ಮಾಸ್ಕ್ ಧರಿಸಿ ಪೊಲೀಸ್ ಕಾನ್ಸ್​ಟೇಬಲ್ ಪರೀಕ್ಷೆಗೆ ಬಂದ ನಕಲಿ ಅಭ್ಯರ್ಥಿ..!

ಕೋವಿಡ್‌ನಿಂದ ಮಾಸ್ಕ್ ಧರಿಸುವುದನ್ನೇ ಪ್ರಯೋಜನೆ ಮಾಡಿಕೊಂಡ ನಕಲಿ ಅಭ್ಯರ್ಥಿ ಮಾಸ್ಕ್ ಧರಿಸಿಕೊಂಡು ಬೇರೆಯವರ ಹೆಸರಿನಲ್ಲಿ ಪರೀಕ್ಷೇ ಬರೆದು ವಂಚನೆಗೆ ಯತ್ನಿಸಿ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಪರೀಕ್ಷಾ ಕೇಂದ್ರ

ಪರೀಕ್ಷಾ ಕೇಂದ್ರ

  • Share this:
ನೆಲಮಂಗಲ (ಸೆಪ್ಟೆಂಬರ್ 20): ಕೊರೋನಾ ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಲೇ ಇದೆ. ಸೋಂಕು ತಡೆಗಟ್ಟಲು ಸರ್ಕಾರ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನ ಕಡ್ಡಾಯಗೊಳಿಸಿದೆ. ಮಾಸ್ಕ್ ಧರಿಸುವುದನ್ನೇ ಬಂಡವಾಳ ಮಾಡಿಕೊಂಡ ನಕಲಿ ವ್ಯಕ್ತಿಯೋರ್ವ ಇಂದು ನಡೆಯುತ್ತಿದ್ದ ಸಿವಿಲ್ ಪೊಲೀಸ್ ಕಾನ್ಸ್​ಟೇಬಲ್ ಲಿಖಿತ ಪರೀಕ್ಷೇಗೆ ಹಾಜರಾಗಿದ್ದ. ಆದರೆ ಅಧಿಕಾರಿಗಳ ಕರ್ತವ್ಯ ಪ್ರಜ್ಞೆಯಿಂದಾಗಿ ಸಿಕ್ಕಿಬಿದ್ದಿದ್ದಾನೆ.  ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಗಣೇಶನಗುಡಿ ಬಳಿ ಇರುವ ಸಿದ್ದಗಂಗಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಗರೀಕ ಪೊಲೀಸ್ ಕಾನ್ಸ್​ಟೇಬಲ್ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆ ವೇಳೆ ನಕಲಿ ಅಭ್ಯರ್ಥಿಯೊಬ್ಬ ಸಿಕ್ಕಿಬಿದ್ದಿದ್ದಾನೆ. ಹೊಸಕೋಟೆ ತಾಲೂಕಿನ ಗೊಣಕನಹಳ್ಳಿ ನಿವಾಸಿ ಮಂಜುನಾಥ್ (21) ಅಸಲಿ ಅಭ್ಯರ್ಥಿಯಾಗಿದ್ದ. ಆದರೆ ಆತನ ಹೆಸರಿನಲ್ಲಿ ಕೋಲಾರ ಜಿಲ್ಲೆ‌ ಶ್ರೀನಿವಾಸಪುರ ತಾಲೂಕಿನ ತೇರನಹಳ್ಳಿ ನಿವಾಸಿ  ನಕಲಿ ಅಭ್ಯರ್ಥಿ ಶಿವಪ್ರಸಾದ್ (28) ಪರೀಕ್ಷೆ ಬರೆಯಲು ಬಂದಿದ್ದನು. ಆದರೆ ಹೆಚ್ಚುವರಿ ಎಸ್ಪಿ ಲಕ್ಷ್ಮಿ ಗಣೇಶ್‌ರಿಂದ ಪರಿಶೀಲನೆ ವೇಳೆ ನಕಲಿ ಅಭ್ಯರ್ಥಿ ಸಿಕ್ಕಿಬಿದ್ದಿದ್ದಾನೆ.

ಕೋವಿಡ್‌ನಿಂದ ಮಾಸ್ಕ್ ಧರಿಸುವುದನ್ನೇ ಪ್ರಯೋಜನೆ ಮಾಡಿಕೊಂಡ ನಕಲಿ ಅಭ್ಯರ್ಥಿ ಮಾಸ್ಕ್ ಧರಿಸಿಕೊಂಡು ಬೇರೆಯವರ ಹೆಸರಿನಲ್ಲಿ ಪರೀಕ್ಷೇ ಬರೆದು ವಂಚನೆಗೆ ಯತ್ನಿಸಿ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ‌.
Published by:zahir
First published: