ಪತ್ರಕರ್ತನೆಂದು ಹೇಳಿ ಮಹಿಳಾ ಅಧಿಕಾರಿಗೆ ಕಿರುಕುಳ; ಗ್ರಾಪಂ ಕಚೇರಿಯಲ್ಲೇ ವಿಷ ಸೇವಿಸಿದ ಪಿಡಿಒ

ಕಿರುಕುಳಕ್ಕೆ ಬೇಸತ್ತು ಮಹಿಳಾ ಅಧಿಕಾರಿ ಭಾರತೀ ನಗರ ಗ್ರಾಪಂ ಕಚೇರಿಯಲ್ಲಿ ವಿಷ ಸೇವಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

news18-kannada
Updated:January 21, 2020, 7:12 PM IST
ಪತ್ರಕರ್ತನೆಂದು ಹೇಳಿ ಮಹಿಳಾ ಅಧಿಕಾರಿಗೆ ಕಿರುಕುಳ; ಗ್ರಾಪಂ ಕಚೇರಿಯಲ್ಲೇ ವಿಷ ಸೇವಿಸಿದ ಪಿಡಿಒ
ಆತ್ಮಹತ್ಯೆಗೆ ಯತ್ನಿಸಿದ ಮಹಿಳಾ ಪಿಡಿಒ.
  • Share this:
ಮಂಡ್ಯ: ನಕಲಿ ಪತ್ರಕರ್ತನ ಕಿರುಕುಳಕ್ಕೆ ಬೇಸತ್ತು ಪಂಚಾಯಿತಿಯ ಮಹಿಳಾ ಅಧಿಕಾರಿ  ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಭಾರತೀ ನಗರ ಗ್ರಾಪಂ ಕಚೇರಿಯಲ್ಲಿ ನಡೆದಿದೆ.

2018ರ ಬ್ಯಾಚ್​ನಲ್ಲಿ ಪಿಡಿಒ ಆಗಿ ಆಯ್ಕೆಯಾಗಿದ್ದ ಯುವತಿ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ, ತೀವ್ರ ಅಸ್ವಸ್ಥಗೊಂಡು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. 

ಮಂಡ್ಯದ ಸ್ಥಳೀಯ ಪತ್ರಿಕೆ ವರದಿಗಾರನೆಂದು ಹೇಳಿಕೊಂಡು ಬಿದರಹೊಸಳ್ಳಿಯ ರಮೇಶ್ ಮಹಿಳಾ ಅಧಿಕಾರಿಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಪ್ರತಿನಿತ್ಯ ಗ್ರಾಪಂ ಕಚೇರಿಗೆ ಬಂದು, ಬೆಳಗ್ಗೆಯಿಂದ ಸಂಜೆಯವರೆಗೂ ಕಚೇರಿಯಲ್ಲೇ ಕುಳಿತು ಅಧಿಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಕಿರುಕುಳಕ್ಕೆ ಬೇಸತ್ತು ಮಹಿಳಾ ಅಧಿಕಾರಿ ಭಾರತೀ ನಗರ ಗ್ರಾಪಂ ಕಚೇರಿಯಲ್ಲಿ ವಿಷ ಸೇವಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನು ಓದಿ: ಕಾಂಗ್ರೆಸ್​ ರಾಜ್ಯಾಧ್ಯಕ್ಷ ಹುದ್ದೆಗೆ ಡಿಕೆಶಿ?; ಕುಗ್ಗಿರುವ ಪಕ್ಷದ ವರ್ಚಸ್ಸನ್ನು ವೃದ್ಧಿಸಲು ಟ್ರಬಲ್ ಶೂಟರ್​ಗೆ ಮಣೆ ಹಾಕಿತಾ ಹೈಕಮಾಂಡ್?
First published:January 21, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ