ಸತೀಶ್​ ಜಾರಕಿಹೊಳಿ ಒಮ್ಮೆ ಹುಚ್ಚಾಸ್ಪತ್ರೆಗೆ ತೋರಿಸಿಕೊಳ್ಳುವುದು ಒಳ್ಳೆಯದು; ರಮೇಶ್​ ಜಾರಕಿಹೊಳಿ ಲೇವಡಿ

ಸತೀಶ್​ ಜಾರಕಿಹೊಳಿ ನನ್ನನ್ನು ಸೋಲಿಸಲು ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ, ಯಶಸ್ಸು ಕಾಣಲಿ. ಅವರೇನಾದರೂ ಯಶಸ್ವಿಯಾದರೆ ಖುದ್ದಾಗಿ ನಾನೇ ಅವರಿಗೆ ಮಾಲೆ ಹಾಕುತ್ತೇನೆ ಎಂದರು.

Latha CG | news18-kannada
Updated:November 2, 2019, 3:15 PM IST
ಸತೀಶ್​ ಜಾರಕಿಹೊಳಿ ಒಮ್ಮೆ ಹುಚ್ಚಾಸ್ಪತ್ರೆಗೆ ತೋರಿಸಿಕೊಳ್ಳುವುದು ಒಳ್ಳೆಯದು; ರಮೇಶ್​ ಜಾರಕಿಹೊಳಿ ಲೇವಡಿ
ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ.
  • Share this:
ಚಿಕ್ಕೋಡಿ(ನ.02): ಅಥಣಿಯಲ್ಲಿ ಇಂದು ರಮೇಶ್​ ಜಾರಕಿಹೊಳಿ ನೇತೃತ್ವದಲ್ಲಿ ಅನರ್ಹ ಶಾಸಕರ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಅನರ್ಹ ಶಾಸಕ ಮಹೇಶ್​ ಕುಮಟಳ್ಳಿ ಹಾಗೂ ಅಥಣಿ ವಿಧಾನಸಭೆ ಕ್ಷೇತ್ರದ ಹಲವು ಮುಖಂಡರು ಭಾಗಿಯಾಗಿದ್ದರು. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆದಿದೆ.

ಸಭೆಯಲ್ಲಿ ಮಾತನಾಡಿದ ಗೋಕಾಕ್​ ಕ್ಷೇತ್ರದ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಕಾಂಗ್ರೆಸ್​ ನಾಯಕ ಸತೀಶ್​ ಜಾರಕಿಹೊಳಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸತೀಶ್​ ಜಾರಕಿಹೊಳಿ ಮೆದುಳು ಸತ್ತುಹೋಗಿದೆ. ಒಂದು ಬಾರಿ ಹುಚ್ಚಾಸ್ಪತ್ರೆಗೆ ತೋರಿಸಿಕೊಳ್ಳುವುದು ಒಳ್ಳೆಯದು ಎಂದು ರಮೇಶ್ ಜಾರಕಿಹೊಳಿ ಲೇವಡಿ ಮಾಡಿದ್ದಾರೆ.

ಗೋಕಾಕ್​ನಲ್ಲಿ ಒಂದು ಲಕ್ಷ ಜನರನ್ನು ಕರೆಯಿಸಿ, ಸಮಾವೇಶ ಮಾಡಿ ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ಮೊದಲು ಸತೀಶ್​ ಜಾರಕಿಹೊಳಿ ನನ್ನ ಬಗ್ಗೆ ಒಂದು ನಿರ್ಧಾರಕ್ಕೆ ಬರಲಿ. ನಾನು ಸಾಲಗಾರನಾ? ಆಸ್ತಿ ಮಾಡಿದ್ದೀನಾ? ಅಥವಾ ದೊಡ್ಡ ವ್ಯಕ್ತಿಯಾ? ಎನ್ನವುದನ್ನು ತೀರ್ಮಾನಿಸಲಿ ಎಂದು ಹೇಳಿದರು.

ದೆಹಲಿಯಲ್ಲಿ ತುರ್ತು ಪರಿಸ್ಥಿತಿಯ ಗಡಿಯನ್ನೂ ದಾಟಿದ ಜೀವ ವಾಯುವಿನ ಗುಣಮಟ್ಟ; ಉಸಿರಾಟ ಇನ್ನು ಕಷ್ಟ ಕಷ್ಟ..!

ಸತೀಶ್​ ಜಾರಕಿಹೊಳಿ ನನ್ನನ್ನು ಸೋಲಿಸಲು ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ, ಯಶಸ್ಸು ಕಾಣಲಿ. ಅವರೇನಾದರೂ ಯಶಸ್ವಿಯಾದರೆ ಖುದ್ದಾಗಿ ನಾನೇ ಅವರಿಗೆ ಮಾಲೆ ಹಾಕುತ್ತೇನೆ ಎಂದರು.

2016-2017 ರಲ್ಲಿ ನನ್ನ ಮೇಲೆ ಐಟಿ ದಾಳಿ ಆಗಿದೆ. ಹೆಚ್ಚಿನ ದಂಡ ಹಾಕಿದ್ದಾರೆ. ಆದರೆ ನಾನು ಕಟ್ಟಿಲ್ಲ. ನ್ಯಾಯಬದ್ಧವಾಗಿ ತೆರಿಗೆ ದಂಡ ಹಾಕಿದರೆ ನಾನು ಅದನ್ನು ಕಟ್ಟಲು ಸಿದ್ದ. ನಾನು ಯಾವುದೇ ಬೇನಾಮಿ ಆಸ್ತಿ ಮಾಡಿಲ್ಲ. ಟಿವಿ ಮಾಧ್ಯಮಗಳಲ್ಲಿ ಬಂದ ಸುದ್ದಿ ತಪ್ಪಾಗಿದೆ ಎಂದು ಸ್ಪಷ್ಟನೆ ನೀಡಿದರು.

ನಿನ್ನೆಯಷ್ಟೇ ಸಿಎಂ ಬಿಎಸ್​ವೈ ಆಡಿಯೋ ವೈರಲ್​ ಆಗಿತ್ತು. 17 ಅನರ್ಹ ಶಾಸಕರ ರಾಜೀನಾಮೆ ರಾಜ್ಯ ನಾಯಕರ ತೀರ್ಮಾನ ಅಲ್ಲ, ರಾಷ್ಟ್ರಾಧ್ಯಕ್ಷರೇ ಮುಂದೆ ನಿಂತು ಪ್ಲಾನ್ ಮಾಡಿ ರಾಜೀನಾಮೆ ಕೊಡಿಸಿದ್ದರು. ಅಥಣಿ ಕ್ಷೇತ್ರದ ಲಕ್ಷ್ಮಣ ಸವದಿ ವಿಚಾರ ಹೈ ಕಮಾಂಡ್​​​​ಗೆ ಬಿಟ್ಟ ವಿಷಯ. ಅದು ನನ್ನ ಕೈಯಲ್ಲಿ ಇಲ್ಲ ಅನ್ನುವ ವಿಚಾರವನ್ನು ಕೂಡ ಸಿಎಂ ಬಿಎಸ್​​ವೈ ಆಡಿಯೋದಲ್ಲಿ ಹೇಳಿದ್ದರು.ಬಿಜೆಪಿ ಆಮಿಷ ತೋರಿಸಿಯೇ ಮೈತ್ರಿ ಸರ್ಕಾರದ ಶಾಸಕರನ್ನು ಸೆಳೆದಿದ್ದಾರೆ ಎಂಬುದು ಈಗ ಸಾಬೀತಾಗಿದೆ; ಕಿಡಿಕಾರಿದ ಖರ್ಗೆ

First published:November 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading