• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Hubballi: ತಾರಿಹಾಳ ಕಾರ್ಖಾನೆ ಬ್ಲಾಸ್ಟ್ ಪ್ರಕರಣ; ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ

Hubballi: ತಾರಿಹಾಳ ಕಾರ್ಖಾನೆ ಬ್ಲಾಸ್ಟ್ ಪ್ರಕರಣ; ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ

ಮೃತ ಕಾರ್ಮಿಕ

ಮೃತ ಕಾರ್ಮಿಕ

ಮಾಲೀಕನ ಬಂಧನವಾಗಿಲ್ಲದಿರೋದು ಹಲವಾರು ಅನುಮಾನಕ್ಕೆ ಎಡೆ ಮಾಡಿದೆ. ಮುಂಬೈ ಮೂಲದ ಅಬ್ದುಲ್ ಶೇಖ್ ಇಲ್ಲಿಯವರೆಗೂ ಪತ್ತೆಯಾಗಿಲ್ಲ. ಜತೆಗೆ ಆತನ ಇಬ್ಬರು ಪಾಲುದರರು ಸಹ ಸಿಕ್ಕಿಲ್ಲ.

  • Share this:

ಹುಬ್ಬಳ್ಳಿ - ಹುಬ್ಬಳ್ಳಿಯ ತಾರಿಹಾಳ (Tarihala, Hubballi) ಸ್ಪಾರ್ಕಲ್ ಕ್ಯಾಂಡಲ್ ಕಾರ್ಖಾನೆ (Sparkle Candle Factory) ಬ್ಲಾಸ್ಟ್ ಪ್ರಕರಣದಲ್ಲಿ ಮತ್ತೊಬ್ಬ ಕಾರ್ಮಿಕನ (Worker Death) ಸಾವನ್ನಪ್ಪಿದ್ದಾನೆ. ಬ್ಲಾಸ್ಟ್ ನಲ್ಲಿ ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. 18 ವರ್ಷದ ಮಲೀಕ್ ಕೊಪ್ಪದ ಮೃತ ಕಾರ್ಮಿಕನಾಗಿದ್ದಾನೆ. ಬೆಂಕಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೇ ಕಿಮ್ಸ್ ಆಸ್ಪತ್ರೆಯಲ್ಲಿ (KIMS Hospital) ಸಾವನ್ನಪ್ಪಿದ್ದಾನೆ. ತಾರಿಹಾಳದ ಸ್ಪಾರ್ಕಲ್ ಪ್ಯಾಕ್ಟರಿಯಲ್ಲಿ ಬೆಂಕಿ ಅವಘಡದಲ್ಲಿ ಇಬ್ಬರು ಮಹಿಳೆಯರು ಹಾಗೂ ಓರ್ವ ಯುವಕ ಸೇರಿ ಮೂವರು ಸಾವಿಗೀಡಾಗಿದ್ದರು. ಘಟನೆ ನಡೆದ 12 ಗಂಟೆಯಲ್ಲಿಯೇ ಮೂರು ಸಾವುಗಳಾಗಿದ್ದವು. ಶುಕ್ರವಾ ಬೆಳಗಿನ ಜಾವ ಮತ್ತೋರ್ವನ ಸಾವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡ್ತಿದ್ದಾರೆ.


ಆದರೆ ಇದುವರೆಗೆ ಮಾಲೀಕನ ಬಂಧನವಾಗಿಲ್ಲದಿರೋದು ಹಲವಾರು ಅನುಮಾನಕ್ಕೆ ಎಡೆ ಮಾಡಿದೆ. ಮುಂಬೈ ಮೂಲದ ಅಬ್ದುಲ್ ಶೇಖ್ ಇಲ್ಲಿಯವರೆಗೂ ಪತ್ತೆಯಾಗಿಲ್ಲ. ಜತೆಗೆ ಆತನ ಇಬ್ಬರು ಪಾಲುದರರು ಸಹ ಸಿಕ್ಕಿಲ್ಲ.


ಇದುವರೆಗೆ ಕೇವಲ ಮ್ಯಾನೇಜರ್ ಮಂಜುನಾಥ್ ಎಂಬವರನ್ನು ಬಂಧಿಸಲಾಗಿದ್ದು ಉಳಿದವರು ತಲೆಮರೆಸಿಕೊಂಡಿದ್ದಾರೆ. ಬ್ಲಾಸ್ಟ್ ನಲ್ಲಿ ಗಾಯಗೊಂಡಿರೊ ಇತರೆ ನಾಲ್ವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.


ಇದನ್ನೂ ಓದಿ:  Hubballi: ಕಾರ್ಖಾನೆಯಲ್ಲಿ ಸ್ಫೋಟ ಕೇಸ್​; ಮೂವರು ಸಾವು, ಮಾಲೀಕರ ವಿರುದ್ಧ ಸಚಿವ ಹಾಲಪ್ಪ ಗರಂ


ತಾರಿಹಾಳ ಪಾರ್ಕಲ್ಸ್ ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಬ್ಲಾಸ್ಟ್ ಪ್ರಕರಣದಲ್ಲಿ ಮೂವರು ಮೃತಪಟ್ಟಿದ್ದು, ಘಟನಾ ಸ್ಥಳಕ್ಕೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಭೇಟಿ ನೀಡಿದರು. ಸ್ಫೋಟಕ್ಕೆ ತುತ್ತಾದ ಫ್ಯಾಕ್ಟರಿ ಪರಿಶೀಲನೆ ಮಾಡಿದ ಹಾಲಪ್ಪ ಆಚಾರ್, ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಹಾಲಪ್ಪ, ಕಾರ್ಖಾನೆ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.


ಟಿಪ್ಪರ್ ಹಾಯ್ದು ಬೈಕ್ ಸವಾರ ಸಾವು


ಟಿಪ್ಪರ್ ಹಾಯ್ದು ಬೈಕ್ ಸವಾರ ಸಾವನ್ನಪ್ಪಿದ್ದು, ಬೈಕ್ ಸವಾರ ನ ಮೇಲೆ ಟಿಪ್ಪರ್ ಹಾಯ್ದು ಹೋಗುವ ಭಯಾನಕ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಹುಬ್ಬಳ್ಳಿಯ ಹೊಸೂರ್ ವೃತ್ತದ ಬಳಿ ನಡೆದಿರೋ ಘಟನೆ ನಡೆದಿದೆ. ಮೃತಪಟ್ಟ ಅತ್ತಿಗೆಯನ್ನು ನೋಡಲು ಕಿಮ್ಸ್ ಗೆ ಹೊರಟಿದ್ದ ಯುವಕ ತಾನೂ ಮಸಣ ಸೇರಿದ್ದಾನೆ. ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಅಪಘಾತ ಸಂಭವಿಸಿದೆ.


ಅಪಘಾತದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಕೂಟಿ ಮೇಲೆ ಟಿಪ್ಪರ್ ಹಾಯ್ದು ದುರ್ಘಟನೆ ಸಂಭವಿಸಿದೆ. ಬೈಕ್ ಸವಾರ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ. ಹಳೇ ಹುಬ್ಬಳ್ಳಿಯ ಬೀರಬಂದ್ ಗಲ್ಲಿ ನಿವಾಸಿ ಪೈರೋಜ್ ಧಾರವಾಡ ಅಪಘಾತದಲ್ಲಿ ಸಾವನ್ನಪ್ಪಿದ ಯುವಕನಾಗಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ತಲೆಗೆ ಗಂಭೀರ ಗಾಯಗಳಾಗಿವೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.


ಇದನ್ನೂ ಓದಿ:  Hubballi Accident: ಸಾವಿನ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ; ಏಳು ಸಾವು, 25 ಗಾಯ


ಪ್ರಶ್ನೋತ್ತರ ಕಲಾಪದ ವೇಳೆ ಗದ್ದಲ


ಹುಬ್ಬಳ್ಳಿ ಪಾಲಿಕೆ ಸಬಾಂಗಣದಲ್ಲಿ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕಾವೇರಿದ ಚರ್ಚೆಗಳು ನಡೆದವು. ಪ್ರಶ್ನೋತ್ತರ ಕಲಾಪದ ವೇಳೆ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವೆ ಮಾತಿನ ಚಕಮಕಿ ನಡೆದು ಜಟಾಪಟಿಗೆ ಕಾರಣವಾಯಿತು. ಪ್ರಶ್ನೋತ್ತರ ಕಲಾಪದಲ್ಲಿ 15 ಪ್ರಶ್ನೆ ಕೇಳಲು ನಿರ್ಣಯಿಸಲಾಗಿತ್ತು.


ಆದರೆ 19 ಪ್ರಶ್ನೆ ಕೇಳೋಕೆ ಮೇಯರ್ ಅವಕಾಶ ನೀಡಿದ್ದರಿಂದ ಅಸಮಾಧಾನಗೊಂಡ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ನಿಮ್ಮ ಮನಸ್ಸಿಗೆ ಬಂದಂತೆ ನೀವು ಮಾಡೋದಾದ್ರೆ ಸಭೆಯನ್ನೇಕೆ ಮಾಡಬೇಕೆಂದು ಪ್ರಶ್ನಿಸಿದಾಗ ಸಭೆಯಲ್ಲಿ ಗದ್ದಲ, ಗೊಂದಲ ಉಂಟಾಯಿತು. ಪ್ರತಿಪಕ್ಷಗಳ ಗದ್ದಲದ ನಡುವೆಯೇ ಚರ್ಚಿಸದೇ ಎಲ್ಲ ನಿರ್ಣಯ ಅಂಗೀಕರಿಸಿ, ಸಭೆಯನ್ನು ಮುಂದೂಡಲಾಯಿತು.

top videos
    First published: