ಎಸಿಪಿ ಪ್ರಭುಶಂಕರ್‌-ಇಬ್ಬರು ಇನ್ಸ್‌ಪೆಕ್ಟರ್‌ಗಳ ವಿರುದ್ದದ ಸುಲಿಗೆ ಪ್ರಕರಣ; ಎಸಿಬಿ ತನಿಖೆಗೆ ವರ್ಗಾಯಿಸಿ ಆದೇಶ

ಎರಡೂ ಪ್ರಕರಣದ ಕುರಿತು ತನಿಖೆ ನಡೆಸಿದ್ದ ಸಿಸಿಬಿ ಡಿಸಿಪಿ ಕುಲದೀಪ್ ಜೈನ್ ಮತ್ತು ರವಿಕುಮಾರ್, ಘಟನೆ ಸಂಬಂಧ ಪೊಲೀಸ್ ಅಧಿಕಾರಿ ಪ್ರಭುಶಂಕರ್ ಮತ್ತು ಇನ್ಸ್‌ಪೆಕ್ಟರ್‌ಗಳಾದ ಅಜಯ್ ಮತ್ತು ನಿರಂಜನ್ ಹಣ ವಸೂಲಿ ಮಾಡಿರುವುದನ್ನು ಸಾಬೀತುಪಡಿಸಿದ್ದರು.

ಭ್ರಷ್ಟಾಚಾರ ನಿಗ್ರಹ ದಳ ಕಚೇರಿ.

ಭ್ರಷ್ಟಾಚಾರ ನಿಗ್ರಹ ದಳ ಕಚೇರಿ.

  • Share this:
ಬೆಂಗಳೂರು (ಮೇ 14); ಹಣ ಸುಲಿಗೆ ಸೇರಿದಂತೆ ಕಾಟನ್ ಪೇಟೆ ಮತ್ತು ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎಸಿಪಿ ಪ್ರಭುಶಂಕರ್‌ ಮತ್ತು ಇಬ್ಬರು ಇನ್ಸ್‌ಪೆಕ್ಟರ್‌ಗಳಾದ ನಿರಂಜನ್ ಕುಮಾರ್ ಮತ್ತು ಅಜಯ್ ಆರೋಪಿಗಳಾಗಿದ್ದು ಈ ಪ್ರಕರಣದ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ವರ್ಗಾಯಿಸಿ ಡಿಜಿ-ಐಜಿಪಿ ಪ್ರವೀಣ್ ಸೂದ್ ಆದೇಶಿಸಿದ್ದಾರೆ.

ಬಾಣಸವಾಡಿಯಲ್ಲಿ ನಕಲಿ ಎನ್-95 ಮಾಸ್ಕ್ ಗಳನ್ನು ದಾಸ್ತಾನು ಮಾಡಿದ್ದ ತಂಡದ ಮೇಲೆ ಎಸಿಪಿ ಪ್ರಭುಶಂಕರ್ ಮತ್ತು ತಂಡ ದಾಳಿ ನಡೆಸಿತ್ತು. ಈ ವೇಳೆ 20 ಲಕ್ಷ ಮೌಲ್ಯದ ನಕಲಿ ಎನ್ -95 ಮಾಸ್ಕ್ ಗಳನ್ನು ಜಪ್ತಿ ಮಾಡಲಾಗಿತ್ತು. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳದಲ್ಲಿದ್ದ ಆರೋಪಿಯನ್ನು ಬಂಧಿಸದೆ 15 ಲಕ್ಷ ಹಣ ಕಿಕ್ ಬ್ಯಾಕ್ ಪಡೆದಿರುವ ಆರೋಪ ಕೇಳಿ ಬಂದಿತ್ತು.

ಮತ್ತೊಂದು ಪ್ರಕರಣದಲ್ಲಿ ಇದೇ ಎಸಿಬಿ ಅಧಿಕಾರಿ ಪ್ರಭುಶಂಕರ್ ಹಾಗೂ ಇನ್ಸ್‌ಪೆಕ್ಟರ್‌ಗಳಾದ ನಿರಂಜನ್ ಕುಮಾರ್ ಮತ್ತು ಅಜಯ್ ಪ್ರತಿಷ್ಠಿತ ಕಂಪೆನಿಯ ಸಿಗರೇಟ್ ವಿತರಕರಿಂದ 62.5 ಲಕ್ಷ ವಸೂಲಿ ಮಾಡಿದ್ದಾರೆ ಎಂಬುದು ಬೆಳಕಿಗೆ ಬಂದಿತ್ತು. ಈ ಪ್ರಕರಣ ಸಹ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಹೀಗಾಗಿ ಆರೋಪಿತ ಎಲ್ಲಾ ಅಧಿಕಾರಿಗಳನ್ನು ಅಮಾನತು ಮಾಡಿ ಇವರ ವಿರುದ್ಧ ತನಿಖೆಗೂ ಆದೇಶಿಸಲಾಗಿತ್ತು.

ಈ ಎರಡೂ ಪ್ರಕರಣದ ಕುರಿತು ತನಿಖೆ ನಡೆಸಿದ್ದ ಸಿಸಿಬಿ ಡಿಸಿಪಿ ಕುಲದೀಪ್ ಜೈನ್ ಮತ್ತು ರವಿಕುಮಾರ್, ಘಟನೆ ಸಂಬಂಧ ಪೊಲೀಸ್ ಅಧಿಕಾರಿ ಪ್ರಭುಶಂಕರ್ ಮತ್ತು ಇನ್ಸ್‌ಪೆಕ್ಟರ್‌ಗಳಾದ ಅಜಯ್ ಮತ್ತು ನಿರಂಜನ್ ಹಣ ವಸೂಲಿ ಮಾಡಿರುವುದನ್ನು ಸಾಬೀತುಪಡಿಸಿದ್ದರು.

ಅಲ್ಲದೆ, ಈ ಕುರಿತ ತನಿಖಾ ವರದಿಯನ್ನು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಿದ್ದರು. ಆದರೆ, ಇದೀಗ ಪ್ರಕರಣದ ಗಂಭೀರತೆ ಹಿನ್ನೆಲೆ ಈ ಪ್ರಕರಣ ವಿಚಾರಣೆಯನ್ನು ಇದೀಗ ಭ್ರಷ್ಟಾಚಾರ ತಡೆ ಕಾಯ್ದೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವರ್ಗಾಯಿಸಲಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿಂದು 22 ಮಂದಿಗೆ ಕೊರೋನಾ; ಸೋಂಕಿತರ ಸಂಖ್ಯೆ 981ಕ್ಕೇರಿಕೆ, ಎರಡು ಸಾವು
First published: