Yadagiri: ರಸಗೊಬ್ಬರ ವ್ಯಾಪಾರಿಗಳಿಗೆ ನಕಲಿ ಡೀಲರ್ ಪಂಗನಾಮ; ಲಕ್ಷ, ಲಕ್ಷ ಕಳ್ಕೊಂಡ ಮಾಲೀಕ

ಡಿಎಪಿ ಗೊಬ್ಬರ ಡೀಲರ್ಸ್​​ ಎಂದು ಹೇಳಿ ನಂಬಿಸಿ ಈ ಕೆಬಿಎನ್ ಅಗ್ರೋ ಸೆಂಟರ್ ನ ಮಾಲೀಕರ ಬಳಿ ಮುಂಗಡವಾಗಿ 2 ಲಕ್ಷ ಹಣ ಪಾವತಿಸಿಕೊಂಡು 300 ಚೀಲ ಗೊಬ್ಬರ ನೀಡೋದಾಗಿ ಹೇಳಿ 2 ಗೂಡ್ಸ್ ವಾಹನದಲ್ಲಿ 30 ಚೀಲ ನಕಲಿ ಡಿಎಪಿ ಲೋಡ್ ಕಳುಹಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಯಾದಗಿರಿ (ಮೇ 13) : ಮೋಸ (Cheating) ಹೋಗೋರು ಇರೋವರೆಗೂ ಮೋಸ ಮಾಡೋರು ಇದ್ದೆ ಇರ್ತಾರೆ ಅನ್ನೊ ಹಾಗೇ ಮಳೆಗಾಲ ಆರಂಭಕ್ಕೂ ಮುನ್ನವೇ ರೈತರನ್ನ (Farmer) ಮೋಸ ಮಾಡೋಕೆ ಕಾದು ಕುಳಿತು ವ್ಯಾಪಾರಸ್ಥರನ್ನೇ ಮೋಸದ ಖೆಡ್ಡಾಕ್ಕೆ ಕೆಡವಿದ್ದಾರೆ. ರೈತರಿಗೆ ವಿತರಣೆ ಮಾಡುವ  ರಸಗೊಬ್ಬರವನ್ನು (Manure) ನಕಲಿ (Fake) ಗೊಬ್ಬರ ನೀಡಿ ಮೋಸ ಮಾಡಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೋನಹಳ್ಳಿ ಗ್ರಾಮದಲ್ಲಿ ಕೆಬಿಎನ್ ಅಗ್ರೋ ಸೆಂಟರ್ ಗೆ (KBN Agro Center) ಡಿಎಪಿ ಗೊಬ್ಬರ ಪೊರೈಕೆ ಮಾಡ್ತಿವಿ. ನಾವು ಡಿಎಪಿ ಗೊಬ್ಬರ ಡೀಲರ್ಸ್​​ ಎಂದು ಹೇಳಿ ನಂಬಿಸಿ ಈ ಕೆಬಿಎನ್ ಅಗ್ರೋ ಸೆಂಟರ್ ನ ಮಾಲಿಕ ಖಾಜಾಹುಸೇನ್ ಎಂಬುವವರ ಬಳಿ ಮುಂಗಡವಾಗಿ 2 ಲಕ್ಷ ಹಣ ಪಾವತಿಸಿಕೊಂಡು 300 ಚೀಲ ಡಿಎಪಿ ಗೊಬ್ಬರ ನೀಡೋದಾಗಿ ಹೇಳಿ ಎರಡು ಗೂಡ್ಸ್ ವಾಹನದಲ್ಲಿ 30 ಚೀಲ ನಕಲಿ ಡಿಎಪಿ ಲೋಡ್ ಕಳುಹಿಸಿದ್ದಾರೆ.

30 ಚೀಲ ನಕಲಿ ಡಿಎಪಿ ಲೋಡ್ 

ವಾಹನದಲ್ಲಿ ಬಂದ ಲೋಡ್ ದಾರಿ ಮಧ್ಯದಲ್ಲೇ  ನೋಡಿದ ಅಂಗಡಿ ಮಾಲೀಕರು ನಕಲಿ ಡಿಎಪಿ ಗೊಬ್ಬರ ಇರೋದನ್ನ ಕಂಡು ಲೋಡ್ ವಾಪಸ್ ಕಳಿಸ್ತಿವಿ ಅಂದಾಗ ಹಣ ನೀಡಲು ಹಿಂದೇಟು ಹಾಕಿದ್ದಾರೆ. ಸದ್ಯ ನಕಲಿ ಡಿಎಪಿ ರಸಗೊಬ್ಬರ ನೀಡಿದ ರಾಯಚೂರು ಮೂಲಕ ಸಾಬಣ್ಣ ಎಂಬಾತನ ಮೇಲೆ ವಡಗೇರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಡಿಎಪಿ ಡೀಲರ್ ಎಂದು ಹೇಳಿ ಮೋಸ

ಇನ್ನು ನಕಲಿ ರಸಗೊಬ್ಬರ ತುಂಬಿಕೊಂಡ ಬಂದ ಎರಡು ಗೂಡ್ಸ್ ವಾಹನಗಳನ್ನ ವಡಗೇರಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋನಹಳ್ಳಿ ಗ್ರಾಮದಲ್ಲಿ ಈ ಖಾಜಾ ಹುಸೇನ್ ಹೊಸದಾಗಿ ಅಗ್ರೋ ಸೆಂಟರ್ ಸ್ಥಾಪನೆ ಮಾಡಿ ರಸಗೊಬ್ಬರ ವ್ಯಾಪಾರ ಆರಂಭಿಸಲು ಮುಂದಾಗಿದ್ದ, ಇದನ್ನೇ ಟಾರ್ಗೆಟ್ ಮಾಡಿದ್ದ ಈ ಆಸಾಮಿ ತಾನೂ ಡಿಎಪಿ ಡೀಲರ್ ಎಂದು ಹೇಳಿ ಮೋಸ ಮಾಡಿದ್ದಾನೆ. ಇತ್ತ ಮೋಸ ಹೋದ ಖಾಜಾಹುಸೇನ್ ವಡಗೇರಾ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಂತೆ ನಕಲಿ ಗೊಬ್ಬರ ನೀಡಿದ ಈ ವ್ಯಕ್ತಿ ಫೋನ್ ಸ್ವೀಚ್ ಆಫ್ ಮಾಡಿ ಪರಾರಿಯಾಗಿದ್ದಾನೆ. ಇನ್ನು ನಕಲಿ ಗೊಬ್ಬರ ಸರಬರಾಜು ಮಾಡಿದ ವ್ಯಕ್ತಿಯ ವಿರುದ್ದ FIR ದಾಖಲಿಸಿಕೊಂಡಿರುವ ವಡಗೇರಾ ಪೊಲೀಸರು ಆರೋಪಿಯ ಬಂಧನಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: SSLC Result: ಮುಂದಿನ ವಾರ ಹೊರಬೀಳಲಿದೆ SSLC ಫಲಿತಾಂಶ; ರಿಸಲ್ಟ್​ ನೋಡಲು ಹೀಗೆ ಮಾಡಿ

ರೈತರಿಗೆ ಮೋಸ ಮಾಡಲು ಪ್ಲಾನ್​

ಸದ್ಯ ಮಳೆಗಾಲಕ್ಕೂ ಮೊದಲೇ ರೈತರಿಗೆ ಮೋಸ ಮಾಡಲು ಬಹುದೊಡ್ಡ ಸಂಚು ರೂಪಿಸಿದ್ದವರ ವಿರುದ್ದ ಸದ್ಯ ಪ್ರಕರಣ ದಾಖಲಾಗಿದೆ ಕೂಡಲೆ ಆರೋಪಿಯನ್ನ ಬಂದಿಸುತ್ತೆವೆ, ನಕಲಿ ಬೀಜಗೊಬ್ಬರ ಮಾರಾಟ ಮಾಡುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ರೈತರು ಕೂಡ ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಇರಿ ಎಂದು ಯಾದಗಿರಿ ಎಸ್ ಪಿ ಡಾ.ಸಿ ಬಿ ವೇದಮೂರ್ತಿ ತಿಳಿಸಿದ್ದಾರೆ.

ಇದನ್ನೂ ಓದಿ: Corona 4th Wave: "ಕೊರೋನಾದಿಂದ ಕಾಪಾಡಮ್ಮ" ಅಂತ ಸೋಂಕಿನ ಮಾರಿಯಮ್ಮನಿಗೆ ಪ್ರಾಣಿ ಬಲಿ ಕೊಟ್ಟ ಜನರು!

ರಸಗೊಬ್ಬರ ಖರೀದಿ ಮಾಡುವ ಮುನ್ನ ಎಚ್ಚರ

ಸದ್ಯ ಮಳೆಗಾಲ ಆರಂಭವಾಗಿದೆ, ರಸಗೊಬ್ಬರ ಹಾಗೂ ಬೀಜಕ್ಕೆ ಸಾಕಷ್ಠು ಬೇಡಿಕೆ ಹೆಚ್ಚಾಗುತ್ತೆ. ಇಂತಹ ಖದೀಮರು ಇದನ್ನೇ ಬಂಡವಾಳ ಮಾಡಿಕೊಂಡು ಈ ರೀತಿ ನಕಲಿ ಗೊಬ್ಬರ ತಯಾರು ಮಾಡಿ ರೈತರನ್ನ ಹಾಗೂ ವ್ಯಾಪಾರಸ್ಥರನ್ನ ವಂಚಿಸಲು ಮುಂದಾಗಿದ್ದಾರೆ. ಕೃಷಿ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಇಂತವ ವಂಚಕರ ವಿರುದ್ದ ಸೂಕ್ರ ಕ್ರ‌ಮ ಕೈಗೊಂಡ ರೈತರಿಗೆ ಆಗುವ ವಂಚನೆ ತಪ್ಪಿಸಬೇಕಿದೆ. ಮಳೆ ಆರಂಭ ಮುನ್ನವೇ ನಕಲಿ ಗೊಬ್ಬರ ಪೂರೈಕೆ ಮಾಡಿ ವ್ಯಾಪಾರಸ್ಥರಿಗೆ ಮೋಸ ಮಾಡುವ ಜಾಲದ ಮೋಸದಾಟ ಬೆಳಕಿಗೆ ಬಂದಿದೆ. ಇನ್ನೂ ಮುಂದೆ ರಸಗೊಬ್ಬರ ಖರೀದಿ ಮಾಡುವ ಮುನ್ನ ಎಚ್ಚರ ವಹಿಸಬೇಕಿದೆ.
Published by:Pavana HS
First published: