ವರ್ಗಾವಣೆಗಾಗಿ ಸಿಎಂ ಬಿಎಸ್​ವೈ ಕಚೇರಿ ಹೆಸರಿನಲ್ಲಿ ನಕಲಿ ಕರೆ; ತನಿಖೆಗೆ ಆದೇಶ

ಬೆಸ್ಕಾಂನಲ್ಲಿ ಕೆಂಗೇರಿಯ ಕಾರ್ಯಪಾಲನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನರಸಿಂಹಮೂರ್ತಿ, ಶ್ರೀಕಾಂತ್​ ಹಿಂದಿನ ಜಾಗದಲ್ಲಿಯೇ ಮುಂದುವರೆಯುವಂತೆ ತಿಳಿಸಿ ಮುಖ್ಯಮಂತ್ರಿ ಕಚೇರಿಯಿಂದ ಕರೆ ಬಂದಿತ್ತು.

Seema.R
Updated:November 8, 2019, 4:52 PM IST
ವರ್ಗಾವಣೆಗಾಗಿ ಸಿಎಂ ಬಿಎಸ್​ವೈ ಕಚೇರಿ ಹೆಸರಿನಲ್ಲಿ ನಕಲಿ ಕರೆ; ತನಿಖೆಗೆ ಆದೇಶ
ಸಿಎಂ ಬಿ.ಎಸ್.ಯಡಿಯೂರಪ್ಪ
  • Share this:
ಬೆಂಗಳೂರು (ನ.08): ವರ್ಗಾವಣೆ  ರದ್ದು ಮಾಡುವ ಸಂಬಂಧ ಸರ್ಕಾರಿ ನೌಕರನೊಬ್ಬ ಮುಖ್ಯಮಂತ್ರಿ ಹೆಸರಿನಲ್ಲಿ ನಕಲಿ ಕರೆ ಮಾಡಿ ಆದೇಶ ಮಾರ್ಪಡಿಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿ  ಕಚೇರಿ ಸೂಚಿಸಿದೆ. 

ಬೆಸ್ಕಾಂನಲ್ಲಿ ಕೆಂಗೇರಿಯ ಕಾರ್ಯಪಾಲನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನರಸಿಂಹಮೂರ್ತಿ, ಶ್ರೀಕಾಂತ್​ ಹಿಂದಿನ ಜಾಗದಲ್ಲಿಯೇ ಮುಂದುವರೆಯುವಂತೆ ತಿಳಿಸಿ ಮುಖ್ಯಮಂತ್ರಿ ಕಚೇರಿಯಿಂದ ಕರೆ ಬಂದಿತ್ತು.

kptcl
ಕೆಪಿಟಿಸಿಎಲ್​ ಕಚೇರಿಗೆ ಹೊರಡಿಸಿರುವ ಸೂಚನೆ

ಕೆಪಿಟಿಸಿಎಲ್​ ಉದ್ಯೋಗಿಯಿಂದ ಈ ನಕಲಿ ಕರೆ ಬಂದಿದ್ದು, ಸಿಎಂ ಕಚೇರಿಯಿಂದ ಕರೆ ಮಾಡಲಾಗಿದೆ ಎಂದು ಅಧಿಕಾರಿಗಳನ್ನು ನಂಬಿಸಲಾಗಿದೆ. ಸಿಎಂ ಕಚೇರಿಯಿಂದಲೇ ಕರೆ ಬಂದ ಹಿನ್ನೆಲೆ ಅಧಿಕಾರಿಗಳು ವರ್ಗಾವಣೆ ಆದೇಶ ರದ್ದು ಮಾಡಿದ್ದರು. ಬಳಿಕ ಈ ಕರೆ ನಕಲಿ ಎಂದು ತಿಳಿದು ಬಂದಿದ್ದು, ಈ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳ ಕಚೇರಿಯಿಂದ ಸೂಚನೆ ಹೊರಡಿಸಲಾಗಿದೆ. ಈ ಕುರಿತು ವರದಿ ನೀಡುವಂತೆ ಕೆಪಿಟಿಸಿಎಲ್​ ಅಧಿಕಾರಿಗಳಿಗೆ ತಿಳಿಸಿದ್ದಾರೆ.

First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading