ಕೋಲಾರ(ಮಾ.01): ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ ಮೊದಲ ಸ್ಥಾನದಲ್ಲಿರೊ ಸಿ.ಬೈರೇಗೌಡ ಬಡಾವಣೆಯಲ್ಲಿ ಸಾರ್ವಜನಿಕರು ಬೆಚ್ವಿ ಬೀಳಿಸುವಂತ ದರೋಡೆ (Robbery) ಪ್ರಕರಣ ನಡೆದಿದೆ. ಇಲ್ಲಿನ ಉದ್ಯಮಿ ರಮೇಶ್ (Businessman Ramesh) ಎನ್ನುವರ ಮನೆಗೆ ಸಿ.ಬಿ.ಐ ಅಧಿಕಾರಿಗಳೆಂದು ಹೇಳಿ ಯಾಮಾರಿಸಿದ ದರೋಡೆಕೋರರು, ಉದ್ಯಮಿ ಮನೆಗೆ ನುಗ್ಗಿ, ಸಿನಿಮೀಯ ರೀತಿಯಲ್ಲಿ ಲಕ್ಷಾಂತರ ರೂಪಾಯಿ ದೋಚಿ ಪರಾರಿಯಾಗಿದ್ದಾರೆ. ಬಡಾವಣೆಯ 2 ನೇ ಕ್ರಾಸ್ ಮುಖ್ಯ ರಸ್ತೆಯಲ್ಲಿರೊ ಮೂರಂತಸ್ತಿನ ರಮೇಶ್ ರ ಮನೆಗೆ, ನೆನ್ನೆ ರಾತ್ರಿ 8 ರ ಗಂಟೆ ವೇಳೆಗೆ ನುಗ್ಗಿದ ಮೂವರು ದರೋಡೆಕೋರರು, ತಾವು ಸಿ.ಬಿ.ಐ ಅಧಿಕಾರಿಗಳು, ನಿಮ್ಮ ಸಹಿ ಬೇಕು, ಬಾಗಿಲು ತೆಗೆಯಿರಿ ಎಂದು ಹಿಂದಿಯಲ್ಲಿ (Hindi) ಕೇಳಿದ್ದಾರೆ. ಇದಕ್ಕೆ ಮೊದಲು ಅನುಮಾನಗೊಂಡ ರಮೇಶ್ ಪತ್ನಿ, ಪ್ರಶ್ನೆಗಳ ಸುರಿಮಳೆಗೈದ ಹಿನ್ನಲೆ, ಮನೆಯೊಳಕ್ಕೆ ನುಗ್ಗಿದ ಮೂವರು, ರಮೇಶ್, ಹಾಗು ಪತ್ನಿ ಮತ್ತು ಪುತ್ರನನ್ನ ರೂಮ್ನೊಳಗೆ ಕೂಡಿಹಾಕಿದ್ದಾರೆ.
ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ಮೂವರಿಗೆ, ಸಹಾಯ ಮಾಡಲು ಮತ್ತೆ ಇಬ್ಬರು ಆಗಮಿಸಿದ್ದು, ಮನೆಯವರಿಗೆ ಗನ್ (Gun) ಹಾಗು ಮಾರಕಾಸ್ತ್ರಗಳನ್ನ ತೋರಿಸಿ ಮನೆಯಲ್ಲಿದ್ದ 25 ಲಕ್ಷ ಹಣ, ಒಂದು ಕೆಜಿಗು ಅಧಿಕ ಚಿನ್ನ, ಬೆಳ್ಳಿ ವಸ್ತುಗಳನ್ನ ಕದ್ದೊಯ್ದಿದ್ದಾರೆ. ದರೋಡೆ ನಂತರ ರಮೇಶ್, ಪತ್ನಿ ಹಾಗು ಮಗ ನನ್ನ ದೇವರ ಮನೆಯಲ್ಲಿ ಕೂಡಿಹಾಕಿ, ಕೈಗೆ ದಾರವನ್ನು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ.
ತಪ್ಪಿಸಿಕೊಂಡು ಹೊರಗೆ ಬಂದ ದಂಪತಿ
ಆದರು ತಪ್ಪಿಸಿಕೊಂದು ಸ್ಥಳದಿಂದ ಹೊರಗೆ ಬಂದ ಮನೆ ಮಾಲೀಕ ರಮೇಶ್, ಜೋರಾಗಿ ಕಿರುಚಾಡಿದ ನಂತರ ಸ್ಥಳಕ್ಕೆ ನೆರೆಹೊರೆಯ ಜನರು ಆಗಮಿಸಿ ಬಳಿಕ ಪೊಲೀಸ್ ಠಾಣೆಗೆ (Police Station) ಮಾಹಿತಿ ನೀಡಿದ್ದಾರೆ.
ಪ್ರೀಲ್ಲಾನ್ಡ್ ದರೋಡೆ
ಇನ್ನು ಘಟನೆ ನಂತರ ಮನೆಗೆ ಅಳವಡಿಸಿದ್ದ ಸಿಸಿ ಟಿವಿ (CCTV) ದೃಶ್ಯಗಳ ಡಿ.ವಿ.ಆರ್ ನಾಶ ಪಡಿಸಿದ ದುಷ್ಕರ್ಮಿಗಳು, ಅದನ್ನು ಬಿಡದೆ ತೆಗೆದುಕೊಂಡು ಹೊಗಿದ್ದಾರೆ. ಉದ್ಯಮಿ ರಮೇಶ್ ಚೀಟಿ ವ್ಯವಹಾರ ಮಾಡ್ತಿದ್ದು, ಜೊತೆಗೆ ದೊಡ್ಡ ಮೊತ್ತದ ಪೈನಾನ್ಸ್ ವ್ಯವಹಾರ (Finance) ಮಾಡುತ್ತಿದ್ದರು ಎನ್ನಲಾಗಿದೆ. ಹಣದ ವ್ಯವಹಾರದ ಮಾಹಿತಿ ಅರಿತುಕೊಂಡೇ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ.
ರಾತ್ರಿ 2 ಗಂಟೆಯವರೆಗೂ ಪರಿಶೀಲನೆ ನಡೆಸಿದ ಅಧಿಕಾರಿಗಳು
ಕೋಲಾರ ನಗರ ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳಕ್ಕೆ ಕೋಲಾರ ಎಸ್ಪಿ ದೇವರಾಜ್ ಭೇಟಿ ನೀಡಿ, ರಮೇಶ್ ಅವರ ಮನೆಯವರನ್ನ ವಿಚಾರಣೆ ನಡೆಸಿದ್ದಾರೆ. ರಾತ್ರಿ 2 ಗಂಟೆವರೆಗೂ ಬಡಾವಣೆಯ ನಿವಾಸದ ಸುತ್ತಮುತ್ತಲ ಮನೆಗಳ ಸಿ.ಸಿ.ಟಿವಿ ಪರಿಶೀಲನೆ ನಡೆಸಿದ ಪೊಲೀಸರು, ಮೂವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುವುದು, ಹಾಗು ಘಟನೆ ನಡೆದಾಗ ತೆರಳಿದ ಒಂದು ಹುಂಡೈ ಕಾರಿನ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: Bengaluru: ನಂಬರ್ ಕೇಳ್ತಾರೆ, ಫೋಟೋ ಕೇಳ್ತಾರೆ ಆಮೇಲೆ ಹಣ ಕೀಳ್ತಾರೆ! ಆ್ಯಪ್ ಬಳಸೋ ಮಹಿಳೆಯರೇ ಹುಷಾರ್
ಆರೋಪಿಗಳ ಪತ್ತೆಗೆ ನಾಲ್ಕು ಸರ್ಕಲ್ ಇನ್ಸ್ಪೆಕ್ಟರ್ ಗಳ ನೇತೃತ್ವದಲ್ಲಿ 15 ಮಂದಿ ಸಿಬ್ಬಂದಿ ಜೊತೆಗೂಡಿ, ತಂಡಗಳನ್ನ ರಚಿಸಲಾಗಿದ್ದು ಆದಷ್ಟು ಬೇಗನೇ ಆರೋಪಿಗಳನ್ನ ಪತ್ತೆಹಚ್ಚಲಾಗುವುದು ಎಂದು ಎಸ್ಪಿ ದೇವರಾಜ್ ತಿಳಿಸಿದ್ದಾರೆ.
ಖಾಸಗಿ ಜೀಪ್ ನಲ್ಲಿ ಸ್ಥಳಕ್ಕೆ ಬಂದ ಎಸ್ಪಿ ದೇವರಾಜ್
ಕೋಲಾರ ತಾಲೂಕಿನ ಕೋರಗಂಡಹಳ್ಳಿ ಗ್ರಾಮದಲ್ಲಿಯೇ ಇದ್ದ ಎಸ್ಪಿ ದೇವರಾಜ್ ಅವರು, ದರೋಡೆ ಮಾಹಿತಿ ತಿಳಿದ ಕೂಡಲೇ ತಮ್ಮ ಖಾಸಗಿ ಜೀಪ್ ನಲ್ಲಿಯೇ ಬೈರೇಗೌಡ ನಗರದ ರಮೇಶ್ ನಿವಾಸಕ್ಕೆ ಆಗಮಿಸಿ ವಿಚಾರಣೆ ನಡೆಸಿ, ಘಟನೆಯ ಮಾಹಿತಿ ಕಲೆಹಾಕಿದರು. ಕೋಲಾರ ತಾಲೂಕಿನವರೇ ಆದ ದೇವರಾಜ್ ರಿಗೆ, ಬೈರೇಗೌಡ ಬಡಾವಣೆಯಲ್ಲಿನ ಪರಿಚಿತರು ಇರುವ ಕಾರಣ, ಘಟನೆ ನಡೆದ ಸುತ್ತಮುತ್ತಲಿನ ಮನೆಗಳಿಗೆ ತೆರಳಿ ಎಲ್ಲರ ಮನೆಗಳ ಸಿಸಿ ಟಿವಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Extramartial Affair: ಗಂಡನೊಂದಿಗೆ ಚಕ್ಕಂದ ಆಡುತ್ತಿದ್ದ ಯುವತಿಯ ಖಾಸಗಿ ಅಂಗವನ್ನು ಡ್ಯಾಮೇಜ್ ಮಾಡಿದ ಹೆಂಡತಿ! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ