ರೈತರ ಬಾಕಿ ಕೊಟ್ಟಿಲ್ಲ, ಕಾರ್ಮಿಕರಿಗೂ ಸಂಬಳ ಕೊಡ್ತಿಲ್ಲ, ಮಲಪ್ರಭಾ ಸಕ್ಕರೆ ಕಾರ್ಖಾನೆಯಿಂದ 2 ಕೋಟಿ ವೇತನ ಬಾಕಿ


Updated:September 2, 2018, 8:47 AM IST
ರೈತರ ಬಾಕಿ ಕೊಟ್ಟಿಲ್ಲ, ಕಾರ್ಮಿಕರಿಗೂ ಸಂಬಳ ಕೊಡ್ತಿಲ್ಲ, ಮಲಪ್ರಭಾ ಸಕ್ಕರೆ ಕಾರ್ಖಾನೆಯಿಂದ 2 ಕೋಟಿ ವೇತನ ಬಾಕಿ

Updated: September 2, 2018, 8:47 AM IST
ಚಂದ್ರಕಾಂತ್ ಸುಗಂಧಿ, ನ್ಯೂಸ್ 18 ಕನ್ನಡ

ಬೆಳಗಾವಿ(ಸೆ.02): ಸಕ್ಕರೆ ಕಾರ್ಖಾನೆಗಳಿಂದ ಹಾಕಿ ಹಣ ಸಿಗದೆ ರೈತರು ಒಂದೆಡೆ ಹೋರಾಟ ನಡೆಸಿದ್ರೆ. ಇದೀಗ ಸಕ್ಕರೆ ಕಾರ್ಖಾನೆಯ ಸಿಬ್ಬಂದಿಗೆ ವೇತನ ಸಿಕ್ಕಿಲ್ಲ. ಇದು ಸಕ್ಕರೆ ಜಿಲ್ಲೆಯ ಪ್ರಮುಖ ಸಕ್ಕರೆ ಕಾರ್ಖಾನೆಯೊಂದರ ಸ್ಥಿತಿಯಾಗಿದೆ. ಕೇಳಿದ್ರೆ ಹಿಂದಿನ ಆಡಳಿತ ಮಂಡಳಿಯವರು ನಷ್ಟ ಮಾಡಿ ಹೋಗಿದ್ದಾರೆ ಎನು ಮಾಡುವುದು ಎನ್ನುತ್ತಾರೆ. ಹಾಗಾದ್ರೆ ಈ ಸ್ಥಿತಿ ನಿಜವಾದ ಕಾರಣ ಯಾರು? ರೈತರು, ಸಿಬ್ಬಂಧಿಗೆ ಯಾಕೆ ಶಿಕ್ಷೆ? ಇಲ್ಲಿದೆ ವಿವರ

ಬೆಳಗಾವಿ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ಗ್ರಾಮದ ಬಳಿ ಇರುವ ಮಲಪ್ರಭ ಸಹಕಾರಿ ಸಕ್ಕರೆ ಕಾರ್ಖಾನೆಯ ಮುಂದೆ ಬಾಕಿ ಹಣಕ್ಕಾಗಿ ರೈತರು ಘೋಷಣೆ ಹಾಕುತ್ತಿದ್ದಾರೆ. ಜನವರಿ ತಿಂಗಳಲ್ಲಿ ಕಬ್ಬು ಪೂರೈಸಿದ ರೈತರಿಗೆ ಹಣ ಕೊಟ್ಟಿಲ್ಲ.. ಮಲಪ್ರಭಾ ಸಕ್ಕರೆ ಕಾರ್ಖಾನೆಯಲ್ಲಿ 700 ಕ್ಕೂ ಹೆಚ್ಚು ಕಾರ್ಮಿಕರಿದ್ದು ಅವ್ರಿಗೂ 6 ತಿಂಗಳಿನಿಂದ 2 ಕೋಟಿಗೂ ಹೆಚ್ಚು ಸಂಬಳ ಕೊಟ್ಟಿಲ್ಲ.. ಈವರೆಗೆ 20 ಕೋಟಿಗೂ ಅಧಿಕ ಹಣ ರೈತರಿಗೆ ಸೇರ್ಬೇಕು. ಆಗಸ್ಟ್​ 7ರಂದು ಕಿತ್ತೂರು ತಹಶೀಲ್ದಾರ್ ಪ್ರವೀಣ್ ನೇತೃತ್ವದಲ್ಲಿ ದಾಳಿ ಮಾಡಿ ಕಾರ್ಖಾನೆಗೆ ಗೋಡೌನ್​ನಲ್ಲಿದ್ದ ಇದ್ದ ಸಕ್ಕರೆ ವಶಕ್ಕೆ ಪಡೆದುಕೊಂಡ್ರು. ಆದ್ರೆ ರೈತರಿಗೆ ಕೊಡಬೇಕಾದ ಹಣ ಮಾತ್ರ ಕೊಟ್ಟಿಲ್ಲ.

ಇದರಿಂದ ನೊಂದ ಕಾರ್ಮಿಕನೊಬ್ಬ ಇತ್ತೀಚಿಗೆ ಕಾರ್ಖಾನೆಯ ಟವರ್ ಹತ್ತಿ ಆತ್ಮಹತ್ಯೆ ಬೆದರಿಕೆ ಹಾಕಿದ್ರು ಆದ್ರೆ ಕ್ಯಾರೆ ಅಂತಿಲ್ಲ. 14 ವರ್ಷ ಕಾರ್ಖಾನೆಯನ್ನು ಆಳಿದ ಮಾಜಿ ಶಾಸಕ ಡಿ.ಬಿ. ಇನಾಮ್​ದಾರ್ ಇತ್ತೀಚಿಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ಇಷ್ಟೆಲ್ಲಾ ಸಮಸ್ಯೆ ಉಲ್ಬಣವಾಗಿದೆ. ಇದಕ್ಕೆ ಹೊಣೆ ಯಾರು? ರೈತರ ಬಾಕಿ ಹಣ, ಕಾರ್ಮಿಕರ ವೇತನ ಭರಿಸೋದ್ಯಾರು ಅನ್ನೋದೇ ಯಕ್ಷ ಪ್ರಶ್ನೆ.

 
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ