ಕಾಶ್ಮೀರದ 53 ಹಳ್ಳಿಗಳು ಮತ್ತು ಐದು ಜಿಲ್ಲೆಗಳನ್ನು ಸಂಪರ್ಕಿಸುವ ಬಹುನಿರೀಕ್ಷಿತ ವರ್ತುಲ ರಸ್ತೆ ಎಂಬ ಹೇಳಿಕೆಯೊಂದಿಗೆ ರಸ್ತೆಯೊಂದರ ಸುಂದರ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್ನ ಆರ್ಕೈವ್ ಮಾಡಿದ ಆವೃತ್ತಿ ಯನ್ನು ಇಲ್ಲಿ ನೋಡಬಹುದು. ಚಿತ್ರದ ಜೊತೆಗಿನ ಈ ಹಕ್ಕು ತಪ್ಪುದಾರಿಗೆಳೆಯು ವಂತಿದೆ ಎಂದು ಇಂಡಿಯಾ ಟುಡೇ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್ಡಬ್ಲ್ಯೂಎ) ಕಂಡುಕೊಂಡಿದೆ. ಅಲ್ಲದೆ, ವೈರಲ್ ಆಗಿರುವ ಈ ಚಿತ್ರವು ಬೆಂಗಳೂರಿನ ನೈಸ್ ರಿಂಗ್ ರಸ್ತೆಯ ಭಾಗವನ್ನು ತೋರಿಸುತ್ತದೆ. ಶ್ರೀನಗರ ವರ್ತುಲ ರಸ್ತೆ ಯೋಜನೆ ಇನ್ನೂ ಭೂಸ್ವಾಧೀನ ಹಂತದಲ್ಲಿದೆ ಎಂಬುದನ್ನೂ ಸಹ ಪತ್ತೆಹಚ್ಚಿದೆ.
AFWA ತನಿಖೆ
ಪ್ರಧಾನಿ ನರೇಂದ್ರ ಮೋದಿ ಮೇ 2018ರಲ್ಲಿ ಶ್ರೀನಗರ ಮತ್ತು ಜಮ್ಮು ರಿಂಗ್ ರಸ್ತೆ ಯೋಜನೆಗಳಿಗೆ ಅಡಿಪಾಯ ಹಾಕಿದ್ದಾರೆ. ಆದರೂ, ರಿವರ್ಸ್ ಇಮೇಜ್ ಸರ್ಚ್ ಸಹಾಯದಿಂದ, ವೈರಲ್ ಚಿತ್ರವನ್ನು ಕರ್ನಾಟಕದಿಂದ 2008ರಿಂದ ಹಲವಾರು ವೆಬ್ಸೈಟ್ಗಳು ಮತ್ತು ಸುದ್ದಿ ವರದಿಗಳನ್ನು ಮಾಡಿರುವುದನ್ನು ಇಂಡಿಯಾ ಟುಡೇ ಕಂಡುಕೊಂಡಿದೆ. 2018ರಲ್ಲಿ, ಫೇಸ್ಬುಕ್ ಪೇಜ್ವೊಂದರಲ್ಲಿ ಈ ಚಿತ್ರವನ್ನು ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ನ ಒಂದು ನೋಟವಾಗಿ ಹಂಚಿಕೊಂಡಿತು.
ಅದೇ ಸ್ಥಳದ ಒಂದೇ ರೀತಿಯ ಚಿತ್ರ, ಆದರೆ ಬೇರೆ ಕೋನದಿಂದ ತೆಗೆದುಕೊಳ್ಳಲಾಗಿರುವ ಫೋಟೋವನ್ನು 2014ರಲ್ಲಿ "ಬಿಸಿನೆಸ್ ಇನ್ಸೈಡರ್" ಕೂಡ ವರದಿ ಮಾಡಿದೆ. ವೈರಲ್ ಇಮೇಜ್ ಮತ್ತು "ಬ್ಯುಸಿನೆಸ್ ಇನ್ಸೈಡರ್" ವರದಿಯ ಚಿತ್ರವನ್ನು ಗಮನಿಸಿದರೆ, ರಸ್ತೆಯು ಒಂದು ಬದಿಯಲ್ಲಿ ನೀರನ್ನು ಮತ್ತು ಇನ್ನೊಂದು ಬದಿಯಲ್ಲಿ ಕಂದು ಛಾವಣಿಯ ಕಟ್ಟಡ ಹೊಂದಿದೆ ಎಂದು ನಾವು ಅರ್ಥಮಾಡಿಕೊಳ್ಳಬಹುದು.
ಗೂಗಲ್ ಅರ್ಥ್ನಲ್ಲಿ ಅದೇ ಸ್ಥಳದ ನೋಟವನ್ನು ಕೆಳಗೆ ನೀಡಲಾಗಿದೆ.
ಗೂಗಲ್ ನಕ್ಷೆಯಲ್ಲಿ ನೈಸ್ ಕಚೇರಿಯ ಚಿತ್ರಗಳನ್ನು ಇಂಡಿಯಾ ಟುಡೇ ಪರಿಶೀಲಿಸಿದ್ದು, ಚಲಾವಣೆಯಲ್ಲಿರುವ ಚಿತ್ರದೊಂದಿಗೆ ಈ ಚಿತ್ರಗಳನ್ನು ಹೋಲಿಕೆ ಮಾಡಿದರೆ, ವೈರಲ್ ಚಿತ್ರದಲ್ಲಿ ಕಾಣುವ ಕಟ್ಟಡವು ನೈಸ್ ಕಚೇರಿಯಾಗಿದೆ ಎಂದು ನಾವು ದೃಢೀಕರಿಸಬಹುದು.
ಗೂಗಲ್ ಮ್ಯಾಪ್ಸ್ನಲ್ಲಿ ಬಳಕೆದಾರರು ಅಪ್ಲೋಡ್ ಮಾಡಿದ ಅದೇ ಸ್ಥಳದ ಇನ್ನೊಂದು ಚಿತ್ರವು ವೈಸ್ ಚಿತ್ರವನ್ನು ನೈಸ್ ರಸ್ತೆ ಕ್ಲೋವರ್ಲೀಫ್ ಜಂಕ್ಷನ್ನ ಫ್ಲೈಓವರ್ನಿಂದ ಚಿತ್ರೀಕರಿಸಿರಬಹುದು ಎಂಬ ಸುಳಿವು ನೀಡುತ್ತದೆ.
ಶ್ರೀನಗರ ವರ್ತುಲ ರಸ್ತೆ
ಎನ್ಎಚ್ಎಐ ಮಹತ್ವಾಕಾಂಕ್ಷೆಯ ಶ್ರೀನಗರ ರಿಂಗ್ ರಸ್ತೆಯು 52 ಹಳ್ಳಿಗಳು ಮತ್ತು ಐದು ಜಿಲ್ಲೆಗಳಾದ ಪುಲ್ವಾಮ, ಬುಡ್ಗಾಮ್, ಬಾರಾಮುಲ್ಲಾ, ಶ್ರೀನಗರ ಮತ್ತು ಬಂಡಿಪೋರಾಗಳ ಮೂಲಕ ಹಾದು ಹೋಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ