Bengaluru Airport: ವಿಮಾನದಲ್ಲಿ ಹುಸಿ ಬಾಂಬ್​ ಬೆದರಿಕೆ ಪತ್ರ ಪತ್ತೆ; ಫ್ಲೈಟ್​​ ಸ್ಥಳಾಂತರ ಮಾಡಿ ತಪಾಸಣೆ

ಪ್ರತ್ಯೇಕ ಸ್ಥಳಕ್ಕೆ ಫ್ಲೈಟ್ ಸ್ಥಳಾಂತರ ಮಾಡಿ ತೀವ್ರ ತಪಾಸಣೆ ನಡೆಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ, CISF ನಿಂದ ತಪಾಸಣೆ ಮಾಡಿದ್ರು. ಪ್ರತಿಯೊಬ್ಬ ಪ್ರಯಾಣಿಕರ ಕೈ ಬರಹ ಮಾದರಿ ಸಂಗ್ರಹ ಮಾಡಲಾಗಿದೆ. ಹುಸಿ ಬಾಂಬ್ ಕರೆ ಹಿನ್ನೆಲೆ 3 ಗಂಟೆ ತಡವಾಗಿ ವಿಮಾನ ಲ್ಯಾಂಡ್​ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಆ.08): ಕೆಐಎಎಲ್ ಏರ್​ಪೋರ್ಟ್​ನಲ್ಲಿ (KIAL Airport) ಲ್ಯಾಂಡ್ ಆದ ಫ್ಲೈಟ್ ನಲ್ಲಿ ಹುಸಿ ಬಾಂಬ್ ಬೆದರಿಕೆ (Fake Bomb Threat) ಸಂದೇಶ ಪತ್ತೆಯಾಗಿದೆ. ನಿನ್ನೆ ರಾತ್ರಿ 9:30ಕ್ಕೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೈಪುರದಿಂದ ಬೆಂಗಳೂರಿಗೆ 175 ಪ್ರಯಾಣಿಕರನ್ನ (Passengers) ಹೊತ್ತು ತಂದಿದ್ದ ಇಂಡಿಗೋ ವಿಮಾನದಲ್ಲಿ ಹುಸಿ ಬಾಂಬ್​ ಪತ್ರ ಸಿಕ್ಕಿದೆ. ಫ್ಲೈಟ್ ಟಾಯ್ಲೆಟ್​ನ ಟಿಶ್ಯೂ ಪೇಪರ್ ಮೇಲೆ ಗೀಚಿದ ಅನಾಮದೇಯ ಬರಹ ಸಿಕ್ಕಿದೆ.

ಹಿಂದಿ ಭಾಷೆಯಲ್ಲಿ ಬರೆದಿದ್ದ ಬರಹ

"ಲ್ಯಾಂಡ್ ನಾ ಕರ್ನಾ, ಇಸ್ ಪ್ಲೈಟ್ ಮೇ ಬಾಂಬ್ ಹೈ" ಎಂದು ಹಿಂದಿ ಭಾಷೆಯಲ್ಲಿ ಬರೆದಿದ್ದ ಬರಹ ಪತ್ತೆಯಾಗಿದೆ. ವಿಮಾನದ ಪೈಲಟ್ ಗಮನಕ್ಕೆ ಬಂದ ಕೂಡಲೇ KIAL ಭದ್ರತಾ ಏಜೆನ್ಸಿ ಸಂಪರ್ಕಿಸಿ, ಅನುಮತಿ ಬಳಿಕ ಫ್ಲೈಟ್ ಲ್ಯಾಂಡ್  ಬರಹವುಳ್ಳ ಟಿಶ್ಯೂ ಪೇಪರ್ ಗಮನಿಸಿದ ಸಿಬ್ಬಂದಿ ಕಾಕ್ ಪಿಟ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ CISF ಮತ್ತು ವಾಯು ಸಂಚಾರ ನಿಯಂತ್ರಣ ಘಟಕ ಸಿಬ್ಬಂದಿ ಸಂಪರ್ಕಮಾಡಿದ್ದಾರೆ.



ಫ್ಲೈಟ್ ಸ್ಥಳಾಂತರ ಮಾಡಿ ತೀವ್ರ ತಪಾಸಣೆ

ಪ್ರತ್ಯೇಕ ಸ್ಥಳಕ್ಕೆ ಫ್ಲೈಟ್ ಸ್ಥಳಾಂತರ ಮಾಡಿ ತೀವ್ರ ತಪಾಸಣೆ ನಡೆಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ, CISF ನಿಂದ ತಪಾಸಣೆ ಮಾಡಿದ್ರು. ಪ್ರತಿಯೊಬ್ಬ ಪ್ರಯಾಣಿಕರ ಕೈ ಬರಹ ಮಾದರಿ ಸಂಗ್ರಹ ಮಾಡಲಾಗಿದೆ. ಹುಸಿ ಬಾಂಬ್ ಕರೆ ಹಿನ್ನೆಲೆ 3 ಗಂಟೆ ತಡವಾಗಿ ವಿಮಾನ ಲ್ಯಾಂಡ್​ ಆಗಿದೆ.

ಇದನ್ನೂ ಓದಿ: Selfie Death: ಸೆಲ್ಫಿ ಹುಚ್ಚಾಟ, ನೀರಸಾಗರದಲ್ಲಿ ಕೊಚ್ಚಿ ಹೋದ ಯುವಕ

ಶಾಲೆಗೆ ಬಾಂಬ್ ಬೆದರಿಕೆ ಕರೆ 

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ (Bengaluru) ಖಾಸಗಿ ಶಾಲೆಗಳಿಗೆ (Privet Schools) ಬಾಂಬ್ ಬೆದರಿಕೆ ಕರೆ (Bomb threat call) ಬಂದಿತ್ತು. ಇದರಿಂದ ಶಿಕ್ಷಕರು, ಪೋಷಕರು, ಮಕ್ಕಳು ಆತಂಕಕ್ಕೆ ಒಳಗಾದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಪರಿಶೀಲನೆ ವೇಳೆ ಅವೆಲ್ಲ ಹುಸಿ ಬಾಂಬ್ ಕರೆ (Hoax Bomb Call) ಎನ್ನುವುದು ಸಾಬೀತಾಗಿತ್ತು. ಬೆಂಗಳೂರು ನಗರದ ಮತ್ತೊಂದು ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಬಂದಿತ್ತು. ಆರ್‌ಆರ್‌ ನಗರದಲ್ಲಿರುವ (RR Nagar) ಡಿಕೆ ಶಿವಕುಮಾರ್ (DK Shivakumar) ಮಾಲೀಕತ್ವದ ಹಿಲ್ ವ್ಯೂ ಪಬ್ಲಿಕ್ ಶಾಲೆಗೆ ಬಾಂಬ್ ಬೆದರಿಕೆ ಇಮೇಲ್ (Email) ಬಂದಿತ್ತು. ನಿನ್ನೆ ಇಮೇಲ್ ಮೂಲಕ ಕಿಡಿಗೇಡಿಗಳು ಬೆದರಿಕೆ ಹಾಕಿದ್ದು, ಇದೀಗ ಶಿಕ್ಷಕರು, ಪೋಷಕರು ಹಾಗೂ ಮಕ್ಕಳಲ್ಲಿ ಆತಂಕ ಶುರುವಾಗಿತ್ತು.

ಪಬ್ ಜಿ ಆಟಕ್ಕಾಗಿ ರೈಲ್ವೇ ಪೊಲೀಸರಿಗೆ ಹುಸಿ ಬಾಂಬ್ ಕರೆ

ಇತ್ತಿಚಿನ ದಿನಗಳಲ್ಲಿ ಹುಸಿ ಬಾಂಬ್ ಕರೆಗಳು ಹೆಚ್ಚಾಗಿವೆ.  ಮಕ್ಕಳ ಕೈಗ ತುಂಬಾ ಸಮಯ ಫೋನ್ (Phone) ಕೊಡಬಾರದು ಎಂದು ಹಿರಿಯರು ಹೇಳುತ್ತಾರೆ. ಆದರೆ ಇಂದಿನ ಮಕ್ಕಳಿಗೆ (Children)ಮೊಬೈಲ್ (Mobile) ಇಲ್ಲ ಅಂದ್ರೆ ಊಟ ಸಹ ಸೇರಲ್ಲ. ಆನ್ ಲೈನ್ (Online Video) ನಲ್ಲಿ ವಿಡಿಯೋ ನೋಡೋದಕ್ಕೆ ಅಡಿಕ್ಟ್ ಆದರೆ ಆಟವನ್ನು ಸಹ ಮಕ್ಕಳು ಮರೆಯುತ್ತಾರೆ. ಇನ್ನು ಗೇಮ್ (Games) ಆಡೋದು ಅಭ್ಯಾಸವಾದ್ರೆ ಮಾನಸಿಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಪಬ್ ಜಿ ಗೇಮ್ (PUBG Game) ನಿಂದ ಎಷ್ಟೋ  ಜನರು ಹುಚ್ಚರಾಗಿ ಪ್ರಾಣ ಸಹ ಕಳೆದುಕೊಂಡಿರುವ ಉದಾಹರಣೆಗಳು ನಮ್ಮ ಮುಂದಿವೆ. ಇದೀಗ ಬೆಂಗಳೂರಿನ (Bengaluru Boy) 12 ವರ್ಷದ ಬಾಲಕ ಪಬ್ ಜಿ ಆಟಕ್ಕಾಗಿ ರೈಲ್ವೇ ಪೊಲೀಸರಿಗೆ (Railway Police) ಕರೆ ಮಾಡಿ ಯಲಹಂಕ ನಿಲ್ದಾಣದಲ್ಲಿ ಬಾಂಬ್ ಇರೋದಾಗಿ ಸುಳ್ಳು ಹೇಳಿದ್ದಾನೆ.

ಇದನ್ನೂ ಓದಿ: Bengaluru Mosque: ಒತ್ತುವರಿ ಆರೋಪ, ಮಸೀದಿ ಕೆಡವಲು ಮುಂದಾದ ಬಿಬಿಎಂಪಿ

ಮಾರ್ಚ್ 30 ರಂದು ರೈಲ್ವೇ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾನೆ. ಯಲಹಂಕ ರೈಲು ನಿಲ್ದಾಣದಲ್ಲಿ ಬಾಂಬ್ ಇದೆ ಎಂದು ಸುಳ್ಳು ಹೇಳಿ ಕರೆ ಕಟ್ ಮಾಡಿದ್ದಾನೆ. ಫೋನ್ ಕರೆ ಬಂದ ಬಳಿಕ ಎಚ್ಚೆತ್ತ ಪೊಲೀಸರು ಪ್ರಯಾಣಿಕರನ್ನು ಹೊರಗೆ ಕಳುಹಿಸಿ ಪರಿಶೀಲನೆ ನಡೆಸಿದ್ದಾರೆ.  ಮುನ್ನೆಚ್ಚರಿಕೆ ಕ್ರಮವಾಗಿ 90 ನಿಮಿಷ ರೈಲ್ವೇ ನಿಲ್ದಾಣಕ್ಕೆ ಪ್ರಯಾಣಿಕರ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿತ್ತು.
Published by:Pavana HS
First published: