ಯುವಕರನ್ನು ಸೈನ್ಯಕ್ಕೆ ಸೇರಿಸುವುದಾಗಿ ವಂಚನೆ: ನಕಲಿ ಆಫೀಸರ್ ಅಂದರ್...!

ಈ ವಿಚಾರ ತಿಳಿದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಲೋಕೇಶ್ ಕುಮಾರ್ ಈ ಬಗ್ಗೆ ತನಿಖೆಗೆ ಆದೇಶ ನೀಡಿದ್ದರು. ನಕಲಿ ಪೊಲೀಸ್ ಆಫಿಸರ್ ಬಗ್ಗೆ ತನಿಖೆ ನಡೆಸಿದ ಬೆಳಗಾವಿಯ ಕ್ಯಾಂಪ್ ಪೊಲೀಸರು ಸಾಗರ್ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತನಿಂದ  ಆರ್ಮಿ ಡ್ರೇಸ್, ನಕಲಿ ಬಂದೂಕು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಬಂಧಿತ ನಕಲಿ ಆರ್ಮಿ ಆಫೀಸರ್​

ಬಂಧಿತ ನಕಲಿ ಆರ್ಮಿ ಆಫೀಸರ್​

  • Share this:
ಬೆಳಗಾವಿ (ಡಿ.22) ಬೆಳಗಾವಿಯಲ್ಲಿ ಮರಾಠ ಲಘು ಪದಾತಿದಳದ ತರಬೇತಿ ಶಾಲೆ ದೇಶದಲ್ಲಿಯೇ ಖ್ಯಾತಿ ಗಳಿಸಿದೆ. ಇಲ್ಲಿ ತರಬೇತಿ ಪಡೆದ ಸೈನಿಕರು ಭಾರತೀಯ ಸೇನೆಯಲ್ಲಿ ಅನೇಕ ಮುಂಚೂಣಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ನಕಲಿ ಆಫಿಸರ್ ಒಬ್ಬ ಸೈನ್ಯಕ್ಕೆ ಸೇರಿಸುವುದಾಗಿ ನೂರಾರು ಯುವಕರನ್ನು ವಂಚಿಸಿದ್ದಾನೆ.

ಸದ್ಯ ಈ ನಕಲಿ ಆರ್ಮಿ ಆಫೀಸರ್​​​ನನ್ನು ಬೆಳಗಾವಿಯ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಿತ್ಯ ನೂರಾರು ಯುವಕರು ಸೈನ್ಯಕೆ ಭರ್ತಿಯಾಗಿ ತಯಾರಿ ನಡೆಸುತ್ತಾರೆ. ಬೆಳ್ಳಂ ಬೆಳಗ್ಗೆ ರನ್ನಿಂಗ್, ಹೈಜಂಪ್, ಲಾಂಗ್ ಜಂಪ್ ಸೇರಿ ಸೈನ್ಯಕ್ಕೆ ಸೇರಲು ಬೇಕಾದ ಕಸರತ್ತು ನಡೆಸುತ್ತಾರೆ. ಇದನ್ನು ನೋಡಿದ ನಖಲಿ ಆಫೀಸ್ ಯುವಕರನ್ನು ಭಾರತೀಯ ಸೇನೆಗೆ ಸೇರಿಸುತ್ತೇನೆ ಎಂದು ಹಣ ಪಡೆಯುತ್ತಿದ್ದನು.

ಸಿಎಎ ಮತ್ತು ಎನ್​​ಆರ್​ಸಿ ತಡೆಯುವುದು ಹೇಗೆ?; ಎರಡು ದಾರಿಗಳು ಬಿಚ್ಚಿಟ್ಟ ಪ್ರಶಾಂತ್​​ ಕಿಶೋರ್​​

ಹೀಗೆ ಅಮಾಯಕ ಯುವಕರನ್ನು ವಂಚಿಸಿ ಪೊಲೀಸ್ ಬಲೆಗೆ ಬಿದ್ದ ನಕಲಿ ಆರ್ಮಿ ಆಫಿಸರ್ ಹೆಸರು ಸಾಗರ್ ಪಾಟೀಲ್. ಈತ ಬೆಳಗಾವಿಯ ಅನಗೋಳದ ನಿವಾಸಿ. ಸಾಗರ್ ಕಳೆದ ಅನೇಕ ತಿಂಗಳಿಂದ ಯುವಕರನ್ನು ವಂಚಿಸುವುದನ್ನು ಉದ್ಯೋಗ ಮಾಡಿಕೊಂಡಿದ್ದನು. ಬಂಧಿತ ಸಾಗರಗೆ ಐಶಾರಾಮಿ ಜೀವನ ಖಯಾಲಿ ಇತ್ತು. ಹೀಗಾಗಿ ಅಡ್ಡ ದಾರಿಯಲ್ಲಿ ದುಡ್ಡು ಮಾಡಲು ಈತ ನಕಲಿ ಆರ್ಮಿ ಆಫೀಸರ್ ವೇಷ ಧರಿಸಿಕೊಂಡು ಓಡಾಡುತ್ತಿದ್ದನು. ಅಷ್ಟೇ ಅಲ್ಲ ಯುವಕನೋರ್ವನಿಂದ 1.10 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದನು.

ಈ ವಿಚಾರ ತಿಳಿದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಲೋಕೇಶ್ ಕುಮಾರ್ ಈ ಬಗ್ಗೆ ತನಿಖೆಗೆ ಆದೇಶ ನೀಡಿದ್ದರು. ನಕಲಿ ಪೊಲೀಸ್ ಆಫಿಸರ್ ಬಗ್ಗೆ ತನಿಖೆ ನಡೆಸಿದ ಬೆಳಗಾವಿಯ ಕ್ಯಾಂಪ್ ಪೊಲೀಸರು ಸಾಗರ್ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತನಿಂದ  ಆರ್ಮಿ ಡ್ರೇಸ್, ನಕಲಿ ಬಂದೂಕು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಇನ್ನೂ ಕ್ಯಾಂಪ್ ಪೊಲೀಸರು ಈ ವಂಚನೆ ಜಾಲದ ಬಗ್ಗೆ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಈತ ಅನೇಕ ಯುವಕರನ್ನು ವಂಚಿಸಿರುವ ಬಗ್ಗೆ ಮಾಹಿತಿ ಸಹ ಸಿಕ್ಕಿದೆ. ಇನ್ನಾದರೂ ಯುವಕರು ಸೈನ್ಯಕೆ ಸೇರಲು ಯಾವುದೇ ಮದ್ಯವರ್ತಿಗಳ ಬಗ್ಗೆ ಹೋಗಬಾರದು  ಜತೆಗೆ ಇಂತಹ ಮೋಸದ ಜಾಲಕ್ಕೆ ಸಿಲುಕಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಪೌರತ್ವ ಕಾಯ್ದೆಯಿಂದ ಮುಸ್ಲಿಮರಿಗೆ ಹೇಗೆ ತೊಂದರೆಯಾಗಲು ಸಾಧ್ಯ?: ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಗೆ ಸಿಎಂ ಪ್ರಶ್ನೆ

 
Published by:Latha CG
First published: