Hubballi: ಸಂಬಳ ತಗೊಂಡು ಬರ್ತೀನಿ ಅಂತ ಹೋದವಳು ಬರಲೇ ಇಲ್ಲ; ಮೃತಪಟ್ಟ ಸಂಬಂಧಿಕರ ಕಣ್ಣೀರು

ಕಾರ್ಖಾನೆ ಧೋರಣೆ ಖಂಡಿಸಿ ನಾವು ಶವವನ್ನೇ ತೆಗೆದುಕೊಂಡಿಲ್ಲ. ನಮಗೆ ನ್ಯಾಯ ಸಿಕ್ಕ ನಂತರ ಶವ ತಗೋತೀವಿ ಅಂತ ವಿಜಯಲಕ್ಷ್ಮಿ ತಂದೆ ಬಸವರಾಜ್ ಹೇಳಿದ್ದಾರೆ.

ಸಂಬಂಧಿಕರ ಕಣ್ಣೀರು

ಸಂಬಂಧಿಕರ ಕಣ್ಣೀರು

  • Share this:
ಹುಬ್ಬಳ್ಳಿ - ತಾರಿಹಾಳ ಕಾರ್ಖಾನೆಯಲ್ಲಿ (Tarihala Factory) ಸ್ಫೋಟ ಪ್ರಕರಣ ಹಲವಾರು ಕಣ್ಣೀರ ಕಥೆಗೆ ಕಾರಣವಾಗಿದೆ. ಸ್ಪಾರ್ಕರ್ ಕಾರ್ಖಾನೆಯಲ್ಲಿ  (Sparker Candle Factory )  ಕೆಲಸ ಮಾಡೋದು ಡೇಂಜರ್ ಅಂತ ತಿಳಿದಿದ್ದ ವಿಜಯಲಕ್ಷ್ಮಿ ಗಂಡನ ಮುಂದೆ ಎಲ್ಲವನ್ನೂ ಹೇಳಿದ್ದರು. ಕೆಲಸ ಬಿಟ್ಟು ಬಿಡು ಅಂತ ಪತಿ ಹೇಳಿದಾಗ, ಇವತ್ತು ಸಂಬಳ ಕೊಡ್ತಾರೆ, ಸಂಬಳ ಬರ್ತಿದ್ದಂತೆಯೇ ಕೆಲಸ (Job) ಬಿಟ್ಟು ಬಿಡ್ತೀನಿ ಅಂತ ಕಾರ್ಖಾನೆಗೆ (Factory Worker) ಹೋದವರು ಬಾರದ ಲೋಕಕ್ಕೆ ಹೋಗಿದ್ದಾರೆ ಅಂತ ಆಕೆಯ ಪತಿ ಕಣ್ಣೀರು ಹಾಕಿದ್ದಾರೆ. ಮೃತಪಟ್ಟ ಇತರರ ಕುಟುಂಬದರ ಕಥೆಯೂ ಇದೇ ಆಗಿದೆ. ಮೃತರ ಕುಟುಂಬದ ಸದಸ್ಯರು ಕಣ್ಣೀರಲ್ಲೇ ಕೈ ತೊಳೆಯುತ್ತಿದ್ದಾರೆ.

ಹುಬ್ಬಳ್ಳಿಯ ತಾರಿಹಾಳ ಕಾರ್ಖಾನೆಯಲ್ಲಿ ಸ್ಫೋಟ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಕಾರ್ಖಾನೆ ಸಾವಿನ ಮನೆಯಾಗಿ ಮಾರ್ಪಟ್ಟಿದ್ದು, ಹುಬ್ಬಳ್ಳಿಯ ಕಿಮ್ಸ್ ಆವರಣದ ಎದುರು ಸಂಬಂಧಿಕರು ಕಣ್ಣೀರು ಹಾಕ್ತಿದಾರೆ. ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತಿ ವೀರಭದ್ರ ಕಣ್ಣೀರು

ಸ್ಪಾರ್ಕಲ್ ಕ್ಯಾಂಡಲ್ ತಯಾರಿಕೆ ಬಗ್ಗೆ ನಮಗೆ ಮಾಹಿತಿಯೇ ಇರಲಿಲ್ಲ. ಕೇವಲ ಕ್ಯಾಂಡಲ್ ಟಯರ್ ಮಾಡುವುದಾಗಿ ಹೇಳಿದ್ದ ಕಾರ್ಖಾನೆ ಆಡಳಿತ ಮಂಡಳಿ. ಆದರೆ ಒಳಗೊಳಗೆ ಕದ್ದುಮುಚ್ಚಿ ಸ್ಪಾರ್ಕಲ್ ಕ್ಯಾಂಡಲ್ ತಯಾರಿಕೆ ಮಾಡಲಾಗಿತ್ತು.

ಈ ವಿಷಯವನ್ನು ನನಗೆ ಪತ್ನಿ ಹೇಳಿದ್ದಳು. ಕೆಲಸ ಬಿಟ್ಟುಬಿಡು ಅಂತ ನಾನು ಹೇಳಿದ್ದೆ. ಇವತ್ತು ಸಂಬಳ ಕೊಡ್ತಾರೆ ಇವತ್ತೊಂದಿನ ಹೋಗಿ ಬರ್ತೇನೆ ಅಂತ ಹೇಳಿದ್ದ ವಿಜಯಲಕ್ಷ್ಮಿ. ಸಂಬಳ ತಗೊಂಡು ಬರೋದಾಗಿ ಹೋದಾಕೆ ಬಾರದ ಲೋಕಕ್ಕೆ ಹೋಗಿದ್ದಾಳೆ ಎಂದು ವಿಜಯಲಕ್ಷ್ಮಿ ಪತಿ ವೀರಭದ್ರ ಕಣ್ಣೀರು ಹಾಕಿದ್ದಾನೆ.

ಇದನ್ನೂಓದಿ:  PSI Death: ಪಂಚಮಿ ಹಬ್ಬಕ್ಕೆ ಬರುತ್ತೀನಿ ಎಂದಿದ್ದ ಅಣ್ಣ ಬರಲೇ ಇಲ್ಲ! ಪಿಎಸ್ಐ ಅವಿನಾಶ್ ಮನೆಯಲ್ಲಿ ಆಕ್ರಂದನ

ಕಿಮ್ಸ್ ಆಸ್ಪತ್ರೆ ಮುಂಭಾಗದಲ್ಲಿ ಸಂಬಂಧಿಕರ ಕಣ್ಣೀರು

ವಿಜಯಲಕ್ಷ್ಮಿ ತಂದೆಯಿಂದಲೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಖಾನೆ ಧೋರಣೆ ಖಂಡಿಸಿ ನಾವು ಶವವನ್ನೇ ತೆಗೆದುಕೊಂಡಿಲ್ಲ. ನಮಗೆ ನ್ಯಾಯ ಸಿಕ್ಕ ನಂತರ ಶವ ತಗೋತೀವಿ ಅಂತ ವಿಜಯಲಕ್ಷ್ಮಿ ತಂದೆ ಬಸವರಾಜ್ ಹೇಳಿದ್ದಾರೆ.

ಮತ್ತೊಂದೆಡೆ ಮೃತ ಗೌರಮ್ಮಳ ಸಹೋದರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೌರಮ್ಮಳಿಗೆ ಇಬ್ಬರೂ ವಿಕಲಾಂಗ ಮಕ್ಕಳಿದ್ದರು. ಅವರಿಬ್ಬರೂ ಈಗ ಅನಾಥರಾಗಿದ್ದಾರೆ ಎಂದು ಚೆನ್ನಬಸಯ್ಯ ಹಿರೇಮಠ ಕಣ್ಣೀರು ಹಾಕಿದ್ದಾರೆ. ಕಿಮ್ಸ್ ಆಸ್ಪತ್ರೆ ಬಳಿ ಸಂಬಂಧಿಕರ ರೋದನ ಮುಗಿಲುಮುಟ್ಟಿದೆ.

ವಿವಿಧ ಸೆಕ್ಷನ್ ಗಳ ಅಡಿ ಪ್ರಕರಣ ದಾಖಲು

ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಸ್ಪಾರ್ಕರ್ ಫ್ಯಾಕ್ಟರಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ಫ್ಯಾಕ್ಟರಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದವನನ್ನು ಬಂಧಿಸಲಾಗಿದೆ. ಮ್ಯಾನೇಜರ್ ಮಂಜುನಾಥ್ ನನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬಂಧಿಸಿ ವಿಚಾರಣೆಗೆ ಗುರಿಪಡಿಸಿದ್ದಾರೆ. ಇನ್ನೊಬ್ಬ ಆರೋಪಿ ಕಾರ್ಖಾನೆಯ ಮಾಲೀಕ ಮುಂಬೈ ಮೂಲದ ಅಬ್ದುಲ್ ಖಾದೀರ್ ಶೇಕ್ ಬಂಧನಕ್ಕೆ ಜಾಲ ಬೀಸಲಾಗಿದೆ.

explosion in sparker Candle Factory at hubballi man cries because his wife death saklb mrq
ಸಂಬಂಧಿಕರ ಕಣ್ಣೀರು


ಮೃತ ವಿಜಯಲಕ್ಷ್ಮೀ ಪತಿ ವೀರಭದ್ರ ಅವರಿಂದ ದೂರು ಪಡೆದಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ. IPC 286, 337, 338, 304, explosive act 1908 ಪ್ರಕಾರ ಕೇಸ್ ದಾಖಲು ಮಾಡಲಾಗಿದೆ. ಮೂರೂ ತಂಡಗಳಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರು, ತನಿಖೆ ಚುರುಕಗೊಳಿಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಾಂಗ್ರೆಸ್ ನಾಯಕರ ಭೇಟಿ

ತಾರಿಹಾಳ ಕಾರ್ಖಾನೆ ಬ್ಲಾಸ್ಟ್ ಪ್ರಕರಣದಲ್ಲಿ ಗಾಯಗೊಂಡರ ಆರೋಗ್ಯ ವಿಚಾರಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ಹಾಗೂ  ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಪ್ರತ್ಯೇಕವಾಗಿ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಕಿಮ್ಸ್ ನಿರ್ದೇಶಕರು ಮತ್ತು ವೈದ್ಯರಿಂದ ಚಿಕಿತ್ಸೆ ಕುರಿತು ಮಾಹಿತಿ ಪಡೆದರು.

ಇದನ್ನೂ ಓದಿ:  Hubballi: ಕಾರ್ಖಾನೆಯಲ್ಲಿ ಸ್ಫೋಟ ಕೇಸ್​; ಮೂವರು ಸಾವು, ಮಾಲೀಕರ ವಿರುದ್ಧ ಸಚಿವ ಹಾಲಪ್ಪ ಗರಂ

ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡುವಂತೆ ವೈದ್ಯರಿಗೆ ಸೂಚನೆ ಹರಿಪ್ರಸಾದ್ ಸೂಚನೆ ನೀಡಿದರು. ಘಟನೆಯ ಕುರಿತು ಸೂಕ್ತ ತನಿಖೆ ನಡೆಸುವಂತೆ ಸಲೀಂ ಅಹ್ಮದ್ ಆಗ್ರಹಿಸಿದರು. ಈ ಸಂದರ್ಭದಲ್ಲಿ ಶಾಹಜಮಾನ್ ಮುಜಾಹಿದ್, ರಜತ್ ಉಳ್ಳಾಗಡ್ಡಿಮಠ, ನಾಗರಾಜ ಗೌರಿ  ಮತ್ತಿತರರ ಉಪಸ್ಥಿತರಿದ್ದರು.
Published by:Mahmadrafik K
First published: