತ್ತಲೇ ಇದ್ದು, ಇದೀಗ ಖೋಟಾ ನೋಟು ಚಲಾವಣೆ ಮತ್ತೆ ತಲೆಯೆತ್ತಿದೆ. ಹುಬ್ಬಳ್ಳಿಯಲ್ಲಿ ಇಷ್ಟು ದಿನ ತಣ್ಣಗಾಗಿದ್ದ ಖೋಟಾ ನೋಟ್ (Fake Note) ಚಲಾವಣೆ ದಂಧೆ ಮತ್ತೇ ಮುನ್ನೆಲೆಗೆ ಬಂದಿದೆ. ಪ್ರಖ್ಯಾತಿ ಮತ್ತು ಕುಖ್ಯಾತಿ ಎರಡರಲ್ಲೂ ಹೆಸರು ಮಾಡಿರುವ ಹುಬ್ಬಳ್ಳಿಯಲ್ಲಿ (Hubballli) ಖೋಟಾ ನೋಟಿನ ಹಾವಳಿ ಮತ್ತೇ ಸದ್ದು ಮಾಡುತ್ತಿದೆ.


ಬಸ್ ನಿಲ್ದಾಣದ ಬಳಿ ಖೋಟಾ ನೋಟು ಚಲಾವಣೆ


ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದ ಬಳಿ ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಮೂವರನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಶಿವಾನಂದ ಕಾರಜೋಳ, ವಿಜಯಪುರದ ಅಡವಿ ಶಂಕರಲಿಂಗನ ಗುಡಿ ನಿವಾಸಿ ಕಲ್ಲಯ್ಯ ಪಟ್ಟದಮಠ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೆಗ್ಗರಣಿಯ ಗುರುರಾಜ ಜಾಧವ ಎಂದು ಗುರುತಿಸಲಾಗಿದೆ.


200 ಮತ್ತು 100 ಮುಖಬೆಲೆಯ ಖೋಟಾ ನೋಟು


ಬೇರೆ ಬೇರೆ ಪ್ರದೇಶದಲ್ಲಿ ವಾಸಿಸುತ್ತಿದ್ದರೂ ಹುಬ್ಬಳ್ಳಿಯಲ್ಲಿ ಜೊತೆಗೂಡಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದರು. ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್ ಬಳಿಯ ಸನ್ಮಾನ್ ಲಾಡ್ಜ್‌ನಲ್ಲಿ 200 ಮತ್ತು 100 ಮುಖಬೆಲೆಯ ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿರುವ ಖಚಿತ  ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ದಂಧೆಯ ರೂವಾರಿಗಳನ್ನು ಬಂಧಿಸಿಸದ್ದು. ಬಂಧಿತ ಆರೋಪಿಗಳಿಂದ 73 ಖೋಟಾ ನೋಟುಗಳು, ಒಂದು ವಾಹನ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಉಪ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ಇದನ್ನೂ ಓದಿ: Tumakuru: ನಿಮಗೆ ಪೂಜೆ ಮಾಡಿಕೊಡುವುದಿಲ್ಲ, ದಲಿತ ಕುಟುಂಬವನ್ನು ದೇಗುಲದಿಂದ ಹೊರಕ್ಕೆ ಕಳುಹಿಸಿದ ಅರ್ಚಕ


ಶಾಸಕರನ್ನು ಹುಡುಕಿಕೊಡುವಂತೆ ದೂರು


ಶಾಸಕರನ್ನ ಹುಡುಕಿಕೊಡಿ ಎಂದು ಪೊಲೀಸ್ ಠಾಣೆಗೆ ದೂರು ನಡಿರೋ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಮಾಜಿ ಮುಖ್ಯಮಂತ್ರಿ, ಶಾಸಕ  ಜಗದೀಶ್ ಶೆಟ್ಟರ್‌ನ್ನ ಹುಡುಕಿಕೊಡಿ ಎಂದು ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ದೂರು ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ ಪ್ರತಿನಿಧಿಸುವ ಸೆಂಟ್ರಲ್ ಕ್ಷೇತ್ರದಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಕ್ಷೇತ್ರದ ಜನರ ಕಷ್ಟ ಆಲಿಸಲು ಜಗದೀಶ್ ಶೆಟ್ಟರ್ ಮುಂದಾಗಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.


ಇದನ್ನೂ ಓದಿ: Siddaramaiah Tweet: ನಿಮ್ಮ ಮೋದಿ ವಿಶ್ವಗುರು ಅಲ್ಲ ಪುಕ್ಕಲು ಗುರು; ಬೊಮ್ಮಾಯಿ, ಬಿಎಸ್​ವೈಗೂ ಸಿದ್ದು ಸವಾಲ್​!


ಮಳೆಯ ಅವಾಂತರ ಜನರು ಬೀದಿ ಪಾಲು


ಮಳೆಯಿಂದ ಜನರು ಬೀದಿಗೆ ಬಂದಿದ್ದಾರೆ. ಆ ಸ್ಥಳಗಳಿಗೆ ಜಗದೀಶ್ ಶೆಟ್ಟರ್ ಭೇಟಿ ನೀಡಿಲ್ಲ. ಜನ ಜಗದೀಶ್ ಶೆಟ್ಟರ್ ನಿವಾಸಕ್ಕೆ ಬಂದರೂ ಶೆಟ್ಟರ್ ಮನೆಯಲ್ಲಿ ಇಲ್ಲಾ. ಕಚೇರಿ ಸಿಬ್ಬಂದಿ ಮಾನ್ಯ ಶಾಸಕರು ಮನೆಯಲ್ಲಿ ಇಲ್ಲ ಹೇಳಿದ್ದಾರೆ.  ಶಾಸಕರು ಕಾಣೆಯಾಗಿದ್ದು ಅವರನ್ನ ಹುಡುಕಿಕೊಡಿ ಎಂದಿರೋ ಉಳ್ಳಾಗಡ್ಡಿ ಮಠ, ಅವರು ಗೋಧಿ ಬಣ್ಣ, 5.1/2 ಅಡಿ ಉದ್ದವಿದ್ಧಾರೆ. ಇವರನ್ನ ಹುಡುಕಿಕೊಡಿ ಎಂದು ದೂರಿನ ಮೂಲಕ ಮನವಿ ಮಾಡಿದ್ದಾರೆ. ಮಾಜಿ ಸಿಎಂ ಒಬ್ಬರ ವಿರುದ್ಧ ಕಾಂಗ್ರೆಸ್ ಈ ರೀತಿ ದೂರು ನೀಡಿರೋದು ಚರ್ಚೆಗೆ ಗ್ರಾಸವಾಗಿದೆ. ನಗರದಲ್ಲಿ ಸುರಿದ ಮಳೆ ರಾಜಕೀಯ ಕೆಸರೆರಚಾಟಕ್ಕೆ ನಾಂದಿಹಾಡಿದೆ.

Published by:ಪಾವನ ಎಚ್ ಎಸ್
First published: