ಕರ್ನಾಟಕಕ್ಕೆ ಕಾಲಿಟ್ಟ ಫೇಸ್​​​ಬುಕ್​​​ ಆಫೀಸ್: ಕನ್ನಡಿಗರಿಗೆ ಸಿಗಲಿದೆ ಉದ್ಯೋಗವಕಾಶ..!

ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆ ಬಳಿಯ ಎಂಬೆಸಿ ಗಾಲ್ಫ್​​​​ ಲಿಂಕ್ಸ್​ ಸಂಕೀರ್ಣದಲ್ಲಿ 2.2 ಲಕ್ಷ ಚದರ ಅಡಿಯಷ್ಟು ಜಾಗದಲ್ಲಿ ಫೇಸ್​ಬುಕ್​​​ ಕಚೇರಿಯನ್ನು ಸ್ಥಾಪಿಸಲು ಯೋಜನೆ ಹಾಕಿಕೊಂಡಿದೆ. ಇದರಲ್ಲಿ ಸುಮಾರು 2,200 ಮಂದಿಗೆ ಉದ್ಯೋಗ ಲಭಿಸುವ ನಿರೀಕ್ಷೆಯಿದ್ದು, ಕನ್ನಡಿಗರಿಗೂ ಫೇಸ್​ಬುಕ್​ನಲ್ಲಿ ಕೆಲಸ ಸಿಗಲಿದೆ.

Vinay Bhat | news18
Updated:November 8, 2018, 7:48 PM IST
ಕರ್ನಾಟಕಕ್ಕೆ ಕಾಲಿಟ್ಟ ಫೇಸ್​​​ಬುಕ್​​​ ಆಫೀಸ್: ಕನ್ನಡಿಗರಿಗೆ ಸಿಗಲಿದೆ ಉದ್ಯೋಗವಕಾಶ..!
Pic: Facebook Twitter
Vinay Bhat | news18
Updated: November 8, 2018, 7:48 PM IST
ನ್ಯೂಸ್ 18 ಕನ್ನಡ

ಸಾಮಾಜಿಕ ಜಾಲತಾಣಗಳ ಪೈಕಿ ಸದ್ಯ ನಂಬರ್ 1 ಸ್ಥಾನದಲ್ಲಿರುವ ಫೇಸ್​ಬುಕ್ ಈಗಾಗಲೇ​​​ ಭಾರತದ ಮೂರು ಕಡೆಗಳಲ್ಲಿ ಕಚೇರಿ ಹೊಂದಿದೆ. ಹೈದರಾಬಾದ್, ಮುಂಬೈ ಹಾಗೂ ದೆಹಲಿಯಲ್ಲಿ ತನ್ನ ಖಾತೆ ತೆರೆದಿರುವ ಫೇಸ್​​ಬುಕ್ ಇದೇ ಮೊದಲ ಬಾರಿ ಸಿಲಿಕಾನ್ ಸಿಟಿ ಬೆಂಗಳೂರಿಗೂ ಕಾಲಿಟ್ಟಿದೆ.

ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆ ಬಳಿಯ ಎಂಬೆಸಿ ಗಾಲ್ಫ್​​​​ ಲಿಂಕ್ಸ್​ ಸಂಕೀರ್ಣದಲ್ಲಿ 2.2 ಲಕ್ಷ ಚದರ ಅಡಿಯಷ್ಟು ಜಾಗದಲ್ಲಿ ಕಚೇರಿಯನ್ನು ಸ್ಥಾಪಿಸಲು ಯೋಜನೆ ಹಾಕಿಕೊಂಡಿದೆ. ಇದರಲ್ಲಿ ಸುಮಾರು 2,200 ಮಂದಿಗೆ ಉದ್ಯೋಗ ಲಭಿಸುವ ನಿರೀಕ್ಷೆಯಿದ್ದು, ಕನ್ನಡಿಗರಿಗೂ ಫೇಸ್​ಬುಕ್​ನಲ್ಲಿ ಕೆಲಸ ಸಿಗಲಿದೆ. ಫೇಸ್​ಬುಕ್​ ಸಂಸ್ಥೆ ಈ ಕಚೇರಿಯ ಬಾಡಿಗೆಗಾಗಿ ವರ್ಷಕ್ಕೆ 34 ಕೋಟಿ ರೂ ಮೀಸಲಿಟ್ಟಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ವಾಟ್ಸಪ್​​ನಂತೆ FBನಲ್ಲೂ ಮೆಸೇಜ್ ಡಿಲೀಟ್ ಮಾಡಬಹುದು

ಈಗಾಗಲೇ ಆ್ಯಪಲ್, ಮೈಕ್ರೋಸಾಫ್ಟ್​​ ಅಮೇಜಾನ್ ಹಾಗೂ ಗೂಗಲ್ ಕಂಪೆನಿಗಳು ಬೆಂಗಳೂರಿನಲ್ಲಿದ್ದು, ಇದೇ ಸಾಲಿಗೆ ಫೇಸ್​ಬುಕ್​​ ಕೂಡ ಸದ್ಯದಲ್ಲೇ ಸೇರಲಿದೆ. ಇದರೊಂದಿಗೆ ಜಗತ್ತಿನ ಐದು ಪ್ರಮುಖ ಸಾಫ್ಟ್​ವೇರ್​ ತಂತ್ರಜ್ಞಾನ ಕಂಪೆನಿಯನ್ನು ಹೊಂದಿರುವ ಕೀರ್ತಿ ಬೆಂಗಳೂರು ಪಾಲಾಗಲಿದೆ.

2010 ರಲ್ಲಿ ಹೈದರಾಬಾದ್​ ನಗರದಲ್ಲಿ ಫೇಸ್​ಬುಕ್ ತನ್ನ ಮೊದಲ ಕಛೇರಿ ಆರಂಭಿಸಿತ್ತು. ಇದಾದ ಬಳಿಕ ಮೂರು ವರ್ಷದ ಹಿಂದೆ ಮುಂಬೈನಲ್ಲಿ ಹಾಗೂ 2017 ರಲ್ಲಿ ದೆಹಲಿಯಲ್ಲಿ ತನ್ನ ಖಾತೆ ತೆರೆದಿತ್ತು. ಸದ್ಯ ಬೆಂಗಳೂರಿನ ಎಂಬೆಸಿ ಗಾಲ್ಫ್​​​​ ಲಿಂಕ್ಸ್​​ ಐಟಿ ಪಾರ್ಕ್​​​ನಲ್ಲಿ ಘಾಟಾನುಘಟಿ ದೊಡ್ಡ ದೊಡ್ಡ ಕಂಪೆನಿಗಳಿದ್ದು, ಇವುಗಳ ಜೊತೆ ಫೇಸ್​ಬುಕ್​ ಕೂಡ ಸ್ಥಾನ ಪಡೆಯಲಿದೆ.
First published:November 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ