• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Fake Note: RBI ಬ್ಯಾಂಕ್‌ನಲ್ಲೇ ಪತ್ತೆಯಾಯ್ತು ನಕಲಿ ನೋಟು, ಯಾಮಾರಿದ್ರೆ ನಿಮಗೂ ಬೀಳುತ್ತೆ ಟೋಪಿ, ಎಚ್ಚರ!

Fake Note: RBI ಬ್ಯಾಂಕ್‌ನಲ್ಲೇ ಪತ್ತೆಯಾಯ್ತು ನಕಲಿ ನೋಟು, ಯಾಮಾರಿದ್ರೆ ನಿಮಗೂ ಬೀಳುತ್ತೆ ಟೋಪಿ, ಎಚ್ಚರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇನ್ಮೇಲೆ ನೀವು ಯಾವುದೇ ನೋಟು ತೆಗೆದುಕೊಳ್ಳುವಾಗ ಎಚ್ಚರದಿಂದ ಇರಬೇಕು. ಜನರ ಕೈಯಿಂದ ಇರಲಿ, ಅಂಗಡಿ ಮಾರುಕಟ್ಟೆಯಲ್ಲಿ ಇರಲಿ, ಇಷ್ಟೇ ಯಾಕೆ ಬ್ಯಾಂಕ್‌ನಿಂದ ನೋಟು ಪಡೆಯುವಾಗ ಸಮೇತ ನೀವು ಎಚ್ಚರದಿಂದ ಇರಬೇಕು ಇದು ಅಸಲಿ ನೋಟೋ ಅಥವಾ ನಕಲಿ ನೋಟೋ ಎಂದು.

  • News18 Kannada
  • 5-MIN READ
  • Last Updated :
  • Bangalore, India
  • Share this:

ಬೆಂಗಳೂರು: ಕರ್ನಾಟಕದ ವಿಧಾನಸಭಾ ಚುನಾವಣೆ ನಡೆದಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರವನ್ನು ಹಿಡಿಟ್ಟುಕೊಳ್ಳುವ ಅನಿವಾರ್ಯತೆ ಇದ್ದರೆ, ಕಾಂಗ್ರೆಸ್‌ಗೆ ಪುನಃ ಅಧಿಕಾರ ಹಿಡಿಯುವ ಹಂಬಲವಿತ್ತು. ಈಗ ಚುನಾವಣೆ ಮುಗಿದಿದೆ. ಆಡಳಿತ ಪಕ್ಷ ಬಿಜೆಪಿ ಹೀನಾಯವಾಗಿ ಸೋತು ಕಾಂಗ್ರೆಸ್‌ ಅಧಿಕಾರದ ಗದ್ದುಗೆಗೆ ಏರಿದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿದಿದೆ. ಎಲ್ಲಾ ಪಕ್ಷಗಳ ಅನೇಕ ಅಭ್ಯರ್ಥಿಗಳು ಕೋಟಿ ಕೋಟಿ ಹಣವನ್ನು ಸುರಿದಿದ್ದಾರೆ.


ಆದರೆ ಈಗ ಹರಿದು ಬರ್ತಿರೋ ಸುದ್ದಿ ಏನಪ್ಪಾ ಅಂದ್ರೆ, ಚುನಾವಣೆ ಮುಗಿದ ಬೆನ್ನಲ್ಲೇ ಭಾರೀ ಖೋಟಾ ನೋಟು (Counterfeit Note) ಜಾಲ ಪತ್ತೆಯಾಗಿರುವ ಮಾಹಿತಿ ಸಿಕ್ಕಿದೆ. ಹೌದು, ಅಂದ್ಹಾಗೆ ಇನ್ಮೇಲೆ ನೀವು ಯಾವುದೇ ನೋಟು ತೆಗೆದುಕೊಳ್ಳುವಾಗ ಎಚ್ಚರದಿಂದ ಇರಬೇಕು. ಜನರ ಕೈಯಿಂದ ಇರಲಿ, ಅಂಗಡಿ ಮಾರುಕಟ್ಟೆಯಲ್ಲಿ ಇರಲಿ, ಇಷ್ಟೇ ಯಾಕೆ ಬ್ಯಾಂಕ್‌ನಿಂದ ನೋಟು ಪಡೆಯುವಾಗ ಸಮೇತ ನೀವು ಎಚ್ಚರದಿಂದ ಇರಬೇಕು ಇದು ಅಸಲಿ ನೋಟೋ ಅಥವಾ ನಕಲಿ ನೋಟೋ ಎಂದು. ಯಾಕಂದ್ರೆ ಈ ಬಾರಿ ನಕಲಿ ನೋಟು ಪತ್ತೆಯಾಗಿರೋದು ಇನ್ನೆಲ್ಲೋ ಜನರ ಕೈಯಲ್ಲಿ ಅಲ್ಲ, ಸ್ವತಃ ಬ್ಯಾಂಕ್‌ನಲ್ಲೇ ಅಂದ್ರೆ ನೀವು ನಂಬಲೇ ಬೇಕು.


ಇದನ್ನೂ ಓದಿ: Puttur: ಪುತ್ತೂರಿನಲ್ಲಿ ವಿಕೃತಿ; ಸದಾನಂದ ಗೌಡ, ನಳಿನ್‌ ಕುಮಾರ್‌ ಫ್ಲೆಕ್ಸ್‌ಗೆ ಶ್ರದ್ದಾಂಜಲಿ ಕೋರಿ ಚಪ್ಪಲಿ ಹಾರ!


ಹೌದು.. ಆರ್‌ಬಿಐ ಬ್ಯಾಂಕ್‌ನಲ್ಲಿಯೇ ಖೋಟಾ ನೋಟು ಪತ್ತೆಯಾಗಿರುವ ಸುದ್ದಿ ತಿಳಿದು ಬಂದಿದೆ. ಮಂಗಳೂರು ಮತ್ತು ಬೆಂಗಳೂರಿನ ಖಾಸಗಿ ಬ್ಯಾಂಕ್‌ಗಳಿಂದ ಬಂದ ಹಣದಲ್ಲಿ ಖೋಟಾ ನೋಟು ಪತ್ತೆಯಾಗಿದ್ದು, ಆರ್‌ಬಿಐ ಬ್ಯಾಂಕ್‌ಗೇ ದೋಖಾ ಮಾಡಲು ಖಾಸಗಿ ಬ್ಯಾಂಕ್‌ಗಳು ಮುಂದಾಗಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ. ಮಾರ್ಚ್‌ 21ರಂದು ಆರ್‌ಬಿಐಗೆ ಬಂದ ಹಣದಲ್ಲಿ ಖೋಟಾ ನೋಟು ಪತ್ತೆಯಾಗಿದ್ದು, ಹಣವನ್ನು ಪರಿಶೀಲನೆ ಮಾಡುವಾಗ ಈ ವಿಚಾರ ತಿಳಿದು ಬಂದಿದೆ. ಈ ಬಗ್ಗೆ ಹಲಸೂರು ಗೇಟ್ ಪೊಲೀಸರಿಗೆ ಆರ್‌ಬಿಐ ಬ್ಯಾಂಕ್‌ ಮ್ಯಾನೇಜರ್ ಅಂಜನಾ ಅವರು ದೂರು ನೀಡಿದ್ದಾರೆ.


ಇದನ್ನೂ ಓದಿ: Narendra Modi: 396 ಲೋಕಸಭಾ ಕ್ಷೇತ್ರಗಳು, 51 ಸಮಾವೇಶ! 1 ತಿಂಗಳಲ್ಲಿ 1 ಲಕ್ಷ ಮನೆಗೆ ಮೋದಿ ಸಂದೇಶ ತಲುಪಿಸಲು ಬಿಜೆಪಿ ನಿರ್ಧಾರ


ಚುನಾವಣೆಯಲ್ಲಿ ಚಲಾವಣೆಯಾಗಿರುವ ಸಾಧ್ಯತೆ?


ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಗಳು ಗೆಲ್ಲಲು ಹಣದ ಹೊಳೆಯನ್ನೇ ಹರಿಸಿದ್ದು ಮತದಾರರಿಗೆ, ಕಾರ್ಯಕರ್ತರಿಗೆ ಕಂತೆ ಕಂತೆ ನೋಟುಗಳು ರಾಜಕೀಯ ಪಕ್ಷಗಳಿಂದ ಸಿಕ್ಕಿದೆ ಎನ್ನಲಾಗ್ತಿದ್ದು, ಹೀಗಾಗಿ ಇದರಲ್ಲೂ ಖೋಟಾ ನೋಟು ಚಲಾವಣೆಯಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

top videos



    ಆದರೆ ಸ್ಪಷ್ಟವಾಗಿ ಖೋಟಾ ನೋಟು ಹರಿದು ಬರಲು ಕಾರಣ ಏನು? ಇದರ ಮೂಲ ಎಲ್ಲಿ? ಅನ್ನೋದರ ಬಗ್ಗೆ ಪೊಲೀಸರು ತನಿಖೆ ನಡೆಸಿದ ಬಳಿಕವಷ್ಟೇ ನಿಜಾಂಶ ತಿಳಿದು ಬರಬೇಕಿದೆ.

    First published: