• Home
  • »
  • News
  • »
  • state
  • »
  • KSRTC: ಸಂಬಳ ಕೊಡಲು ದುಡ್ಡಿಲ್ಲ, ಹೊಸ ಕಟ್ಟಡ ಬೇಕಾ?; 300 ಕೋಟಿ ವೆಚ್ಚದಲ್ಲಿ ಬಿಲ್ಡಿಂಗ್ ನಿರ್ಮಾಣಕ್ಕೆ ಮುಂದಾದ KSRTC

KSRTC: ಸಂಬಳ ಕೊಡಲು ದುಡ್ಡಿಲ್ಲ, ಹೊಸ ಕಟ್ಟಡ ಬೇಕಾ?; 300 ಕೋಟಿ ವೆಚ್ಚದಲ್ಲಿ ಬಿಲ್ಡಿಂಗ್ ನಿರ್ಮಾಣಕ್ಕೆ ಮುಂದಾದ KSRTC

KSRTC ಕಚೇರಿ

KSRTC ಕಚೇರಿ

ಶಾಂತಿನಗರದ ಕೇಂದ್ರ ಕಚೇರಿ ಆವರಣದಲ್ಲಿ 2 ಎಕರೆ 10 ಗುಂಟೆ ಜಮೀನು ಇದೆ. ಇಷ್ಟು ಜಾಗದಲ್ಲಿ ಬಳಿಸಿಕೊಂಡು ಸುಮಾರು 300  ಕೋಟಿ ವೆಚ್ಚದಲ್ಲಿ ಬಹುಮಹಡಿ ಕಟ್ಟಡ ಸಂಕೀರ್ಣ ವನ್ನ ನಿರ್ಮಿಸುವ ಯೋಜನೆ ರೂಪಿಸಲಾಗಿದೆ.

  • Share this:

ಸಾರಿಗೆ ನಿಗಮಗಳು (Transport Corporations) ಖಜಾನೆಯಲ್ಲಿ ದುಡ್ಡಿಲ್ಲ ಅಂತ  ಬೊಬ್ಬೆ ಹೊಡೆಯುತ್ತಿವೆ. ಆದರೆ ಅಧಿಕಾರಿಗಳು ಮಾತ್ರ ಬಿಟ್ಟಿ ಶೋಕಿ ಮಾಡಲು ಹೊರಟ್ಟಿದ್ದಾರೆ. ಹೌದು ಯಾರು ಹೇಳೋರಿಲ್ಲ- ಕೇಳೋರಿಲ್ಲ ಅಂತ ಇವರ್ದು ಆಡಿದ್ದೇ ಆಟ ನಡೆದಿದ್ದೇ ದಾರಿ ಆಗಿದೆ. ಆರ್ಥಿಕ ಸಂಕಷ್ಟದ (Financial Distress) ಸಂದಿಗ್ದ ಕಾಲದಲ್ಲೂ ದಿಢೀರ್ ಅಂತ ಹೊಸ ಕಟ್ಟಡ ಚಿಂತೆ ಶುರುಮಾಡಿದ್ದಾರೆ. KSRTC ಕೇಂದ್ರ ಕಚೇರಿ (Central Office) ಕಟ್ಟಡ ಕೆಡವಿ ಹೊಸ ಸಂಕೀರ್ಣ ನಿರ್ಮಿಸಲು ಮುಂದಾಗಿದ್ದರೆ. ಅಚ್ಚರಿ ಎನಿಸೋದು ಸುಸ್ಥಿಯಲ್ಲಿರುವ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ಕಟ್ಟಲು ಹೊರಟಿರೋದರ ಬಗ್ಗೆ.


KSRTC ಅಧಿಕಾರಿಗಳನ್ನ ಹೇಳೋರಿಲ್ಲ-ಕೇಳೋರಿಲ್ವಾ..?


ಕೆಎಸ್ಆರ್​ಟಿಸಿ ಅಂದರೆ ದೇಶದ ನಂ.1 ಸಾರಿಗೆ ಸಂಸ್ಥೆ. ಇದೇ ಸಂಸ್ಥೆ ಸಾರಿಗೆ ಸಿಬ್ಬಂದಿಯ ಮುಷ್ಕರ, ಕೊರೊನಾ ಸೋಂಕಿನ ಹೊಡೆತದಿಂದಾಗಿ ನಷ್ಟಕ್ಕೆ ಕೂಪಕ್ಕೆ ಸಿಲುಕಿದೆ. ಕಳೆದ ಎರಡು ವರ್ಷಗಳಿಂದ ನೌಕರರಿಗೆ ಸಂಬಳ ನೀಡಕ್ಕೂ ಆಗದೆ ಪರದಾಡ್ತಿದೆ. ಇಂತಹ ಪರಿಸ್ಥಿತಿಯಲ್ಲೂ  ಅಧಿಕಾರಿಗಳು KSRTCಯನ್ನ ಮುಳಗುಸುವ ಪ್ಲಾನ್ ಒಂದನ್ನು ಮಾಡಿದ್ದಾರೆ.


ಕಟ್ಟಡ ಕೆಡವಿ  ಹೊಸ ಕಟ್ಟಡ ನಿರ್ಮಿಸಲು ನಿರ್ಧಾರ


ಹೌದು, KSRTC  ಕೇಂದ್ರ ಕಚೇರಿ ಕಟ್ಟಿ  ಇನ್ನೂ 50 ವರ್ಷ ಆಗಿಲ್ಲ. ಕಟ್ಟಡ ಸುಸ್ಥಿತಿಯಲ್ಲಿದ್ರೂ ಕಟ್ಟಡ ಕೆಡವಿ  ಹೊಸ ಕಟ್ಟಡ ನಿರ್ಮಿಸಲು ನಿರ್ಧಾರ ಮಾಡಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಈ ಮೂರು ಅಂತಸ್ತಿನ  ಕಟ್ಟಡ ಗಟ್ಟಿಮುಟ್ಟಾಗಿದ್ರೂ ಇದೇ ಕಟ್ಟಡ ಕೆಡವಿ ವಾಣಿಜ್ಯ ಕಟ್ಟಡ ನಿರ್ಮಿಸಲು ಅಧಿಕಾರಿಗಳ ಮುಂದಾಗಿದ್ದಾರೆ. ಇದರಿಂದ ದುಡ್ಡು ನುಂಗುವ ಸಂಚಿದೆ ಎಂದು ಸಾರಿಗೆ ಮುಖಂಡ ಆರೋಪಿಸಿದ್ದಾರೆ.


ಇದನ್ನೂ ಓದಿ: Karnataka Politics: ಜಮೀರ್ ಅಹ್ಮದ್​ಖಾನ್ ನಮ್ಮ ಪಕ್ಷದ ಬಾಹುಬಲಿ; ಸತೀಶ್ ಜಾರಕಿಹೊಳಿ


ಸುಸ್ಥಿತಿಯಲ್ಲಿರುವ ಕಟ್ಟಡ ಕೆಡವಿ ಹೊಸ ಸಂಕೀರ್ಣ ಕಟ್ಟಲು ಪ್ಲಾನ್!


ಶಾಂತಿನಗರದ ಕೇಂದ್ರ ಕಚೇರಿ ಆವರಣದಲ್ಲಿ 2 ಎಕರೆ 10 ಗುಂಟೆ ಜಮೀನು ಇದೆ. ಇಷ್ಟು ಜಾಗದಲ್ಲಿ ಬಳಿಸಿಕೊಂಡು ಸುಮಾರು 300  ಕೋಟಿ ವೆಚ್ಚದಲ್ಲಿ ಬಹುಮಹಡಿ ಕಟ್ಟಡ ಸಂಕೀರ್ಣ ವನ್ನ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಇಲ್ಲಿಯವರೆಗೂ ಶಾಂತಿನಗರ ಕೇಂದ್ರ ಕಚೇರಿ ಬಿರುಕು ಇಲ್ಲ. ಮಳೆ ಬಂದರೆ ಸೋರಿಕೆ ಆಗಿಲ್ಲ. ಇಲ್ಲಿ ಎಲ್ಲಾ ಸೌಲಭ್ಯಗಳು ಇದ್ದರೂ ಈ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರೋದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಈ ಅವೈಜ್ಞಾನಿಕ ನಿರ್ಧಾರ ಕೈಬಿಡಬೇಕು ಅಂತ ಸಾರಿಗೆ ನೌಕರರ ಮುಖಂಡ ವಿನಯ್ ಒತ್ತಾಯಿಸಿದ್ದಾರೆ.


ಇದನ್ನೂ ಓದಿ: H D Kumaraswamy: ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆಗೆ ಸಿದ್ಧತೆ; ಯಾವಾಗ ಎಲೆಕ್ಷನ್ ಬಂದ್ರು ನಾವ್ ರೆಡಿ


ಸಂಬಳ ನೀಡೋಕೆ ದುಡ್ಡಿಲ್ಲ.. ಹೊಸ ಕಟ್ಟಡ ಬೇಕಾ?


ಒಟ್ಟಿನಲ್ಲಿ ಸಾರಿಗೆ ನಿಗಮಗಳಲ್ಲಿ ನೌಕರರಿಗೆ ಸಂಬಳ ನೀಡೋಕೆ ದುಡ್ಡಿಲ್ಲ. ಬಸ್ ಖರೀದಿಗೂ ದುಡ್ಡು ಇಲ್ಲ. ಆರ್ಥಿಕ ದಿವಾಳಿ ಹಂತದಲ್ಲಿರೋ ನಿಗಮ ಕೋಟಿ ಕೋಟಿ ವೆಚ್ಚದಲ್ಲಿ ಗಟ್ಟಿಮುಟ್ಟಾದ ಕಟ್ಟಡ ಕೆಡವಿ ಹೈಟೆಕ್ ಸಂಕೀರ್ಣ ಮಾಡೋಕೆ ಹೊರಟಿದೆ. ಈ ಯೋಜನೆ ಹಿಂದೆ ಭಾರಿ ಅಕ್ರಮದ ವಾಸನೆ ಬರುತ್ತಿದೆ. ನಿಗಮದ ಸದ್ಯದ ಪರಿಸ್ಥಿತಿಯಲ್ಲಿ ಸುಸ್ಥಿತಿಯಲ್ಲಿರುವ ಕಟ್ಟಡ ಕೆಡವುವ ಅಗತ್ಯವಿದೆಯೇ.? ಹೊಸ ಕಟ್ಟಡ ಹೆಸರಿನಲ್ಲಿ ಕೋಟಿ ಕೋಟಿ ಜನರ ಹಣ ಲೂಟಿ ಮಾಡೋಕೆ ನಿರ್ಧಾರ ಮಾಡಿರೋದು ನಿಜಕ್ಕೂ ವಿಪರ್ಯಾಸವೇ ಸರಿ.


KSRTCಯಿಂದ ಬಸ್​ ಪಾಸ್​ ಅವಧಿ ವಿಸ್ತರಣೆ


ಬೆಂಗಳೂರು: ಪದವಿ (Degree), ವೃತ್ತಿಪರ ಕೋರ್ಸ್ ಹಾಗೂ ಸ್ನಾತಕೋತ್ತರ ಪದವಿಯಲ್ಲಿ (Master Degree) ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡ್ತಿರೋ ವಿದ್ಯಾರ್ಥಿಗಳ ಹಿತದೃಷ್ಟಿ ಹಿನ್ನೆಲೆ KSRTC ವಿದ್ಯಾರ್ಥಿ ಪಾಸ್​ಗಳ (Student Pass) ಅವಧಿ ವಿಸ್ತರಣೆ ಮಾಡಿದೆ. ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 2022ರ ಆಗಸ್ಟ್, ಸೆಪ್ಟೆಂಬರ್, ನವೆಂಬರ್ ವರೆಗೂ ಪರೀಕ್ಷೆಗಳು (Exam) ನಡೆಯಲಿದೆ. ಈ ಹಿನ್ನಲೆ ಪಾಸ್ ಅವಧಿ ವಿಸ್ತರಣೆಗೆ (Extension) ನಿರ್ದೇಶನ ಬಂದಿತ್ತು. ಹೀಗಾಗಿ ಬಸ್​ ಪಾಸ್​ ಅವಧಿ ವಿಸ್ತರಣೆಗೆ KSRTC ನಿರ್ಧರಿಸಿದೆ

Published by:Pavana HS
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು