ಬೆಂಗಳೂರು (ಅ.07): ತಮ್ಮ ಮಕ್ಕಳನ್ನು ಡಾಕ್ಟರ್ (Doctor) ಮಾಡಿಸಬೇಕು ಎಂಬ ಕನಸು ಬಹುತೇಕ ಪೋಷಕರಿಗಿರುತ್ತೆ. ಆದರೆ ಅವರಿಗೊಂದು ಬ್ಯಾಡ್ ನ್ಯೂಸ್ (Bad News) ಇದೆ. ಅದೇನೆಂದರೆ ಮೆಡಿಕಲ್ ಕೋರ್ಸ್ ಗಳ ಶುಲ್ಕ ಹೆಚ್ಚಳವಾಗಲಿದೆ. ಈ ಬಾರಿ ಶೇ. 10 ರಿಂದ 15 ರಷ್ಟು ಏರಿಕೆ ಫಿಕ್ಸ್ (Fix) ಆಗಿದೆ. ಬೆಲೆ ಬಿಸಿ ನಡುವೆ ಇದೀಗ ಮೆಡಿಕಲ್ ಕೋರ್ಸ್ ಗಳ (Medical Courses) ಶುಲ್ಕ ಈ ವರುಷ ಹೆಚ್ಚಳವಾಗಲಿದೆ. ಶುಲ್ಕ ಹೆಚ್ಚಿಸುವಂತೆ ರಾಜ್ಯದ ಖಾಸಗಿ ಕಾಲೇಜುಗಳಿಂದ (Private College) ಸರ್ಕಾರಕ್ಕೆ ಬೇಡಿಕೆ ಇಟ್ಟಿದೆ.
ಶುಲ್ಕ ಹೆಚ್ಚಳಕ್ಕೆ ಖಾಸಗಿ ಕಾಲೇಜುಗಳ ಮನವಿ
ಈ ಬಾರಿ ಶೇ. 15 ರಷ್ಟು ಶುಲ್ಕ ಹೆಚ್ಚಿಸುವಂತೆ ಖಾಸಗಿ ಕಾಲೇಜುಗಳು ಮನವಿ ಮಾಡಿವೆ. ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಸರ್ಕಾರಿ ಕೋಟಾದ ಶುಲ್ಕ ಹೆಚ್ಚಳ ಸಂಬಂಧ ಚರ್ಚೆಯೂ ಜರುಗಿದೆ. ಈ ಸಂಬಂಧ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿರುವ ಸಚಿವರು, ಶುಲ್ಕ ಹೆಚ್ಚಿಸುವ ಕುರಿತು ಖಾಸಗಿ ಕಾಲೇಜುಗಳ ಹಲವು ಸುತ್ತಿನ ಮಾತುಕತೆ ನಡೆದಿದ್ದು ಶೇ.10ರಷ್ಟು ಮೆಡಿಕಲ್ ಕೋರ್ಸ್ ಶುಲ್ಕ ಹೆಚ್ಚಳವಾಗುವ ಎಲ್ಲಾ ಸಾಧ್ಯತೆ ಇದೆ.
ಕೆಎಇ ನಿರ್ದೇಶಕರೇ ಕೊಟ್ರು ಶುಲ್ಕ ಹೆಚ್ಚಳದ ಸುಳಿವು
ಈಗಾಗಲೇ ಮೆಡಿಕಲ್ ಕೋರ್ಸ್ ಗಳ ಡ್ಯಾಕುಮೆಂಟ್ ವೆರಿಫಿಕೇಶನ್ ಮುಗಿಸಿರುವ ಕೆಇಎಗೆ ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ ಮಾಡಲು ರೆಡಿಯಾಗಿದೆ. ಈ ನಡುವೆ ವೈದ್ಯಕೀಯ ಶುಲ್ಕ ಕೂಡ ಈ ಭಾರಿ ಹೆಚ್ಚಳವಾಗಲಿದೆ ಎಂದು ಕೆ ಇಎ ನಿರ್ದೇಶಕರಾದ ರಮ್ಲಾ ಖಚಿತಪಡಿಸಿದ್ದಾರೆ.
ಶೇ.10 ರಷ್ಟು ವೈದ್ಯಕೀಯ ಶುಲ್ಕ ಹೆಚ್ಚಳವಾದ್ರೆ ಎಷ್ಟಾಗುತ್ತೆ?
ಖಾಸಗಿ ಕಾಲೇಜು ಸರ್ಕಾರಿ ಕೋಟಾ - ಎಂಬಿಬಿಎಸ್ - ಶುಲ್ಕ- 1.28.746 - ಏರಿಕೆ-1.41.630
ಖಾಸಗಿ ಕಾಲೇಜು ಸರ್ಕಾರಿ ಕೋಟಾ - ಬಿಡಿಎಸ್- ಶುಲ್ಕ- 83, 358- ಏರಿಕೆ- 91,091
ಖಾಸಗಿ ಕಾಲೇಜು ಖಾಸಗಿ ಕೋಟಾ - ಎಂಬಿಬಿಎಸ್- ಶುಲ್ಕ 5,51,956- ಏರಿಕೆ 10,50,151
ಖಾಸಗಿ ಕಾಲೇಜು ಖಾಸಗಿ ಕೋಟಾ - ಬಿಡಿಎಸ್ ಶುಲ್ಕ 5,56,023 ಏರಿಕೆ- 7,32,625
ಸರ್ಕಾರಿ ವೈದ್ಯ ಕಾಲೇಜು-ಶುಲ್ಕ- 59,600 ಏರಿಕೆ- 59,800
ಡ್ಯಾಕ್ಯಮೆಂಟ್ ವೆರಿಫಿಕೇಶನ್ ಪೂರ್ಣ
ಈಗಾಗಲೇ ವೈದ್ಯಕೀಯ ಕೋರ್ಸ್ ಗಳ ಡ್ಯಾಕ್ಯಮೆಂಟ್ ವೆರಿಫಿಕೇಶನ್ ಕೆಇಎ ಪೂರ್ಣಗೊಳಿಸಿದೆ. ಶುಲ್ಕ ಹಾಗೂ ಖಾಸಗಿ ಕಾಲೇಜುಗಳ ವೈದ್ಯಕೀಯ ಕೋಟಾದ ಸೀಟ್ ಮ್ಯಾಟ್ರಿಕ್ಸ್ ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾಯುತ್ತಿದೆ. ಇಂದು ಅಥವಾ ನಾಳೆ ಸರ್ಕಾರದಿಂದ ಅಧಿಕೃತವಾಗಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: Dakshina Kannada: ಫ್ಯಾಮಿಲಿ ಕ್ಯಾತೆಗೆ ಒಗ್ಗಟ್ಟಿನ ಸವಾಲು, ತಾವೇ ಮುಂದೆ ನಿಂತು ಬಸ್ ನಿಲ್ದಾಣ ಕಟ್ಟಿದ ಗ್ರಾಮಸ್ಥರು!
ಪ್ರತಿಭಾವಂತ ಮಕ್ಕಳಿಗೆ ಅನ್ಯಾಯ
ಹೀಗಾದ್ರೆ ಬಡ, ಮಧ್ಯಮ ವರ್ಗದ ಪ್ರತಿಭಾವಂತ ಮಕ್ಕಳಿಗೆ ಅನ್ಯಾಯವಾಗುತ್ತೆ. ಈಗಿರುವ ಶುಲ್ಕವನ್ನು ಕಟ್ಟಲು ಪರದಾಡುತ್ತಿರುವಾಗ ಇನ್ನು ಹೆಚ್ಚಿನ ಶುಲ್ಕ ಕಟ್ಟು ಎಂದರೆ ಎಲ್ಲಿಂದ ಕಟ್ಟುತ್ತಾರೆ. ಸರ್ಕಾರ ಯಾವುದೇ ಕಾರಣಕ್ಕೂ ಮೆಡಿಕಲ್ ಕೋರ್ಸ್ ಶುಲ್ಕ ಹೆಚ್ಚು ಮಾಡಬಾರದು ಎಂದು ಎಐಡಿಎಸ್ ಓ ವಿದ್ಯಾರ್ಥಿ ಸಂಘಟನೆಯ ಮುಖಂಡರಾದ ಅಭಯ ಆಗ್ರಹಿಸುತ್ತಾರೆ.
ಬಡ ಮಕ್ಕಳ ಪಾಲಿಗೆ ಗಗನ ಕುಸುಮವಾಗುತ್ತಾ ವೈದ್ಯಕೀಯ ಸೇವೆ
ಬೆಲೆ ಏರಿಕೆ ಬಿಸಿಗೆ ಜನಸಾಮಾನ್ಯರು ಈಗಾಗಲೇ ತತ್ತರಿಸುತ್ತಿದ್ದಾರೆ. ಇದೀಗ ಪ್ರತಿಭಾವಂತ ಬಡ ಮಕ್ಕಳ ಆಸೆಯ ಮೆಡಿಕಲ್ ಓದುವ ಕನಸಿಗೆ ಶುಲ್ಕ ಹೆಚ್ಚಳ ಮಾಡಿ ಇನ್ನಷ್ಟು ಗಗನ ಕುಸುಮ ಮಾಡುತ್ತಿರುವುದು ಎಷ್ಟು ಸರಿ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ