ಹೋದಲ್ಲೆಲ್ಲಾ ಸಂಚಲನ ಸೃಷ್ಟಿಸುತ್ತಿದೆ ಈ ನಕಲಿ ಮೋದಿ ಮತ್ತು ಗಾಂಧಿಯ ಜೋಡಿ!


Updated:January 14, 2018, 5:57 PM IST
ಹೋದಲ್ಲೆಲ್ಲಾ ಸಂಚಲನ ಸೃಷ್ಟಿಸುತ್ತಿದೆ ಈ ನಕಲಿ ಮೋದಿ ಮತ್ತು ಗಾಂಧಿಯ ಜೋಡಿ!
ಸಂಚಲನ ಸೃಷ್ಟಿಸುತ್ತಿದೆ ಈ ನಕಲಿ ಮೋದಿ ಮತ್ತು ಗಾಂಧಿಯ ಜೋಡಿ!

Updated: January 14, 2018, 5:57 PM IST
-ಪರೀಕ್ಷಿತ್ ಶೇಟ್, ನ್ಯೂಸ್ 18 ಕನ್ನಡ

ಉಡುಪಿ(ಜ.14): ದೇಶದಲ್ಲಿ ಎಲ್ಲಿ ನೋಡಿದ್ರೂ ಮೋದಿ ಹವಾ, ಚುನಾವಣೆ ಬಂದ್ರೆ ಮೋದಿನೇ ಸ್ಟಾರ್ ಪ್ರಚಾರಕ. ಕರೆದಲ್ಲೆಲ್ಲಾ ಮೋದಿಗೆ ಹೋಗೋಕಾಗುತ್ತಾ, ಹಾಗಾಗಿ ಈಗ ಡ್ಯುಬ್ಲಿಕೇಟ್ ಮೋದಿಗಳಿಗೆ ಭಾರೀ ಬೇಡಿಕೆ. ಉಡುಪಿಯ ಸದಾನಂದ ನಾಯಕ್ ಎಂಬ ಮೋದಿ ತದ್ರೂಪಿಗಂತೂಸಿಕ್ಕಾಪಟ್ಟೆ ಬೇಡಿಕೆ ಇದೆ. ಗುಜರಾತ್ ಚುನಾವಣೆಯಲ್ಲಿ ಪ್ರಚಾರದಲ್ಲಿ ತೊಡಗಿದ್ದ ಇದೀಗ ಸದಾನಂದ ನಾಯಕ್ ಸದ್ಯ ಕರ್ನಾಟಕ ಚುನಾವಣೆಯತ್ತ ಮುಖ ಮಾಡಿದ್ದಾರೆ.

ಇವರದ್ದು ಮೋದಿ ತರಹದ ನಿಲುವು, ಹಾವಭಾವ, ಮಾತುಕತೆ ಎಲ್ಲದಕ್ಕೂ ಸೈ, ಮೇಲಾಗಿ ಬಿಜೆಪಿಯ ಕಟ್ಟಾ ಅಭಿಮಾನಿ. ಉಡುಪಿ ಜಿಲ್ಲೆಯ ಹಿರಿಯಡ್ಕ ನಿವಾಸಿ ಸದಾನಂದ ನಾಯಕ್ ಗೆ ಈಗ ಎಲ್ಲಿಲ್ಲದ ಬೇಡಿಕೆ. ಕರ್ನಾಟಕ ಮಾತ್ರವಲ್ಲ, ಗುಜರಾತ್ ನಲ್ಲೂ ಈ ಡ್ಯುಬ್ಲಿಕೇಟ್ ಮೋದಿಯದ್ದೇ ಹವಾ. ಗುಜರಾತ್ ಚುನಾವಣಾ ರ್ಯಾಲಿಗಳಲ್ಲಿ ಇವರೇ ಪ್ರಧಾನ ಆಕರ್ಷಣೆ. ಬಿಜೆಪಿ ಮಾತ್ರ ಅಲ್ಲ, ಕಾಂಗ್ರೇಸ್ ಕಚೇರಿಗೂ ಇವರನ್ನು ಕರೆದ ಗುಜರಾತ್ ಕಾರ್ಯಕರ್ತರು ಆತಿಥ್ಯ ನೀಡಿದ್ದರಂತೆ. ಅಲ್ಲಿ ಪ್ರಚಾರ ಮುಗಿಸಿ, ಬಿಜೆಪಿಯನ್ನ ಗೆಲ್ಲಿಸಿದ್ದ ಸದಾನಂದ ನಾಯಕ್ ಈಗ ತವರಿಗೆ ವಾಪಾಸಾಗಿದ್ದಾರೆ. ಕರ್ನಾಟಕ ಚುನಾವಣೆ ನನ್ನ ಮುಂದಿನ ಗುರಿ ಅಂತಾರೆ, ಈಗಾಗಲೇ ಪರಿವರ್ತನಾ ಯಾತ್ರೆಯಲ್ಲೂ ಗಮನಸೆಳೆದಿದ್ದಾರೆ.

ಮೋದಿ ಚಾಯ್ ವಾಲಾ, ಸದಾನಂದ ನಾಯಕ್ ಅಡುಗೆ ಭಟ್ಟ. ಎರಡು ವರ್ಷದ ಹಿಂದೆ ಹರಿದ್ವಾರಕ್ಕೆ ಪ್ರವಾಸ ಹೋದ ತಂಡದಲ್ಲಿ ಇವರು ಅಡುಗೆ ಕಾರ್ಯ ನಿರ್ವಹಿಸ್ತಾ ಇದ್ರು. ಪ್ರವಾಸ ಇದ್ದ ಕಾರಣ ಗಡ್ಡ ತೆಗೆದಿರಲಿಲ್ಲ. ಗಡ್ಡ ಬಿಟ್ಟ ನಾಯಕ್ ರನ್ನು ನೋಡಿದ ಉತ್ತರ ಭಾರತದ ಜನ ಮೋದಿ ಅಂತ ಮುಗಿಬಿದ್ರಂತೆ. ಆವತ್ತೇ ತನ್ನಲ್ಲಿ ನರೇಂದ್ರ ಮೋದಿಯ ತದ್ರೂಪ ಇದೆ ಅಂತ ಅರಿವಿಗೆ ಬಂದಿದ್ದು. ಆ ದಿನದಿಂದ ಒಂದು ಕ್ಷಣ ವಿರಾಮ ಇಲ್ಲದೆ ಸಂಚರಿಸುತ್ತಿದ್ದಾರೆ. ಇವರ ಜೊತೆ ಗೋವಾ ಮೂಲದ ಅಗಸ್ಟಿನ್ ಡಿ ಅಲ್ಮೆಡಾ ಕೈ ಜೋಡಿದ್ದಾರೆ. ಮಹಾತ್ಮ ಗಾಂಧೀಜಿಯನ್ನು ಹೋಲುವ ಈ ವ್ಯಕ್ತಿ ಎಲ್ಲೇ ಹೋದ್ರೂ ಸಾಥ್ ನೀಡ್ತಿದಾರೆ. ಈ ಜೋಡಿ ಗುಜರಾತ್ ನಲ್ಲಿ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಅಲ್ಲಿನ ನ್ಯಾಷನಲ್ ಮೀಡಿಯಾಗಳಲ್ಲೂ ಇವರದ್ದೇ ಮಿಂಚು.

ಸದಾನಂದ ನಾಯಕ್ರಿಗೆ ಸೆಲ್ಪೀಗೆ ಪೋಸ್ ಕೊಡದೇ ದೊಡ್ಡ ಕೆಲಸ. ಎಲ್ಲೇ ಹೋದ್ರು ಜನ ಇವರಿಗೆ ಮುಗಿಬೀಳ್ತಾರೆ. ಈ ಸೆಲೆಬ್ರಟಿ ಪೀಲಿಂಗ್ ಇವರಿಗೆ ಬಯಸದೆ ಬಂದ ಭಾಗ್ಯ.
First published:January 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ