Murder Case: ಚಿಕನ್​ ಅಂಗಡಿ ತೆರೆದಿದ್ದೇ ಕೊಲೆಗೆ ಕಾರಣವಾಯ್ತಾ? ಪ್ರವೀಣ್​ ಸಹೋದರನ ಸ್ಫೋಟಕ ಹೇಳಿಕೆ

ತಿಂಗಳ ಹಿಂದೆ ಹಲವು ಬಾರಿ ಪ್ರವೀಣ್​ಗೆ ಬೆದರಿಕೆ ಕರೆಗಳೂ ಬಂದಿತ್ತು. ಈ ವಿಚಾರವನ್ನು ಪ್ರವೀಣ್ ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ  ಎಂದು ಪ್ರವೀಣ್​ ಸಹೋದರ ರಂಜಿತ್​ ಹೇಳಿದ್ದಾರೆ.

ಕೊಲೆಯಾದ ಪ್ರವೀಣ್​

ಕೊಲೆಯಾದ ಪ್ರವೀಣ್​

  • Share this:
ದಕ್ಷಿಣ ಕನ್ನಡ (ಜು.29):  ಹಿಂದೂ ಕಾರ್ಯಕರ್ತ ಪ್ರವೀಣ್​ ನೆಟ್ಟಾರು (Praveen Nettar) ಅವರ ಹತ್ಯೆ ಬಗ್ಗೆ ಅವರ ಸಹೋದರ ರಂಜಿತ್ (Ran)​ ಸ್ಫೋಟಕ ಮಾಹಿತಿ ನೀಡಿದ್ದು, ಪ್ರವೀಣ್ ನೆಟ್ಟಾರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಹಾಕಿದ ಕೂಡಲೇ ಬೆದರಿಕೆ ಕರೆಗಳು (Threatening Calls) ಬರುತ್ತಿದ್ದವು. ಈ ಬಗ್ಗೆ ಪೊಲೀಸರಿಗೆ ತಿಳಿಸಲಾಗಿತ್ತು ಎಂದು ತಿಳಿಸಿದ್ದಾರೆ. ಇನ್ನು, ಚಿಕನ್, ಮಟನ್​, ಮೀನು ಮಾರಾಟ ದಂಧೆ ಮುಸ್ಲಿಮರ ಹಿಡಿತದಲ್ಲಿದ್ದು, ಹಿಂದೂಗಳು ಈ ವ್ಯಾಪಾರಕ್ಕೆ ಇಳಿದಿರುವುದು ಮತ್ತು 9 ತಿಂಗಳ ಹಿಂದೆ ಪ್ರವೀಣ್​ ಚಿಕನ್ ಅಂಗಡಿ (Chicken Shop) ತೆರೆದಿದ್ದು ಅವರಿಗೆ ಇಷ್ಟವಾಗಿಲ್ಲ. ಕೊಲೆಯ ಹಿಂದೆ ದೊಡ್ಡ ಜಾಲವಿದೆ ಎಂದು ಪ್ರವೀಣ್ ಹೋದರನ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಚಿಕನ್​ ಶಾಪ್​ ತೆರೆದಿದ್ದೇ ಕೊಲೆಗೆ ಕಾರಣವಾಯ್ತಾ?

ಹಿಜಾಬ್ ಪ್ರಕರಣದ ಬಳಿಕ ಮುಸ್ಲಿಮರ ಜೊತೆ ವ್ಯವಹಾರ ನಡೆಸದಿರಲು ಚಿಂತನೆ ನಡೆದಿತ್ತು. ಬೆಳ್ಳಾರೆ ಪೇಟೆಯಲ್ಲಿ ಕೆಲ ಹಿಂದೂಗಳು ಮೀನು ಮತ್ತು ಕೋಳಿ ವ್ಯಾಪಾರಗಳನ್ನು ಶುರು ಮಾಡಿದ್ರು. ಈ ವೇಳೆ ಪ್ರವೀಣ್ ಮತ್ತು ಪೃಥ್ವಿರಾಜ್ ಇಬ್ಬರು ಕೋಳಿ ಮಾಂಸ ವ್ಯಾಪಾರ ಆರಂಭಿಸಿದ್ದರು. ಇದರಿಂದಾಗಿ ಹೆಚ್ಚಿನ ಹಿಂದೂಗಳು ಇದೇ 2 ಅಂಗಡಿಗಳಲ್ಲಿ ಮಟನ್​, ಚಿಕನ್ ಖರೀದಿ ಮಾಡುತ್ತಿದ್ರು. ಇದರಿಂದಾಗಿ ಅನ್ಯ ಕೋಮಿನ ವ್ಯಾಪಾರಿಗಳ ವ್ಯವಹಾರಕ್ಕೆ ಹೊಡೆತ ಬಿದ್ದಿತ್ತು.

ಬೆದರಿಕೆ ಕರೆ ಬಂದ್ರು ಎಚ್ಚೆತ್ತುಕೊಳ್ಳಲಿಲ್ಲ ಪ್ರವೀಣ್​

ತಿಂಗಳ ಹಿಂದೆ ಹಲವು ಬಾರಿ ಪ್ರವೀಣ್​ಗೆ ಬೆದರಿಕೆ ಕರೆಗಳೂ ಬಂದಿತ್ತು. ಈ ವಿಚಾರವನ್ನು ಪ್ರವೀಣ್ ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ  ಎಂದು ಪ್ರವೀಣ್​ ಸಹೋದರ ರಂಜಿತ್​ ಹೇಳಿದ್ದಾರೆ. ಪ್ರವೀಣ್ ಬರ್ಬರ ಹತ್ಯೆಯ ಬಳಿಕ ಆತನ ಸಹೋದರ ನೀಡಿರೋ ಸ್ಫೋಟಕ ಹೇಳಿಕೆ ಗಮನಿಸಿದ್ರೆ ಕೊಲೆ ಹಿಂದೆ ವ್ಯಾಪಾರ ಬಹಿಷ್ಕಾರದ ಸೇಡೂ ಇದೆಯಾ ಅನ್ನೋ ಅನುಮಾನ ಹುಟ್ಟುತ್ತದೆ.

ಇದನ್ನೂ ಓದಿ:  Siddaramaiah ಅಧಿಕಾರವಧಿಯಲ್ಲಿ 32 ಕೊಲೆ, ನಾವು ಎಲ್ಲವನ್ನು ನಿಭಾಯಿಸಿದ್ದೇವೆ: CM Bommai

ಕೊಲೆ ಹಿಂದೆ ಹೊರ ರಾಜ್ಯದ ಲಿಂಕ್​

ಕೇರಳ ಬಾರ್ಡರ್‌ನಲ್ಲಿ ಸಿಸಿಟಿವಿ ಅಳವಡಿಸಿ, ಚೆಕ್ ಪೋಸ್ಟ್ ಹಾಕಿ ಕಣ್ಗಾವಲು ಇಡಲು ಸೂಚನೆ ನೀಡಲಾಗಿದೆ. ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಕ್ಯಾಂಪ್ ಮಾಡಲು ತಿಳಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ ಹೆಚ್ಚುವರಿ ಕೆ.ಎಸ್. ಆರ್.ಪಿ ತುಕಡಿ ನಿಯೋಜಿಸಲು ಸೂಚನೆ ನೀಡಲಾಗಿದೆ. ರಾತ್ರಿ ಹೊತ್ತು ಹೆಚ್ಚು ಗಸ್ತು ನಿಯೋಜನೆ ಮಾಡಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಪ್ರವೀಣ್​ ಕೊಲೆ ಪ್ರಕರಣ NIAಗೆ

ಪ್ರವೀಣ್ ಹತ್ಯೆ ಪ್ರಕರಣವನ್ನ NIAಗೆ ಹಸ್ತಾಂತರ ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ (CM Basvaraja Bommai) ಹೇಳಿದ್ದಾರೆ.  ಪ್ರವೀಣ್ ಹತ್ಯೆ ಪ್ರಕರಣ (Praveen Murder Case) ಸಂಬಂಧ ಡಿಜಿ ಐಜಿಪಿ ಪ್ರವೀಣ್ ಸೂದ್ ಜೊತೆ ಚರ್ಚೆ ನಿರ್ಧಾರ ಕೈಗೊಂಡಿರೋದಾಗಿ ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ.

ಇದನ್ನೂ ಓದಿ: HD Kumaraswamy: ಪ್ರತಿ ಕೊಲೆಗೂ ತಾನೇ ಮುಂದೆ ನಿಂತು BJP ಹೊಸ ಟ್ವಿಸ್ಟ್ ನೀಡ್ತಿದೆ; HDK ಆರೋಪ

ವ್ಯವಸ್ಥಿತ ಸಂಚು- ಸಿಎಂ ಬೊಮ್ಮಾಯಿ

ಪ್ರವೀಣ್ ಹತ್ಯೆ ಕೇಸ್ ಒಂದು ವ್ಯವಸ್ಥಿತವಾಗಿ ನಡೆದಿರೋ ಹತ್ಯೆ.  ಪ್ರಕರಣದ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇನೆ. ಪ್ರಕರಣದ ತನಿಖೆ ತ್ವರಿತಗತಿಯಾಗಿ ನಡೆಯುತ್ತಿದೆ. ಪ್ರಕರಣ 2 ರಾಜ್ಯಕ್ಕೆ ಸಂಬಂಧಿಸಿದ್ದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ NIAಗೆ ಲೆಟರ್ ಬರೆಯೋದಕ್ಕೆ ಹೇಳಿದ್ದೇನೆ. ಪ್ರಕರಣವನ್ನ NIAಗೆ ವಹಿಸಲು ತೀರ್ಮಾನಿಸಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಮನೆಗೆ ಗುರುವಾರ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕುಟುಂಬಕ್ಕೆ ಸಾಂತ್ವಾನ ಹೇಳಿ, 25 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದರು.
Published by:Pavana HS
First published: