ಕೊಡಗಿನಲ್ಲಿ ಗುಡ್ಡ ಕುಸಿತಕ್ಕೆ ಪ್ರಮುಖ ಕಾರಣವೇನು..?: ರಾಜ್ಯ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿ ವರದಿ ಸಲ್ಲಿಕೆ


Updated:August 31, 2018, 6:13 PM IST
ಕೊಡಗಿನಲ್ಲಿ ಗುಡ್ಡ ಕುಸಿತಕ್ಕೆ ಪ್ರಮುಖ ಕಾರಣವೇನು..?: ರಾಜ್ಯ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿ ವರದಿ ಸಲ್ಲಿಕೆ

Updated: August 31, 2018, 6:13 PM IST
ಶ್ಯಾಮ್ ಎಸ್​, ನ್ಯೂಸ್ 18 ಕನ್ನಡ

ಬೆಂಗಳೂರು(ಆ.31): ಕೊಡಗು ಜಿಲ್ಲೆಯಲ್ಲಿ ಹಲವು ಕಡೆ ಗುಡ್ಡ ಕುಸಿದು ಇಡೀ ಜಿಲ್ಲೆಯ ಭೌಗೋಳಿಕ ಚಿತ್ರಣವೇ ಬದಲಾಗಿ ಹೋಗಿದೆ. ಇಲ್ಲಿನ ಗುಡ್ಡ ಕುಸಿತಕ್ಕೆ ಪ್ರಮುಖ ಕಾರಣಗಳೇನು? ಯಾವುದರಿಂದ ಗುಡ್ಡ ಕುಸಿದು ಹಾನಿ ಸಂಭವಿಸಿದೆ? ಆ ಹಾನಿ ಸಂಭವಿಸಿದ ಸ್ಥಳಗಳ ಪರಿಸ್ಥಿತಿ ಈಗ ಏನಾಗಿದೆ? ಎಂಬಿತ್ಯಾದಿಯಾಗಿ ಸ್ಥಳ ಪರಿಶೀಲನೆ ನಡೆಸಿ ರಾಜ್ಯ ಸರ್ಕಾರ ನೇಮಿಸಿದ ಡಾ. ಹೆಚ್.ಎಸ್.ಎಮ್ ಪ್ರಕಾಶ್ ನೇತೃತ್ವದ ಸಮಿತಿ ವರದಿ ಸಲ್ಲಿಸಿದೆ.ಮಂಜಿನ ನಗರಿ, ಹಚ್ಚಹಸಿರಿನಿಂದ ಕೂಡಿದ ಕೊಡಗಿನ ಈಗಿನ ಚಿತ್ರಣವೇ ಅತಿವೃಷ್ಠಿಯಿಂದ ಗುಡ್ಡಕುಸಿತ, ಮಹಾಮಳೆಯಿಂದ ಬದಲಾಗಿ ಹೋಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಭೂಕುಸಿತ, ಅನಾಹುತಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ಪರಿಶೀಲಿಸಲು ರಾಜ್ಯ ಸರ್ಕಾರ ನೇಮಿಸಿದ್ದ ಭೂಗರ್ಭ ಶಾಸ್ತ್ರಜ್ಞ ಡಾ. ಹೆಚ್.ಎಸ್.ಎಮ್ ಪ್ರಕಾಶ್ ನೇತೃತ್ವದ ನಾಲ್ಕು ಮಂದಿಯ ಸಮಿತಿ ಹೆಚ್ಚು ಹಾನಿಗೊಳಗಾದ ಜೋಡುಪಾಲ, ಸಂಪಾಜೆ, ದೇವರಕೊಲ್ಲಿ ಹಾಗೂ ಅರೆಕಲ್ಲು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದೆ. ಈ ನಾಲ್ಕು ಗ್ರಾಮಗಳು ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಈ ಪರಿಯ ಅನಾಹುತ ಸಂಭವಿಸಿ ಗುಡ್ಡ ಕುಸಿತವಾಗಲು ಪ್ರಮುಖ ಕಾರಣ.

ಭಾರೀ ಮಳೆ ಎಫೆಕ್ಟ್

  • ಮೇ ತಿಂಗಳಿನಿಂದ ಆಗಸ್ಟ್​ವರೆಗೆ ಮಳೆ

  • Loading...

  • 5 ಅತಿದೊಡ್ಡ ಕುಂಭದ್ರೋಣ ಮಳೆ ಕಾರಣ

  • ಕೊಡಗಿನಲ್ಲಿ ವಾಡಿಕೆಗಿಂತ 3 ಪಟ್ಟು ಹೆಚ್ಚು ಮಳೆ

  • ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ ಗುಡ್ಡ ಕುಸಿತ


70ಕ್ಕೂ ಹೆಚ್ಚು ದೊಡ್ಡದೊಡ್ಡ ಗುಡ್ಡಗಳು ಮಹಾಮಳೆಗೆ ಕುಸಿದು ಕೊಡಗಿನ ಭೌಗೋಳಿಕ ಪರಿಸರವೇ ಬದಲಾಗಿ ಹೋಗಿದೆ. ಗುಡ್ಡಗಳೊಂದಿಗೆ ಅಲ್ಲಿ ವಾಸಿಸುತ್ತಿದ್ದ ನೂರಾರು ಜನರ ಮನೆಗಳೂ ಕೊಚ್ಚಿಹೋಗಿ ನಿರಾಶ್ರಿತರಾಗಿದ್ದಾರೆ. 10ಕ್ಕೂ ಹೆಚ್ಚು ಮಂದಿ ಮಳೆ ಸಂಬಂಧಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಭೂಗರ್ಭ ಶಾಸ್ತ್ರಜ್ಞ ಡಾ. ಎಚ್.ಎಸ್.ಎಂ ಪ್ರಕಾಶ್ ನೇತೃತ್ವದ ಸಮಿತಿ ಹಲವು ಗ್ರಾಮಗಳಿಗೆ ಭೇಟಿ ನೀಡಿದಾಗ ಹಲವು ವಿಷಯಗಳ ಬಗ್ಗೆ ಪರಿಶೀಲನೆ ನಡೆಸಿದೆ. ಈ ಸಂದರ್ಭದಲ್ಲಿ ಗುಡ್ಡ ಕುಸಿತಕ್ಕೆ ಮಳೆಯಲ್ಲದೇ, ಬೇರೆ ಕಾರಣಗಳೂ ಇವೆ.

ಗುಡ್ಡ ಕುಸಿತಕ್ಕೇನು ಕಾರಣ?

  • ಬಹುತೇಕ ಗುಡ್ಡಗಳು 50-60 ಡಿಗ್ರಿ ಇಳಿಜಾರಿವೆ

  • ಗುಡ್ಡಗಳ ಮಧ್ಯದ ಕಣಿವೆ ಕುಸಿತ

  • ರಸ್ತೆಗಳ ಬದಿಯ ನೀರುಗಾಲುವೆ ಹಾಳಾಗಿದೆ


ಕೊಡಗಿನಲ್ಲಿ ಹೆಚ್ಚು ಕಮ್ಮಿ ಟೂರಿಸಂ ಹಾಗೂ ಕಾಫಿ ಎಸ್ಟೇಟ್ ಗಳೇ ಹೆಚ್ಚು. ಆದ್ರೀಗ ತೀವ್ರ ಮಳೆ ಹಾಗೂ ಗುಡ್ಡಕುಸಿತವಾಗಿ ಕಾಫಿ ಎಸ್ಟೇಟ್ ಹಾಗೂ ಹೊಲಗದ್ದೆಗಳ ಮೇಲಿನ ಅರ್ಧ ಮೀಟರ್ ನಿಂದ 1 ಮೀಟರ್ ನಷ್ಟು ಫಲವತ್ತಾದ ಮಣ್ಣೂ ಕೊಚ್ಚಿ ಹೋಗಿದೆ. ಹೀಗಾಗಿ ಮಣ್ಣಿನಲ್ಲಿ ಸಾರಾಂಶವೂ ಹಾಳಾಗಿದೆ. ಹೀಗಾಗಿ ಈ ಜಾಗದಲ್ಲಿ ಮತ್ತೆ ಕಾಫಿ ತೋಟ ಮಾಡಿದ್ರೂ ಅಥವಾ ಹೊಲಗದ್ದೆಗಳಲ್ಲಿ ಬೆಳೆ ಬೆಳೆದ್ರೂ ಇಳುವರಿ ಕಮ್ಮಿ ಬರುತ್ತದೆ. ಇಲ್ಲಿನ ಮಣ್ಣಿನ ಫಲವತ್ತತೆ ನೈಸರ್ಗಿಕವಾಗಿ ಉತ್ಪತ್ತಿಯಾಗಲು 3 ದಶಕಗಳ ಬೇಕು ಅಂತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಜೋಡುಪಾಲ ಹಾಗೂ ಅರೆಕಲ್ಲು ಗ್ರಾಮಗಳು ನಾಗರೀಕರು ವಾಸಿಸಲು ಯೋಗ್ಯವಾಗಿಲ್ಲ. ಈ ಪ್ರದೇಶದಲ್ಲಿ ಮತ್ತೆ ಜೋರು ಮಳೆ ಬಂದಲ್ಲಿ ಮತ್ತಷ್ಟು ಗುಡ್ಡ ಕುಸಿತಗಳಾಗುವ ಸಂಭವವಿದೆ ಅಂತ ತಜ್ಞರು ಪ್ರಾಥಮಿಕ ಪರಿಶೀಲನೆ ನಂತ್ರ ಈ ನಿರ್ಧಾರಕ್ಕೆ ಬಂದಿದ್ದಾರೆ. ಗುಡ್ಡ ಕುಸಿತ, ಮಳೆ ನೀರು ಹರಿಯುವಿಕೆಯಿಂದ ಕೊಡಗಿನ ಬಹುತೇಕ ಭೂಮಿಯ ಭೌಗೋಳಿಕ ಚಿತ್ರಣ ಬದಲಾಗಿದ್ದು ನಾಗರೀಕರ ಆಸ್ತಿಗಳನ್ನು ಗುರುತಿಸಲು ಜಿಪಿಎಸ್, ಉಪಗ್ರಹ ಚಿತ್ರಗಳು ಹಾಗೂ ಲ್ಯಾಂಡ್ ರೆಕಾರ್ಡ್ಸ್ ಗಳನ್ನು ಪರಿಶೀಲಿಸಿ ಗುರ್ತಿಸಬೇಕಿದೆ. ಇದಕ್ಕೆ ಕನಿಷ್ಠ 2 ವರ್ಷವಾದ್ರೂ ಬೇಕು ಅಂತ ವರದಿಯಲ್ಲಿ ತಿಳಿಸಲಾಗಿದೆ. ಒಟ್ಟಾರೆ ಕೊಡಗು ಜಿಲ್ಲೆಯಾದ್ಯಂತ ರಿಮೋಟ್ ಸೆನ್ಸಿಂಗ್ ಸರ್ವೆ ಆ ಬಳಿಕ ಭೂವೈಜ್ಞಾನಿಕ ಸರ್ವೆ ನಡೆಸಿದ ಬಳಿಕವಷ್ಟೆ ಆಯಾ ಪ್ರದೇಶ, ಸ್ಥಳ ಮತ್ತು ಸಂದರ್ಭಕ್ಕನುಸಾರವಾಗಿ ಸೂಕ್ತ ಶಿಫಾರಸ್ಸು ಕೈಗೊಳ್ಳಲು ಸಾಧ್ಯ ಅಂತ ತಜ್ಞರು ವರದಿಯಲ್ಲಿ ತಿಳಿಸಿದ್ದಾರೆ.

ಪ್ರವಾಹ ಪರಿಹಾರ ಕಾಮಗಾರಿಗಳಿಗೆ 200 ಕೋಟಿ ಬಿಡುಗಡೆ ಮಾಡಿದ  ಸರ್ಕಾರ

ರಾಜ್ಯದ 7 ಜಿಲ್ಲೆಗಳಿಗೆ ಪ್ರವಾಹ ಪರಿಹಾರ ಕಾಮಗಾರಿಗಳಿಗೆ 200 ಕೋಟಿ ರೂಪಾಯಿ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಇಲಾಖಾವಾರು ಅನುದಾನ ಹಂಚಿಕೆ ಮಾಡಲಾಗಿದೆ.ಕೊಡಗು - 85 ಕೋಟಿ ರೂಪಾಯಿ,  ದಕ್ಷಿಣ ಕನ್ನಡ - 20.88 ಕೋಟಿ. ರೂ. ಉಡುಪಿ - 14.54 ಕೋಟಿ.ರೂ.  ಚಿಕ್ಕಮಗಳೂರು - 25.13 ಕೋಟಿ. ರೂ,  ಹಾಸನ - 27.94 ಕೋಟಿ.ರೂ. ಉತ್ತರ ಕನ್ನಡ- 11.51 ಕೋಟಿ.ರೂ. ಶಿವಮೊಗ್ಗ- 15 ಕೋಟಿ ರೂ ವನ್ನು ಸರ್ಕಾರ ಇಂದು ಬಿಡುಗಡೆ ಮಾಡಲಾಗಿದೆ.
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ