ಸುಳ್ಳು ಸುದ್ದಿ - ಏಪ್ರಿಲ್​ನಲ್ಲಿ ಪಂಚಾಯತ್ ಚುನಾವಣೆ ಇಲ್ಲ: ಗೆಜೆಟ್ ನೋಟಿಫಿಕೇಶನ್ ನಕಲಿ - ಆಂತರಿಕ ತನಿಖೆಗೆ ಆದೇಶ

ಪಂಚಾಯತ್ ರಾಜ್ ಇಲಾಖೆಯಿಂದ ಅಧಿಕೃತವಾಗಿ ಯಾವುದೇ ನೋಟಿಫಿಕೇಶನ್ ಹೋಗಿಲ್ಲ ಎಂಬುದು ದೃಢಪಟ್ಟಿದೆ. ಈ ನಕಲಿ ಸೂಚನಾಪತ್ರ ಗ್ರಾಮ ಪಂಚಾಯತಿ ಕಚೇರಿಗಳಿಗೆ ಹೋಗಿದ್ದು ಹೇಗೆ? ಈ ನಕಲಿ ಪತ್ರವನ್ನು ತಯಾರಿಸಿದವರು ಯಾರು ಎಂದು ಇಲಾಖೆಯಲ್ಲಿ ಆಂತರಿಕ ತನಿಖೆ ನಡೆಯುತ್ತಿದೆ.

news18
Updated:January 11, 2020, 1:14 PM IST
ಸುಳ್ಳು ಸುದ್ದಿ - ಏಪ್ರಿಲ್​ನಲ್ಲಿ ಪಂಚಾಯತ್ ಚುನಾವಣೆ ಇಲ್ಲ: ಗೆಜೆಟ್ ನೋಟಿಫಿಕೇಶನ್ ನಕಲಿ - ಆಂತರಿಕ ತನಿಖೆಗೆ ಆದೇಶ
ಪ್ರಾತಿನಿಧಿಕ ಚಿತ್ರ
  • News18
  • Last Updated: January 11, 2020, 1:14 PM IST
  • Share this:
ಬೆಂಗಳೂರು(ಜ. 11): ಏಪ್ರಿಲ್ 5 ಮತ್ತು 9ರಂದು ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದೆ ಎಂಬ ಸುದ್ದಿ ಬಹುತೇಕ ಎಲ್ಲಾ ಮಾಧ್ಯಮಗಳಲ್ಲಿ ಇಂದು ಬೆಳಗ್ಗೆ ವರದಿಯಾಗಿತ್ತು. ಅದಕ್ಕೆ ಸಂಬಂಧಿಸಿದ ಗೆಜೆಟ್ ನೋಟಿಫಿಕೇಶನ್ ಅನ್ನು ಎಲ್ಲಾ ಗ್ರಾಮ ಪಂಚಾಯತ್​​ಗಳಿಗೂ ಕಳುಹಿಸಿಕೊಡಲಾಗಿತ್ತು. ಅದನ್ನು ಆಧಾರವಾಗಿ ಇಟ್ಟುಕೊಂಡು ಮಾಧ್ಯಮಗಳು ಸುದ್ದಿ ಮಾಡಿದ್ದವು. ಆದರೆ, ಇದು ನಕಲಿ ಗೆಜೆಟ್ ನೋಟಿಫಿಕೇಶನ್ ಎಂಬುದು ತಿಳಿದುಬಂದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕೆಲ ಅಧಿಕಾರಿಗಳು ಈ ನಕಲಿ ನೋಟಿಫಿಕೇಶನ್ ಹಿಂದಿರುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿಲ್ಲ. ಪಂಚಾಯತ್ ರಾಜ್ ಇಲಾಖೆಯಿಂದ ಅಧಿಕೃತವಾಗಿ ಯಾವುದೇ ನೋಟಿಫಿಕೇಶನ್ ಹೋಗಿಲ್ಲ ಎಂಬುದು ದೃಢಪಟ್ಟಿದೆ. ಈ ನಕಲಿ ಸೂಚನಾಪತ್ರ ಗ್ರಾಮ ಪಂಚಾಯತಿ ಕಚೇರಿಗಳಿಗೆ ಹೋಗಿದ್ದು ಹೇಗೆ? ಈ ನಕಲಿ ಪತ್ರವನ್ನು ತಯಾರಿಸಿದವರು ಯಾರು ಎಂದು ಇಲಾಖೆಯಲ್ಲಿ ಆಂತರಿಕ ತನಿಖೆ ನಡೆಯುತ್ತಿದೆ. ಸಚಿವ ಕೆ.ಎಸ್. ಈಶ್ವರಪ್ಪ ಅವರು ಇಂದು ಮಧ್ಯಾಹ್ನ ಸ್ಪಷ್ಟನೆ ನೀಡಲಿದ್ದಾರೆ.

ಇದನ್ನೂ ಓದಿ: ಸದ್ಯದಲ್ಲೇ ಸಂಪುಟ ವಿಸ್ತರಣೆ: ಜ.17ಕ್ಕೆ ರಾಜ್ಯಕ್ಕೆ ಅಮಿತ್​​ ಶಾ ಆಗಮನ; ಸಿಎಂ ಬಿಎಸ್​​​ವೈ ಜತೆ ಮಹತ್ವದ ಚರ್ಚೆ

ಮಾಧ್ಯಮಗಳಿಗೆ ಸಿಕ್ಕ ನಕಲಿ ಸೂಚನಾ ಪತ್ರದ ಪ್ರಕಾರ ಏಪ್ರಿಲ್ 5 ಮತ್ತು 9ರಂದು ಎರಡು ಹಂತದಲ್ಲಿ ಗ್ರಾಮ ಪಂಚಾಯತ್ ಚುನಾವಣೆಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ, ಅಂದರೆ ಏಪ್ರಿಲ್ 5ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಮೈಸೂರು, ಮಂಡ್ಯ, ಮಡಿಕೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆಯಲಿವೆ. ಎರಡನೇ ಹಂತದಲ್ಲಿ ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ಎರಡನೇ ಹಂತದ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಈ ನಕಲಿ ಗೆಜೆಟ್ ನೋಟಿಫಿಕೇನ್ನಲ್ಲಿ ತಿಳಿಸಲಾಗಿತ್ತು.

ಹಾಗೆಯೇ ಚುನಾವಣೆಯಲ್ಲಿ ಸ್ಪರ್ಧಿಸಬಯಸುವ ಅಭ್ಯರ್ಥಿಗಳಿಗೆ ಒಂದಿಷ್ಟು ನಿಯಮಗಳನ್ನೂ ನಿರ್ದಿಷ್ಟಪಡಿಸಲಾಗಿತ್ತು. ಈಗ ಈ ಸೂಚನಾ ಪತ್ರವು ನಕಲಿ ಎಂಬುದು ಖಚಿತವಾಗಿದೆ. ಏಪ್ರಿಲ್ನಲ್ಲಿ ಯಾವುದೇ ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆಯುವುದಿಲ್ಲ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Published by: Vijayasarthy SN
First published: January 11, 2020, 11:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading