ಡಿಸಿಸಿ ಬ್ಯಾಂಕ್ ನಿರ್ದೇಶಕ ಹುದ್ದೆಯ ಮೇಲೆ ಕಣ್ಣು; ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೋದರನಿಂದ ನಕಲಿ ದಾಖಲೆ ಸೃಷ್ಟಿ?

ಡಿಸಿಸಿ ಬ್ಯಾಂಕ್ ಅಧಿಕಾರದ ಗದ್ದುಗೆ ಏರಲು ಬೆಳಗಾವಿ ಜಿಲ್ಲೆಯ ಪ್ರಮುಖ ರಾಜಕಾರಣಿಗಳು ಸಿದ್ದತೆ ಆರಂಭಿಸಿದ್ದಾರೆ. ಇದೇ ವೇಳೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ್ ಹಟ್ಟಿಹೊಳಿ ವಿರುದ್ದ ನಕಲಿ ದಾಖಲೆ ಸೃಷ್ಠಿ ಮಾಡಿ ಪಿಕೆಪಿಎಸ್ ಗೆ ನಿರ್ದೇಶಕರಾಗಿರೋ ಆರೋಪ ಕೇಳಿ ಬಂದಿದೆ.

news18-kannada
Updated:January 4, 2020, 1:45 PM IST
ಡಿಸಿಸಿ ಬ್ಯಾಂಕ್ ನಿರ್ದೇಶಕ ಹುದ್ದೆಯ ಮೇಲೆ ಕಣ್ಣು; ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೋದರನಿಂದ ನಕಲಿ ದಾಖಲೆ ಸೃಷ್ಟಿ?
ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ
  • Share this:
ಬೆಳಗಾವಿ (ಜ.4):  ಬೆಳಗಾವಿ ಜಿಲ್ಲೆಯಲ್ಲಿ ರಾಜಕಾರಣಿಗಳು ಇದೀಗ ಮತ್ತೊಂದು ಮಹತ್ವದ ಚುನಾವಣೆಗೆ ಸಿದ್ದತೆ ಆರಂಭಿಸಿದ್ದಾರೆ. ಅದೇ ಬೆಳಗಾವಿಯ ಡಿಸಿಸಿ ಬ್ಯಾಂಕ್ ಚುನಾವಣೆ. ಈ ಚುನಾವಣೆ ಬೆಳಗಾವಿ ಜಿಲ್ಲೆ, ರಾಜ್ಯದ ರಾಜಕೀಯದ ದಿಕ್ಕೂ ಬದಲಿಸುವ ಶಕ್ತಿಯನ್ನು ಹೊಂದಿದೆ.  ಏಪ್ರಿಲ್- ಮೇ ತಿಂಗಳಲ್ಲಿ ಬೆಳಗಾವಿ ಜಿಲ್ಲೆಯ ಸಹಕಾರಿ ಸಂಘದ ಚುನಾವಣೆ ನಡೆಯಲಿದೆ.

ಡಿಸಿಸಿ ಬ್ಯಾಂಕ್ ಅಧಿಕಾರದ ಗದ್ದುಗೆ ಏರಲು ಬೆಳಗಾವಿ ಜಿಲ್ಲೆಯ ಪ್ರಮುಖ ರಾಜಕಾರಣಿಗಳು ಸಿದ್ದತೆ ಆರಂಭಿಸಿದ್ದಾರೆ. ಇದೇ ವೇಳೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ್ ಹಟ್ಟಿಹೊಳಿ ನಕಲಿ ದಾಖಲೆ ಸೃಷ್ಠಿ ಮಾಡಿ ಪಿಕೆಪಿಎಸ್ ಗೆ ನಿರ್ದೇಶಕರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದ್ದಗೌಡ ಮೊದಗಿ ದಾಖಲೆ ಬಿಡುಗಡೆ ಮಾಡಿದ್ದಾರೆ. ಚೆನ್ನರಾಜ್ ಹಟ್ಟಿಹೊಳಿ ಮೂಲತಃ ಖಾನಾಪುರ ತಾಲೂಕಿನ ಹಟ್ಟಿಹೊಳಿ ಗ್ರಾಮದ ನಿವಾಸಿಯಾಗಿದ್ದಾರೆ. ಆದರೇ ಚೆನ್ನರಾಜ್ ಹಟ್ಟಿಹೊಳಿ ಬೆಳಗಾವಿ ತಾಲೂಕಿನ ಮೊದಗಾ ಗ್ರಾಮದಲ್ಲಿ ನಕಲಿ ರಹವಾಸಿ ಪತ್ರ ಪಡೆದು ಪಿಕೆಪಿಎಸ್ ಸದಸ್ಯರಾಗಿ ನಂತರ ಸಾಮಾನ್ಯ ಕ್ಷೇತ್ರದಿಂದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಗ್ರಾಪಂ ಸದಸ್ಯ ಬಾಬು ಕಾಳೆಯಿಂದ ಚನ್ನರಾಜ್ ಹಟ್ಟಿಹೊಳಿ ರಹವಾಸಿ ಪ್ರಮಾಣ ಪತ್ರ ಪಡೆದಿದ್ದಾರೆ. ನಿಯಮದ ಪ್ರಕಾರ ರಹವಾಸಿ ಪ್ರಮಾಣ ಪತ್ರ ಕೊಡುವ ಅಧಿಕಾರ ಇರೋದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾತ್ರ. ಈ ಬಗ್ಗೆ ಸೂಕ್ತ  ತನಿಖೆ ನಡೆಸಬೇಕು ಎಂದು ಸಿದ್ದಗೌಡ ಮೊದಗಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ದೇವೇಗೌಡರು ಪ್ರಧಾನಿ ಹುದ್ದೆ ಕಳೆದುಕೊಂಡಿದ್ದು ಹೇಗೆ ಗೊತ್ತಾ?; ರಹಸ್ಯ ಬಿಚ್ಚಿಟ್ಟ ಎಸ್​.ಎಂ. ಕೃಷ್ಣ

ಚೆನ್ನರಾಜ್ ಹಟ್ಟಿಹೊಳಿ ಮುಂಬರುವ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಮೊದಲು ಪಿಕೆಪಿಎಸ್ ನಿರ್ದೇಶಕರಾಗಿ ಆಯ್ಕೆಯಾಗಿರಬೇಕು. ಈ ಹಿನ್ನೆಲೆಯಲ್ಲಿ ಚೆನ್ನರಾಜ್ ಹಟ್ಟಿಹೊಳಿ ಎಲ್ಲ ರೀತಿಯ ಸಿದ್ದತೆಯನ್ನು ಆರಂಭಿಸಿದ್ದಾರೆ.  ಸಿದ್ದಗೌಡ ಮೊದಗಿ ಆರೋಪದ ಬಗ್ಗೆ ಚನ್ನರಾಜ್ ಹಟ್ಟಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

'ಗ್ರಾಮ ಪಂಚಾಯಿತಿಯಿಂದ ಪಡೆದ ಪತ್ರವನ್ನು ಮಾತ್ರ ಮಾಧ್ಯಮಗಳ ಮುಂದೆ ತೋರಿಸಿದ್ದಾರೆ. 15 ತಿಂಗಳ ಹಿಂದೆ ಮೊದಗಾ ಸೊಸೈಟಿ ಸದಸ್ಯನಾಗಿದ್ದು, 1 ವರ್ಷದ ಹಿಂದೆ ನಿರ್ದೇಶಕನಾಗಿದ್ದಾನೆ. ಇದರ ಹಿಂದೆ ಮೊದಗಿ ಅವರ ಸ್ವ ಇಚ್ಛೆಯಿಂದ ದಾಖಲೆ ಬಿಡುಗಡೆ ಮಾಡಿದ್ದಾರೋ ಅಥವಾ ಹಿಂದೆ ಯಾರಿದ್ದಾರೋ ಕಾದು ನೋಡಬೇಕು. ರೈತರ ಪರ ಕೆಲಸ ಮಾಡಲು ನಿರ್ದೇಶಕನಾಗಿದ್ದೇನೆ. ಮೊದಗಾ ಗ್ರಾಮದಲ್ಲಿ ನನ್ನ ಜಮೀನು ಇದೆ ನಾನು ಕೃಷಿ ಮಾಡುತ್ತೇನೆ. ಮೊದಗಾ ಗ್ರಾಮದಲ್ಲಿ ಮತದಾನ ಪಟ್ಟಿಯಲ್ಲಿ ಸೇರಿಲು ಈಗಾಗಲೇ ಅರ್ಜಿ ಸಲ್ಲಿಸಿದ್ದೇನೆ. ಸಿದ್ದಗೌಡ ಮೊದಗಿ ಜನರ ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದ್ದಾರೆ' ಎಂದು ಚನ್ನರಾಜ್ ಹಟ್ಟಿಹೊಳಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಅಧಿಕಾರದ ಗದ್ದುಗೆ ಏರಲು ರಾಜಕಾರಣಿಗಳು ಸಿದ್ದತೆ ಆರಂಭಿಸಿದ್ದಾರೆ. ಈಗಾಗಲೇ ಜಿಲ್ಲೆಯ ಅನೇಕ ಶಾಸಕರು, ಮುಖಂಡರು ಡಿಸಿಸಿ ಬ್ಯಾಂಕ್ ಅಧಿಕಾರದ ಮೇಲೆ ಕಣ್ಣಿಟ್ಟಿದ್ದಾರೆ. ರೈತರ ಜತೆಗೆ ನೇರ ಸಂಪರ್ಕಕ್ಕೆ ಈ ಚುನಾವಣೆ ಅನಕೂಲವಾಗಲಿದೆ. ಇಂತಹ ಸಂದರ್ಭದಲ್ಲಿ ಆರೋಪ, ಪ್ರತ್ಯಾರೋಪಗಳು ಕೇಳಿ ಬಂದಿವೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ.
First published:January 4, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ