ಮಿಂಟೋ ಆಸ್ಪತ್ರೆಯಲ್ಲಿ ಸಿದ್ದರಾಮಯ್ಯಗೆ ಕಣ್ಣಿನ ಶಸ್ತ್ರಚಿಕಿತ್ಸೆ; ವೈದ್ಯರ ಸೂಚನೆಯಂತೆ ವಾರದಿಂದ ವಿಶ್ರಾಂತಿಯಲ್ಲಿರುವ ಮಾಜಿ ಸಿಎಂ

ಶಸ್ತ್ರಚಿಕಿತ್ಸೆ ಬಳಿಕ ಇಂದು ಮತ್ತೆ ಮಿಂಟೋ ಆಸ್ಪತ್ರೆಗೆ ಬಂದ ಸಿದ್ದರಾಮಯ್ಯ ಅವರು ಕಣ್ಣಿನ ತಪಾಸಣೆ ಮಾಡಿಸಿಕೊಂಡಿದ್ದಾರೆ. ಇದೇ ವೇಳೆ ಅವರ ಮಗ ಯತೀಂದ್ರ ಸಿದ್ದರಾಮಯ್ಯ, ಕುಟುಂಬದ ಆಪ್ತ ವೈದ್ಯ ರವಿಕುಮಾರ್​ ಕೂಡ ಜೊತೆಗಿದ್ದರು.

HR Ramesh | news18
Updated:August 14, 2019, 12:33 PM IST
ಮಿಂಟೋ ಆಸ್ಪತ್ರೆಯಲ್ಲಿ ಸಿದ್ದರಾಮಯ್ಯಗೆ ಕಣ್ಣಿನ ಶಸ್ತ್ರಚಿಕಿತ್ಸೆ; ವೈದ್ಯರ ಸೂಚನೆಯಂತೆ ವಾರದಿಂದ ವಿಶ್ರಾಂತಿಯಲ್ಲಿರುವ ಮಾಜಿ ಸಿಎಂ
ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ತಪಾಸಣೆ ಮಾಡಿಸಿಕೊಂಡ ಸಿದ್ದರಾಮಯ್ಯ, ಅವರ ಮಗ ಯತೀಂದ್ರ ಸಿದ್ದರಾಮಯ್ಯ, ಆಪ್ತ ವೈದ್ಯ ರವಿಕುಮಾರ್ ಹಾಗೂ ಆಸ್ಪತ್ರೆಯ ವೈದ್ಯರು ಜೊತೆಯಲ್ಲಿದ್ದಾರೆ.
  • News18
  • Last Updated: August 14, 2019, 12:33 PM IST
  • Share this:
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದ ಮಿಂಟೋ ಸರ್ಕಾರಿ ಆಸ್ಪತ್ರೆಯಲ್ಲಿ ವಾರದ ಹಿಂದೆ ಬಲಗಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಕಳೆದ ಏಳು ದಿನಗಳಿಂದ ವಿಶ್ರಾಂತಿಯಲ್ಲಿರುವ ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರ ಪ್ರವಾಹಪೀಡಿತ ಬಾದಾಮಿಗೆ ತೆರಳಲು ಸಾಧ್ಯವಾಗಿಲ್ಲ.

ಬಲಗಣ್ಣಿನ ಶಸ್ತ್ರಚಿಕಿತ್ಸೆ ನಂತರ ಕಡ್ಡಾಯವಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕು, ಹೊರಗೆ ಗಾಳಿಯಲ್ಲಿ ತಿರುಗಾಡುವಂತಿಲ್ಲ ಹಾಗೂ ಕಣ್ಣಿಗೆ ನೀರನ್ನು ತಾಕಿಸುವಂತಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದಾರೆ. ವೈದ್ಯರ ಸೂಚನೆಯಂತೆ ಅವರು ಕಳೆದ ಒಂದು ವಾರದಿಂದ ಎಲ್ಲೂ ಹೋಗದೆ ವಿಶ್ರಾಂತಿಯಲ್ಲಿದ್ದಾರೆ. ಇದೇ ಕಾರಣದಿಂದ ಎರಡು ದಿನದ ಹಿಂದೆ 72ನೇ ವಸಂತಕ್ಕೆ ಕಾಲಿಟ್ಟ ಅವರು ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡಿರಲಿಲ್ಲ.

ಶಸ್ತ್ರಚಿಕಿತ್ಸೆ ಬಳಿಕ ಇಂದು ಮತ್ತೆ ಮಿಂಟೋ ಆಸ್ಪತ್ರೆಗೆ ಬಂದ ಸಿದ್ದರಾಮಯ್ಯ ಅವರು ಕಣ್ಣಿನ ತಪಾಸಣೆ ಮಾಡಿಸಿಕೊಂಡಿದ್ದಾರೆ. ಇದೇ ವೇಳೆ ಅವರ ಮಗ ಯತೀಂದ್ರ ಸಿದ್ದರಾಮಯ್ಯ, ಕುಟುಂಬದ ಆಪ್ತ ವೈದ್ಯ ರವಿಕುಮಾರ್​ ಕೂಡ ಜೊತೆಗಿದ್ದರು.

ಇದನ್ನು ಓದಿ: 72ನೇ ವಸಂತಕ್ಕೆ ಕಾಲಿಟ್ಟ ಸಿದ್ದರಾಮಯ್ಯ, ನೆರೆ ಕಾರಣದಿಂದ ಜನ್ಮ ದಿನಾಚರಿಸಿಕೊಳ್ಳದ ಮಾಜಿ ಸಿಎಂ; ಶಿಷ್ಯನಿಗೆ ಶುಭಾಶಯ ಕೋರಿದ ದೇವೇಗೌಡ

ಇಡೀ ಉತ್ತರಕರ್ನಾಟಕ ಪ್ರವಾಹದಿಂದ ಕೊಚ್ಚಿ ಹೋಗಿ, ಅಲ್ಲಿನ ಜನರು ನಿರ್ಗತಿಕರಾಗಿದ್ದಾರೆ. ಬಾಗಲಕೋಟೆಯ ಬಾದಾಮಿ ಕೂಡ ಪ್ರವಾಹಕ್ಕೆ ಸಿಲುಕಿ ತತ್ತರಿಸಿ ಹೋಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರೂ ಇದೇ ಕ್ಷೇತ್ರದ ಶಾಸಕರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತ್ರ ಕ್ಷೇತ್ರಕ್ಕೆ ಭೇಟಿ ನೀಡದೆ, ಉದಾಸೀನ ತೋರಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಗಳ ಸುರಿಮಳೆಗೈಯ್ಯುತ್ತಿದ್ದಾರೆ. ಆದರೆ, ಹೊರಗೆ ಎಲ್ಲೂ ಹೋಗುವಂತಿಲ್ಲ ಎಂಬ ವೈದ್ಯರ ಸೂಚನೆಮೇರೆಗೆ ಸಿದ್ದರಾಮಯ್ಯ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ