• Home
  • »
  • News
  • »
  • state
  • »
  • Mangaluru Blast: ವಿಳಾಸ, ಆಧಾರ್ ಸಂಖ್ಯೆ ಸತ್ಯ, ಫೋಟೋ ನಕಲಿ; ರಿಯಲ್ ಪ್ರೇಮ್​ರಾಜ್​ ತಂದೆಯ Exclusive ಹೇಳಿಕೆ

Mangaluru Blast: ವಿಳಾಸ, ಆಧಾರ್ ಸಂಖ್ಯೆ ಸತ್ಯ, ಫೋಟೋ ನಕಲಿ; ರಿಯಲ್ ಪ್ರೇಮ್​ರಾಜ್​ ತಂದೆಯ Exclusive ಹೇಳಿಕೆ

ಪ್ರೇಮ್​ ರಾಜ್​ ತಂದೆ ಮಾರುತಿ

ಪ್ರೇಮ್​ ರಾಜ್​ ತಂದೆ ಮಾರುತಿ

ನಿನ್ನೆಯೇ ಪೊಲೀಸರು ಮಗನ ಜೊತೆ ಮೊಬೈಲ್ ಜೊತೆ ಮಾತನಾಡಿದ್ದಾರೆ. ಸದ್ಯ ಯಾವುದೇ ವಿಚಾರಣೆಗೆ ನಮ್ಮನ್ನು ಕರೆದಿಲ್ಲ. ಒಂದು ವೇಳೆ ಕರೆದ್ರೆ ಸಂಪೂರ್ಣ ಸಹಕಾರ ನೀಡೋದಾಗಿ ಮಾರುತಿ ಹೇಳಿದ್ದಾರೆ.

  • Share this:

ಮಂಗಳೂರು ಆಟೋ ಸ್ಫೋಟಕ್ಕೆ (Mangaluru Auto Blast Case) ಸಂಬಂಧಿಸಿದಂತೆ ಗಾಯಗೊಂಡಿರುವ ಪ್ರಯಾಣಿಕನ (Passenger) ಬಳಿ ಪತ್ತೆಯಾದ ಆಧಾರ್ ಕಾರ್ಡ್​ ನಕಲಿ (Fake Aadhar Card) ಎಂದು ಗೊತ್ತಾಗಿದೆ. ಆಧಾರ್ ಕಾರ್ಡ್​ ನಲ್ಲಿರುವ ಹೆಸರು, ವಿಳಾಸ ಮತ್ತು ಆಧಾರ್ ಸಂಖ್ಯೆ ಎಲ್ಲವೂ ಸತ್ಯ. ಆದರೆ ಫೋಟೋ ಮಾತ್ರ ನಕಲಿ ಎಂಬುವುದು ಪೊಲೀಸರ ತನಿಖೆಯಲ್ಲಿ (Police Investigation) ತಿಳಿದು ಬಂದಿದೆ. ಆಧಾರ್ ಕಾರ್ಡ್​​ನಲ್ಲಿರುವ ಅಸಲಿ ಪ್ರೇಮ್​ರಾಜ್​ ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದು, ತುಮಕೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಹುಬ್ಬಳ್ಳಿ (Hubballi) ಮೂಲದ ಪ್ರೇಮ್​ರಾಜ್​ ಪೋಷಕರು ಕಳೆದ 25 ವರ್ಷಗಳಿಂದ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ. ನಕಲಿ ಆಧಾರ್ ಕಾರ್ಡ್​ ಬಳಸಿಯೇ ಈ ಪ್ರಯಾಣಿಕ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದುಕೊಂಡಿದ್ದನು.


ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಪ್ರೇಮ್​ರಾಜ್​ ತಂದೆ ಮಾರುತಿ, ಶನಿವಾರ ರಾತ್ರಿ ಕೇಶವಾಪುರ  ಠಾಣೆಯ ಹಿರಿಯ ಪೊಲೀಸರು ಮನೆಗೆ ಬಂದಿದ್ದರು. ಆಧಾರ್ ಕಾರ್ಡ್​ ತೋರಿಸಿ ಕೆಲ ಮಾಹಿತಿಗಳನ್ನು ಕೇಳಿದ್ದರು. ಆಧಾರ್ ಕಾರ್ಡ್​ನಲ್ಲಿರುವ ಸಂಖ್ಯೆ, ಹೆಸರು ಮತ್ತು ವಿಳಾಸ ಎಲ್ಲವೂ ನಿಜ ಆಗಿತ್ತು. ಆದ್ರೆ ಆಧಾರ್ ಕಾರ್ಡ್​ನಲ್ಲಿರುವ ಫೋಟೋ ನಮ್ಮ ಮಗನದ್ದು ಆಗಿರಲಿಲ್ಲ ಎಂದು ಹೇಳಿದರು.


ಆಧಾರ್ ಕಾರ್ಡ್​ ಕಳೆದಿತ್ತು


ಒಂದು ವರ್ಷದ ಹಿಂದೆ ಮಗನ ಆಧಾರ್ ಕಾರ್ಡ್​ ಕಳೆದಿತ್ತು. ನಂತರ ಅದೇ ನಂಬರ್ ಬಳಸಿ ಆಧಾರ್ ಕಾರ್ಡ್​ ಪ್ರಿಂಟ್ ತೆಗೆದುಕೊಳ್ಳಲಾಗಿತ್ತು. ಆಧಾರ್ ಕಾರ್ಡ್​ ಎಲ್ಲಿ ಕಳೆದಿತ್ತು ಎಂಬುದರ ಬಗ್ಗೆ ನಮಗೆ ಗೊತ್ತಿಲ್ಲ. ಆದರೆ ಆಧಾರ್ ಕಾರ್ಡ್​ ಕಳೆದಿರುವ ಬಗ್ಗೆ ನಾವು ಯಾವುದೇ ದೂರು ಸಹ ದಾಖಲಿಸಿಲ್ಲ ಎಂದು ತಿಳಿಸಿದರು.


ಮಗನ ಜೊತೆಯಲ್ಲಿಯೂ ಪೊಲೀಸರ ಮಾತುಕತೆ


ನಿನ್ನೆಯೇ ಪೊಲೀಸರು ಮಗನ ಜೊತೆ ಮೊಬೈಲ್ ಜೊತೆ ಮಾತನಾಡಿದ್ದಾರೆ. ಸದ್ಯ ಯಾವುದೇ ವಿಚಾರಣೆಗೆ ನಮ್ಮನ್ನು ಕರೆದಿಲ್ಲ. ಒಂದು ವೇಳೆ ಕರೆದ್ರೆ ಸಂಪೂರ್ಣ ಸಹಕಾರ ನೀಡೋದಾಗಿ ಮಾರುತಿ ಹೇಳಿದ್ದಾರೆ.


ಇದನ್ನೂ ಓದಿ:  Autorickshaw Explodes: ಆಟೋ ಸ್ಫೋಟದ ಹಿಂದೆ ಉಗ್ರರ ಕೈವಾಡ; ಉದ್ದೇಶಪೂರ್ವಕ ಕೃತ್ಯ ಎಂದ ಡಿಜಿಪಿ


ಪ್ರೇಮ್​ರಾಜ್ ಮೇಲಾಧಿಕಾರಿ ಹೇಳಿಕೆ


ಪ್ರೇಮ್ ರಾಜ್ ಹಿರೇಹಳ್ಳಿ ರೈಲ್ವೇ ಸ್ಟೇಷನ್ ಲಿಮಿಟ್​​​ನಲ್ಲಿ ಟ್ರ್ಯಾಕ್ ಮ್ಯಾನ್ ಆಗಿದ್ದು, ಒಳ್ಳೆಯ ಹುಡುಗನಾಗಿದ್ದಾನೆ. ಅವನ ಕೆಲಸವನ್ನಷ್ಟೇ ಅವನು ಮಾಡಿಕೊಂಡಿದ್ದಾನೆ. ಕಳೆದ 6 ತಿಂಗಳ ಹಿಂದೆ ಅವನ ಆಧಾರ್ ಕಾರ್ಡ್ ಕಳೆದುಕೊಂಡಿದ್ದನು. ಮಿಸ್ಸಾಗಿರುತ್ತೆ ಅಂತ ಸುಮ್ಮನಾಗಿದ್ದನು ಎಂದು ನ್ಯೂಸ್ 18 ಕನ್ನಡಕ್ಕೆ ಫೋನ್ ಮೂಲಕ ಪ್ರೇಮ್​ ರಾಜ್​ ಮೇಲಾಧಿಕಾರಿ ಜೂನಿಯರ್ ಎಂಜಿನೀಯರ್ ಮಹೇಂದ್ರ ಹೇಳಿದ್ದಾರೆ.


ತುಮಕೂರು ಎಸ್​ಪಿ ಜೊತೆಯಲ್ಲಿ ಪ್ರೇಮ್​ರಾಜ್


ಶನಿವಾರ ಸಂಜೆ ಅಲೋಕ್ ಕುಮಾರ್ ಪ್ರೇಮ್ ರಾಜ್ ಅವರಿಗೆ ಕಾಲ್ ಮಾಡಿದ್ದರು. ಸ್ಫೋಟದ ಜಾಗದಲ್ಲಿ ನಿನ್ನ ಆಧಾರ್ ಕಾರ್ಡ್ ಸಿಕ್ಕಿದೆ. ಯಾರು ನೀನು ಎಲ್ಲಿಯವನು ಅಂತೆಲ್ಲಾ ಕೇಳಿದ್ದರು. ಪ್ರೇಮ್ ರಾಜ್ ಇರೋ ವಿಚಾರವನ್ನ ಹೇಳಿದ್ದಾರೆ.


Fake aadhar card found mangaluru blast case mrq
ಪ್ರೇಮ್​ ರಾಜ್​ ತಂದೆ ಮಾರುತಿ


ಯಾವುದಕ್ಕೂ ನೀನು ಲೋಕಲ್ ಎಸ್​​ಪಿಯನ್ನ ಭೇಟಿ ಮಾಡಲು ಹೇಳಿದ್ದರು. ಹೀಗಾಗಿ ಪ್ರೇಮ್ ಕುಮಾರ್ ತುಮಕೂರು ಎಸ್​ಪಿ ಅವರ ಜೊತೆಯಲ್ಲಿದ್ದಾನೆ ಎಂದು ಮಹೇಂದ್ರ ಹೇಳಿದ್ದಾರೆ.


ಇದನ್ನೂ ಓದಿ:  Mangaluru Auto Blast: ಮಂಗಳೂರು ನಗರದಲ್ಲೇ ಸ್ಫೋಟಕ್ಕೆ ನಡೆದಿತ್ತಾ ಪ್ಲಾನ್? ಕೇಸ್​ಗೆ ಕೊಯಂಬತ್ತೂರು ನಂಟು?


ಮಾರ್ಗ ಮಧ್ಯೆಯೇ ಸ್ಫೋಟವಾಯ್ತಾ ಕುಕ್ಕರ್ ಬಾಂಬ್?


ಮೈಸೂರು ಮಾರ್ಗವಾಗಿ ಮಂಗಳೂರು ತಲುಪಿದ ಪ್ರೇಮ್ ರಾಜ್ ರೈಲು ಇಳಿದು ಬೇರೆ ಕಡೆ ಹೋಗಲು ಆಟೋ ರಿಕ್ಷಾದಲ್ಲಿ ಹೊರಟಿದ್ದನು. ಮಾರ್ಗ ಮಧ್ಯೆ ನಾಗುರಿ ಬಳಿ ಆಟೋದಲ್ಲಿ  ಸ್ಫೋಟ ಉಂಟಾಗಿದೆ. ಸ್ಫೋಟದ ತೀವ್ರತೆಗೆ ಪ್ರೇಮ್​ರಾಜ್​  ದೇಹದ ಅರ್ಧ ಭಾಗ ಸುಟ್ಟು ಹೋಗಿದೆ. ಆಟೋ ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Published by:Mahmadrafik K
First published: