Sudha Murthy: ಇನ್ಫೋಸಿಸ್​ ಮುಖ್ಯಸ್ಥೆ ಸುಧಾ ಮೂರ್ತಿ ದೇವಸ್ಥಾನದ ಎದುರು ತರಕಾರಿ ಮಾರೋದು ನಿಜಾನಾ?

ಸುಧಾ ಮೂರ್ತಿ ಶಾಂತ ಸ್ವಭಾವದವರು. ಅಲ್ಲದೆ, ಅವರು ಎಂದಿಗೂ ಯಾರ ಮೇಲೂ ಸಿಟ್ಟಾದವರಲ್ಲ.ಸದಾ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಪ್ರಚಾರದಿಂದ ಅವರು ತುಂಬಾನೇ ದೂರ ಉಳಿಯುತ್ತಾರೆ.

news18-kannada
Updated:September 16, 2020, 9:11 AM IST
Sudha Murthy: ಇನ್ಫೋಸಿಸ್​ ಮುಖ್ಯಸ್ಥೆ ಸುಧಾ ಮೂರ್ತಿ ದೇವಸ್ಥಾನದ ಎದುರು ತರಕಾರಿ ಮಾರೋದು ನಿಜಾನಾ?
ಸುಧಾ ಮೂರ್ತಿ
  • Share this:
ಬರಹಗಾರ್ತಿ, ಸಮಾಜ ಸೇವಕಿ, ಇನ್ಫೋಸಿಸ್ ಫೌಂಡೇಷನ್​ ಮುಖ್ಯಸ್ಥೆ ಸುಧಾ ಮೂರ್ತಿ ತರಕಾರಿ ರಾಶಿಯ ಎದುರು ಕುಳಿತ ಫೋಟೋ ಒಂದು ವೈರಲ್​ ಆಗಿತ್ತು. ಈ ಫೋಟೋವನ್ನು ಮೊಟ್ಟ ಮೊದಲ ಬಾರಿಗೆ ಟ್ವೀಟ್​ ಮಾಡಿದ್ದು, ಐಆರ್​ಎಸ್​ ಅಧಿಕಾರಿ ಸುರಭಿ. “ಸುಧಾ ಮೂರ್ತಿ ವರ್ಷಕ್ಕೊಮ್ಮೆ ದೇವಸ್ಥಾನದ ಎದುರು ಕೂತು ತರಕಾರಿ ಮಾರುತ್ತಾರೆ. ಈ ಮೂಲಕ ತಮ್ಮ ಅಹಂ ಅನ್ನು ತೊಡೆದು ಹಾಕುತ್ತಾರೆ, ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದರು. ಈ ಟ್ವೀಟ್​ ತುಂಬಾನೇ ವೈರಲ್​ ಆಗಿದೆ. ಅಷ್ಟಕ್ಕೂ ಸುಧಾ ಮೂರ್ತಿ ವರ್ಷಕ್ಕೊಮ್ಮೆ ದೇವಸ್ಥಾನದ ಎದುರು ಕೂತು ತರಕಾರಿ ಮಾರುತ್ತಾರಾ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸುಧಾ ಮೂರ್ತಿ ಶಾಂತ ಸ್ವಭಾವದವರು. ಅಲ್ಲದೆ, ಅವರು ಎಂದಿಗೂ ಯಾರ ಮೇಲೂ ಸಿಟ್ಟಾದವರಲ್ಲ.ಸದಾ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಪ್ರಚಾರದಿಂದ ಅವರು ತುಂಬಾನೇ ದೂರ ಉಳಿಯುತ್ತಾರೆ. ಹೀಗಾಗಿ, ಅವರು ವರ್ಷಕ್ಕೊಮ್ಮೆ ತರಕಾರಿ ಮಾರುತ್ತಾರೆ ಎಂಬುದು ನಿಜವಿರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅದು ಸುಳ್ಳು ಎಂಬುದನ್ನು ಅವರೇ ಸ್ಪಷ್ಟಪಡಿಸಿದ್ದಾರೆ.IANSಗೆ ಪ್ರತಿಕ್ರಿಯೆ ನೀಡಿರುವ ಸುಧಾಮೂರ್ತಿ, ಈ ರೀತಿಯ ಸುದ್ದಿಗಳನ್ನು ಕೇಳಿದಾಗ ತುಂಬಾನೇ ಬೇಸರವಾಗುತ್ತದೆ. ನಾನು ಅಲ್ಲಿ ತರಕಾರಿ ಮಾರಲು ಕೂತಿರಲಿಲ್ಲ. ಓರ್ವ ಭಕ್ತೆಯಾಗಿ ಕೂತಿದ್ದೆ. ಜಯನಗರದ ರಾಘವೇಂದ್ರ ಮಠದಲ್ಲಿ ನಡೆಯುವ ಮೂರು ದಿನಗಳ ರಾಘವೇಂದ್ರ ರಾಯರ ಸಮಾರಾಧಾನೆ ಕಾರ್ಯಕ್ರಮಕ್ಕಾಗಿ ಅಡುಗೆ ಸಿದ್ಧಪಡಿಸಲು ನಾನು ಉತ್ತಮ ತರಕಾರಿಗಳನ್ನು ಆಯ್ದುಕೊಳ್ಳುತ್ತಿದ್ದೆ. ಈ ಫೋಟೋವನ್ನು ಇಟ್ಟುಕೊಂಡು ಅವರು ಈ ರೀತಿ ಹಬ್ಬಿಸಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.
Published by: Rajesh Duggumane
First published: September 16, 2020, 8:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading