ಕಣ್ಣು ಬಿಟ್ಟ ಶಿವಲಿಂಗ: ದೇವರ ದರ್ಶನಕ್ಕೆ ಮುಗಿಬಿದ್ದ ಜನರು; ಏನಿದರ ಹಿಂದಿನ ಮರ್ಮ?

ಶಿವಲಿಂಗಕ್ಕೆ ಕಣ್ಣು ಬಂದಿರುವುದು ಇಲ್ಲಿನ ಜನರಿಗೆ ಅಚ್ಚರಿ ಮೂಡಿಸಿರುವುದು ಸುಳ್ಳಲ್ಲ. ಆದರೆ, ಇದೇ ಮೊದಲ ಬಾರಿ ಈ ಶಿವಲಿಂಗಕ್ಕೆ ಕಣ್ಣು ಬಂದಿಲ್ಲ. ಈ ಹಿಂದೆ 2004 ರಲ್ಲಿಯೂ ಕೂಡ ಈ ಶಿವಲಿಂಗ ಇದೇ ರೀತಿ ಕಣ್ಣು ಬಿಟ್ಟಿತ್ತು

ಶಿವಲಿಂಗ

ಶಿವಲಿಂಗ

  • Share this:
ಚಿಕ್ಕೋಡಿ (ಫೆ.1 ):  ಗಣೇಶ ಹಾಲು ಕುಡಿದ,  ಭಗವಂತ ಹಣ್ಣು ತಿಂದ ಇಂತಹ ವಿಚಿತ್ರ ಘಟನೆಗಳ ಕುರಿತು ಕೇಳಿರುತ್ತೀರಾ. ಈಗ ಈಶ್ವರನದು. ಇಲ್ಲಿನ ದೇಗುಲವೊಂದರಲ್ಲಿ ಶಿವ ಕಣ್ಣು ಬಿಟ್ಟಿದ್ದಾನೆ ಎಂದು ಜನರು ತಂಡೋಪತಂಡವಾಗಿ ಬಂದು ಶಿವಲಿಂಗದ ದರ್ಶನ ಪಡೆಯುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದ ಬಣಗಾರ ಓಣಿಯ ಶಂಕರಲಿಂಗ ದೇವಸ್ಥಾನದಲ್ಲಿ ಇದ್ದಕ್ಕಿಂದ್ದಂತೆ  ಇಲ್ಲಿರುವ ಶಿವಲಿಂಗಕ್ಕೆ ಕಣ್ಣು ಬಂದಿದೆ ಎಂದು ಜನರು ದೇವರ ದರ್ಶನಕ್ಕೆ ಮುಗಿಬೀಳುತ್ತಿದ್ದಾರೆ. ಬೆಳಗಿನ ಪೂಜೆ ಮುಗಿಸಿಕೊಂಡು ಪೂಜಾರಿ ತೆರಳಿದ್ದರು. ಬಳಿಕ ಅದೇ ಗ್ರಾಮದ ರಾಜೇಶ್ವರಿ ಭೂತಿ ಎಂಬುವವರು ನಿತ್ಯದಂತೆ ಶಿವಲಿಂಗನ ದರ್ಶನ ಪಡೆಯಲು ಎಂದು ದೇವಸ್ಥಾನಕ್ಕೆ ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಹಣೆಯ ಮೇಲೆ ವಿಭೂತಿ ಹಚ್ಚಿದ್ದ ಕೆಳ ಭಾಗದಲ್ಲಿ ಕಣ್ಣುಗಳ ರೀತಿಯಲ್ಲಿ ದೃಶ್ಯ ಕಂಡು ಬಂದಿದೆ. ಥೇಟ್​​ ಶಿವ ಕಣ್ಣು ಬಿಟ್ಟಿರುವ ರೀತಿ ದೃಶ್ಯ ಕಂಡು ಬಂದಿದೆ.  ಇದನ್ನ ಗಮನಿಸಿ ಮಹಿಳೆ ದೇವಸ್ಥಾನ ಪೂಜಾರಿ ಗಮನಕ್ಕೆ ತಂದು ಇಡೀ ಊರಿಗೆ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿದೆ. 

ಈ ಸುದ್ದಿ ತಿಳಿಯುತ್ತಿದ್ದಂತೆ ಜನರು ದೇವರ ದರ್ಶನಕ್ಕೆ ಮುಗಿಬಿದ್ದಿದ್ದಾರೆ. ಗ್ರಾಮದಲ್ಲಿ ಮಾತ್ರವಲ್ಲದೇ ಗೋಕಾಕ ನಗರಕ್ಕೂ ಈ ಸುದ್ದಿ ಹಬ್ಬಿದ್ದು, ಇದನ್ನು ತಿಳಿದ ಅಕ್ಕಪಕ್ಕದ ಗ್ರಾಮಸ್ಥರು ಕೂಡ ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದಾರೆ. ಭಾನುವಾರ ರಾತ್ರಿ ದೇವಾಸ್ಥಾನದ ಸುತ್ತ ಜನಸಾಗರ ಹಬ್ಬಿದ್ದು, ದೇವರ ದರ್ಶನಕ್ಕೆ ಜನರು ಕಾದು ಕುಳಿತ ದೃಶ್ಯ ಕಂಡು ಬಂದಿತು.

ಇದನ್ನು ಓದಿ: ಅರ್ಥವ್ಯವಸ್ಥೆಯ ಪುನಶ್ಚೇತನದ ಬಜೆಟ್​ ಎಂದ ಸಿಎಂ; ಆತ್ಮ ಬರ್ಬಾದ್​ ಬಜೆಟ್​ ಎಂದ ಸಿದ್ದರಾಮಯ್ಯ

ಈ ಹಿಂದೆಯೂ ಬಂದಿತ್ತು ಕಣ್ಣು: 

ಶಿವಲಿಂಗಕ್ಕೆ ಕಣ್ಣು ಬಂದಿರುವುದು ಇಲ್ಲಿನ ಜನರಿಗೆ ಅಚ್ಚರಿ ಮೂಡಿಸಿರುವುದು ಸುಳ್ಳಲ್ಲ. ಆದರೆ, ಇದೇ ಮೊದಲ ಬಾರಿ ಈ ಶಿವಲಿಂಗಕ್ಕೆ ಕಣ್ಣು ಬಂದಿಲ್ಲ. ಈ ಹಿಂದೆ 2004 ರಲ್ಲಿಯೂ ಕೂಡ ಈ ಶಿವಲಿಂಗ ಇದೇ ರೀತಿ ಕಣ್ಣು ಬಿಟ್ಟಿತ್ತು. ಈ ಕುರಿತು ಮಾತನಾಡಿರುವ ದೇವಾಲಯದ ಅರ್ಚಕರು ಈ ಹಿಂದೆ ಕೂಡ ಶಿವನ ಲಿಂಗದಲ್ಲಿ ಕಣ್ಣುಗಳು ಮೂಡಿದ್ದವು. ಆಗ ಎಲ್ಲರಿಗೂ ಒಳ್ಳೆಯದೇ ಆಗಿತ್ತು. ಈಗ ಮತ್ತೆ ಶಿವ ಕಣ್ತೆರೆದಿದ್ದಾನೆ. ಇದರಿಂದ ಜಗತ್ತಿಗೆ ಒಕ್ಕರಿಸಿರುವ ಮಾಹಾಮಾರಿ ದೂರವಾಗಲಿದೆ ಎಂಬ ಶುಭಸೂಚಕವಿದು ಎನ್ನುತ್ತಾರೆ.

ಶಿವಲಿಂಗದಲ್ಲಿ ಕಣ್ಣು ಮೂಡಿರುವ ವೈಜ್ಞಾನಿಕ ಕಾರಣ ತಿಳಿದು ಬಂದಿಲ್ಲ.ಒಟ್ಟಿನಲ್ಲಿ   ವಿಜ್ಞಾನ ತಂತ್ರಜ್ಞಾನ ಇಷ್ಟೊಂದು ಮಂದುವರೆದಿದ್ದರೂ ಸಹ ನಮ್ಮ ದೇಶದಲ್ಲಿ ಭಕ್ತಿ ಭಾವೈಕ್ಯತೆಗೇನೂ ಕಡಿಮೆ ಇಲ್ಲ. ಇದರ ಮಧ್ಯೆ  ಹೀಗೆ ಶಿವ ಕಣ್ಣು ಬಿಟ್ಟ ಗಣೇಶ ಹಾಲು ಕುಡಿದ ಎಂಬ ಚಮತ್ಕಾರಗಳು ನಡೆಯುತ್ತಲೆ ಬಂದಿದ್ದು ಜನ ಮರುಳು ಜಾತ್ರೆ ಮರುಳು ಎಂಬಂತ ಸಂದೇಹ ಪ್ರಜ್ಞಾವಂತರಲ್ಲಿ ಮೂಡುವಂತೆ ಮಾಡಿದೆ.
Published by:Seema R
First published: