ವಿಶ್ವಪ್ರಸಿದ್ಧ ಹಂಪಿ ಉತ್ಸವಕ್ಕೆ ಮತ್ತೆ ನಿರ್ಲಕ್ಷ್ಯ; ಮೈಸೂರು ದಸರಾಕ್ಕಿರುವ ಉತ್ಸಾಹ ಹಂಪಿ ಉತ್ಸವಕ್ಕೇಕಿಲ್ಲ

ಮೈಸೂರು ದಸರಾ, ಕಿತ್ತೂರು ಉತ್ಸವ ಸೇರಿದಂತೆ ಬೇರೆ-ಬೇರೆ ಜಿಲ್ಲೆಗಳಲ್ಲಿ ನಡೆಯುವ ಉತ್ಸವಗಳಿಗೆ ಅಡ್ಡಿಯಾಗದ ಬರ ಹಂಪಿ ಉತ್ಸವಕ್ಕೆ ಯಾಕೆ ಎಂದು ಸಾಹಿತಿಗಳು, ಸ್ವಾಮೀಜಿಗಳು, ಹೋರಾಟಗಾರರು ಪ್ರಶ್ನೆ ಮಾಡಿ ಹೋರಾಟ ಮಾಡಿದರು.

G Hareeshkumar | news18-kannada
Updated:September 16, 2019, 10:23 AM IST
ವಿಶ್ವಪ್ರಸಿದ್ಧ ಹಂಪಿ ಉತ್ಸವಕ್ಕೆ ಮತ್ತೆ ನಿರ್ಲಕ್ಷ್ಯ; ಮೈಸೂರು ದಸರಾಕ್ಕಿರುವ ಉತ್ಸಾಹ ಹಂಪಿ ಉತ್ಸವಕ್ಕೇಕಿಲ್ಲ
ಹಂಪಿ
  • Share this:
ಬಳ್ಳಾರಿ(ಸೆ.16): ಗಣಿನಾಡು ಬಳ್ಳಾರಿ ಜಿಲ್ಲೆ ವಿಶ್ವವಿಖ್ಯಾತ ಹಂಪಿಯಲ್ಲಿ ನಡೆಯುತ್ತಿದ್ದ ವಿಜಯನಗರ ಅರಸರ ವಿಜಯದಶಮಿ ಉತ್ಸವ ಮೈಸೂರು ದಸರಾಕ್ಕೆ ಪ್ರೇರಣೆಯಾಗಿತ್ತು. ಆದರೆ ಇಂಥ ಹಂಪಿ ಉತ್ಸವಕ್ಕೆ ಪದೇ ಪದೇ ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಎದ್ದುಕಾಣುತ್ತದೆ. ಈ ಬಾರಿ ಉತ್ತರ ಕರ್ನಾಟಕದಲ್ಲಿ ಭಾರೀ ಪ್ರವಾಹ ಬಂದರೂ ಮೈಸೂರು ದಸರಾ ಅದ್ಧೂರಿ ನಡೆಸಲು ಸರ್ಕಾರ ಘೋಷಣೆ ಮಾಡಿತು. ಆದರೆ ಅದೇ ಹಂಪಿ ಉತ್ಸವ ಆಚರಣೆ ಮಾಡಲು ತಾತ್ಸಾರ ಮುಂದುವರೆದಿದೆ. ನವೆಂಬರ್ ನಲ್ಲಿ ಜರುಗಬೇಕಾಗಿರುವ ಉತ್ಸವಕ್ಕೆ ಇಲ್ಲಿಯವರೆಗೂ ಸರ್ಕಾರ ಸುಮ್ಮನಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ವಿಶ್ವವಿಖ್ಯಾತ ಹಂಪಿಯ ಹಂಪಿ ಉತ್ಸವ ಪ್ರತಿ ವರ್ಷ ನವಂಬರ್ 3, 4, 5 ರಂದು ಆಚರಣೆ ಮಾಡುತ್ತ ಬಂದಿದೆ. ಆದರೆ ಇದು ಕಳೆದ ಹಲವಾರು ವರುಷಗಳಲ್ಲಿ ಬರಗಾಲ, ಬದಲಾದ ಸರ್ಕಾರಗಳಿಂದಾಗಿ ಹಂಪಿ ಉತ್ಸವದ ದಿನಾಂಕಗಳು ಬದಲಾಗೋದಲ್ಲ, ಉತ್ಸವವೇ ನಡೆದಿಲ್ಲ. ಕಳೆದ ವರುಷ ಇದರಿಂದಾಗಿ ಹಂಪಿ ಉತ್ಸವ ಆಚರಣೆ ಮಾಡದಿರಲು ತೀರ್ಮಾನ ಮಾಡಿತ್ತು. ಆದ್ರೆ ಆಗ ರಾಜ್ಯದಲ್ಲಿ ಬರಗಾಲ ಇದೆ ಎನ್ನುವ ಮಾತ್ರಕ್ಕೆ ಹಂಪಿ ಉತ್ಸವಕ್ಕೆ ಆಚರಣೆ ಮುಂದೂಡಲಾಗಿತ್ತು.

ಮೈಸೂರು ದಸರಾ, ಕಿತ್ತೂರು ಉತ್ಸವ ಸೇರಿದಂತೆ ಬೇರೆ-ಬೇರೆ ಜಿಲ್ಲೆಗಳಲ್ಲಿ ನಡೆಯುವ ಉತ್ಸವಗಳಿಗೆ ಅಡ್ಡಿಯಾಗದ ಬರ ಹಂಪಿ ಉತ್ಸವಕ್ಕೆ ಯಾಕೆ ಎಂದು ಸಾಹಿತಿಗಳು, ಸ್ವಾಮೀಜಿಗಳು, ಹೋರಾಟಗಾರರು ಪ್ರಶ್ನೆ ಮಾಡಿ ಹೋರಾಟ ಮಾಡಿದರು. ಆ ವೇಳೆ ವಿಪಕ್ಷವಾಗಿದ್ದ ಬಿಜೆಪಿ ಕೂಡ ಹೋರಾಟ ನಡೆಸಿತ್ತು. ಸ್ವಾಮೀಜಿಯೊಬ್ಬರು ಜೋಳಿಗೆ ಹಾಕಿ ಸಂಗ್ರಹಿಸಿದ ಹಣವನ್ನ ಜಿಲ್ಲಾಧಿಕಾರಿಗಳಿಗೆ ನೀಡಿದ್ದರು. ಆಗ ಭಿಕ್ಷೆ ಬೇಡಿಯಾದ್ರೂ ಹಂಪಿ ಉತ್ಸವ ನಡೆಸುತ್ತೇವೆಂದು ಹೇಳಿದ್ದರು. ಆದರೀಗ ಬಿಜೆಪಿ ಸರ್ಕಾರ ಬಂದಿದೆ. ಅದರ ಬಗ್ಗೆ ಸರ್ಕಾರವಾಗಲೀ, ಇಲ್ಲ ಜಿಲ್ಲೆಯ ಬಿಜೆಪಿಯ ಶಾಸಕರಾಗಲಿ ಮಾತನಾಡದೇ ಯಾಕೆ ಮೌನ ವಹಿಸಿದ್ದಾರೆ ಎಂದು ಕಲಾವಿದರು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ : ಬಳ್ಳಾರಿ ಆಣೆ-ಪ್ರಮಾಣ ರಾಜಕೀಯ; ಶಾಸಕ ನಾಗೇಂದ್ರ ಸಿಗದೆ ಕೂಡ್ಲಿಗಿ ಪ.ಪಂ ಅಧ್ಯಕ್ಷ ಅಧಿಕಾರಕ್ಕಾಗಿ ಕಿತ್ತಾಟ

ಬರವಿರಲಿ ಏನೇ ಇರಲಿ ಹಂಪಿ ಉತ್ಸವ ಆಚರಣೆಯನ್ನ ವಿವಿಧ ಕಾರಣಗಳನ್ನೊಡ್ಡಿ ರದ್ದು ಮಾಡೋದು ಸರಿಯಲ್ಲ. ಪ್ರತಿವರುಷ ನಿಗಧಿತ ದಿನಾಂಕವಾದ ನವೆಂಬರ್ 3,4 ಹಾಗೂ 5ರಂದು ಮೂರು ದಿನಗಳ ಕಾಲ ಉತ್ಸವವನ್ನು ಸರಳವಾಗಿಯಾದ್ರೂ ಆಚರಣೆ ಮಾಡ್ಬೇಕು ಎಂದು ಕಲಾವಿದರು ಪ್ರತಿ ವರುಷ ಒತ್ತಾಯಿಸುತ್ತಿದ್ದಾರೆ. ಆದರೆ ಉತ್ಸವದ ದಿನಾಂಕ ಹತ್ತಿರ ಬರುತ್ತಿದ್ದರೂ ಸರ್ಕಾರ ಚಕಾರವೆತ್ತದೇ ಇರುವುದು ಈ ಬಾರಿಯ ಹಂಪಿ ಉತ್ಸವ ಆಗುವುದಿಲ್ಲವೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಪ್ರತಿವರ್ಷ ಹೋರಾಟ ಮಾಡಿದ ಜನಪರ ಹಂಪಿ ಉತ್ಸವ ಮಾಡಬೇಕೆ ಎಂದು ಈಗಾಗಲೇ ಸಾಮಾಜಿಕ ಜಾಲಾತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮೇಲಾಗಿ ಈ ವರುಷ ತುಂಗಭದ್ರ ಜಲಾಶಯ ತುಂಬಿ ಹರಿಯುತ್ತಿದ್ದು, ಜಲಾಶಯದ ಅಚ್ಚುಕಟ್ಟು ರೈತರು ತುಸು ಸಮಾಧಾನದಲ್ಲಿದ್ದಾರೆ. ಉತ್ಸವಕ್ಕೆ ವಿದೇಶಗಳಿಂದ ಕಲಾವಿದರನ್ನ ಕರೆತಂದ್ರೂ ಜಿಲ್ಲೆಯ ಸಾವಿರಾರು ಕಲಾವಿದರಿಗೆ ವೇದಿಕೆ ಸಿಗಲಿದೆ. ಈ ಕುರಿತು ಆರೋಗ್ಯ ಸಚಿವ ಶ್ರೀರಾಮುಲು ಅವರ ಗಮನಕ್ಕೆ ತಂದಾಗ ಸಿಎಂ ಯಡಿಯೂರಪ್ಪ ಗಮನಕ್ಕೆ ತಂದು ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ : ಆರ್ಥಿಕ ಹಿಂಜರಿತ ಮರೆಮಾಚಲು ಮಾಜಿ ಸಚಿವ ಡಿಕೆ ಶಿವಕುಮಾರ್ ಬಲಿ ; ಮಾಜಿ ಸಂಸದ ಉಗ್ರಪ್ಪ ಕಿಡಿರಾಜ್ಯದಲ್ಲಿ ಯಾವುದೇ ಸರ್ಕಾರಗಳೇ ಬರಲಿ ಮೈಸೂರು ದಸರಾಕ್ಕೆ ನೀಡುವ ಆದ್ಯತೆ ವಿಶ್ವಪ್ರಸಿದ್ಧ ಹಂಪಿಯಲ್ಲಿ ನಡೆಯುವ ಉತ್ಸವಕ್ಕೆ ಯಾಕೆ ನೀಡುವುದಿಲ್ಲ. ಹಂಪಿ ಉತ್ಸವ ಆಚರಣೆಗೆ ಇನ್ನೂ ಒಂದುವರೆ ತಿಂಗಳು ಮಾತ್ರ ಬಾಕಿಯಿದೆ. ಆದ್ರೆ ರಾಜ್ಯ ಸರ್ಕಾರವಾಗಲೀ ಇಲ್ಲವೇ ಜಿಲ್ಲಾಡಳಿತ ಕೂಡ ಇದುವರೆಗೆ ಹಂಪಿ ಉತ್ಸವದ ಬಗ್ಗೆ ಯಾವುದೇ ಸಿದ್ದತೆಗಳನ್ನ ಮಾಡಿಕೊಂಡಿಲ್ಲ. ಕೂಡಲೇ ಸರ್ಕಾರ ಉತ್ಸವ ಮಾಡಲು ಮುಂದಾಗಬೇಕು ಎಂದು ಕಲಾವಿದರು ಒತ್ತಾಯಿಸುತ್ತಿದ್ದಾರೆ.

ವರದಿ : ಶರಣು ಹಂಪಿ

First published: September 16, 2019, 7:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading