Hijab controversy: ರಾಜ್ಯಾದ್ಯಂತ ಫೆ.16ರ ವರೆಗೆ ಕಾಲೇಜಿಗೆ ರಜೆ ವಿಸ್ತರಣೆ, ಉನ್ನತ ಶಿಕ್ಷಣ ಇಲಾಖೆಯಿಂದ ಸುತ್ತೋಲೆ

ಬುಧವಾರದವರೆಗೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪ್ರಥಮ ಪಿಯು, ದ್ವಿತೀಯ ಪಿಯು,  ಡಿಗ್ರಿ ಹಾಗೂ ಮಾಸ್ಟರ್ ಡಿಗ್ರಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಹಿಜಾಬ್​, ಕೇಸರಿ ವಿವಾದ

ಹಿಜಾಬ್​, ಕೇಸರಿ ವಿವಾದ

  • Share this:
ಹಿಜಾಬ್ (Hijab) , ಕೇಸರಿ (Kesari) ವಿವಾದ ರಾಜ್ಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಕಾಲೇಜು ವಿದ್ಯಾರ್ಥಿಗಳು ತರಗತಿ ತೊರೆದು ಬೀದಿಗಳಿದಿದ್ದಾರೆ. ಗಲಾಟೆ, ಘರ್ಷಣೆಗಳು ಹೆಚ್ಚಾಗಿತ್ತು. ಹೀಗಾಗಿ ಸರ್ಕಾರ ಶಾಲೆ ಕಾಲೇಜಿಗೆ ರಜೆ ಘೋಷಣೆ ಮಾಡಿತ್ತು ಇದೀಗ ಶಾಲೆ ತೆರೆಯಲು ಸರ್ಕಾರ ನಿರ್ಧರಿಸಿದ್ದು, ಹಲವು ಮುನ್ನೆಚ್ಚರಿಕೆ ಕೈಗೊಂಡಿದೆ. ಶಾಲೆ ಆರಂಭಿಸಲು ಗ್ರೀನ್​ ಸಿಗ್ನಲ್​ ಕೊಟ್ಟಿರೋ ಸರ್ಕಾರ ಕಾಲೇಜು (College) ತೆರೆಯಲು ಹಿಂದೇಟು ಹಾಕ್ತಿದೆ. ಹೀಗಾಗಿ ರಾಜ್ಯದಲ್ಲಿ ಇನ್ನು 5 ದಿನಗಳ ಕಾಲ ಕಾಲೇಜಿಗೆ ರಜೆ ಘೋಷಿಸಿದೆ.  ಫೆಬ್ರವರಿ 16ರ ವರೆಗೆ  ಕಾಲೇಜಿಗೆ ರಜೆ ವಿಸ್ತರಣೆ (Leave Extension) ಮಾಡಿ ಉನ್ನತ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. 

ಫೆಬ್ರವರಿ 16ರ ವರೆಗೆ  ಕಾಲೇಜಿಗೆ ರಜೆ ವಿಸ್ತರಣೆ

ಬುಧವಾರದವರೆಗೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪ್ರಥಮ ಪಿಯು, ದ್ವಿತೀಯ ಪಿಯು,  ಡಿಗ್ರಿ ಹಾಗೂ ಮಾಸ್ಟರ್ ಡಿಗ್ರಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಿದೆ. ಫೆಬ್ರವರಿ 16ರ ವರೆಗೆ  ಕಾಲೇಜಿಗೆ ರಜೆ ವಿಸ್ತರಣೆ ಮಾಡಿ ಉನ್ನತ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಸೋಮವಾರದಿಂದ 9, 10ನೇ ತರಗತಿ ಆರಂಭ

ಗೃಹ ಕಚೇರಿ ಕೃಷ್ಣಾದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಬಸವರಾಜ ಸಭೆ ನಡೆಸಿದ್ರು. ಸಭೆ ಬಳಿಕ ಮಾತಾಡಿದ ಸಚಿವ ಅರಗ ಜ್ಞಾನೇಂದ್ರ , ಸಿಎಂ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು, ಶಿಕ್ಷಣ ಅಧಿಕಾರಿಗಳ ಜೊತೆ ಸಭೆ ನಡೀತು ಸೋಮವಾರದಿಂದ 9, 10ನೇ ತರಗತಿ ಆರಂಭವಾಗಲಿದೆ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿರೋದಾಗಿ ಹೇಳಿದ್ರು. ಸೂಕ್ಷ್ಮ ಪ್ರದೇಶಗಳಿಗೆ ಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ ಅಂತ ಸಚಿವರು ತಿಳಿಸಿದ್ರು.

ಇದನ್ನೂ ಓದಿ: Hijab Row: ಸೋಮವಾರದಿಂದ ಶಾಲೆಗಳು ಓಪನ್: ಮುಂದಿನ ಆದೇಶದವರೆಗೆ ಕಾಲೇಜುಗಳಿಗೆ ರಜೆ..!

ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ

ಪ್ರತಿಯೊಬ್ಬರು ಉಚ್ಛ ನ್ಯಾಯಾಲಯದ ಆದೇಶ ಪಾಲಿಸಬೇಕು, ಸಮಾಜಘಾತುಕ ಶಕ್ತಿಯಗಳನ್ನು ಪರಿಶೀಲಿಸಿ ತಕ್ಷಣದ ಕ್ರಮವನ್ನು ತೆಗೆದುಕೊಳ್ಳಲು ಸ್ಥಳೀಯ ಆಡಳಿತಕ್ಕೆ ಅಧಿಕಾರ ನೀಡಲಾಗಿದೆ ಎಂದ್ರು.  ಮುಂದಿನ ದಿನಗಳಲ್ಲಿ ಪರಿಸ್ಥಿತಿ ತಿಳಿದುಕೊಂಡು ಕಾಲೇಜನ್ನು ಕೂಡ ಆರಂಭ ಮಾಡಲಾಗುವುದು ಅಂತ ಸಚಿವರು ಹೇಳಿದ್ದಾರೆ. ಸಿಎಂ ಪ್ರತಿಯೊಂದು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಆಯಾ ಸೂಕ್ಷ್ಮ ಪ್ರದೇಶದಲ್ಲಿ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ.

ಪರಿಸ್ಥಿತಿ ನೋಡಿಕೊಂಡು ಕಾಲೇಜು ಓಪನ್​

ಕಳೆದ 2 ವರ್ಷದಲ್ಲಿ ಕೊವಿಡ್‌ನಿಂದ ವಿದ್ಯಾರ್ಥಿಗಳ ಭವಿಷ್ಯ ಅಯೋಮಯವಾಗಿದೆ. ವಿದ್ಯಾರ್ಥಿಗಳಿ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಪಾಠಗಳು ನಡೆಸಬೇಕು ಹೀಗಾಗಿ ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಭರವಸೆ ತುಂಬಬೇಕಿದೆ. ಸೋಮವಾರ ಪರಿಸ್ಥಿತಿ ಅವಲೋಕನ ಮಾಡಿ ಕಾಲೇಜು  ಆರಂಭದ ಬಗ್ಗೆ ಚರ್ಚೆ ಮಾಡಲಾಗುವುದು. ಇನ್ನು ಹೈಕೋರ್ಟ್‌ನ ಆದೇಶವನ್ನು ಅಕ್ಷರಶಃ ಪಾಲಿಸ್ತಿದ್ದೇವೆ ಅಂತ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: Hijab Row Hearing: ಸದ್ಯಕ್ಕೆ ಹಿಜಾಬ್, ಕೇಸರಿ ಶಾಲು ಎರಡೂ ಬೇಡ: ಹೈಕೋರ್ಟ್ ಮೌಖಿಕ ಸೂಚನೆ

‘ಶಾಲೆಗಳಿಗೆ ಹೆಚ್ಚುವರಿ ಭದ್ರತೆ ನೀಡಿ’

ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಿ. ಸೋಮವಾರ ಹೈಸ್ಕೂಲ್ ಬಳಿ ಕಟ್ಟೆಚ್ಚರ ವಹಿಸಿ. ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ, ಸಂಘಟನೆಗಳ ಮೇಲೆ‌ ನಿಗಾ ಇಡಿ. ಇಲಾಖೆಗಳ‌ ನಡುವೆ ಸಮನ್ವಯತೆ ಇರಲಿ ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ತಾಕೀತು ಹಾಕಿದ್ದಾರೆ. ಬೀದರ್, ಬಾಗಲಕೋಟೆ, ಉಡುಪಿ, ಮೈಸೂರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದು, ಹಿಜಾಬ್, ಕೇಸರಿ ಶಾಲು ವಿಚಾರದಲ್ಲಿ ಗಲಾಟೆಯಾಗಿದ್ದ ಜಿಲ್ಲೆಗಳಲ್ಲಿ ಶಾಲೆಗಳಿಗೆ ಹೆಚ್ಚುವರಿ ಭದ್ರತೆ ನೀಡಿ ಎಂದು ಹೇಳಿದ್ದಾರೆ.

ಪ್ರಚೋದನೆಗೆ ಒಳಗಾಗದಂತೆ ಕ್ರಮ

ಆದ್ಯತೆ ಮೇರೆಗೆ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸೂಚನೆ ಕೊಡಲಾಗಿದೆ. ಹೊರಗಿನ ಪ್ರಚೋದನೆಗೆ ಒಳಗಾಗದಂತೆ ಕ್ರಮಕೈಗೊಳ್ಳುವುದು. ಧಾರ್ಮಿಕ ಮುಖಂಡರ ಜತೆ ಶಾಂತಿ ಸಭೆ ನಡೆಸುವುದು. ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸುವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾಲೇಜುಗಳ ಆರಂಭಕ್ಕೆ ಒತ್ತು ನೀಡುತ್ತೇವೆ. ಪರಿಸ್ಥಿತಿ ಗಮನಿಸಿ ಒಂದೆರಡು ದಿನಗಳಲ್ಲಿ ನಿರ್ಧಾರ ತಿಳಿಸುತ್ತೇವೆ ಎಂದು ಸಿಎಂ ಜತೆ ಸಭೆ ನಂತರ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
Published by:Pavana HS
First published: