Explained: ಮೇಕೆದಾಟು ಯೋಜನೆ ಕುರಿತಂತೆ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳ ನಿಲುವೇನು?

ಅಣೆಕಟ್ಟು ಯೋಜನೆಯ ಕುರಿತು ಎರಡೂ ರಾಜ್ಯಗಳು ತಮ್ಮ ತಮ್ಮ ದೃಷ್ಟಿಕೋನಗಳಲ್ಲಿ ಆಲೋಚನೆ ನಡೆಸುತ್ತಿವೆ. ಅಣೆಕಟ್ಟು ನಿರ್ಮಾಣದ ಹಕ್ಕು ತನ್ನ ಸುಪರ್ದಿಗೆ ಬರುತ್ತದೆ ಎಂದು ಕರ್ನಾಟಕ ವಾದಿಸಿದರೆ, ಈ ಯೋಜನೆಗೆ ಅನುಮತಿ ನೀಡದಂತೆ ತಮಿಳುನಾಡು ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ.

ಬಿಎಸ್​ ಯಡಿಯೂರಪ್ಪ-ಎಂಕೆ ಸ್ಟಾಲಿನ್

ಬಿಎಸ್​ ಯಡಿಯೂರಪ್ಪ-ಎಂಕೆ ಸ್ಟಾಲಿನ್

 • Share this:

  ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ನದಿ ನೀರು ಹಂಚಿಕೆಯ ವಿಷಯದಲ್ಲಿ ಉಂಟಾಗಿರುವ ವಿವಾದವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯೇ ಹೊರತು ಅಂತ್ಯಕಾಣುವ ಲಕ್ಷಣ ಕಾಣುತ್ತಿಲ್ಲ. ಈಗ ಗಾಯದ ಮೇಲೆ ಬರೆ ಎಳೆದಂತೆ ಈ ಪ್ರಕರಣ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣ ಯೋಜನೆಯ ಉದ್ದೇಶದಿಂದ ಹೊಸ ತಿರುವು ಪಡೆದುಕೊಂಡಿದ್ದು ಎರಡೂ ರಾಜ್ಯಗಳು ವಿವಾದಗಳ ಸುಳಿಯಲ್ಲಿ ಪರಸ್ಪರ ಸಂಘರ್ಷಣೆಗಳನ್ನು ನಡೆಸುತ್ತಿವೆ. ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ. ಕರ್ನಾಟಕವು ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸಲು ಮುಂದಾಗಿದ್ದೇಕೆ..? ತಮಿಳುನಾಡು ಈ ನಿರ್ಮಾಣಕ್ಕೆ ಏಕೆ ವಿರೋಧ ವ್ಯಕ್ತಪಡಿಸುತ್ತಿದೆ..? ಈ ಕುರಿತು ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.


  ಯೋಜನೆಯ ಒಟ್ಟಾರೆ ಉದ್ದೇಶವೇನು?


  ಮೇಕೆದಾಟು ಬೆಂಗಳೂರಿನಿಂದ 90 ಕಿಮೀ ದೂರದಲ್ಲಿದ್ದು ತಮಿಳುನಾಡಿನಿಂದ 4 ಕಿಮೀ ದೂರದಲ್ಲಿದೆ. ಜಲಾಶಯ ನಿರ್ಮಾಣದ ಕುರಿತು ಸವಿವರಾದ ವರದಿಯನ್ನು ಕರ್ನಾಟಕ ಸರಕಾರವು ಕೇಂದ್ರಕ್ಕೆ ಸಲ್ಲಿಸಿತ್ತು. 9,000 ಕೋಟಿಯ ಈ ಯೋಜನೆಯಿಂದ ಬೆಂಗಳೂರು ಹಾಗೂ ರಾಜ್ಯದ ಕೆಲವೊಂದು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವುದು ಸರಕಾರದ ಉದ್ದೇಶವಾಗಿದೆ. ಮಳೆಗಾಲದ ಸಂದರ್ಭದಲ್ಲಿ ಹೆಚ್ಚು ನೀರು ತಮಿಳುನಾಡಿಗೆ ಹರಿದುಹೋಗುತ್ತಿರುವ ಕಾರಣ ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಿ ಮಹಾನಗರಗಳಲ್ಲಿರುವ ನೀರಿನ ಸಮಸ್ಯೆಗೆ ಇತಿಶ್ರೀ ಹಾಡುವುದು ಸರಕಾರದ ಆಶಯವಾಗಿದೆ. ಅಣೆಕಟ್ಟು ನಿರ್ಮಾಣದಿಂದ ತಮಿಳುನಾಡಿಗೆ ಹರಿಯುತ್ತಿರುವ ನೀರಿನ ಪ್ರಮಾಣದಲ್ಲಿ ವ್ಯತ್ಯಯ ಉಂಟಾಗಲಿದೆ. ಇದರಿಂದ ತಮಿಳುನಾಡು ನೀರಿನ ಅಭಾವಕ್ಕೆ ಗುರಿಯಾಗಲಿದೆ ಎಂಬುದು ತಮಿಳುನಾಡಿನ ಹೇಳಿಕೆಯಾಗಿದೆ.


  ಇದನ್ನೂ ಓದಿ:Explained: ದಿನಕ್ಕೆ 10 ಸಾವಿರ ಹೆಜ್ಜೆ ನಡೆಯಲೇಬೇಕಾ? ಎಷ್ಟು ವಾಕಿಂಗ್ ಮಾಡಿದ್ರೆ ಏನೆಲ್ಲಾ ಪ್ರಯೋಜನ ಇದೆ?

  ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಎಂಕೆ ಸ್ಟಾಲಿನ್ ಸಹಕಾರ ಕೋರಿ ಪತ್ರ ಬರೆದಿದ್ದರು. ಆದರೆ ತಮಿಳುನಾಡು ಈ ಯೋಜನೆಯನ್ನು ವಿರೋಧಿಸಿದ್ದು, ಇದರಿಂದ ಹರಿದುಬರುವ ಕಾವೇರಿ ನೀರಿಗೆ ಧಕ್ಕೆಯುಂಟಾಗಲಿದೆ ಎಂದು ತಿಳಿಸಿತ್ತು. ಆದರೆ ಯಡಿಯೂರಪ್ಪನವರು ಈ ಅಣೆಕಟ್ಟಿನಿಂದ ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆಯೂ ಬಗೆಹರಿಯಲಿದ್ದು, ತಮಿಳುನಾಡಿಗೆ ಯಾವುದೇ ಹಾನಿಯುಂಟಾಗುವುದಿಲ್ಲ ಹಾಗೂ ಎರಡೂ ರಾಜ್ಯಗಳ ಒಡನಾಟ ಬಾಂಧವ್ಯ ಇನ್ನಷ್ಟು ಉತ್ತಮಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದರು. ಆದರೂ, ತಮಿಳುನಾಡು ಸರಕಾರ ಈ ಯೋಜನೆಯನ್ನು ಪ್ರಾರಂಭಿಸಬಾರದೆಂದು ತಾಕೀತು ಮಾಡಿದೆ.


  ಯೋಜನೆಗೆ ತಮಿಳುನಾಡು ಏಕೆ ಅಡ್ಡಿಯನ್ನುಂಟು ಮಾಡುತ್ತಿದೆ?


  ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೂ ಪ್ರಯೋಜನವಾಗಲಿದೆ ಎಂಬ ಕರ್ನಾಟಕದ ಹೇಳಿಕೆಯನ್ನು ನಿರಾಕರಿಸಿರುವ ಸ್ಟಾಲಿನ್ ಮೇಕೆದಾಟು ಅಣೆಕಟ್ಟಿನಿಂದ ತಮಿಳುನಾಡಿಗೆ ಹರಿಯುವ ಕಾವೇರಿ ನೀರಿಗೆ ಅನಿಯಂತ್ರಿತ ತಡೆ ಉಂಟಾಗುತ್ತದೆ ಎಂಬುದು ಅವರ ವಾದವಾಗಿದೆ. ಅಣೆಕಟ್ಟು ನಿರ್ಮಾಣದಿಂದ ತಮಿಳುನಾಡಿನ ರೈತರಿಗೆ ನೀರಿನ ಕೊರತೆ ಉಂಟಾಗುತ್ತದೆ ಎಂಬುದು ಸ್ಟಾಲಿನ್ ಸರಕಾರದ ವಾದವಾಗಿದೆ. ಕಾವೇರಿ ನದಿ ನೀರು ಕೆ.ಆರ್‌ಎಸ್ ದಾಟಿದ ನಂತರ ಅನಿಯಂತ್ರಿತವಾಗಿ ತಮಿಳುನಾಡಿನತ್ತ ಸಾಗುತ್ತದೆ. ಕಬಿನಿ, ಶಿಂಷಾ, ಅರ್ಕಾವತಿ, ಸುವರ್ಣಾವತಿ ಸೇರಿದಂತೆ ಹಲವು ಉಪನದಿಗಳು ಕಾವೇರಿಯನ್ನು ಸೇರಿಕೊಳ್ಳುತ್ತವೆ. ಮೇಕೆದಾಟು ಯೋಜನೆಯಿಂದ ಅನಿಯಂತ್ರಿತ ಹರಿವಿಗೆ ತಡೆ ಉಂಟಾಗುತ್ತದೆ ಎಂಬುದು ಸ್ಟಾಲಿನ್ ವಾದವಾಗಿದೆ.


  ನದಿನೀರು ವಿವಾದಕ್ಕೆ ಈ ಹೊಸ ಯೋಜನೆಯಿಂದ ಮಹತ್ತರ ತಿರುವು


  1892ರಲ್ಲಿ ಬ್ರಿಟಿಷ್ ಆಡಳಿತದಲ್ಲಿದ್ದ ಮದ್ರಾಸ್ ಪ್ರಾಂತ್ಯ ಹಾಗೂ ಮೈಸೂರು ರಾಜಪ್ರಭುತ್ವದ ನಡುವೆ ಕಾವೇರಿ ನೀರಾವರಿ ವ್ಯವಸ್ಥೆಯ ಕುರಿತು ವಿವಾದ ಪ್ರಾರಂಭವಾಯಿತು. ಆಗ ಇದ್ದ ಭಯ ಈಗಲೂ ಕಾಡುತ್ತಿದೆ ಎಂದರೆ ತಪ್ಪಾಗಲಾರದು. ನದಿಮೂಲದ ಹತ್ತಿರದ ಪ್ರದೇಶಗಳು ನೀರಿನ ಹೆಚ್ಚುವರಿ ಪಾಲನ್ನು ಪಡೆದುಕೊಳ್ಳುತ್ತವೆ. ಹಾಗೆಯೇ ಅಲ್ಲಿನ ರೈತರು ಸಂಕಷ್ಟವನ್ನು ಅನುಭವಿಸುತ್ತಾರೆ.


  ಇದನ್ನೂ ಓದಿ:Karnataka Rains: ರಾಜ್ಯದಲ್ಲಿ ಜು. 23ರವರೆಗೆ ಅಬ್ಬರಿಸಲಿದೆ ಮಳೆ, ಬೆಂಗಳೂರಲ್ಲಿ ಇನ್ನೂ 2 ದಿನ ವರುಣನ ಆರ್ಭಟ; ಯೆಲ್ಲೋ-ಆರೆಂಜ್ ಅಲರ್ಟ್ !

  ಈ ಸಮಸ್ಯೆಗೆ ಪರಿಹಾರ ಒದಗಿಸುವ ಉದ್ದೇಶದಿಂದ 1924ರಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣದ ಒಪ್ಪಂದವನ್ನು ತರಲಾಯಿತು ಹಾಗೂ ಎರಡು ರಾಜ್ಯಗಳಿಗೆ ಕಾವೇರಿ ನದಿನೀರು ಹಂಚಿಕೆಯ ವಿವರಗಳನ್ನು ಈ ಯೋಜನೆಯು ಒಳಗೊಂಡಿದೆ. ಈ ಒಪ್ಪಂದಕ್ಕೆ ಇರುವ ಕಾಲಮಿತಿಯು 50 ವರ್ಷಗಳಾಗಿದೆ. ಚಿಕ್ಕ ಪ್ರಮಾದದಿಂದಾಗಿ ವಿವಾದವು ಹೊಸ ಗುತ್ತಿಗೆಯನ್ನು ಪಡೆದುಕೊಂಡಿತು ಹಾಗೂ ತಮಿಳುನಾಡು ರಾಜ್ಯಗಳ ನಡುವಿನ ನೀರು ಹಂಚಿಕೆ ನಿರ್ಧರಿಸಲು ಕೇಂದ್ರವನ್ನು ಸಂಪರ್ಕಿಸಿತು.


  1990ರಲ್ಲಿ ಸ್ಥಾಪನೆಯಾದ ನ್ಯಾಯಮಂಡಳಿಯು 2007ರಲ್ಲಿ ಹೊಸ ತೀರ್ಪು ನೀಡಿತು. ಈ ತೀರ್ಪಿನ ಅನ್ವಯ ತಮಿಳುನಾಡಿಗೆ 419 tmcft, ಕರ್ನಾಟಕಕ್ಕೆ 270 tmcft, ಕೇರಳಕ್ಕೆ 30 tmcft ಹಾಗೂ ಪುದುಚೇರಿಗೆ 7 tmcft ನೀರಿನ ಹಂಚಿಕೆ ಮಾಡಲಾಯಿತು. ಮಳೆಯ ಕೊರತೆಯ ವರ್ಷಗಳಲ್ಲಿ ನೀರಿನ ಹಂಚಿಕೆ ಅದಕ್ಕನುಗುಣವಾಗಿ ಕಡಿಮೆಯಾಗುತ್ತದೆ ಎಂದು ನ್ಯಾಯಮಂಡಳಿ ಆದೇಶಿಸಿತು.


  ಯೋಜನೆಯ ನಿಲುವೇನು?


  ಅಣೆಕಟ್ಟು ಯೋಜನೆಯ ಕುರಿತು ಎರಡೂ ರಾಜ್ಯಗಳು ತಮ್ಮ ತಮ್ಮ ದೃಷ್ಟಿಕೋನಗಳಲ್ಲಿ ಆಲೋಚನೆ ನಡೆಸುತ್ತಿವೆ. ಅಣೆಕಟ್ಟು ನಿರ್ಮಾಣದ ಹಕ್ಕು ತನ್ನ ಸುಪರ್ದಿಗೆ ಬರುತ್ತದೆ ಎಂದು ಕರ್ನಾಟಕ ವಾದಿಸಿದರೆ, ಈ ಯೋಜನೆಗೆ ಅನುಮತಿ ನೀಡದಂತೆ ತಮಿಳುನಾಡು ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ.


  ಇದರ ನಡುವೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಸರ್ವಪಕ್ಷ ಸಭೆ ನಡೆಸಿ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ನೀಡುವುದರ ವಿರುದ್ಧ ಕೇಂದ್ರದ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ. ವಿವಾದಕ್ಕೆ ಕುರಿತಂತೆ ಯಡಿಯೂರಪ್ಪನನ್ನ ಭೇಟಿ ಮಾಡಿದ್ದ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್‌ರನ್ನು ಭೇಟಿಮಾಡಲು ತಮಿಳುನಾಡಿನ ಎಲ್ಲಾ ಪಕ್ಷಗಳ ನಾಯಕರ ನಿಯೋಗ ಸಜ್ಜಾಗಿತ್ತು. ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವದಲ್ಲಿ ವರದಿಯಾಗಿರುವ ಯೋಜನೆಯ ವಿರುದ್ಧ ತಮಿಳುನಾಡು ಸುಪ್ರೀಂಕೋರ್ಟ್‌ ಮೊರೆ ಹೋಗಿದೆ.
  ರಾಜಕೀಯ ಹಾಗೂ ಕೃಷಿಗೆ ಸಂಬಂಧಿಸಿದಂತೆ ಹಲವಾರು ವಿವಾದಗಳನ್ನು ಹುಟ್ಟುಹಾಕಿರುವ ಅಣೆಕಟ್ಟಿನಿಂದ ಪರಿಸರಕ್ಕೂ ಹಾನಿಯುಂಟಾಗಲಿದೆ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ. ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸಿದರೆ ಕಾವೇರಿ ವನ್ಯಜೀವಿ ಅಭಯಾರಣ್ಯದ ಕೆಲವು ಪ್ರದೇಶಗಳು ಮುಳುಗಡೆಯಾಗುತ್ತವೆ ಹಾಗೂ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಮತ್ತು ಚಾಮರಾಜನಗರ ಕಾಡುಗಳ ಮೇಲೂ ಪರಿಣಾಮ ಬೀರುತ್ತದೆ ಎಂದಾಗಿದೆ.

  Published by:Latha CG
  First published: